1 ULB ಯೋಷೀಯನು ಅರಸನಾದಾಗ ಎಂಟು ವರ್ಷದವನಾಗಿದ್ದು ಯೆರೂಸಲೇಮಿನಲ್ಲಿ ಮೂವತ್ತೊಂದು ವರ್ಷ ಆಳಿದನು. ಬೊಚ್ಕತೂರಿನವಳೂ ಅದಾಯನ ಮಗಳೂ ಆದ ಯೆದೀದಾ ಎಂಬಾಕೆಯು ಅವನ ತಾಯಿ. BSB BSB: Josiah was eight years old when he became king, and he reigned in Jerusalem thirty-one years. His mother’s name was Jedidah daughter of Adaiah; she was from Bozkath.
2 ULB ಅರಸನಾದ ಯೋಷೀಯನು ಯೆಹೋವನನ್ನು ಬಿಟ್ಟು ಎಡಕ್ಕಾಗಲಿ ಬಲಕ್ಕಾಗಲಿ ತಿರುಗಿಕೊಳ್ಳದೆ ತನ್ನ ಪೂರ್ವಜನಾದ ದಾವೀದನ ಮಾರ್ಗದಲ್ಲಿಯೇ ನಡೆದು ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿ ನಡೆದನು. BSB BSB: And he did what was right in the eyes of the LORD and walked in all the ways of his father David; he did not turn aside to the right or to the left.
3 ULB ಅರಸನಾದ ಯೋಷೀಯನು ತನ್ನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ ಅಚಲ್ಯನ ಮಗನೂ, ಮೆಷುಲ್ಲಾಮನ ಮೊಮ್ಮಗನೂ, ಯೆಹೋವನ ಆಲಯದ ಲೇಖಕನೂ ಆದ ಶಾಫಾನನನ್ನು ಕರೆದು ಅವನಿಗೆ, BSB BSB: Now in the eighteenth year of his reign, King Josiah sent the scribe, Shaphan son of Azaliah, the son of Meshullam, to the house of the LORD, saying,
4 ULB <<ನೀನು ಮಹಾಯಾಜಕನಾದ ಹಿಲ್ಕೀಯನ ಬಳಿಗೆ ಹೋಗಿ, ಅವನಿಗೆ ದ್ವಾರಪಾಲಕರು ಯೆಹೋವನ ಆಲಯಕ್ಕೆ ಬರುವ ಜನರಿಂದ ಕೂಡಿಸಿದ ಹಣವನ್ನು ಲೆಕ್ಕಿಸಬೇಕು, BSB BSB: “Go up to Hilkiah the high priest and have him count the money that has been brought into the house of the LORD, which the doorkeepers have collected from the people.
5 ULB ಅದಲ್ಲದೆ ಆಲಯದ ಕೆಲಸಮಾಡಿಸುವ ಮುಖ್ಯಸ್ಥರಿಗೆ ಅದನ್ನು ಒಪ್ಪಿಸು ಎಂದು ಹೇಳಬೇಕು, ಮುಖ್ಯಸ್ಥರು ಅದನ್ನು ಯೆಹೋವನ ಆಲಯದ ದುರಸ್ತಿ ಕೆಲಸಕ್ಕೆ ಉಪಯೋಗಿಸಲಿ, BSB BSB: And let them deliver it into the hands of the supervisors of those doing the work on the house of the LORD, who in turn are to give it to the workmen repairing the damages to the house of the LORD—
6 ULB ಬಡಗಿ, ಶಿಲ್ಪಿ, ಮೇಸ್ತ್ರಿ ಮೊದಲಾದವರ ಸಂಬಳಕ್ಕಾಗಿಯೂ, ದೇವಾಲಯಕ್ಕೆ ಬೇಕಾದ ಮರ, ಕೆತ್ತಿದ ಕಲ್ಲು ಇವುಗಳನ್ನು ಕೊಂಡುಕೊಳ್ಳುವುದಕ್ಕಾಗಿಯೂ ಅದನ್ನು ಉಪಯೋಗಿಸಿಕೊಳ್ಳಲಿ, BSB BSB: to the carpenters, builders, and masons—to buy timber and dressed stone to repair the temple.
7 ULB ಅವರು ನಂಬಿಗಸ್ತರಾಗಿರುವುದರಿಂದ ಅವರ ವಶಕ್ಕೆ ಕೊಡಲ್ಪಡುವ ಹಣದ ಲೆಕ್ಕವನ್ನು ಕೇಳಬಾರದು>> ಎಂದು ಆಜ್ಞಾಪಿಸಿ ಅವನನ್ನು ಯೆಹೋವನ ಆಲಯಕ್ಕೆ ಕಳುಹಿಸಿದನು. BSB BSB: But they need not account for the money put into their hands, since they work with integrity.”
8 ULB ಪ್ರಧಾನ ಯಾಜಕನಾದ ಹಿಲ್ಕೀಯನು ಲೇಖಕನಾದ ಶಾಫಾನನಿಗೆ, <<ಯೆಹೋವನ ಆಲಯದಲ್ಲಿ ನನಗೆ ಧರ್ಮೋಪದೇಶಗ್ರಂಥವು ಸಿಕ್ಕಿರುತ್ತದೆ>> ಎಂದು ಹೇಳಿ, ಅದನ್ನು ಅವನ ಕೈಯಲ್ಲಿ ಕೊಟ್ಟನು. ಶಾಫಾನನು ಅದನ್ನು ಓದಿದನು. BSB BSB: Then Hilkiah the high priest said to Shaphan the scribe, “I have found the Book of the Law in the house of the LORD!” And he gave it to Shaphan, who read it.
9 ULB ಅನಂತರ ಲೇಖಕನಾದ ಶಾಫಾನನು ಹಿಂತಿರುಗಿ ಅರಸನ ಬಳಿಗೆ ಹೋಗಿ, <<ನಿನ್ನ ಸೇವಕರು ಯೆಹೋವನ ದೇವಾಲಯದಲ್ಲಿ ಸಂಗ್ರಹವಾದ ಹಣವನ್ನು ತೆಗೆದು ದೇವಾಲಯದ ಕೆಲಸವನ್ನು ಮಾಡಿಸುವ ಮುಖ್ಯಸ್ಥರಿಗೆ ಒಪ್ಪಿಸಿದರು. BSB BSB: And Shaphan the scribe went to the king and reported, “Your servants have paid out the money that was found in the temple and have put it into the hands of the workers and supervisors of the house of the LORD.”
10 ULB ಇದಲ್ಲದೆ, ಯಾಜಕನಾದ ಹಿಲ್ಕೀಯನು ಲೇಖಕನಾದ ಶಾಫಾನನಿಗೆ ಒಂದು ಗ್ರಂಥವನ್ನು ಕೊಟ್ಟಿದ್ದಾನೆ>> ಎಂದು ಹೇಳಿ ಅದನ್ನು ಅರಸನ ಮುಂದೆ ಓದಿದನು. BSB BSB: Moreover, Shaphan the scribe told the king, “Hilkiah the priest has given me a book.” And Shaphan read it in the presence of the king.
11 ULB ಅರಸನು ಧರ್ಮೋಪದೇಶಗ್ರಂಥದ ವಾಕ್ಯಗಳನ್ನು ಕೇಳಿದಾಗ, ಬಟ್ಟೆಗಳನ್ನು ಹರಿದುಕೊಂಡನು. BSB BSB: When the king heard the words of the Book of the Law, he tore his clothes
13 ULB <<ನಮ್ಮ ಪೂರ್ವಿಕರು ನಮಗೆ ಸಿಕ್ಕಿರುವ ಈ ಗ್ರಂಥದಲ್ಲಿನ ಧರ್ಮೋಪದೇಶ ವಾಕ್ಯಗಳಿಗೆ ಕಿವಿಗೊಡದೆಯೂ, ಅವುಗಳನ್ನು ಕೈಕೊಳ್ಳದೆಯೂ ಹೋದುದರಿಂದ ನಾವು ಯೆಹೋವನ ಉಗ್ರಕೋಪಕ್ಕೆ ಪಾತ್ರರಾಗಿದ್ದೇವೆ. ಆದುದರಿಂದ ನೀವು ನನಗಾಗಿಯೂ, ಜನರಿಗಾಗಿಯೂ, ಮತ್ತು ಎಲ್ಲಾ ಯೆಹೂದ್ಯರಿಗಾಗಿಯೂ ಯೆಹೋವನ ಬಳಿಗೆ ಹೋಗಿ ಈ ಗ್ರಂಥದಲ್ಲಿನ ಧರ್ಮೋಪದೇಶ ವಾಕ್ಯಗಳ ಕುರಿತಾಗಿ ವಿಚಾರಿಸಿರಿ>> ಎಂದು ಆಜ್ಞಾಪಿಸಿದನು. BSB BSB: “Go and inquire of the LORD for me, for the people, and for all Judah concerning the words in this book that has been found. For great is the wrath of the LORD that burns against us because our fathers have not obeyed the words of this book by doing all that is written about us.”
14 ULB ಆಗ ಯಾಜಕನಾದ ಹಿಲ್ಕೀಯನು, ಅಹೀಕಾಮ್, ಅಕ್ಬೋರ್, ಶಾಫಾನ್, ಅಸಾಯ, ಎಂಬುವವರು <<ಹುಲ್ದ>> ಎಂಬ ಪ್ರವಾದಿನಿಯ ಬಳಿಗೆ ಹೋಗಿ ಆಕೆಯ ಹತ್ತಿರ ವಿಚಾರಿಸಿದರು. ಹರ್ಹಸನ ಮೊಮ್ಮಗನೂ, ತಿಕ್ವನ ಮಗನೂ, ಯಾಜಕವಸ್ತ್ರಾಗಾರದ ಅಧಿಪತಿಯೂ ಆಗಿದ್ದ ಶಲ್ಲೂಮನು ಈಕೆಯ ಪತಿ. ಈಕೆಯು ಯೆರೂಸಲೇಮಿನ ಎರಡನೆಯ ಕೇರಿಯಲ್ಲಿ ವಾಸಿಸುತ್ತಿದ್ದಳು. BSB BSB: So Hilkiah the priest, Ahikam, Achbor, Shaphan, and Asaiah went and spoke to Huldah the prophetess, the wife of Shallum son of Tikvah, the son of Harhas, the keeper of the wardrobe. She lived in Jerusalem, in the Second District.
15 ULB ಹುಲ್ದಳು ಅವರಿಗೆ, <<ನಿಮ್ಮನ್ನು ಕಳುಹಿಸಿದವನಿಗೆ ಇಸ್ರಾಯೇಲರ ದೇವರಾದ ಯೆಹೋವನ ಮಾತನ್ನು ತಿಳಿಸಿರಿ. BSB BSB: And Huldah said to them, “This is what the LORD, the God of Israel, says: ‘Tell the man who sent you
16 ULB ಯೆಹೋವನು, <ಈ ದೇಶದ ಮೇಲೆಯೂ ಮತ್ತು ಜನರ ಮೇಲೆಯೂ ಯೆಹೂದದ ಅರಸನು ಓದಿಸಿದ ಗ್ರಂಥದಲ್ಲಿ ಬರೆದಿರುವ ಎಲ್ಲಾ ಆಪತ್ತುಗಳನ್ನು ಬರಮಾಡುವನು. BSB BSB: that this is what the LORD says: I am about to bring calamity on this place and on its people, according to all the words of the book that the king of Judah has read,
17 ULB ಅವರು ನನ್ನನ್ನು ಬಿಟ್ಟು ಅನ್ಯದೇವತೆಗಳಿಗೆ ಧೂಪಹಾಕಿ ತಮ್ಮ ದುಷ್ಕೃತ್ಯಗಳಿಂದ ನನ್ನನ್ನು ಕೋಪಗೊಳ್ಳುವಂತೆ ಮಾಡಿರುವುದರಿಂದ ನನ್ನ ಕೋಪಾಗ್ನಿಯು ಈ ದೇಶದ ಮೇಲೆ ಉರಿಯಹತ್ತಿದೆ, ಅದು ಆರಿಹೋಗುವುದೇ ಇಲ್ಲ> ಎನ್ನುತ್ತಾನೆ. BSB BSB: because they have forsaken Me and burned incense to other gods, that they might provoke Me to anger with all the works of their hands. My wrath will be kindled against this place and will not be quenched.’
18 ULB ತಾನು ಕೇಳಿದ ವಾಕ್ಯಗಳ ವಿಷಯವಾಗಿ ಯೆಹೋವನ ಬಳಿಯಲ್ಲಿ ವಿಚಾರಿಸುವುದಕ್ಕೆ ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಿಗೆ ನೀವು ತಿಳಿಸಬೇಕಾದ ಇಸ್ರಾಯೇಲರ ದೇವರಾದ ಯೆಹೋವನ ಮಾತೇನೆಂದರೆ, BSB BSB: But as for the king of Judah, who sent you to inquire of the LORD, tell him that this is what the LORD, the God of Israel, says: ‘As for the words that you heard,
19 ULB <ನಾನು ಈ ದೇಶವನ್ನೂ, ನಿವಾಸಿಗಳನ್ನೂ, ಶಾಪವಿಸ್ಮಯಗಳಿಗೆ ಗುರಿಮಾಡುವೆನೆಂಬುವುದನ್ನು ನೀನು ಕೇಳಿದಾಗ, ದುಃಖಪಟ್ಟು ಯೆಹೋವನಾದ ನನ್ನ ಮುಂದೆ ತಗ್ಗಿಸಿಕೊಂಡಿದ್ದರಿಂದಲೂ, ಬಟ್ಟೆಗಳನ್ನು ಹರಿದುಕೊಂಡು ಕಣ್ಣೀರು ಸುರಿಸಿದ್ದರಿಂದಲೂ ನಿನ್ನನ್ನು ಲಕ್ಷಿಸಿದೆನು> BSB BSB: because your heart was tender and you humbled yourself before the LORD when you heard what I spoke against this place and against its people, that they would become a desolation and a curse, and because you have torn your clothes and wept before Me, I have heard you,’ declares the LORD.
20 ULB ಆದುದರಿಂದ, <ನಾನು ಈ ದೇಶಕ್ಕೆ ಬರಮಾಡುವ ಶಿಕ್ಷೆಗಳಲ್ಲಿ ನೀನು ಒಂದನ್ನೂ ನೋಡದೆ ಸಮಾಧಾನದಿಂದ ಮರಣಹೊಂದಿ ಸಮಾಧಿ ಸೇರುವಂತೆ ಆಶೀರ್ವದಿಸುವೆನು> ಎಂದು ಹೇಳಿದ್ದನ್ನು ತಿಳಿಸಿರಿ>> ಎಂದು ಹೇಳಿದಳು. ಅವರು ಹಿಂದಿರುಗಿ ಬಂದು ಅರಸನಿಗೆ ಆ ಮಾತುಗಳನ್ನು ತಿಳಿಸಿದರು. BSB BSB: ‘Therefore I will indeed gather you to your fathers, and you will be gathered to your grave in peace. Your eyes will not see all the calamity that I will bring on this place.’” So they brought her answer back to the king.
Select verses for actions: Enter goes to them and Escape comes back.