1 ULB ತರುವಾಯ ಸೊಲೊಮೋನನು, ಯೆಹೋವನೇ <<ಕಾರ್ಗತ್ತಲಲ್ಲಿ ವಾಸಿಸುತ್ತೇನೆಂದು ಹೇಳಿದ್ದೀ; BSB BSB: Then Solomon declared: “The LORD has said that He would dwell in the thick cloud.
2 ULB ಆದರೆ ನಾನು ನಿನಗೋಸ್ಕರ ಒಂದು ಆಲಯವನ್ನು, ನೀನು ಶಾಶ್ವತವಾಗಿ ವಾಸಮಾಡತಕ್ಕ ಸ್ಥಳವಾಗಿರಲೆಂದು ನಾನು ಕಟ್ಟಿಸಿದ್ದೇನೆ>> ಎಂದನು. BSB BSB: But I have built You an exalted house, a place for You to dwell forever.”
3 ULB ಇದಾದ ಮೇಲೆ, ಅರಸನು ಎದ್ದು ನಿಂತು ಇಸ್ರಾಯೇಲಿನ ಸಮೂಹದವರ ಕಡೆಗೆ ತಿರುಗಿಕೊಂಡು ಅವರನ್ನು ಆಶೀರ್ವದಿಸಿದನು. BSB BSB: And as the whole assembly of Israel stood there, the king turned around and blessed them all
4 ULB ಅವನು ಹೇಳಿದ್ದೇನೆಂದರೆ, <<ಇಸ್ರಾಯೇಲರ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ; ನನ್ನ ತಂದೆಯಾದ ದಾವೀದನಿಗೆ ವಾಗ್ದಾನ ಮಾಡಿದಂತೆ ಈಗ ತನ್ನಿಂದ ನೆರವೇರಿಸುವಂತೆ ಮಾಡಿದ್ದಾನೆ. BSB BSB: and said: “Blessed be the LORD, the God of Israel, who has fulfilled with His own hand what He spoke with His mouth to my father David, saying,
5 ULB ಆತನು ಹೇಳಿದ್ದೇನೆಂದರೆ, <ನನ್ನ ಜನರಾದ ಇಸ್ರಾಯೇಲರನ್ನು ಐಗುಪ್ತ ದೇಶದಿಂದ ಬರಮಾಡಿದ ದಿನ ಮೊದಲುಗೊಂಡು ನನ್ನ ಹೆಸರು ಅದರಲ್ಲಿ ಇರುವ ಹಾಗೆ ಆಲಯವನ್ನು ಕಟ್ಟುವುದಕ್ಕಾಗಿ ಇಸ್ರಾಯೇಲರ ಕುಲಗಳಲ್ಲಿ ಯಾವ ಪಟ್ಟಣವನ್ನೂ, ನನ್ನ ಆಲಯ ಸ್ಥಾನವನ್ನಾಗಿ ಆರಿಸಿಕೊಳ್ಳಲಿಲ್ಲ; ನನ್ನ ಪ್ರಜೆಗಳಾದ ಇಸ್ರಾಯೇಲರ ಪ್ರಭುವಾಗಿರುವುದಕ್ಕಾಗಿ ಯಾವ ವ್ಯಕ್ತಿಯನ್ನು ಆರಿಸಿಕೊಂಡದ್ದೂ ಇಲ್ಲ. BSB BSB: ‘Since the day I brought My people out of the land of Egypt, I have not chosen a city from any tribe of Israel in which to build a house so that My Name would be there, nor have I chosen anyone to be ruler over My people Israel.
6 ULB ಆದರೆ ಈಗ ನನ್ನ ಹೆಸರಿಗೋಸ್ಕರ ಯೆರೂಸಲೇಮನ್ನೂ ನನ್ನ ಪ್ರಜೆಗಳಾದ ಇಸ್ರಾಯೇಲರನ್ನು ಆಳುವುದಕ್ಕೋಸ್ಕರ ದಾವೀದನನ್ನೂ ಆರಿಸಿಕೊಂಡಿದ್ದೇನೆ> ಎಂದು ಹೇಳಿದನು. BSB BSB: But now I have chosen Jerusalem for My Name to be there, and I have chosen David to be over My people Israel.’
7 ULB ಆದಕಾರಣ ಇಸ್ರಾಯೇಲಿನ ದೇವರಾದ ಯೆಹೋವನ ಹೆಸರಿಗೆ ಆಲಯವನ್ನು ಕಟ್ಟಿಸಲು ನನ್ನ ತಂದೆಯಾದ ದಾವೀದನಿಗೆ ಮನಸ್ಸಿತ್ತು. BSB BSB: Now it was in the heart of my father David to build a house for the Name of the LORD, the God of Israel.
8 ULB ಆಗ ಯೆಹೋವನು ನನ್ನ ತಂದೆಯಾದ ದಾವೀದನಿಗೆ, <ನೀನು ನನ್ನ ಹೆಸರಿಗಾಗಿ ಒಂದು ಆಲಯವನ್ನು ಕಟ್ಟುವುದಕ್ಕೆ ಮನಸ್ಸು ಮಾಡಿದ್ದು ಒಳ್ಳೆಯದೇ ಸರಿ. BSB BSB: But the LORD said to my father David, ‘Since it was in your heart to build a house for My Name, you have done well to have this in your heart.
9 ULB ಆದರೆ ನೀನು ಆಲಯವನ್ನು ಕಟ್ಟಬಾರದು; ನಿನ್ನಿಂದ ಹುಟ್ಟುವ ಮಗನೇ ನನ್ನ ಹೆಸರಿಗೋಸ್ಕರ ಆಲಯವನ್ನು ಕಟ್ಟಿಸುವನು> ಎಂದು ಹೇಳಿದನು. BSB BSB: Nevertheless, you are not the one to build it; but your son, your own offspring, will build the house for My Name.’
10 ULB ಯೆಹೋವನು ತಾನು ಕೊಟ್ಟ ಮಾತನ್ನು ನೆರವೇರಿಸಿದ್ದಾನೆ. ಆತನು ವಾಗ್ದಾನ ಮಾಡಿದಂತೆ ನಾನು ನನ್ನ ತಂದೆಯಾದ ದಾವೀದನಿಗೆ ಬದಲಾಗಿ ಇಸ್ರಾಯೇಲಿನ ಸಿಂಹಾಸನದ ಮೇಲೆ ಅರಸನಾಗಿ ಕುಳಿತುಕೊಂಡು ಇಸ್ರಾಯೇಲಿನ ದೇವರಾದ ಯೆಹೋವನ ಹೆಸರಿಗೆ ಆಲಯವನ್ನು ಕಟ್ಟಿಸಿದ್ದೇನೆ. BSB BSB: Now the LORD has fulfilled the word that He spoke. I have succeeded my father David, and I sit on the throne of Israel, as the LORD promised. I have built the house for the Name of the LORD, the God of Israel.
11 ULB ಯೆಹೋವನಿಂದ ಇಸ್ರಾಯೇಲರಿಗೆ ದೊರಕಿದ ಒಡಂಬಡಿಕೆಯ ನಿಬಂಧನಾಶಾಸನಗಳಿರುವ ಮಂಜೂಷವನ್ನು ಅದರಲ್ಲಿ ಇಟ್ಟಿದ್ದೇನೆ>> ಎಂದು ಹೇಳಿದನು. BSB BSB: And there I have placed the ark, which contains the covenant of the LORD that He made with the children of Israel.”
12 ULB ಸೊಲೊಮೋನನು ಎಲ್ಲಾ ಇಸ್ರಾಯೇಲರ ಸಮ್ಮುಖದಲ್ಲಿ ಯೆಹೋವನ ಯಜ್ಞವೇದಿಯ ಎದುರು ತನ್ನ ಕೈಗಳನ್ನೆತ್ತಿ ಪ್ರಾರ್ಥನಾ ಭಂಗಿಯಲ್ಲಿ ನಿಂತನು. BSB BSB: Then Solomon stood before the altar of the LORD in front of the whole assembly of Israel and spread out his hands.
13 ULB ಸೊಲೊಮೋನನು ಐದು ಮೊಳ ಉದ್ದವೂ, ಐದು ಮೊಳ ಅಗಲವೂ, ಮೂರು ಮೊಳ ಎತ್ತರವೂ ಆಗಿರುವ ಒಂದು ತಾಮ್ರದ ಯಜ್ಞವೇದಿಯನ್ನು ಮಾಡಿಸಿ ಅದನ್ನು ಅಂಗಳದ ಮಧ್ಯದಲ್ಲಿ ಇರಿಸಿದನು, ಆತನು ಅದರ ಮೇಲೆ ಮೊಣಕಾಲೂರಿ ನಿಂತನು. ಅವನು ಇಸ್ರಾಯೇಲರ ಸಮ್ಮುಖದಲ್ಲಿ ಆಕಾಶದ ಕಡೆಗೆ ತನ್ನ ಕೈಗಳನ್ನೆತ್ತಿ, BSB BSB: Now Solomon had made a bronze platform five cubits long, five cubits wide, and three cubits high and had placed it in the middle of the courtyard. He stood on it, knelt down before the whole assembly of Israel, spread out his hands toward heaven,
14 ULB ಹೀಗೆ ಪ್ರಾರ್ಥಿಸಿದನು, <<ಇಸ್ರಾಯೇಲರ ದೇವರಾದ ಯೆಹೋವನೇ, ಭೂಲೋಕದಲ್ಲಿಯೂ ಪರಲೋಕದಲ್ಲಿಯೂ ನಿನಗೆ ಸಮಾನನಾದ ದೇವರು ಯಾರೂ ಇಲ್ಲ; ಪೂರ್ಣಮನಸ್ಸಿನಿಂದ ನಿನಗೆ ಪ್ರಾಮಾಣಿಕರಾಗಿ ನಡೆದುಕೊಳ್ಳುವಂಥ ಸೇವಕರ ವಿಷಯದಲ್ಲಿ ನೀನು ನಿನ್ನ ಒಡಂಬಡಿಕೆಯನ್ನು ನೆರವೇರಿಸಿ ದಯೆಯನ್ನೂ, ಕೃಪೆಯನ್ನೂ ತೋರಿಸಬಲ್ಲ ದೇವರು ಒಬ್ಬರೂ ಇಲ್ಲ. BSB BSB: and said: “O LORD, God of Israel, there is no God like You in heaven or on earth, keeping Your covenant of loving devotion with Your servants who walk before You with all their hearts.
15 ULB ನಿನ್ನ ಸೇವಕನೂ, ನನ್ನ ತಂದೆಯೂ ಆದ ದಾವೀದನಿಗೆ ಕೊಟ್ಟ ಮಾತನ್ನು ನೆರವೇರಿಸಿದ್ದೀ; ನಿನ್ನ ಬಾಯಿ ನುಡಿದದ್ದನ್ನು ನಿನ್ನ ಕೈ ಈಹೊತ್ತು ನೆರವೇರಿಸಿದೆ. BSB BSB: You have kept Your promise to Your servant, my father David. What You spoke with Your mouth You have fulfilled with Your hand this day.
16 ULB ಇಸ್ರಾಯೇಲರ ದೇವರಾದ ಯೆಹೋವನೇ, ನೀನು ನಿನ್ನ ಸೇವಕನೂ, ನನ್ನ ತಂದೆಯೂ ಆದ ದಾವೀದನಿಗೆ, <ನಿನ್ನ ಸಂತಾನದವರು ನಿನ್ನಂತೆ ಜಾಗರೂಕತೆಯಿಂದ ನನ್ನ ಕಟ್ಟಳೆಯನ್ನು ಅನುಸರಿಸಿ ನಡೆದುಕೊಳ್ಳುವುದಾದರೆ ಅವರು ತಪ್ಪದೆ ಇಸ್ರಾಯೇಲರ ಸಿಂಹಾಸನದ ಮೇಲೆ ಕುಳಿತುಕೊಳ್ಳುವಂತೆ ಮಾಡುವೆನು ಎಂಬುದಾಗಿ ವಾಗ್ದಾನ ಮಾಡಿರುವೆಯಲ್ಲಾ, ಅದನ್ನು ನೆರವೇರಿಸು.> BSB BSB: Therefore now, O LORD, God of Israel, keep for Your servant, my father David, what You promised when You said: ‘You will never fail to have a man to sit before Me on the throne of Israel, if only your descendants guard their way to walk in My law as you have walked before Me.’
17 ULB ಈಗ ಇಸ್ರಾಯೇಲರ ದೇವರಾದ ಯೆಹೋವನೇ, ನೀನು ನಿನ್ನ ಸೇವಕನಾದ ದಾವೀದನಿಗೆ ನುಡಿದಿದ್ದೆಲ್ಲವೂ ಸ್ಥಿರವಾಗಿರಲಿ. BSB BSB: And now, O LORD, God of Israel, please confirm what You promised to Your servant David.
18 ULB ಆದರೆ ದೇವರು ನಿಜವಾಗಿ ಮನಷ್ಯರೊಡನೆ ಭೂಲೋಕದಲ್ಲಿ ವಾಸವಾಗಿರುವನೋ? ಸ್ವರ್ಗವೂ, ಸ್ವರ್ಗಾಧಿ ಸ್ವರ್ಗವೂ ನಿನ್ನ ವಾಸಕ್ಕೆ ಸಾಲವು, ಹೀಗಿರುವಲ್ಲಿ ನಾನು ಕಟ್ಟಿಸಿದ ಈ ಆಲಯವು ನಿನಗೆ ಹೇಗೆ ಸಾಕಾದೀತು? BSB BSB: But will God indeed dwell with man upon the earth? The heavens, even the highest heavens, cannot contain You, much less this temple I have built.
19 ULB ಆದರೂ ನನ್ನ ದೇವರಾದ ಯೆಹೋವನೇ, ನಿನ್ನ ಈ ಸೇವಕನ ಪ್ರಾರ್ಥನೆಗೂ, ವಿಜ್ಞಾಪನೆಗೂ ಕಿವಿಗೊಡು; ನಿನ್ನನ್ನು ಪ್ರಾರ್ಥಿಸುತ್ತಿರುವ ನಿನ್ನ ಈ ಸೇವಕನ ಮೊರೆಯನ್ನು ಲಾಲಿಸು. BSB BSB: Yet regard the prayer and plea of Your servant, O LORD my God, so that You may hear the cry and the prayer that Your servant is praying before You.
20 ULB ಈ ಸ್ಥಳವನ್ನು ಕುರಿತು, <ನನ್ನ ನಾಮಪ್ರಭಾವವು ಇಲ್ಲಿ ವಾಸಿಸುವುದು>>> ಎಂದು ಹೇಳಿದವನೇ, ನಿನ್ನ ಕೃಪಾ ಕಟಾಕ್ಷವು ಹಗಲಿರುಳು ಈ ಮಂದಿರದ ಮೇಲಿರಲಿ; ಇಲ್ಲಿ ನಿನ್ನ ಸೇವಕನು ಪ್ರಾರ್ಥಿಸುವಾಗಲೆಲ್ಲಾ ಸದುತ್ತರವನ್ನು ದಯಪಾಲಿಸು. BSB BSB: May Your eyes be open toward this temple day and night, toward the place where You said You would put Your Name, so that You may hear the prayer that Your servant prays toward this place.
21 ULB ಇದಲ್ಲದೆ, ನೀನು ನಿನ್ನ ಸೇವಕನ ಹಾಗೂ ನಿನ್ನ ಪ್ರಜೆಗಳಾದ ಇಸ್ರಾಯೇಲರ ವಿಜ್ಞಾಪನೆಯನ್ನು ಲಾಲಿಸು. ಅವರು ಈ ಸ್ಥಳದ ಕಡೆಗೆ ತಿರುಗಿಕೊಂಡು ನಿನ್ನನ್ನು ಪ್ರಾರ್ಥಿಸುವಾಗ ನಿನ್ನ ನಿವಾಸವಾಗಿರುವ ಪರಲೋಕದಿಂದ ನಮ್ಮ ವಿಜ್ಞಾಪನೆಯನ್ನು ಕೇಳಿ, ಕ್ಷಮೆಯನ್ನು ಅನುಗ್ರಹಿಸು. BSB BSB: Hear the plea of Your servant and of Your people Israel when they pray toward this place. May You hear from heaven, Your dwelling place. May You hear and forgive.
22 ULB ನೆರೆಯವನಿಗೆ ವಿರೋಧವಾಗಿ ಪಾಪ ಮಾಡಿ, ಶಾಪಕ್ಕೆ ಗುರಿಯಾದ ಮನುಷ್ಯನು ತಾನು ನಿರ್ದೋಷಿಯೆಂದು ಪ್ರಮಾಣ ಮಾಡುವಾಗ, ಅವನು ಈ ಆಲಯಕ್ಕೆ ಬಂದು ನಿನ್ನ ಯಜ್ಞವೇದಿಯ ಮುಂದೆ ನಿಂತು ಪ್ರಮಾಣ ಮಾಡಿದರೆ, BSB BSB: When a man sins against his neighbor and is required to take an oath, and he comes to take an oath before Your altar in this temple,
23 ULB ಆಗ ನೀನು ಪರಲೋಕದಿಂದ ಅದನ್ನು ಕೇಳಿ ನಿನ್ನ ಸೇವಕರ ವ್ಯಾಜ್ಯವನ್ನು ತೀರಿಸು; ದುಷ್ಟನಿಗೆ ಅವನ ದುಷ್ಟತ್ವವನ್ನು ಅವನ ತಲೆಯ ಮೇಲೆಯೇ ಬರಮಾಡಿ ಮುಯ್ಯಿತೀರಿಸು; ನೀತಿವಂತನಿಗೆ ಅವನ ನೀತಿಯ ಫಲವನ್ನು ಅನುಗ್ರಹಿಸಿ ಅವನು ನೀತಿವಂತನೆಂದು ತೋರಿಸಿಕೊಡು. BSB BSB: then may You hear from heaven and act. May You judge Your servants, condemning the wicked man by bringing down on his own head what he has done, and justifying the righteous man by rewarding him according to his righteousness.
24 ULB <<ನಿನ್ನ ಪ್ರಜೆಗಳಾದ ಇಸ್ರಾಯೇಲರು ನಿನಗೆ ವಿರುದ್ಧವಾಗಿ ಪಾಪ ಮಾಡಿದ್ದರಿಂದ ತಮ್ಮ ಶತ್ರುವಿನ ಮುಂದೆ ಸೋತು ಹೋದಾಗ ಅವರು ಹಿಂದಿರುಗಿ ನಿನ್ನ ಆಲಯಕ್ಕೆ ಬಂದು ನಿನ್ನ ಹೆಸರನ್ನು ಸ್ತುತಿಸಿ, ನಿನ್ನ ಸನ್ನಿಧಿಯಲ್ಲಿ ವಿಜ್ಞಾಪನೆಯನ್ನೂ, ಪ್ರಾರ್ಥನೆಯನ್ನು ಮಾಡಿದರೆ, BSB BSB: When Your people Israel are defeated before an enemy because they have sinned against You, and they return to You and confess Your name, praying and pleading before You in this temple,
25 ULB ನೀನು ಪರಲೋಕದಿಂದ ಲಾಲಿಸಿ ಅವರ ಪಾಪಗಳನ್ನು ಕ್ಷಮಿಸಿ, ಅವರಿಗೂ ಅವರ ಪೂರ್ವಿಕರಿಗೂ ನೀನು ಕೊಟ್ಟಿರುವ ಸ್ವದೇಶಕ್ಕೆ ಅವರನ್ನು ತಿರುಗಿ ಬರಮಾಡು. BSB BSB: then may You hear from heaven and forgive the sin of Your people Israel. May You restore them to the land You gave to them and their fathers.
26 ULB <<ಅವರ ಪಾಪಗಳ ನಿಮಿತ್ತವಾಗಿ, ನೀನು ಆಕಾಶವನ್ನು ಮಳೆಗರೆಯದಂತೆ ಮುಚ್ಚಿ ಅವರನ್ನು ತಗ್ಗಿಸಿದಾಗ, ಅವರು ತಮ್ಮ ಪಾಪಗಳನ್ನು ಬಿಟ್ಟು ತಮ್ಮನ್ನು ತಗ್ಗಿಸಿದವನು ನೀನೇ ಎಂದು ತಿಳಿದುಕೊಂಡು ನಿನ್ನ ಹೆಸರನ್ನು ಸ್ತುತಿಸಿ ಈ ಆಲಯದ ಕಡೆಗೆ ತಿರುಗಿಕೊಂಡು ನಿನ್ನನ್ನು ಪ್ರಾರ್ಥಿಸುವುದಾದರೆ, BSB BSB: When the skies are shut and there is no rain because Your people have sinned against You, and they pray toward this place and confess Your name, and they turn from their sins because You have afflicted them,
27 ULB ಪರಲೋಕದಿಂದ ನೀನು ಲಾಲಿಸಿ ನಿನ್ನ ಸೇವಕರು ಪ್ರಜೆಗಳೂ ಆದ ಇಸ್ರಾಯೇಲರ ಪಾಪಗಳನ್ನು ಕ್ಷಮಿಸಿ, ಅವರು ನಡೆಯಬೇಕಾದ ಸನ್ಮಾರ್ಗವನ್ನು ತೋರಿಸಿ, ನಿನ್ನ ಪ್ರಜೆಗಳಿಗೆ ಸ್ವತ್ತಾಗಿ ಕೊಟ್ಟ ದೇಶಕ್ಕೆ ಮಳೆಯನ್ನು ಅನುಗ್ರಹಿಸು. BSB BSB: then may You hear from heaven and forgive the sin of Your servants, Your people Israel, so that You may teach them the good way in which they should walk. May You send rain on the land that You gave Your people as an inheritance.
28 ULB <<ದೇಶದಲ್ಲಿ ಬರಗಾಲ, ಘೋರವ್ಯಾಧಿ, ಬಿಸಿಗಾಳಿ, ಮಿಡತೆ, ಚಿಟ್ಟೇಹುಳು, ಹಸಿರುಹುಳು ಇಲ್ಲವೆ ಶತ್ರುಗಳು ಪಟ್ಟಣಕ್ಕೆ ಮುತ್ತಿಗೆ ಹಾಕುವುದು, ಇಂಥ ಯಾವ ಉಪದ್ರವದಿಂದಾಗಲಿ, ವ್ಯಾಧಿಯಿಂದಾಗಲಿ ಬಾಧೆಯುಂಟಾದರೆ, BSB BSB: When famine or plague comes upon the land, or blight or mildew or locusts or grasshoppers, or when their enemies besiege them in their cities, whatever plague or sickness may come,
29 ULB ಎಲ್ಲಾ ಇಸ್ರಾಯೇಲ್ಯರಾಗಲಿ, ಅವರಲ್ಲೊಬ್ಬನಾಗಲಿ, ತಾವು ಅನುಭವಿಸುತ್ತಿರುವ ಉಪದ್ರವ ದುಃಖಗಳ ನಿಮಿತ್ತವಾಗಿ ಈ ಆಲಯದ ಕಡೆಗೆ ಕೈಯೆತ್ತಿ ನಿನಗೆ ಪ್ರಾರ್ಥನೆಯನ್ನೂ, ವಿಜ್ಞಾಪನೆಯನ್ನೂ ಮಾಡಿದರೆ, BSB BSB: then may whatever prayer or plea Your people Israel make—each knowing his own afflictions and spreading out his hands toward this temple—
30 ULB ಮನುಷ್ಯರ ಹೃದಯಗಳನ್ನು ಬಲ್ಲಂಥ ನೀನು ನಿನ್ನ ನಿವಾಸವಾಗಿರುವ ಪರಲೋಕದಿಂದ ಅಲಿಸಿ ಅವರಿಗೆ ಪಾಪ ಕ್ಷಮೆಯನ್ನು ಅನುಗ್ರಹಿಸು. ನೀನೊಬ್ಬನೇ ಮನುಷ್ಯರ ಹೃದಯಗಳನ್ನು ಬಲ್ಲವನಾಗಿರುವುದರಿಂದ ಪ್ರತಿಯೊಬ್ಬನಿಗೂ ಅವನವನ ನಡತೆಗೆ ತಕ್ಕ ಹಾಗೆ ಪ್ರತಿಫಲವನ್ನು ಕೊಡು. BSB BSB: be heard by You from heaven, Your dwelling place. And may You forgive and repay each man according to all his ways, since You know his heart—for You alone know the hearts of men—
31 ULB ಆಗ ನಮ್ಮ ಪೂರ್ವಿಕರಿಗೆ ನೀನು ಕೊಟ್ಟ ದೇಶದಲ್ಲಿ ಅವರು ವಾಸಿಸುವ ಕಾಲವೆಲ್ಲಾ ನಿನ್ನಲ್ಲಿ ಭಯಭಕ್ತಿಯುಳ್ಳವರಾಗಿ ನಿನ್ನ ಮಾರ್ಗಗಳಲ್ಲಿ ನಡೆಯುವರು. BSB BSB: so that they may fear You and walk in Your ways all the days they live in the land that You gave to our fathers.
32 ULB <<ನಿನ್ನ ಪ್ರಜೆಗಳಾದ ಇಸ್ರಾಯೇಲನಲ್ಲದೆ ಸೇರದಂಥ ಒಬ್ಬ ಅನ್ಯನೂ, ಪರದೇಶಿಯು ನಿನ್ನ ಮಹತ್ತಾದ ನಾಮ, ಭುಜಬಲ, ಶಿಕ್ಷಾಹಸ್ತ ಇವುಗಳ ವರ್ತಮಾನವನ್ನು ಕೇಳಿ ದೂರದೇಶದಿಂದ ಬಂದು, ಈ ಆಲಯದ ಮುಂದೆ ನಿಂತು, ನಿನ್ನನ್ನು ಪ್ರಾರ್ಥಿಸಿದರೆ ನಿನ್ನ ನಿವಾಸವಾಗಿರುವ, BSB BSB: And as for the foreigner who is not of Your people Israel but has come from a distant land because of Your great name and Your mighty hand and outstretched arm—when he comes and prays toward this temple,
33 ULB ಪರಲೋಕದಿಂದ ಅವನ ಪ್ರಾರ್ಥನೆಯನ್ನು ಕೇಳಿ ಅವನು ಬೇಡಿಕೊಂಡದ್ದನ್ನು ಅನುಗ್ರಹಿಸು. ಆಗ ಲೋಕದ ಎಲ್ಲಾ ಜನರೂ ನಿನ್ನ ನಾಮದ ಮಹತ್ವವನ್ನು ತಿಳಿದು, ನಿನ್ನ ಜನರಾದ ಇಸ್ರಾಯೇಲರಂತೆ ನಿನ್ನಲ್ಲಿ ಭಯಭಕ್ತಿಯುಳ್ಳವರಾಗಿ ನಿನ್ನ ಹೆಸರಿನಲ್ಲಿ ಈ ಆಲಯವು ಕಟ್ಟಲ್ಪಟಿದ್ದೆಯೆಂದು ತಿಳಿದುಕೊಳ್ಳುವರು. BSB BSB: then may You hear from heaven, Your dwelling place, and do according to all for which the foreigner calls to You. Then all the peoples of the earth will know Your name and fear You, as do Your people Israel, and they will know that this house I have built is called by Your Name.
34 ULB <<ನೀನು ನಿನ್ನ ಜನರನ್ನು ಶತ್ರುಗಳೊಡನೆ ಯುದ್ಧ ಮಾಡುವುದಕ್ಕಾಗಿ ಎಲ್ಲಿಗಾದರೂ ಕಳುಹಿಸಿದಾಗ, ಅವರು ಅಲ್ಲಿಂದ ನೀನು ಆರಿಸಿಕೊಂಡ ಪಟ್ಟಣದ ಕಡೆಗೂ, ನಾನು ನಿನ್ನ ಹೆಸರಿನಲ್ಲಿ ಕಟ್ಟಿಸಿರುವ ಈ ಆಲಯದ ಕಡೆಗೂ ತಿರುಗಿಕೊಂಡು ನಿನ್ನನ್ನು ಪ್ರಾರ್ಥಿಸಿದರೆ, BSB BSB: When Your people go to war against their enemies, wherever You send them, and when they pray to You in the direction of this city You have chosen and the house I have built for Your Name,
35 ULB ನೀನು ಪರಲೋಕದಿಂದ ಅವರ ಪ್ರಾರ್ಥನೆಯನ್ನೂ, ವಿಜ್ಞಾಪನೆಯನ್ನೂ, ಕೇಳಿ ಅವರಿಗೆ ಸಹಾಯವನ್ನು ಮಾಡು. BSB BSB: then may You hear from heaven their prayer and their plea, and may You uphold their cause.
36 ULB <<ಅವರು ನಿನಗೆ ವಿರುದ್ಧವಾಗಿ ಪಾಪ ಮಾಡಬಹುದು, ಪಾಪ ಮಾಡದ ಮನುಷ್ಯನು ಒಬ್ಬನೂ ಇಲ್ಲ. ನೀನು ಅವರ ಮೇಲೆ ಕೋಪಗೊಂಡು ಅವರನ್ನು ಶತ್ರುಗಳ ಕೈಗೆ ಒಪ್ಪಿಸಿದಾಗ ಮತ್ತು ಆ ಶತ್ರುಗಳು ಅವರನ್ನು ಸೆರೆಹಿಡಿದು ದೂರದಲ್ಲಾಗಲಿ, ಸಮೀಪದಲ್ಲಾಗಲಿ, ಇರುವ ದೇಶಕ್ಕೆ ಒಯ್ದಾಗ, BSB BSB: When they sin against You—for there is no one who does not sin—and You become angry with them and deliver them to an enemy who takes them as captives to a land far or near,
37 ULB ತಾವು ಸೆರೆಯವರಾಗಿ ಬಿದ್ದುಕೊಂಡಿರುವ ದೇಶದಲ್ಲಿ ಅವರು ಪಶ್ಚಾತ್ತಾಪಪಟ್ಟು, ನಿನ್ನ ಅನುಗ್ರಹದಿಂದ ತಮ್ಮ ಪೂರ್ವಿಕರಿಗೆ ದೊರಕಿದ ದೇಶದ ಕಡೆಗೂ, ನೀನು ಆರಿಸಿಕೊಂಡ ಪಟ್ಟಣದ ಕಡೆಗೂ, ನಾನು ನಿನ್ನ ಹೆಸರಿನಲ್ಲಿ ಕಟ್ಟಿಸಿರುವ ಈ ಆಲಯದ ಕಡೆಗೂ ತಿರುಗಿಕೊಂಡು, <ನಿನ್ನ ಆಜ್ಞೆಗಳನ್ನು ಮೀರಿ ಪಾಪಮಾಡಿ ದ್ರೋಹಿಗಳಾದೆವು> ಎಂದು ವಿಜ್ಞಾಪನೆ ಮಾಡಿ, BSB BSB: and when they come to their senses in the land to which they were taken, and they repent and plead with You in the land of their captors, saying, ‘We have sinned and done wrong; we have acted wickedly,’
38 ULB ನಿನ್ನ ಕಡೆಗೆ ಪೂರ್ಣಮನಸ್ಸಿನಿಂದಲೂ, ಪೂರ್ಣಪ್ರಾಣದಿಂದಲೂ ತಿರುಗಿ, ನೀನು ಅವರ ಪೂರ್ವಿಕರಿಗೆ ಕೊಟ್ಟ ತಮ್ಮ ದೇಶದ ಕಡೆಗೂ, ನೀನು ಆರಿಸಿಕೊಂಡ ಪಟ್ಟಣದ ಕಡೆಗೂ ನಿನ್ನ ಹೆಸರಿಗೋಸ್ಕರ ನಾನು ಕಟ್ಟಿಸಿರುವ ಈ ಆಲಯದ ಕಡೆಗೂ ಅವರು ತಿರುಗಿಕೊಂಡು ನಿನಗೆ ಪ್ರಾರ್ಥನೆಯನ್ನು ಮಾಡಿದರೆ, BSB BSB: and when they return to You with all their heart and soul in the land of the enemies who took them captive, and when they pray in the direction of the land that You gave to their fathers, the city You have chosen, and the house I have built for Your Name,
39 ULB ನೀನು ನಿನ್ನ ನಿವಾಸವಾಗಿರುವ ಪರಲೋಕದಿಂದ ಅವರ ಪ್ರಾರ್ಥನೆಯನ್ನು, ವಿಜ್ಞಾಪನೆಯನ್ನು ಆಲಿಸಿ, ಅವರಿಗೆ ನ್ಯಾಯವನ್ನು ಪಾಲಿಸಿ ನಿನಗೆ ವಿರುದ್ಧವಾಗಿ ಪಾಪಮಾಡಿದ ನಿನ್ನ ಪ್ರಜೆಗಳಿಗೆ ಕ್ಷಮೆಯನ್ನು ಅನುಗ್ರಹಿಸು. BSB BSB: then may You hear from heaven, Your dwelling place, their prayer and pleas, and may You uphold their cause. May You forgive Your people who sinned against You.
40 ULB ನನ್ನ ದೇವರೇ, ಕಟಾಕ್ಷವಿಟ್ಟು ಈ ಸ್ಥಳದಲ್ಲಿ ಮಾಡುವ ಪ್ರಾರ್ಥನೆಗೆ ಕಿವಿಗೊಡು. BSB BSB: Now, my God, may Your eyes be open and Your ears attentive to the prayer offered in this place.
41 ULB ದೇವರಾದ ಯೆಹೋವನೇ, ನೀನು ನಿನ್ನ ಪ್ರತಾಪವಾದ ಮಂಜೂಷದ ಸಂಗಡ, ನಿನ್ನ ವಾಸಸ್ಥಾನದೊಳಗೆ ಬರೋಣವಾಗಲಿ. ದೇವರಾದ ಯೆಹೋವನೇ, ನಿನ್ನ ಯಾಜಕರು ರಕ್ಷಣೆಯೆಂಬ ವಸ್ತ್ರವನ್ನು ಹೊದ್ದುಕೊಳ್ಳಲಿ; ನಿನ್ನ ಭಕ್ತರು ನಿನ್ನ ಒಳ್ಳೆಯತನದಲ್ಲಿ ಸಂತೋಷಪಡಲಿ. BSB BSB: Now therefore, arise, O LORD God, and enter Your resting place, You and the ark of Your might. May Your priests, O LORD God, be clothed with salvation, and may Your godly ones rejoice in goodness.
42 ULB ದೇವರಾದ ಯೆಹೋವನೇ, ನಿನ್ನಿಂದ ಅಭಿಷಿಕ್ತನಾದವನನ್ನು ತಳ್ಳಿಬಿಡಬೇಡ; ನಿನ್ನ ಸೇವಕನಾದ ದಾವೀದನಿಗೆ ಅನುಗ್ರಹಿಸಿದ ಕೃಪೆಯನ್ನು ನೆನಪುಮಾಡಿಕೋ.>> ಎಂದು ವಿಜ್ಞಾಪನೆ ಮಾಡಿಕೊಂಡನು. BSB BSB: O LORD God, do not reject Your anointed one. Remember Your loving devotion to Your servant David.”
Select verses for actions: Enter goes to them and Escape comes back.