1 ULB ಅರಸನಾದ ದಾವೀದನು ವಯೋವೃದ್ಧನಾಗಿದ್ದನು. ಸೇವಕರು ಎಷ್ಟು ಕಂಬಳಿ ಹೊದಿಸಿದರೂ ಅವನಿಗೆ ಬೆಚ್ಚಗಾಗುತ್ತಿರಲಿಲ್ಲ. BSB BSB: Now King David was old and well along in years, and though they covered him with blankets, he could not keep warm.
2 ULB ಆದುದರಿಂದ ಅವನ ಸೇವಕರು ಅವನಿಗೆ, <<ನಮ್ಮ ಒಡೆಯನಾದ ಅರಸನಿಗೋಸ್ಕರ ಒಬ್ಬ ಕನ್ಯೆಯನ್ನು ಹುಡುಕಿತರುವೆವು. ಆಕೆಯು ಅರಸನ ಸನ್ನಿಧಿಯಲ್ಲಿದ್ದುಕೊಂಡು ನಿನ್ನನ್ನು ಪರಾಂಬರಿಸಬೇಕು. ಆಕೆಯು ನಮ್ಮ ಒಡೆಯನಾದ ಅರಸನ ಪಕ್ಕದಲ್ಲಿ ಮಲಗುವುದರಿಂದ ನಿಮಗೆ ಬೆಚ್ಚಗಾಗುವುದು>> ಎಂದು ಹೇಳಿದರು. BSB BSB: So his servants said to him, “Let us search for a young virgin for our lord the king, to attend to him and care for him and lie by his side to keep him warm.”
3 ULB ಆನಂತರ ಅವರು ಇಸ್ರಾಯೇಲರ ಎಲ್ಲಾ ಪ್ರಾಂತ್ಯಗಳಲ್ಲಿ ಅತಿ ಸುಂದರಿಯಾದ ಹುಡುಗಿಯನ್ನು ಹುಡುಕುವುದಕ್ಕೆ ಹೋಗಿ ಶೂನೇಮ್ ಊರಿನ ಅಬೀಷಗ್ ಎಂಬಾಕೆಯನ್ನು ಕಂಡು ಆಕೆಯನ್ನು ಅರಸನ ಬಳಿಗೆ ಕರೆದುಕೊಂಡು ಬಂದರು. BSB BSB: Then they searched throughout Israel for a beautiful girl, and they found Abishag the Shunammite and brought her to the king.
4 ULB ಬಹು ಸುಂದರಿಯಾದ ಈಕೆಯು ಅರಸನನ್ನು ಶುಶ್ರೂಷೆ ಮಾಡುವ ಸೇವಕಿಯಾದಳು. ಆದರೆ ಅರಸನು ಈಕೆಯನ್ನು ಸಂಗಮಿಸಲಿಲ್ಲ. BSB BSB: The girl was unsurpassed in beauty; she cared for the king and served him, but he had no relations with her.
5 ULB ಆನಂತರ ಹಗ್ಗೀತಳ ಮಗನಾದ ಅದೋನೀಯನು, <<ನಾನೇ ಅರಸನಾಗತಕ್ಕವನು>> ಎಂಬುದಾಗಿ ಹೇಳಿ ಉಬ್ಬಿಕೊಂಡು, ತನಗೋಸ್ಕರ ರಥರಥಾಶ್ವಗಳನ್ನೂ, ಮುಂದೆ ಓಡುವುದಕ್ಕಾಗಿ ಐವತ್ತು ಸಿಪಾಯಿಗಳನ್ನೂ ನೇಮಿಸಿಕೊಂಡನು. BSB BSB: At that time Adonijah, David’s son by Haggith, began to exalt himself, saying, “I will be king!” And he acquired chariots and horsemen and fifty men to run ahead of him.
6 ULB ಅವನ ತಂದೆಯಾದ ದಾವೀದನು, <<ನೀನು ಹೀಗೆ ಮಾಡಿದ್ದೇಕೆ>> ಎಂದು ಅವನನ್ನು ಒಂದು ಸಾರಿಯಾದರೂ ಗದರಿಸಿ ಬೇಸರಪಡಿಸಿರಲಿಲ್ಲ. ಅವನು ಬಹು ಸುಂದರವಾಗಿದ್ದನು. ಅಬ್ಷಾಲೋಮನ ತರುವಾಯ ಅವನೇ ಹಿರಿಯನಾಗಿದ್ದನು. BSB BSB: (His father had never once reprimanded him by saying, “Why do you act this way?” Adonijah was also very handsome, born next after Absalom.)
7 ULB ಅವನು ಚೆರೂಯಳ ಮಗನಾದ ಯೋವಾಬನನ್ನು ಮತ್ತು ಯಾಜಕನಾದ ಎಬ್ಯಾತಾರನನ್ನೂ ತನ್ನ ಕಡೆಗೆ ಒಲಿಸಿಕೊಂಡನು. ಇವರು ಅವನನ್ನು ಹಿಂಬಾಲಿಸಿ ಅವನಿಗೆ ಸಹಾಯಕರಾದರು. BSB BSB: So Adonijah conferred with Joab son of Zeruiah and with Abiathar the priest, who supported him.
8 ULB ಆದರೆ ಯಾಜಕನಾದ ಚಾದೋಕ್, ಯೆಹೋಯಾದಾವನ ಮಗನಾದ ಬೆನಾಯ, ಪ್ರವಾದಿಯಾದ ನಾತಾನ್, ಶಿಮ್ಮೀ, ರೇಗೀ ಮತ್ತು ದಾವೀದನ ವಿಶೇಷ ಕಾವಲಿನವರು ಅದೋನೀಯನನ್ನು ಬೆಂಬಲಿಸಲಿಲ್ಲ. BSB BSB: But Zadok the priest, Benaiah son of Jehoiada, Nathan the prophet, Shimei, Rei, and David’s mighty men would not join Adonijah.
9 ULB ಅದೋನೀಯನು ರೋಗೆಲ್ ಬುಗ್ಗೆಯ ಬಳಿಯಲ್ಲಿರುವ ಚೋಹೆಲೆತ್ ಬಂಡೆಯ ಮೇಲೆ ಕುರಿ, ಹೋರಿ ಮೊದಲಾದ ಕೊಬ್ಬಿದ ಪಶುಗಳನ್ನು ಯಜ್ಞಮಾಡಿಸಿ, ರಾಜಪುತ್ರರಾದ ತನ್ನ ಉಳಿದ ಸಹೋದರರನ್ನೂ ಅರಸನ ಅಧಿಕಾರಿಗಳಾದ ಎಲ್ಲಾ ಯೆಹೂದ್ಯರನ್ನೂ ಔತಣಕ್ಕೆ ಆಮಂತ್ರಿಸಿದನು. BSB BSB: And Adonijah sacrificed sheep, oxen, and fattened calves near the stone of Zoheleth, which is next to En-rogel. He invited all his royal brothers and all the men of Judah who were servants of the king.
10 ULB ಆದರೆ ಪ್ರವಾದಿಯಾದ ನಾತಾನ್, ಬೆನಾಯ, ದಾವೀದನ ವಿಶೇಷ ಕಾವಲಿನವರು ತಮ್ಮನಾದ ಸೊಲೊಮೋನ್ ಇವರನ್ನು ಮಾತ್ರ ಆಮಂತ್ರಿಸಿರಲಿಲ್ಲ. BSB BSB: But he did not invite Nathan the prophet, Benaiah, the mighty men, or his brother Solomon.
11 ULB ಆಗ ನಾತಾನನು ಸೊಲೊಮೋನನ ತಾಯಿಯಾದ ಬತ್ಷೆಬೆಗೆ, <<ಹಗ್ಗೀತಳ ಮಗನಾದ ಅದೋನೀಯನು ನಮ್ಮ ಒಡೆಯನಾದ ದಾವೀದನಿಗೆ ತಿಳಿಯದೇ ಅರಸನಾದನೆಂಬುದನ್ನು ನೀನು ಕೇಳಿದಿಯಲ್ಲವೋ? BSB BSB: Then Nathan said to Bathsheba the mother of Solomon, “Have you not heard that Adonijah son of Haggith has become king, and our lord David does not know it?
12 ULB ಈಗ ನನ್ನ ಆಲೋಚನೆಯನ್ನು ಲಾಲಿಸಿ ನಿನ್ನ ಮತ್ತು ನಿನ್ನ ಮಗನಾದ ಸೊಲೊಮೋನನ ಜೀವವನ್ನು ಉಳಿಸಿಕೋ. BSB BSB: Now please, come and let me advise you. Save your own life and the life of your son Solomon.
13 ULB ನೀನು ಅರಸನಾದ ದಾವೀದನ ಬಳಿಗೆ ಹೋಗಿ ಅವನಿಗೆ, <ನನ್ನ ಒಡೆಯನಾದ ಅರಸನು ತನ್ನ ತರುವಾಯ ನನ್ನ ಮಗನಾದ ಸೊಲೊಮೋನನೇ ಆಳಬೇಕು. ಅವನೇ ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳಬೇಕು ಎಂದು ತಮ್ಮ ದಾಸಿಯಾದ ನನಗೆ ಪ್ರಮಾಣ ಮಾಡಿ ಹೇಳಿದ್ದನಲ್ಲಾ. ಹೀಗಿದ್ದ ಮೇಲೆ ಅದೋನೀಯನು ಆಳುವುದೇಕೆ> ಎಂದು ಕೇಳು. BSB BSB: Go at once to King David and say, ‘My lord the king, did you not swear to your maidservant, “Surely your son Solomon will reign after me, and he will sit on my throne”? Why then has Adonijah become king?’
14 ULB ನೀನು ಅರಸನೊಡನೆ ಮಾತನಾಡುತ್ತಿರುವಾಗ ನಾನು ಬಂದು ನಿನ್ನ ಮಾತನ್ನು ದೃಢಪಡಿಸುವೆನು>> ಎಂದನು. BSB BSB: Then, while you are still there speaking with the king, I will come in after you and confirm your words.”
15 ULB ಅರಸನು ಬಹು ವೃದ್ಧನಾಗಿದುದರಿಂದ ಶೂನೇಮ್ಯಳಾದ ಅಬೀಷಗ್ ಎಂಬಾಕೆಯಿಂದ ಪರಾಂಬರಿಕೆಯನ್ನು ಹೊಂದುತ್ತಾ ಒಳಗಿನ ಕೋಣೆಯಲ್ಲಿಯೇ ಇರುತ್ತಿದ್ದನು. BSB BSB: So Bathsheba went to see the king in his bedroom. Since the king was very old, Abishag the Shunammite was serving him.
16 ULB ಬತ್ಷೆಬೆಯು ಅಲ್ಲಿಗೆ ಹೋಗಿ ಅರಸನಿಗೆ ಬಾಗಿ ನಮಸ್ಕರಿಸಿದಳು. ಅರಸನು, <<ನಿನಗೇನು ಬೇಕು?>> ಎಂದು ಆಕೆಯನ್ನು ಕೇಳಿದನು. BSB BSB: And Bathsheba bowed down in homage to the king, who asked, “What is your desire?”
17 ULB ಆಗ ಆಕೆಯು, <<ನನ್ನ ಒಡೆಯನು ತನ್ನ ದೇವರಾದ ಯೆಹೋವನ ಮೇಲೆ ಆಣೆಯಿಟ್ಟು ತಮ್ಮ ದಾಸಿಯಾದ ನನಗೆ ನನ್ನ ತರುವಾಯ ನನ್ನ ಮಗನಾದ ಸೊಲೊಮೋನನು ಅರಸನಾಗಬೇಕು. ನಿಜವಾಗಿ ಅವನೇ ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳಬೇಕು ಎಂಬುದಾಗಿ ಹೇಳಿದ್ದೆಯಲ್ಲಾ. BSB BSB: “My lord,” she replied, “you yourself swore to your maidservant by the LORD your God: ‘Surely your son Solomon will reign after me, and he will sit on my throne.’
18 ULB ಆದರೆ ಈಗ ಅದೋನೀಯನು ನನ್ನ ಒಡೆಯನೂ ಅರಸನೂ ಆದ ನಿಮಗೆ ತಿಳಿಯದೇ ಅರಸನಾಗಿದ್ದಾನೆ. BSB BSB: But now, behold, Adonijah has become king, and you, my lord the king, do not know it.
19 ULB ಆತನು ಹೋರಿ, ಕುರಿ ಮೊದಲಾದ ಹಲವು ಕೊಬ್ಬಿದ ಪಶುಗಳನ್ನು ಯಜ್ಞಮಾಡಿಸಿ ನಿನ್ನ ಸೇವಕನಾದ ಸೊಲೊಮೋನನ ಹೊರತಾಗಿ ಎಲ್ಲಾ ರಾಜಪುತ್ರರನ್ನೂ, ಯಾಜಕನಾದ ಎಬ್ಯಾತಾರನನ್ನೂ, ಸೇನಾಧಿಪತಿಯಾದ ಯೋವಾಬನನ್ನೂ ಔತಣಕ್ಕೆ ಕರೆದಿದ್ದಾನೆ. BSB BSB: And he has sacrificed an abundance of oxen, fattened calves, and sheep, and has invited all the other sons of the king, as well as Abiathar the priest and Joab the commander of the army. But he has not invited your servant Solomon.
20 ULB ನನ್ನ ಒಡೆಯನೂ ಅರಸನೂ ಆದ ನಿಮ್ಮ ತರುವಾಯ ಸಿಂಹಾಸನದ ಮೇಲೆ ಕುಳಿತುಕೊಳ್ಳತಕ್ಕವರು ಯಾರೆಂಬುದನ್ನು ನೀವೇ ಗೊತ್ತುಮಾಡಬೇಕೆಂದು ಇಸ್ರಾಯೇಲರೆಲ್ಲರೂ ಕಾದುಕೊಂಡಿದ್ದಾರೆ. BSB BSB: And as for you, my lord the king, the eyes of all Israel are upon you to tell them who will sit on the throne of my lord the king after him.
21 ULB ನನ್ನ ಒಡೆಯನೂ, ಅರಸನೂ ಆದ ನೀವೂ ಹಾಗೆ ಮಾಡದೆ ಪೂರ್ವಿಕರ ಬಳಿಗೆ ಸೇರುವುದಾದರೆ ನಾನೂ ಮತ್ತು ನನ್ನ ಮಗನೂ ದೋಷಾರೋಪಣೆಗೆ ಗುರಿಯಾಗುವೆವು>> ಎಂದು ಹೇಳಿದಳು. BSB BSB: Otherwise, when my lord the king rests with his fathers, I and my son Solomon will be counted as criminals.”
22 ULB ಆಕೆಯು ಹೀಗೆ ಅರಸನ ಸಂಗಡ ಮಾತನಾಡುವಷ್ಟರಲ್ಲಿ ಪ್ರವಾದಿಯಾದ ನಾತಾನನು ಬಂದನು. BSB BSB: And just then, while Bathsheba was still speaking with the king, Nathan the prophet arrived.
23 ULB ಸೇವಕರು ನಾತಾನನು ಬಂದಿರುವ ಸಂಗತಿಯನ್ನು ಅರಸನಿಗೆ ತಿಳಿಸಿದರು. ಪ್ರವಾದಿಯಾದ ನಾತಾನನು ಅರಸನ ಮುಂದೆ ಹೋಗಿ ಸಾಷ್ಟಾಂಗನಮಸ್ಕಾರಮಾಡಿದನು. BSB BSB: So the king was told, “Nathan the prophet is here.” And Nathan went in and bowed facedown before the king.
24 ULB ನಾತಾನನು, <<ನನ್ನ ಒಡೆಯನೂ, ಅರಸನೂ ಆದ ನೀನು ಅದೋನೀಯನಿಗೆ ಅರಸನಾಗುವುದಕ್ಕೆ ನಿನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವುದಕ್ಕೂ ಅಪ್ಪಣೆಕೊಟ್ಟಿರುವಂತೆ ಕಾಣುತ್ತದೆ. BSB BSB: “My lord the king,” said Nathan, “did you say, ‘Adonijah will reign after me, and he will sit on my throne’?
25 ULB ಅವನು ಗಟ್ಟಾ ಇಳಿದು ಹೋಗಿ ಹೋರಿ, ಕುರಿ ಮುಂತಾದ ಹಲವು ಕೊಬ್ಬಿದ ಪಶುಗಳನ್ನು ಯಜ್ಞಮಾಡಿಸಿ, ಎಲ್ಲಾ ರಾಜಪುತ್ರರನ್ನೂ, ಸೇನಾಧಿಪತಿಗಳನ್ನೂ, ಯಾಜಕನಾದ ಎಬ್ಯಾತಾರನನ್ನೂ ಔತಣಕ್ಕೆ ಕರೆದಿದ್ದಾನೆ. ಅವರು ಅವನ ಪಂಕ್ತಿಯಲ್ಲಿ ಅನ್ನಪಾನಗಳನ್ನು ತೆಗೆದುಕೊಂಡು, <ಅರಸನಾದ ಅದೋನೀಯನು ಚಿರಂಜೀವಿಯಾಗಿರಲಿ> ಎಂದು ಕೂಗುತ್ತಿದ್ದಾರೆ. BSB BSB: For today he has gone down and sacrificed an abundance of oxen, fattened calves, and sheep, and has invited all the sons of the king, the commanders of the army, and Abiathar the priest. And behold, they are eating and drinking before him, saying, ‘Long live King Adonijah!’
26 ULB ಆದರೆ ಅವನು ನಿನ್ನ ಸೇವಕನಾದ ನನ್ನನ್ನೂ, ಯಾಜಕನಾದ ಚಾದೋಕ್, ಯೆಹೋಯಾದಾವನ ಮಗನಾದ ಬೆನಾಯ ಎಂಬುವರನ್ನೂ ನಿನ್ನ ಮಗನೂ, ಸೇವಕನೂ ಸೊಲೊಮೋನನನ್ನೂ ಔತಣಕ್ಕೆ ಕರೆಯಲಿಲ್ಲ. BSB BSB: But me your servant he has not invited, nor Zadok the priest, nor Benaiah son of Jehoiada, nor your servant Solomon.
27 ULB ಈ ಕಾರ್ಯವು ನನ್ನ ಒಡೆಯನೂ ಅರಸನೂ ಆದ ನಿನ್ನಿಂದಲೇ ನಡೆದಿರುವ ಪಕ್ಷದಲ್ಲಿ ನಿನ್ನ ತರುವಾಯ ಸಿಂಹಾಸನದ ಮೇಲೆ ಕುಳಿತುಕೊಳ್ಳತಕ್ಕವರು ಯಾರು ಎಂಬುವುದನ್ನು ನಿನ್ನ ಸೇವಕನಾದ ನನಗೆ ತಿಳಿಸಬಾರದಾಗಿತ್ತೇ>> ಎಂದು ಹೇಳಿದನು. BSB BSB: Has my lord the king let this happen without informing your servant who should sit on the throne after my lord the king?”
28 ULB ಅರಸನಾದ ದಾವೀದನು ಬತ್ಷೆಬೆಯನ್ನು ಕರೆಯಬೇಕೆಂದು ಆಜ್ಞಾಪಿಸಿದನು. ಆಕೆಯು ಬಂದು ಅರಸನ ಮುಂದೆ ನಿಂತಳು. BSB BSB: Then King David said, “Call in Bathsheba for me.” So she came into the king’s presence and stood before him.
29 ULB ಅರಸನು ಆಕೆಗೆ, <<ನನ್ನ ಪ್ರಾಣವನ್ನು ಎಲ್ಲಾ ಇಕ್ಕಟ್ಟುಗಳಿಂದ ಬಿಡಿಸಿ ಕಾಪಾಡಿದ ಯೆಹೋವನಾಣೆ, BSB BSB: And the king swore an oath, saying, “As surely as the LORD lives, who has redeemed my life from all distress,
30 ULB ನನ್ನ ತರುವಾಯ ನಿನ್ನ ಮಗನಾದ ಸೊಲೊಮೋನನು ಅರಸನಾದ ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳಬೇಕೆಂದು ನಾನು ನಿನಗೆ ಇಸ್ರಾಯೇಲ್ ದೇವರಾದ ಯೆಹೋವನ ಹೆಸರಿನಲ್ಲಿ ಪ್ರಮಾಣಮಾಡಿದ್ದನ್ನು ಈಹೊತ್ತೇ ನೆರವೇರಿಸುವೆನು>> ಎಂದನು. BSB BSB: I will carry out this very day exactly what I swore to you by the LORD, the God of Israel: Surely your son Solomon will reign after me, and he will sit on my throne in my place.”
31 ULB ಆಗ ಬತ್ಷೆಬೆಯು ಅರಸನಿಗೆ ಸಾಷ್ಟಾಂಗನಮಸ್ಕಾರ ಮಾಡಿ, <<ನನ್ನ ಒಡೆಯನೂ ಅರಸನೂ ಆದ ದಾವೀದನು ಸದಾಕಾಲವೂ ಬಾಳಲಿ>> ಎಂದಳು. BSB BSB: Bathsheba bowed facedown in homage to the king and said, “May my lord King David live forever!”
32 ULB ಅನಂತರ ಅರಸನಾದ ದಾವೀದನು ತನ್ನ ಸೇವಕರಿಗೆ, <<ಯಾಜಕನಾದ ಚಾದೋಕ್, ಪ್ರವಾದಿಯಾದ ನಾತಾನ, ಯೆಹೋಯಾದಾವನ ಮಗನಾದ ಬೆನಾಯ ಎಂಬುವರನ್ನು ಕರೆಯಿರಿ>> ಎಂದು ಆಜ್ಞಾಪಿಸಿದನು. ಅವರು ಅರಸನ ಸನ್ನಿಧಿಗೆ ಬಂದರು. BSB BSB: Then King David said, “Call in for me Zadok the priest, Nathan the prophet, and Benaiah son of Jehoiada.” So they came before the king.
33 ULB ಅರಸನು ಅವರಿಗೆ, <<ನೀವು ನನ್ನ ಸೇವಕರನ್ನು ಕರೆದುಕೊಂಡು ನನ್ನ ಮಗನಾದ ಸೊಲೊಮೋನನನ್ನು ನನ್ನ ಹೇಸರಗತ್ತೆಯ ಮೇಲೆ ಕುಳ್ಳಿರಿಸಿಕೊಂಡು ಗೀಹೋನ್ ಬುಗ್ಗೆಗೆ ಹೋಗಿರಿ. BSB BSB: “Take my servants with you,” said the king. “Set my son Solomon on my own mule and take him down to Gihon.
34 ULB ಅಲ್ಲಿ ಯಾಜಕನಾದ ಚಾದೋಕನೂ ಮತ್ತು ಪ್ರವಾದಿಯಾದ ನಾತಾನನೂ ಅವನನ್ನು ಇಸ್ರಾಯೇಲರ ಅರಸನನ್ನಾಗಿ ಅಭಿಷೇಕಿಸಲಿ. ಅನಂತರ ಕೊಂಬನ್ನೂದಿರಿ. ಎಲ್ಲರೂ, <ಅರಸನಾದ ಸೊಲೊಮೋನನು ಚಿರಂಜೀವಿಯಾಗಿರಲಿ> ಎಂದು ಜಯಘೋಷ ಮಾಡಲಿ. BSB BSB: There Zadok the priest and Nathan the prophet are to anoint him king over Israel. You are to blow the ram’s horn and declare, ‘Long live King Solomon!’
35 ULB ಆಮೇಲೆ ನೀವು ಅವನ ಹಿಂದೆ ಬನ್ನಿರಿ. ಅವನು ಅರಮನೆಯನ್ನು ಪ್ರವೇಶಿಸಿ ನನ್ನ ಸಿಂಹಾಸನದ ಮೇಲೆ ಕುಳಿತುಕೊಂಡು ನನಗೆ ಬದಲಾಗಿ ಆಳಬೇಕು. ನಾನು ಇಸ್ರಾಯೇಲರ ಮತ್ತು ಯೆಹೂದ್ಯರನ್ನು ಆಳಲು ಅವನನ್ನೇ ಪ್ರಭುವನ್ನಾಗಿ ನೇಮಿಸಿದ್ದೇನೆ>> ಎಂದನು. BSB BSB: Then you shall go up with him, and he is to come and sit on my throne and reign in my place. For I have appointed him ruler over Israel and Judah.”
36 ULB ಯೆಹೋಯಾದಾವನ ಮಗನಾದ ಬೆನಾಯನು ಅರಸನಿಗೆ, <<ಹಾಗೆಯೇ ಆಗಲಿ. ನನ್ನ ಒಡೆಯನಾದ ಅರಸನ ದೇವರಾದ ಯೆಹೋವನು ಅದನ್ನು ಸ್ಥಿರಪಡಿಸಲಿ. BSB BSB: “Amen,” replied Benaiah son of Jehoiada. “May the LORD, the God of my lord the king, so declare it.
37 ULB ಆತನು ನನ್ನ ಒಡೆಯನಾದ ಅರಸನ ಸಂಗಡ ಇದ್ದ ಪ್ರಕಾರ ಸೊಲೊಮೋನನ ಸಂಗಡಲೂ ಇದ್ದು ರಾಜ್ಯವನ್ನು ನನ್ನ ಒಡೆಯನೂ, ಅರಸನೂ ಆದ ನಿನ್ನ ಕಾಲದಲ್ಲಿದ್ದದಕ್ಕಿಂತ ಅಭಿವೃದ್ಧಿಮಾಡಲಿ>> ಎಂದು ನುಡಿದನು. BSB BSB: Just as the LORD was with my lord the king, so may He be with Solomon and make his throne even greater than that of my lord King David.”
39 ULB ಯಾಜಕನಾದ ಚಾದೋಕನು ದೇವದರ್ಶನದ ಗುಡಾರದಲ್ಲಿ ಎಣ್ಣೆಯ ಕೊಂಬನ್ನು ತೆಗೆದುಕೊಂಡು ಸೊಲೊಮೋನನನ್ನು ಅಭಿಷೇಕಿಸಿದನು. ಕೂಡಲೇ ಕೊಂಬನ್ನೂದಿ ಎಲ್ಲಾ ಜನರು <<ಅರಸನಾದ ಸೊಲೊಮೋನನು ಚಿರಂಜೀವಿಯಾಗಿರಲಿ>> ಎಂದು ಆರ್ಭಟಿಸಿದರು. BSB BSB: Zadok the priest took the horn of oil from the tabernacle and anointed Solomon. Then they blew the ram’s horn, and all the people proclaimed, “Long live King Solomon!”
40 ULB ತರುವಾಯ ಅವರೆಲ್ಲರೂ ಅವನನ್ನು ಹಿಂಬಾಲಿಸಿ ಕೊಳಲೂದುತ್ತಾ, ಬಹುಸಂತೋಷದಿಂದ ಜಯಘೋಷಮಾಡುತ್ತಾ ಹಿಂತಿರುಗಿ ಬಂದರು. ಅವರ ಕೂಗಿನಿಂದ ಭೂಮಿಯು ನಡುಗಿತೋ ಎಂಬಂತೆ ಆಯಿತು. BSB BSB: All the people followed him, playing flutes and rejoicing with such a great joy that the earth was split by the sound.
41 ULB ಅದೋನೀಯನು ಅವನ ಸಂಗಡ ಇದ್ದ ಅತಿಥಿಗಳೂ ಭೋಜನವನ್ನು ಮುಗಿಸುವಷ್ಟರಲ್ಲೇ ಅವರಿಗೆ ಈ ಕೂಗು ಕೇಳಿಸಿತು. ಯೋವಾಬನು ಕೊಂಬಿನ ಧ್ವನಿಯನ್ನು ಕೇಳಿದಾಗ, <<ಪಟ್ಟಣದಲ್ಲಿ ಇಂಥ ಗದ್ದಲವೇಕೆ?>> ಎಂದು ವಿಚಾರಿಸಿದನು. BSB BSB: Now Adonijah and all his guests were finishing their feast when they heard the sound of the ram’s horn. “Why is the city in such a loud uproar?” asked Joab.
42 ULB ಆಗ ಯಾಜಕನಾದ ಎಬ್ಯಾತಾರನ ಮಗನಾದ ಯೋನಾತಾನನು ಅಲ್ಲಿಗೆ ಬಂದನು. ಅದೋನೀಯನು ಅವನಿಗೆ, <<ಬಾ ನೀನು ಯೋಗ್ಯ ಪುರುಷನೂ, ಶುಭವರ್ತಮಾನವನ್ನು ತರುವವನೂ ಆಗಿರುತ್ತೀ>> ಎಂದನು. BSB BSB: As he was speaking, suddenly Jonathan the son of Abiathar the priest arrived. “Come in,” said Adonijah, “for you are a man of valor. You must be bringing good news.”
43 ULB ಯೋನಾತಾನನು ಅವನಿಗೆ, <<ಶುಭವಾರ್ತೆ ಎಲ್ಲಿ? ನಮ್ಮೊಡೆಯನೂ, ಅರಸನೂ ಆದ ದಾವೀದನು ಸೊಲೊಮೋನನನ್ನು ಅರಸನನ್ನಾಗಿ ಮಾಡಿದ್ದಾನೆ. BSB BSB: “Not at all,” Jonathan replied. “Our lord King David has made Solomon king.
44 ULB ಅರಸನು ಯಾಜಕನಾದ ಚಾದೋಕ್, ಪ್ರವಾದಿಯಾದ ನಾತಾನ್ ಯೆಹೋಯಾದಾವನ ಮಗನಾದ ಬೆನಾಯ ಎಂಬುವರನ್ನೂ, ಕೆರೇತ್ಯ ಮತ್ತು ಪೆಲೇತ್ಯರನ್ನೂ ಅವನ ಜೊತೆಯಲ್ಲಿ ಕಳುಹಿಸಿದ್ದಾನೆ. ಅವರು ಅವನನ್ನು ಅರಸನ ಹೇಸರಗತ್ತೆಯ ಮೇಲೆ ಕುಳ್ಳಿರಿಸಿದ್ದಾರೆ. BSB BSB: And with Solomon, the king has sent Zadok the priest, Nathan the prophet, and Benaiah son of Jehoiada, along with the Cherethites and Pelethites, and they have set him on the king’s mule.
45 ULB ಯಾಜಕನಾದ ಚಾದೋಕನೂ, ಪ್ರವಾದಿಯಾದ ನಾತಾನನೂ ಗೀಹೋನಿನ ಬಳಿಯಲ್ಲಿ ಅವನಿಗೆ ರಾಜ್ಯಾಭಿಷೇಕ ಮಾಡಿದರು. ಅಲ್ಲಿಂದ ಅವರು ಮಹಾ ಸಂತೋಷದಿಂದ ಜಯಘೋಷ ಮಾಡುತ್ತಾ ಪಟ್ಟಣಕ್ಕೆ ಬಂದಿದ್ದಾರೆ. ಇದರಿಂದಲೇ ಪಟ್ಟಣದಲ್ಲಿ ಗದ್ದಲವುಂಟಾಗಿದೆ. ನೀವು ಕೇಳಿದ ಶಬ್ದವು ಇದೇ. BSB BSB: Zadok the priest and Nathan the prophet have anointed him king at Gihon, and they have gone up from there with rejoicing that rings out in the city. That is the noise you hear.
46 ULB ಇದಲ್ಲದೆ ಸೊಲೊಮೋನನು ರಾಜಸಿಂಹಾಸನದ ಮೇಲೆ ಕುಳಿತುಕೊಂಡಿದ್ದಾನೆ. BSB BSB: Moreover, Solomon has taken his seat on the royal throne.
47 ULB ಅರಸನಾದ ದಾವೀದನ ಸೇವಕರು ನಮ್ಮ ಒಡೆಯನೂ, ಅರಸನೂ ಆದ ದಾವೀದನ ಮುಂದೆ ಬಂದು, <ನಿನ್ನ ದೇವರು ನಿನ್ನ ಹೆಸರಿಗಿಂತಲೂ ಸೊಲೊಮೋನನ ಹೆಸರನ್ನು ಪ್ರಸಿದ್ಧಿಗೆ ತರಲಿ. ರಾಜ್ಯವನ್ನು ನಿನ್ನ ಕಾಲದಲ್ಲಿ ಇದ್ದದ್ದಕ್ಕಿಂತ ಅವನ ಕಾಲದಲ್ಲಿ ಹೆಚ್ಚು ಬಲಪಡಿಸಲಿ> ಎಂದು ಅವನನ್ನು ಹರಿಸಿದ್ದಾರೆ. BSB BSB: The king’s servants have also gone to congratulate our lord King David, saying, ‘May your God make the name of Solomon more famous than your own name, and may He make his throne greater than your throne.’ And the king has bowed in worship on his bed,
48 ULB ಅರಸನು ತನ್ನ ಹಾಸಿಗೆಯ ಮೇಲೆ ಬಾಗಿಕೊಂಡು, <ನಾನು ಕಣ್ಣಾರೆ ಕಾಣುವಂತೆ ಇಂದು ನನ್ನ ಸಿಂಹಾಸನಕ್ಕೆ ಒಬ್ಬ ಉತ್ತರಾಧಿಕಾರಿಯನ್ನು ದಯಪಾಲಿಸಿದ ಇಸ್ರಾಯೇಲರ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ> ಎಂದು ಹೇಳಿದ್ದಾನೆ>> ಅಂದರು. BSB BSB: saying, ‘Blessed be the LORD, the God of Israel! Today He has provided one to sit on my throne, and my eyes have seen it.’”
49 ULB ಆಗ ಅದೋನೀಯನಿಂದ ಔತಣಕ್ಕೆ ಕರೆಯಲ್ಪಟ್ಟವರೆಲ್ಲರೂ ಭಯಪಟ್ಟು ತಮ್ಮ ತಮ್ಮ ಮನೆಗಳಿಗೆ ಹೊರಟುಹೋದರು. BSB BSB: At this, all the guests of Adonijah arose in terror and scattered.
51 ULB ದೂತರು ಬಂದು ಸೊಲೊಮೋನನಿಗೆ, <<ಅದೋನೀಯನು ನಿನಗೆ ಹೆದರಿ ಯಜ್ಞವೇದಿಯ ಕೊಂಬುಗಳನ್ನು ಹಿಡಿದು, <ಅರಸನಾದ ಸೊಲೊಮೋನನು ನನ್ನನ್ನು ಕತ್ತಿಯಿಂದ ಸಂಹರಿಸುವುದಿಲ್ಲವೆಂಬುದಾಗಿ ಈ ಹೊತ್ತು ನನಗೆ ಪ್ರಮಾಣಮಾಡಬೇಕೆಂದು ಬೇಡಿಕೊಳ್ಳುತ್ತೇನೆ>>> ಎಂಬುದಾಗಿ ತಿಳಿಸಿದನು. BSB BSB: It was reported to Solomon: “Behold, Adonijah fears King Solomon, and he has taken hold of the horns of the altar, saying, ‘Let King Solomon first swear to me not to put his servant to the sword.’”
52 ULB ಅವನು, <<ಅದೋನೀಯನು ಯೋಗ್ಯತೆಯುಳ್ಳವನಾಗಿ ನಡೆಯುವುದಾದರೆ ಅವನ ಕೂದಲುಗಳಲ್ಲಿ ಒಂದನ್ನೂ ನೆಲಕ್ಕೆ ಬೀಳಗೊಡಿಸುವುದಿಲ್ಲ. ಆದರೆ ಅವನಲ್ಲಿ ಕೆಟ್ಟತನವು ಕಂಡುಬರುವುದಾದರೆ ಅವನು ಸಾಯುವನು>> ಎಂದು ಹೇಳಿ ಆಳುಗಳನ್ನು ಕಳುಹಿಸಿ ಅವನನ್ನು ಯಜ್ಞವೇದಿಯ ಬಳಿಯಿಂದ ಕರೆಯಿಸಿದನು. BSB BSB: And Solomon replied, “If he is a man of character, not a single hair of his will fall to the ground. But if evil is found in him, he will die.”
53 ULB ಅವನು ಬಂದಾಗ ಅರಸನಾದ ಸೊಲೊಮೋನನಿಗೆ ಸಾಷ್ಟಾಂಗನಮಸ್ಕಾರ ಮಾಡಿದನು. ಸೊಲೊಮೋನನು ಅವನಿಗೆ ಅವನ ಮನೆಗೆ ಹೋಗಲು ಅಪ್ಪಣೆಕೊಟ್ಟನು. BSB BSB: So King Solomon summoned Adonijah down from the altar, and he came and bowed down before King Solomon, who said to him, “Go to your home.”
Select verses for actions: Enter goes to them and Escape comes back.