1 ULB ಅರಸನು ಅಬ್ಷಾಲೋಮನಿಗಾಗಿ ಹಂಬಲಿಸುತ್ತಿರುವುದನ್ನು ಚೆರೂಯಳ ಮಗನಾದ ಯೋವಾಬನು ತಿಳಿದು BSB BSB: Now Joab son of Zeruiah perceived that the king’s heart longed for Absalom.
2 ULB ತೆಕೋವ ಪಟ್ಟಣದಿಂದ ಒಬ್ಬ ಬುದ್ಧಿವಂತೆಯಾದ ಸ್ತ್ರೀಯನ್ನು ಕರೆದುಕೊಂಡು ಬರಲು ತಿಳಿಸಿದನು. ಅವನು ಆಕೆಗೆ, <<ನೀನು ಪ್ರಿಯರನ್ನು ಕಳೆದುಕೊಂಡು ಬಹು ದಿನಗಳಿಂದ ಶೋಕಪಡುತ್ತಿರುವ ಸ್ತ್ರೀಯೋ ಎಂಬಂತೆ ಶೋಕವಸ್ತ್ರಗಳನ್ನು ಧರಿಸಿಕೊಂಡು ಎಣ್ಣೆಹಚ್ಚಿಕೊಳ್ಳದೆ, BSB BSB: So Joab sent to Tekoa to bring a wise woman from there. He told her, “Please pretend to be a mourner; put on clothes for mourning and do not anoint yourself with oil. Act like a woman who has mourned for the dead a long time.
3 ULB ಅರಸನ ಬಳಿಗೆ ಹೋಗಿ ಈ ಮಾತುಗಳನ್ನು ಅವನಿಗೆ ಹೇಳು>> ಎಂದು ಆಜ್ಞಾಪಿಸಿ, ಹೇಳಬೇಕಾದ ಮಾತುಗಳನ್ನು ಆಕೆಗೆ ಕಲಿಸಿಕೊಟ್ಟನು. BSB BSB: Then go to the king and speak these words to him.” And Joab put the words in her mouth.
4 ULB ತೆಕೋವದ ಸ್ತ್ರೀಯು ಅರಸನ ಹತ್ತಿರ ಹೋಗಿ ಅವನ ಮುಂದೆ ನೆಲಕ್ಕೆ ಬಿದ್ದು, <<ಅರಸನೇ ರಕ್ಷಿಸು>> ಎಂದು ಕೂಗಿದಳು. BSB BSB: When the woman from Tekoa went to the king, she fell facedown in homage and said, “Help me, O king!”
5 ULB ಅರಸನು, <<ನಿನಗೇನಾಯಿತು?>> ಎಂದು ಆಕೆಯನ್ನು ಕೇಳಲು ಆಕೆಯು, BSB BSB: “What troubles you?” the king asked her. “Indeed,” she said, “I am a widow, for my husband is dead.
6 ULB <<ನಾನು ವಿಧವೆ, ಗಂಡನು ಸತ್ತು ಹೋಗಿದ್ದಾನೆ. ನಿನ್ನ ದಾಸಿಯಾದ ನನಗೆ ಇಬ್ಬರು ಮಕ್ಕಳಿದ್ದರು. ಒಂದು ದಿನ ಅವರಿಬ್ಬರೂ ಹೊಲದಲ್ಲಿ ಜಗಳವಾಡಿದರು. ಅಲ್ಲಿ ಬಿಡಿಸುವವರು ಯಾರೂ ಇರಲಿಲ್ಲವಾದ್ದರಿಂದ ಒಬ್ಬನು ಇನ್ನೊಬ್ಬನನ್ನು ಹೊಡೆದು ಕೊಂದನು. BSB BSB: And your maidservant had two sons who were fighting in the field with no one to separate them, and one struck the other and killed him.
7 ULB ಈಗ ನೋಡು ಬಳಗದವರೆಲ್ಲರು ನಿನ್ನ ದಾಸಿಯಾದ ನನಗೆ ವಿರೋಧವಾಗಿ ಎದ್ದು <ತಮ್ಮನನ್ನು ಕೊಂದವನೆಲ್ಲಿ?, ಅವನನ್ನು ನಮಗೆ ಒಪ್ಪಿಸು. ತಮ್ಮನ ಪ್ರಾಣಕ್ಕಾಗಿ ಅವನ ಪ್ರಾಣವನ್ನೂ ತೆಗೆದುಬಿಟ್ಟು ನಿನ್ನನ್ನು ಬಾಧ್ಯಸ್ಥನಿಲ್ಲದ ಹಾಗೆ ಮಾಡಿಬಿಡುತ್ತೇವೆ> ಅನ್ನುತ್ತಾರೆ. ಹೀಗೆ ಅವರು ನನಗುಳಿದಿರುವ ಒಂದು ಕೆಂಡವನ್ನೂ ಆರಿಸಿಬಿಟ್ಟು, ನನ್ನ ಗಂಡನ ಹೆಸರನ್ನೂ, ಸಂತಾನವನ್ನೂ ಭೂಲೋಕದ ಮೇಲಿನಿಂದ ಅಳಿಸಬೇಕೆಂದಿದ್ದಾರೆ>> ಎಂದು ಉತ್ತರ ಕೊಟ್ಟಳು. BSB BSB: Now the whole clan has risen up against your maidservant and said, ‘Hand over the one who struck down his brother, that we may put him to death for the life of the brother whom he killed. Then we will cut off the heir as well!’ So they would extinguish my one remaining ember by not preserving my husband’s name or posterity on the earth.”
8 ULB ಆಗ ಅರಸನು, <<ನೀನು ಮನೆಗೆ ಹೋಗು, ನಿನ್ನ ವಿಷಯದಲ್ಲಿ ಆಜ್ಞಾಪಿಸುತ್ತೇನೆ>> ಎಂದು ಹೇಳಿದನು. BSB BSB: “Go home,” the king said to the woman, “and I will give orders on your behalf.”
9 ULB ಆ ತೆಕೋವದ ಸ್ತ್ರೀಯು, <<ಅರಸನೇ, ಒಡೆಯನೇ ಅಪರಾಧವು ನನ್ನ ಮೇಲೆಯೂ, ನನ್ನ ಕುಟುಂಬದ ಮೇಲೆಯು ಇರಲಿ. ಅರಸನಿಗೂ ಅವನ ಸಿಂಹಾಸನಕ್ಕೂ ದೋಷ ಹತ್ತದಿರಲಿ>> ಎಂದಳು. BSB BSB: But the woman of Tekoa said to the king, “My lord the king, may any blame be on me and on my father’s house, and may the king and his throne be guiltless.”
10 ULB ಅರಸನು ಆಕೆಗೆ, <<ಹಾಗೆ ಅಂದವರನ್ನು ನನ್ನ ಬಳಿಗೆ ಕರೆದುಕೊಂಡು ಬಾ, ಅವರು ನಿನ್ನನ್ನು ಮುಟ್ಟದಂತೆ ಮಾಡುತ್ತೇನೆ>> ಎಂದನು. BSB BSB: “If anyone speaks to you,” said the king, “bring him to me, and he will not trouble you again!”
11 ULB ಆಗ ಆ ಸ್ತ್ರೀಯು, <<ಸಮೀಪ ಬಂಧುವು ನನ್ನ ಎರಡನೆಯ ಮಗನನ್ನು ಕೊಂದು ನನ್ನನ್ನು ಪೂರ್ಣವಾಗಿ ನಾಶಮಾಡದಂತೆ ಅರಸನು ತಾನಾಗಿ ನೋಡಿಕೊಳ್ಳುವನೆಂಬುದಾಗಿ ನನ್ನ ದೇವರಾದ ಯೆಹೋವನ ಮೇಲೆ ಆಣೆಯಿಟ್ಟು ಪ್ರಮಾಣಮಾಡಬೇಕು>> ಎಂದು ಬೇಡಿಕೊಂಡಳು. ಅದಕ್ಕೆ ಅರಸನು, <<ಯೆಹೋವನಾಣೆ, ನಿನ್ನ ಮಗನ ಕೂದಲುಗಳಲ್ಲಿ ಒಂದನ್ನೂ ನೆಲಕ್ಕೆ ಬೀಳಗೊಡಿಸುವುದಿಲ್ಲ>> ಎಂದು ಹೇಳಿದನು. BSB BSB: “Please,” she replied, “may the king invoke the LORD your God to prevent the avenger of blood from increasing the devastation, so that my son may not be destroyed!” “As surely as the LORD lives,” he vowed, “not a hair of your son’s head will fall to the ground.”
12 ULB ಆಗ ಸ್ತ್ರೀಯು, <<ನನ್ನ ಒಡೆಯನೇ, ಇನ್ನೊಂದು ಮಾತನ್ನು ಹೇಳಿಕೊಳ್ಳುವುದಕ್ಕೆ ಅಪ್ಪಣೆಯಾಗಲಿ>> ಅನ್ನಲು ಅರಸನು, <<ಹೇಳು>> ಎಂದನು. BSB BSB: Then the woman said, “Please, may your servant speak a word to my lord the king?” “Speak,” he replied.
13 ULB ಆಕೆಯು, <<ಅರಸನು ಈ ತೀರ್ಪು ಕೊಟ್ಟಿದ್ದರಿಂದ ತನ್ನನ್ನು ತಾನೇ ಅಪರಾಧಿ ಎಂದು ನಿರ್ಣಯಿಸಿದ ಹಾಗಾಯಿತು. ಅವನು ತಳ್ಳಲ್ಪಟ್ಟ ಮಗನನ್ನು ಸೇರಿಸಿಕೊಳ್ಳದೆ ಹೋಗುವುದರಿಂದ ದೇವಪ್ರಜೆಗೆ ವಿರೋಧವಾಗಿ ಆಲೋಚನೆ ಮಾಡಿದ ಹಾಗಾಯಿತು. ಅರಸನು ಹೀಗೇಕೆ ಮಾಡಬೇಕು? BSB BSB: The woman asked, “Why have you devised a thing like this against the people of God? When the king says this, does he not convict himself, since he has not brought back his own banished son?
14 ULB ನಾವು ಸಾಯುವವರು. ನೆಲದ ಮೇಲೆ ಚೆಲ್ಲಿದ ನೀರು ಪುನಃ ತೆಗೆದುಕೊಳ್ಳಲು ಆಗದಂತೆ ಇರುವ ನೀರಿನಂತೆ ನಾವು. ಮನುಷ್ಯರ ಪ್ರಾಣವನ್ನು ತೆಗೆಯುವುದಕ್ಕೆ ದೇವರಿಗೆ ಇಷ್ಟವಿಲ್ಲ. ತಳ್ಳಲ್ಪಟ್ಟವನು ತಿರುಗಿ ತನ್ನ ಬಳಿಗೆ ಬರುವ ಹಾಗೆ ಆತನು ಸದುಪಾಯಗಳನ್ನು ಕಲ್ಪಿಸುವವನಾಗಿರುತ್ತಾನೆ. BSB BSB: For we will surely die and be like water poured out on the ground, which cannot be recovered. Yet God does not take away a life, but He devises ways that the banished one may not be cast out from Him.
15 ULB ಅದಿರಲಿ ಜನರು ನಿನ್ನ ಸೇವಕಿಯಾದ ನನ್ನನ್ನು ಹೆದರಿಸಿದ್ದರಿಂದ, <ನಾನು ಈ ಸಂಗತಿಯನ್ನು ಅರಸನಿಗೆ ತಿಳಿಸಿದರೆ, ತನ್ನ ಸೇವಕಿಯ ಬಿನ್ನಹವನ್ನು ಲಾಲಿಸಬಹುದು ಎಂದುಕೊಂಡು ನನ್ನ ಒಡೆಯನಾದ ಅರಸನಿಗೆ ಇದನ್ನು ತಿಳಿಸುವುದಕ್ಕೆ ಬಂದೆನು ಎಂದಳು. BSB BSB: Now therefore, I have come to present this matter to my lord the king because the people have made me afraid. Your servant thought, ‘I will speak to the king. Perhaps he will grant the request of his maidservant.
16 ULB ಅರಸನು ತನ್ನ ಸೇವಕಿಯಾದ ನನ್ನ ಬಿನ್ನಹವನ್ನು ಲಾಲಿಸಿ ನನ್ನನ್ನೂ, ನನ್ನ ಮಗನನ್ನೂ ದೇವರ ಸ್ವತ್ತಿನಿಂದ ತೆಗೆದುಹಾಕಬೇಕೆಂದಿರುವವರ ಕೈಗೆ ಸಿಕ್ಕದಂತೆ ತಪ್ಪಿಸಿ ರಕ್ಷಿಸುವನೆಂದು ನಂಬಿಕೊಂಡಿದ್ದೇನೆ.> BSB BSB: For the king will hear and deliver his maidservant from the hand of the man who would cut off both me and my son from God’s inheritance.’
17 ULB ನನ್ನ ಒಡೆಯನಾದ ಅರಸನ ಮಾತು ಸಮಾಧಾನಕ್ಕೆ ಕಾರಣವಾಗುವುದೆಂದು ನೆನಸಿ ನಿನ್ನ ದಾಸಿಯಾದ ನಾನು ಬಂದೆನು. ನ್ಯಾಯ ಅನ್ಯಾಯಗಳನ್ನು ಕಂಡುಹಿಡಿಯುವುದರಲ್ಲಿ ನನ್ನ ಒಡೆಯನಾದ ಅರಸನು ದೇವದೂತನಂತಿದ್ದಾನೆ. ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರಲಿ>> ಎಂದಳು. BSB BSB: And now your servant says, ‘May the word of my lord the king bring me rest, for my lord the king is able to discern good and evil, just like the angel of God. May the LORD your God be with you.’”
18 ULB ಆಗ ಅರಸನು ಆ ಸ್ತ್ರೀಗೆ, <<ನಾನು ನಿನ್ನನ್ನು ಒಂದು ಮಾತು ಕೇಳಬೇಕೆಂದಿರುತ್ತೇನೆ. ನೀನು ಅದನ್ನು ಮರೆಮಾಚದೆ ತಿಳಿಸಬೇಕು>> ಎಂದನು. ಆಗ ಆಕೆಯು, <<ಅರಸನ ಅಪ್ಪಣೆಯಾಗಲಿ>> ಎಂದು ಉತ್ತರಕೊಟ್ಟಳು. BSB BSB: Then the king said to the woman, “I am going to ask you something; do not conceal it from me!” “Let my lord the king speak,” she replied.
19 ULB ಅರಸನು, <<ಈ ಕಾರ್ಯದಲ್ಲಿ ಯೋವಾಬನ ಕೈವಾಡ ಇದೆಯೇ?>> ಎಂದು ಕೇಳಿದನು. ಅದಕ್ಕೆ ಆ ಸ್ತ್ರೀಯು, <<ಅರಸನ ಜೀವದಾಣೆ, ಅರಸನು ಒಂದು ಮಾತು ಹೇಳಿದರೆ ನಾವು ತಪ್ಪಿಸಿಕೊಂಡು ಎಡಕ್ಕಾಗಲಿ, ಬಲಕ್ಕಾಗಲಿ ಜಾರಿಕೊಳ್ಳುವುದಕ್ಕೆ ಆಗುವುದಿಲ್ಲ. ನಿನ್ನ ದಾಸಿಯಾದ ನನ್ನನ್ನು ಪ್ರೇರೇಪಿಸಿ, ಈ ಎಲ್ಲಾ ಮಾತುಗಳನ್ನು ನನಗೆ ಕಲಿಸಿ ಕೊಟ್ಟವನು ನಿನ್ನ ಸೇವಕನಾದ ಯೋವಾಬನೇ ಹೌದು. BSB BSB: So the king asked, “Is the hand of Joab behind all this?” The woman answered, “As surely as you live, my lord the king, no one can turn to the right or to the left from anything that my lord the king says. Yes, your servant Joab is the one who gave me orders; he told your maidservant exactly what to say.
20 ULB ಅಬ್ಷಾಲೋಮನು ನಡೆದಿರುವ ಘಟನೆಯಿಂದ ಅರಸನು ಕೋಪಗೊಳ್ಳದೆ ಇರುವಂತೆ ವಿಷಯವನ್ನು ಈ ರೀತಿ ಹೇಳುವಂತೆ ನಿನ್ನ ಸೇವಕನಾದ ಯೋವಾಬನೇ ಇದನ್ನು ಕಲಿಸಿದನು. ಆದರೆ ನನ್ನ ಒಡೆಯನು ದೇವದೂತನಂಥ ಜ್ಞಾನಿ. ಅವನು ಭೂಲೋಕದಲ್ಲಿ ನಡೆಯುವುದನ್ನೆಲ್ಲಾ ತಿಳಿದುಕೊಳ್ಳುವನು>> ಎಂದು ಉತ್ತರಕೊಟ್ಟಳು. BSB BSB: Joab your servant has done this to bring about this change of affairs, but my lord has wisdom like the wisdom of the angel of God, to know everything that happens in the land.”
21 ULB ಅನಂತರ ಅರಸನು ಯೋವಾಬನಿಗೆ, <<ನೀನು ಕೇಳಿಕೊಂಡದ್ದನ್ನು ಅನುಗ್ರಹಿಸಿದ್ದೇನೆ, ಹೋಗಿ ಯೌವನಸ್ಥನಾದ ಅಬ್ಷಾಲೋಮನನ್ನು ಕರೆದುಕೊಂಡು ಬಾ>> ಅಂದನು. BSB BSB: Then the king said to Joab, “I hereby grant this request. Go, bring back the young man Absalom.”
22 ULB ಆಗ ಯೋವಾಬನು ನೆಲಕ್ಕೆ ಬಿದ್ದು ನಮಸ್ಕರಿಸಿ, ಅರಸನನ್ನು ಹರಸಿ, <<ಅರಸನೇ ನನ್ನ ಒಡೆಯನೇ, ನೀನು ನಿನ್ನ ಸೇವಕನಾದ ನನ್ನ ಬಿನ್ನಹವನ್ನು ಲಾಲಿಸಿದ್ದರಿಂದ ನಿನ್ನ ದೃಷ್ಟಿಯಲ್ಲಿ ನನಗೆ ದಯೆ ದೊರಕಿತೆಂದು ಈಗ ಗೊತ್ತಾಯಿತು>> ಎಂದು ಹೇಳಿದನು. BSB BSB: Joab fell facedown in homage and blessed the king. “Today,” said Joab, “your servant knows that he has found favor in your eyes, my lord the king, because the king has granted his request.”
23 ULB ನಂತರ ಯೋವಾಬನು ಎದ್ದು ಗೆಷೂರಿಗೆ ಹೋಗಿ ಅಬ್ಷಾಲೋಮನನ್ನು ಯೆರೂಸಲೇಮಿಗೆ ಕರೆದುಕೊಂಡು ಬಂದನು. BSB BSB: So Joab got up, went to Geshur, and brought Absalom to Jerusalem.
24 ULB ಆದರೆ ಅರಸನು, <<ಅಬ್ಷಾಲೋಮನು ತನ್ನ ಮನೆಗೆ ಹೋಗಲಿ, ಅವನು ನನ್ನ ಮುಖವನ್ನು ನೋಡಬಾರದು>> ಎಂದು ಆಜ್ಞಾಪಿಸಿದ್ದರಿಂದ ಅವನು ತನ್ನ ಮನೆಗೆ ಹೋದನು. ಅರಸನ ಮುಖವನ್ನು ನೋಡಲಿಲ್ಲ. BSB BSB: But the king added, “He may return to his house, but he must not see my face.” So Absalom returned to his own house, but he did not see the face of the king.
25 ULB ಸೌಂದರ್ಯದಲ್ಲಿ ಅಬ್ಷಾಲೋಮನಂತೆ ಹೆಸರುಗೊಂಡ ಪುರುಷನು ಇಸ್ರಾಯೇಲರಲ್ಲಿ ಒಬ್ಬನೂ ಇರಲಿಲ್ಲ. ಅವನಲ್ಲಿ ಅಂಗಾಲಿನಿಂದ ನಡುನೆತ್ತಿಯ ವರೆಗೂ ಒಂದು ದೋಷವಾದರೂ ಇರಲಿಲ್ಲ. BSB BSB: Now there was not a man in all Israel as handsome and highly praised as Absalom. From the sole of his foot to the top of his head, he did not have a single flaw.
26 ULB ಅವನ ತಲೆಯ ಕೂದಲು ಬಹು ಭಾರವಾದ್ದರಿಂದ ಪ್ರತಿ ವರ್ಷದ ಅಂತ್ಯದಲ್ಲಿ ಬೋಳಿಸಿಕೊಳ್ಳುತ್ತಿದ್ದನು. ಆಗ ಅವನ ಕೂದಲು ರಾಜರ ತೂಕದ ಪ್ರಕಾರ ಇನ್ನೂರು ರೂಪಾಯಿ ತೂಕವಾಗುತ್ತಿತ್ತು. BSB BSB: And when he cut the hair of his head—he shaved it every year because his hair got so heavy—he would weigh it out to be two hundred shekels, according to the royal standard.
27 ULB ಅವನಿಗೆ ಮೂರು ಮಂದಿ ಗಂಡು ಮಕ್ಕಳೂ, ಒಬ್ಬಳು ಮಗಳು ಇದ್ದಳು. ಮಗಳ ಹೆಸರು ತಾಮಾರಳು. ಈಕೆಯು ಬಹು ಸುಂದರಿಯಾಗಿದ್ದಳು. BSB BSB: Three sons were born to Absalom, and a daughter named Tamar, who was a beautiful woman.
28 ULB ಅಬ್ಷಾಲೋಮನು ಅರಸನ ಮೋರೆಯನ್ನು ನೋಡದೆ ಎರಡು ವರ್ಷ ಯೆರೂಸಲೇಮಿನಲ್ಲೇ ವಾಸವಾಗಿದ್ದನು. BSB BSB: Now Absalom lived in Jerusalem two years without seeing the face of the king.
29 ULB ಒಂದು ದಿನ ಅವನು ಅರಸನ ಬಳಿಗೆ ಕಳುಹಿಸುವುದಕ್ಕಾಗಿ ಯೋವಾಬನನ್ನು ಕರೇಕಳುಹಿಸಿದನು. ಆದರೆ ಯೋವಾಬನು ಬರಲಿಲ್ಲ. ಎರಡನೆಯ ಸಾರಿ ಕರೇಕಳುಹಿಸಿದರೂ ಅವನು ಬರಲಿಲ್ಲ. BSB BSB: Then he sent for Joab to send him to the king, but Joab refused to come to him. So Absalom sent a second time, but Joab still would not come.
30 ULB ಆದುದರಿಂದ ಅಬ್ಷಾಲೋಮನು ತನ್ನ ಸೇವಕರಿಗೆ, <<ನೋಡಿರಿ, ಸಮೀಪದಲ್ಲಿಯೇ ಯೋವಾಬನ ಜವೆಗೋದಿಯ ಹೊಲವುಂಟಲ್ಲಾ, ಹೋಗಿ ಅದಕ್ಕೆ ಬೆಂಕಿ ಹಚ್ಚಿರಿ>> ಎಂದು ಆಜ್ಞಾಪಿಸಿದನು. ಅವರು ಹಾಗೆಯೇ ಮಾಡಿದರು. BSB BSB: Then Absalom said to his servants, “Look, Joab’s field is next to mine, and he has barley there. Go and set it on fire!” And Absalom’s servants set the field on fire.
31 ULB ಆಗ ಯೋವಾಬನು ಅಬ್ಷಾಲೋಮನ ಮನೆಗೆ ಹೋಗಿ, <<ನಿನ್ನ ಸೇವಕರು ನನ್ನ ಹೊಲಕ್ಕೆ ಬೆಂಕಿ ಹಚ್ಚಿದ್ದೇಕೆ?>> ಎಂದು ಅವನನ್ನು ಕೇಳಿದನು. BSB BSB: Then Joab came to Absalom’s house and demanded, “Why did your servants set my field on fire?”
32 ULB ಅದಕ್ಕೆ ಅಬ್ಷಾಲೋಮನು ಅವನಿಗೆ, <<ನಾನು ಗೆಷೂರಿನಿಂದ ಇಲ್ಲಿಗೆ ಬಂದದ್ದೇಕೆ, ಅಲ್ಲೇ ಇದ್ದರೆ ಒಳ್ಳೆಯದಾಗುತ್ತಿತ್ತಲ್ಲವೋ ಎಂದು ನಿನ್ನ ಮುಖಾಂತರ ಅರಸನಿಗೆ ತಿಳಿಸುವುದಕ್ಕಾಗಿ ನಿನ್ನನ್ನು ಕರೇಕಳುಹಿಸಿದೆನು. ನಾನು ಹೇಗೂ ಅರಸನ ದರ್ಶನ ಮಾಡಬೇಕು. ನಾನು ಅಪರಾಧಿಯಾಗಿದ್ದರೆ ನನ್ನನ್ನು ಕೊಲ್ಲಿಸಲಿ>> ಎಂದನು. BSB BSB: “Look,” said Absalom, “I sent for you and said, ‘Come here. I want to send you to the king to ask: Why have I come back from Geshur? It would be better for me if I were still there.’ So now, let me see the king’s face, and if there is iniquity in me, let him kill me.”
33 ULB ಯೋವಾಬನು ಹೋಗಿ ಇದನ್ನು ಅರಸನಿಗೆ ತಿಳಿಸಿದಾಗ ಅರಸನು ಅಬ್ಷಾಲೋಮನನ್ನು ಕರೇಕಳುಹಿಸಿದನು. ಅವನು ಅರಸನ ಬಳಿಗೆ ಬಂದು ಸಾಷ್ಟಾಂಗನಮಸ್ಕಾರ ಮಾಡಿದನು. ಅರಸನು ಅವನನ್ನು ಮುದ್ದಿಟ್ಟನು. BSB BSB: So Joab went and told the king, and David summoned Absalom, who came to him and bowed facedown before him. Then the king kissed Absalom.
Select verses for actions: Enter goes to them and Escape comes back.