1 ULB ದಾವೀದನು ಇಸ್ರಾಯೇಲರ ಎಲ್ಲಾ ಗೋತ್ರಗಳ ಅಧಿಪತಿಗಳನ್ನು, ಅರಸನ ಸೇವೆಮಾಡುತ್ತಿರುವ ವರ್ಗನಾಯಕರು, ಸಹಸ್ರಾಧಿಪತಿಗಳು, ಶತಾಧಿಪತಿಗಳು ಅರಸನ ದನಕುರಿ ಮೊದಲಾದ ಸಂಪತ್ತಿನ ಮೇಲ್ವಿಚಾರಕರು, ರಾಜಪುತ್ರ ಪಾಲಕರು, ಕಂಚುಕಿಗಳು, ಯುದ್ಧವೀರರು ಹಾಗೂ ಎಲ್ಲಾ ಪ್ರಧಾನರನ್ನು ಯೆರೂಸಲೇಮಿಗೆ ಕರೆಯಿಸಿದನು. BSB BSB: Now David summoned all the leaders of Israel to Jerusalem: the leaders of the tribes, the leaders of the divisions in the king’s service, the commanders of thousands and of hundreds, and the officials in charge of all the property and cattle of the king and his sons, along with the court officials and mighty men—every mighty man of valor.
2 ULB ಅವರು ಸೇರಿ ಬಂದಾಗ ಅರಸನಾದ ದಾವೀದನು ಎದ್ದು ನಿಂತು ಅವರಿಗೆ ಹೇಳಿದ್ದೇನೆಂದರೆ, <<ನನ್ನ ಸಹೋದರರೇ, ನನ್ನ ಪ್ರಜೆಗಳೇ, ನನ್ನ ಮಾತನ್ನು ಕೇಳಿರಿ, ಯೆಹೋವನ ಒಡಂಬಡಿಕೆಯ ಮಂಜೂಷಕ್ಕೋಸ್ಕರ ನಮ್ಮ ದೇವರ ಪಾದಪೀಠಕ್ಕೋಸ್ಕರ ಆಲಯವನ್ನು ಕಟ್ಟಬೇಕೆಂದು ಮನಸ್ಸು ಮಾಡಿ ಅದಕ್ಕಾಗಿ ಎಲ್ಲವನ್ನೂ ಸಿದ್ಧಪಡಿಸಿದೆನು. BSB BSB: Then King David rose to his feet and said, “Listen to me, my brothers and my people. It was in my heart to build a house as a resting place for the ark of the covenant of the LORD and as a footstool for our God. I had made preparations to build it,
3 ULB ಆಗ ದೇವರು ನನಗೆ, <ನೀನು ಮಹಾಯುದ್ಧಗಳನ್ನು ಮಾಡಿ ಬಹಳ ರಕ್ತವನ್ನು ಸುರಿಸಿದವನು, ನನ್ನ ಹೆಸರಿಗೋಸ್ಕರ ಆಲಯವನ್ನು ಕಟ್ಟಬಾರದು> ಎಂದು ಹೇಳಿದನು. BSB BSB: but God said to me, ‘You are not to build a house for My Name, because you are a man of war who has shed blood.’
4 ULB ಇಸ್ರಾಯೇಲರ ದೇವರಾದ ಯೆಹೋವನು ತನ್ನ ತಂದೆಯ ಮನೆಯವರೆಲ್ಲರಲ್ಲಿ ನನ್ನನ್ನೇ ಸದಾ ಇಸ್ರಾಯೇಲರ ಅರಸನಾಗುವುದಕ್ಕೆ ಆರಿಸಿಕೊಂಡನು. ಆತನು ಯೆಹೂದ ಕುಲವು ರಾಜಕುಲವಾಗಬೇಕೆಂದು ನೇಮಿಸಿ, ಆ ಕುಲದಲ್ಲಿ ನನ್ನ ತಂದೆಯ ಕುಟುಂಬವನ್ನು ಆರಿಸಿಕೊಂಡನು. ನನ್ನ ತಂದೆಯ ಎಲ್ಲಾ ಮಕ್ಕಳಲ್ಲಿ ನನ್ನನ್ನೇ ಮೆಚ್ಚಿ ಇಸ್ರಾಯೇಲ್ಯರ ಅರಸನನ್ನಾಗಿ ಮಾಡಿದನು. BSB BSB: Yet the LORD, the God of Israel, chose me out of all my father’s house to be king over Israel forever. For He chose Judah as leader, and from the house of Judah He chose my father’s household, and from my father’s sons He was pleased to make me king over all Israel.
5 ULB ನನಗೆ ದಯಪಾಲಿಸಿದ ಅನೇಕ ಮಕ್ಕಳಲ್ಲಿ ನನ್ನ ಮಗನಾದ ಸೊಲೊಮೋನನನ್ನು ಯೆಹೋವನ ರಾಜ್ಯ ಸಿಂಹಾಸನವಾಗಿರುವ ಇಸ್ರಾಯೇಲ್ ಸಿಂಹಾಸನದ ಮೇಲೆ ಕುಳ್ಳಿರಿಸುವುದಕ್ಕೋಸ್ಕರ ಆರಿಸಿಕೊಂಡನು. BSB BSB: And of all my sons—for the LORD has given me many sons—He has chosen Solomon my son to sit on the throne of the kingdom of the LORD over Israel.
6 ULB ಆತನು ನನಗೆ, <ನಿನ್ನ ಮಗನಾದ ಸೊಲೊಮೋನನೇ ನನ್ನ ಆಲಯವನ್ನೂ, ಅದರ ಪ್ರಾಕಾರಗಳನ್ನೂ ಕಟ್ಟಿಸುವನು. ಅವನು ನನಗೆ ಮಗನಾಗಿರಬೇಕೆಂದು ಅವನನ್ನು ಆರಿಸಿಕೊಂಡಿದ್ದೇನೆ. ನಾನು ಅವನಿಗೆ ತಂದೆಯಾಗಿರುವೆನು. BSB BSB: And He said to me, ‘Solomon your son is the one who will build My house and My courts, for I have chosen him as My son, and I will be his Father.
7 ULB ಅವನು ಈಗಿನಂತೆ ಯಾವಾಗಲೂ ನನ್ನ ಆಜ್ಞಾವಿಧಿಗಳನ್ನು ಕೈಕೊಂಡು ನಡೆಯುವುದಾದರೆ ಅವನ ರಾಜ್ಯವನ್ನು ಸದಾಕಾಲವೂ ಸ್ಥಿರಪಡಿಸುವೆನು ಎಂದು ಹೇಳಿದ್ದಾನೆ.> BSB BSB: I will establish his kingdom forever, if he resolutely carries out My commandments and ordinances, as is being done this day.’
8 ULB ಆದುದರಿಂದ ನಿಮ್ಮ ದೇವರಾದ ಯೆಹೋವನ ಎಲ್ಲಾ ಆಜ್ಞೆಗಳನ್ನು ಧ್ಯಾನಿಸಿ ಕೈಕೊಳ್ಳಬೇಕೆಂದು ಯೆಹೋವನ ಸಭೆಯಾದ ಸಮಸ್ತ ಇಸ್ರಾಯೇಲರ ಎದುರಿನಲ್ಲಿ ನಮ್ಮ ದೇವರಿಗೆ ಕೇಳಿಸುವಂತೆ ನಿಮ್ಮನ್ನು ಎಚ್ಚರಿಸುತ್ತೇನೆ. ಹಾಗೆ ಮಾಡಿದರೆ ಈ ಒಳ್ಳೆಯ ದೇಶವು ಸದಾಕಾಲ ನಿಮ್ಮ ಮತ್ತು ನಿಮ್ಮ ಸಂತಾನದವರ ಸ್ವತ್ತಾಗಿರುವುದು. BSB BSB: So now in the sight of all Israel, the assembly of the LORD, and in the hearing of our God, keep and seek out all the commandments of the LORD your God, so that you may possess this good land and leave it as an inheritance to your descendants forever.
9 ULB ನನ್ನ ಮಗನಾದ ಸೊಲೊಮೋನನೇ, ನೀನಂತೂ ನಿನ್ನ ತಂದೆಯ ದೇವರನ್ನು ಅರಿತುಕೊಂಡು ಸಂಪೂರ್ಣಹೃದಯದಿಂದಲೂ, ಮನಸ್ಸಂತೋಷದಿಂದಲೂ ಆತನನ್ನೇ ಸೇವಿಸು. ಯೆಹೋವನು ಎಲ್ಲಾ ಹೃದಯಗಳನ್ನು ವಿಚಾರಿಸುವವನೂ, ಎಲ್ಲಾ ಮನಸ್ಸಂಕಲ್ಪಗಳನ್ನು ಬಲ್ಲವನೂ ಆಗಿರುತ್ತಾನಲ್ಲಾ. ನೀನು ಆತನನ್ನು ಹುಡುಕುವುದಾದರೆ ಆತನು ನಿನಗೆ ಸಿಕ್ಕುವನು. ಆತನನ್ನು ಕಡೆಗಣಿಸಿದರೆ ಆತನು ನಿನ್ನನ್ನು ಶಾಶ್ವತವಾಗಿ ತಳ್ಳಿಬಿಡುವನು. BSB BSB: As for you, Solomon my son, know the God of your father and serve Him wholeheartedly and with a willing mind, for the LORD searches every heart and understands the intent of every thought. If you seek Him, He will be found by you; but if you forsake Him, He will reject you forever.
10 ULB ಆದುದರಿಂದ ಎಚ್ಚರಿಕೆಯಿಂದಿರು, ಯೆಹೋವನು ತನಗೋಸ್ಕರ ಪವಿತ್ರಾಲಯವನ್ನು ಕಟ್ಟಬೇಕೆಂದು ನಿನ್ನನ್ನು ಆರಿಸಿಕೊಂಡಿದ್ದಾನೆ. ಧೈರ್ಯದಿಂದ ಕೆಲಸ ಮಾಡು>> ಎಂಬುದೇ. BSB BSB: Consider now that the LORD has chosen you to build a house for the sanctuary. Be strong and do it.”
11 ULB ತರುವಾಯ ದಾವೀದನು ತನ್ನ ಮಗನಾದ ಸೊಲೊಮೋನನಿಗೆ ದೇವಾಲಯದ ಮಂಟಪ, ಕಟ್ಟಡಗಳು, ಭಂಡಾರಗಳು, ಮೇಲುಪ್ಪರಿಗೆಗಳು, ಒಳಗಣ ಕೋಣೆಗಳು, ಕೃಪಾಸನ ಮಂದಿರ ಇವುಗಳ ನಕ್ಷೆಯನ್ನು ಕೊಟ್ಟನು. BSB BSB: Then David gave his son Solomon the plans for the portico of the temple, its buildings, storehouses, upper rooms, inner rooms, and the room for the mercy seat.
12 ULB ಇವನು ಯೆಹೋವನ ಆಲಯದ ಅಂಗಳಗಳು, ಸುತ್ತಣ ಕೋಣೆಗಳು, ದೇವಾಲಯದ ಭಂಡಾರಗಳು, ಪ್ರತಿಷ್ಠಿತ ವಸ್ತುಗಳು, ಭಂಡಾರಗಳು ಇವುಗಳ ವಿಷಯವಾಗಿಯೂ, BSB BSB: The plans contained everything David had in mind for the courts of the house of the LORD, for all the surrounding rooms, for the treasuries of the house of God and of the dedicated things,
13 ULB ಯಾಜಕರ ಮತ್ತು ಲೇವಿಯರ ವರ್ಗಗಳು, ಯೆಹೋವನ ಆಲಯದಲ್ಲಿ ನಡೆಯತಕ್ಕ ಎಲ್ಲಾ ಆರಾಧನೆ, ಆರಾಧನೆಯ ಎಲ್ಲಾ ಸಾಮಗ್ರಿಗಳು BSB BSB: for the divisions of the priests and Levites, for all the work of service in the house of the LORD, and for all the articles of service in the house of the LORD:
14 ULB ಇವುಗಳ ವಿಷಯವಾಗಿ ಪವಿತ್ರಾತ್ಮನು ತನ್ನ ಮನಸ್ಸಿನಲ್ಲಿ ಕೊಟ್ಟಿದ್ದ ಯೋಜನೆಗಳನ್ನು ವಿವರಿಸಿದನು. BSB BSB: the weight of all the gold articles for every kind of service; the weight of all the silver articles for every kind of service;
15 ULB ಇದಲ್ಲದೆ ಆರಾಧನೆಯ ಆಯಾ ಆಚಾರಗಳಲ್ಲಿ ಉಪಯೋಗವಾಗಬೇಕಾದ ಎಲ್ಲಾ ಸಾಮಾನುಗಳ ಬೆಳ್ಳಿ ಬಂಗಾರದ ತೂಕ, ಅಂದರೆ ಬಂಗಾರದ ಹಣತೆಗಳಿರುವ ಬಂಗಾರದ ಪ್ರತಿಯೊಂದು ದೀಪಸ್ತಂಭದ ತೂಕ, ಬೇರೆ ಬೇರೆ ಕೆಲಸಗಳಿಗೆ ಉಪಯೋಗವಾಗುವ ಪ್ರತಿಯೊಂದು ಬೆಳ್ಳಿಯ ದೀಪಸ್ತಂಭದ ಮತ್ತು ಅದರ ಹಣತೆಗಳ ತೂಕ, BSB BSB: the weight of the gold lampstands and their lamps, including the weight of each lampstand and its lamps; the weight of each silver lampstand and its lamps, according to the use of each lampstand;
16 ULB ಮೀಸಲು ರೊಟ್ಟಿಗಳನ್ನಿಡುವ ಬಟ್ಟಲುಗಳು ಹಾಗೂ ಪ್ರತಿಯೊಂದು ಮೇಜಿಗೆ ಉಪಯೋಗಿಸಬೇಕಾದ ಬಂಗಾರದ ತೂಕ, ಬೆಳ್ಳಿಯ ಮೇಜುಗಳ ಬೆಳ್ಳಿಯ ತೂಕ, BSB BSB: the weight of gold for each table of showbread, and of silver for the silver tables;
17 ULB ಚೊಕ್ಕ ಬಂಗಾರದ ಮುಳ್ಳು ಬೋಗುಣಿ, ಹೂಜಿಗಳ ಮತ್ತು ಬೆಳ್ಳಿ ಬಂಗಾರದ ಆಯಾ ಪಾತ್ರೆಗಳ ತೂಕ, BSB BSB: the weight of the pure gold for the forks, sprinkling bowls, and pitchers; the weight of each gold dish; the weight of each silver bowl;
18 ULB ಧೂಪವೇದಿಗೆ ಉಪಯೋಗಿಸಬೇಕಾದ ಚೊಕ್ಕ ಬಂಗಾರದ ತೂಕ ಎಷ್ಟೆಷ್ಟಾಗಿರಬೇಕೆಂಬುದನ್ನು ವಿವರಿಸಿ, ರೆಕ್ಕೆಗಳನ್ನು ಹರಡಿಕೊಂಡು ಯೆಹೋವನ ಒಡಂಬಡಿಕೆ ಮಂಜೂಷವನ್ನು ಮರೆಮಾಡುವ ಬಂಗಾರದ ಕೆರೂಬಿವಾಹನದ ನಕ್ಷೆಯನ್ನು ಕೊಟ್ಟನು. BSB BSB: the weight of the refined gold for the altar of incense; and the plans for the chariot of the gold cherubim that spread their wings and overshadowed the ark of the covenant of the LORD.
19 ULB ಆ ನಕ್ಷೆಯಲ್ಲಿ ಸೂಚಿಸಿದ ಎಲ್ಲಾ ಕೆಲಸಗಳ ವಿವರವಾದ ಜ್ಞಾನವು ತನಗೆ ಯೆಹೋವನು ಸೂಚಿಸಿದಂತೆ ಪ್ರಾಪ್ತವಾಯಿತೆಂದು ಹೇಳಿದನು. BSB BSB: “All this,” said David, “all the details of this plan, the LORD has made clear to me in writing by His hand upon me.”
20 ULB ಆ ಮೇಲೆ ದಾವೀದನು ತನ್ನ ಮಗನಾದ ಸೊಲೊಮೋನನಿಗೆ, <<ಸ್ಥಿರಚಿತ್ತನಾಗಿರು, ಧೈರ್ಯದಿಂದಿರು, ಕೆಲಸಕ್ಕೆ ಕೈಹಾಕು, ಅಂಜಬೇಡ, ಕಳವಳಗೊಳ್ಳಬೇಡ, ನನ್ನ ದೇವರಾದ ಯೆಹೋವ ದೇವರು ನಿನ್ನ ಸಂಗಡ ಇರುತ್ತಾನೆ. ಆತನು ತನ್ನ ಆಲಯದ ಎಲ್ಲಾ ಕೆಲಸಗಳು ತೀರುವವರೆಗೂ ನಿನ್ನನ್ನು ಕೈಬಿಡುವುದಿಲ್ಲ ತೊರೆಯುವುದಿಲ್ಲ. BSB BSB: David also said to Solomon his son, “Be strong and courageous, and do it. Do not be afraid or discouraged, for the LORD God, my God, is with you. He will neither fail you nor forsake you before all the work for the service of the house of the LORD is finished.
21 ULB ಇಗೋ, ಯಾಜಕರ ಮತ್ತು ಲೇವಿಯರ ವರ್ಗಗಳವರು ದೇವಾಲಯಕ್ಕೆ ಸಂಬಂಧಪಟ್ಟ ಕೆಲಸವನ್ನು ಮಾಡುವುದಕ್ಕೆ ಸಿದ್ಧರಾಗಿದ್ದಾರೆ. ಯಾವ ಕೆಲಸವಿದ್ದರೂ ಎಲ್ಲವನ್ನು ಜಾಣತನದಿಂದ ಮಾಡುವುದಕ್ಕೆ ಸಿದ್ಧಮನಸ್ಸು ಉಳ್ಳವರು ನಿನ್ನ ಹತ್ತಿರ ಬೆಂಬಲವಾಗಿ ಇರುತ್ತಾರೆ. ಅಧಿಪತಿಗಳೂ, ಎಲ್ಲಾ ಪ್ರಜೆಗಳೂ ನಿನ್ನ ಆಜ್ಞೆಗೆ ಒಳಗಾಗುವರು>> ಎಂದು ಹೇಳಿದನು. BSB BSB: The divisions of the priests and Levites are ready for all the service of the house of God, and every willing man of every skill will be at your disposal for the work. The officials and all the people are fully at your command.”
Select verses for actions: Enter goes to them and Escape comes back.