1 ULB ಇಸ್ರಾಯೇಲರೇ ಯೆಹೋವನು ನಿಮಗೆ ವಿರುದ್ಧವಾಗಿ, ತಾನು ಐಗುಪ್ತ ದೇಶದೊಳಗಿಂದ ಪಾರು ಮಾಡಿದ ಪೂರ್ಣಕುಲಕ್ಕೆ ವಿರುದ್ಧವಾಗಿ ನುಡಿದಿರುವ ಈ ಮಾತನ್ನು ಕೇಳಿರಿ, BSB BSB: Hear this word that the LORD has spoken against you, O children of Israel, against the whole family that I brought up out of the land of Egypt:
2 ULB ಭೂಮಿಯ ಸಕಲ ಕುಲಗಳೊಳಗೆ ನಿಮ್ಮನ್ನು ಮಾತ್ರ ನನ್ನವರೆಂದು ಆರಿಸಿಕೊಂಡಿದ್ದೇನೆ. ಆದಕಾರಣ ನಿಮ್ಮ ಎಲ್ಲಾ ಪಾಪಗಳ ಫಲವನ್ನು ನೀವು ಅನುಭವಿಸುವಂತೆ ಮಾಡುವೆನು. BSB BSB: “Only you have I known from all the families of the earth; therefore I will punish you for all your iniquities.”
3 ULB ಗೊತ್ತುಮಾಡಿಕೊಳ್ಳದೆ ಯಾರಾದರಿಬ್ಬರು ಜೊತೆಯಾಗಿ ನಡೆಯುವುದುಂಟೆ? BSB BSB: Can two walk together without agreeing where to go?
4 ULB ಬೇಟೆಯ ಬಲಿ ಕಾಣದೇ ಸಿಂಹವು ಅರಣ್ಯದಲ್ಲಿ ಗರ್ಜಿಸುವುದೋ? ಏನನ್ನೂ ಬೇಟೆಯಾಡದೆ ಪ್ರಾಯದ ಸಿಂಹವು ಗವಿಯಲ್ಲಿ ಕುಳಿತು ಗುರುಗುಟ್ಟುವುದೋ? BSB BSB: Does a lion roar in the forest when he has no prey? Does a young lion growl in his den if he has caught nothing?
5 ULB ಕಾಳಿಲ್ಲದೆ ಪಕ್ಷಿಯು ನೆಲದಲ್ಲಿನ ಬಲೆಯೊಳಗೆ ಬೀಳುವುದೋ? ಏನೂ ಬಲೆಗೆ ಸಿಕ್ಕಿಕೊಳ್ಳದೇ ಬೋನು ಉರುಲಾಗುವುದೋ? BSB BSB: Does a bird land in a snare where no bait has been set? Does a trap spring from the ground when it has nothing to catch?
6 ULB ಪಟ್ಟಣದಲ್ಲಿ ಕೊಂಬನ್ನು ಊದಿದರೆ ಜನರು ಹೆದರುವುದಿಲ್ಲವೋ? ಯೆಹೋವನಿಂದಲ್ಲದೆ ಪಟ್ಟಣಕ್ಕೆ ವಿಪತ್ತು ಸಂಭವಿಸುವುದೋ? BSB BSB: If a ram’s horn sounds in a city, do the people not tremble? If calamity comes to a city, has not the LORD caused it?
7 ULB ನಿಶ್ಚಯವಾಗಿ ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ಯೋಜನೆಯನ್ನು ತಿಳಿಸದೆ ಯೆಹೋವನಾದ ದೇವರು ಏನನ್ನೂ ಮಾಡುವುದಿಲ್ಲ. BSB BSB: Surely the Lord GOD does nothing without revealing His plan to His servants the prophets.
8 ULB ಸಿಂಹವು ಗರ್ಜಿಸಿದರೆ, ಭಯಪಡದೆ ಇರುವವರು ಯಾರು? ಕರ್ತನಾದ ಯೆಹೋವನು ನುಡಿದಿದ್ದಾನೆ, ಆ ನುಡಿಯನ್ನು ಕೇಳಿ ಪ್ರವಾದಿಸದವರು ಯಾರು? BSB BSB: The lion has roared—who will not fear? The Lord GOD has spoken—who will not prophesy?
9 ULB ಅಷ್ದೋದಿನ ಅರಮನೆಗಳಲ್ಲಿಯೂ, ಐಗುಪ್ತ ದೇಶದ ಅರಮನೆಗಳಲ್ಲಿಯೂ ಹೀಗೆ ಪ್ರಕಟಿಸಿರಿ, <<ಸಮಾರ್ಯದ ಬೆಟ್ಟಗಳಲ್ಲಿ ಕೂಡಿಬನ್ನಿರಿ. ಪಟ್ಟಣದೊಳಗೆ ಇರುವ ಗದ್ದಲವನ್ನು, ಅದರೊಳಗಿರುವ ಹಿಂಸೆಯನ್ನೂ ನೋಡಿರಿ. BSB BSB: Proclaim to the citadels of Ashdod and to the citadels of Egypt: “Assemble on the mountains of Samaria; see the great unrest in the city and the acts of oppression in her midst.”
10 ULB ನ್ಯಾಯನೀತಿಗಳನ್ನು ಮಾಡುವುದಕ್ಕೆ ಅವರಿಗೆ ತಿಳಿದಿಲ್ಲ>> ಇದು ಯೆಹೋವನ ನುಡಿ. ತಮ್ಮ ಉಪ್ಪರಿಗೆಗಳಲ್ಲಿ ಬಾಧೆಯನ್ನೂ, ನಾಶನವನ್ನೂ ಕೂಡಿಸಿಟ್ಟುಕೊಂಡಿದ್ದಾರೆ. BSB BSB: “For they know not how to do right,” declares the LORD. “They store up violence and destruction in their citadels.”
11 ULB ಹೀಗಿರಲು, ಕರ್ತನಾದ ಯೆಹೋವನು ಇಂತೆನ್ನುತ್ತಾನೆ: <<ಶತ್ರುವು ನಿನ್ನ ದೇಶವನ್ನು ಮುತ್ತಿಕೊಳ್ಳುವನು. ನಿನ್ನ ಶಕ್ತಿಯನ್ನು ಕುಂದಿಸಿಬಿಡುವನು ಮತ್ತು ನಿನ್ನ ಅರಮನೆಗಳು ಸೂರೆಯಾಗುವವು.>> BSB BSB: Therefore this is what the Lord GOD says: “An enemy will surround the land; he will pull down your strongholds and plunder your citadels.”
12 ULB ಯೆಹೋವನು ಇಂತೆನ್ನುತ್ತಾನೆ:<< ಸಿಂಹದ ಬಾಯೊಳಗಿಂದ ಕುರುಬನು ತನ್ನ ಕುರಿಗಳ ಎರಡು ಕಾಲನ್ನೂ, ಅಥವಾ ಕಿವಿಯ ಒಂದು ತುಂಡನ್ನೂ, ಹೇಗೆ ರಕ್ಷಿಸುವನೋ, ಹಾಗೆಯೇ ಸಮಾರ್ಯದೊಳಗೆ ಹಾಸಿಗೆಯ ಮೂಲೆಯಲ್ಲಿಯೂ, ಮಂಚದ ಪಟ್ಟೇದಿಂಬುಗಳಲ್ಲಿಯೂ, ಒರಗಿಕೊಳ್ಳುವ ಇಸ್ರಾಯೇಲರ ಸ್ವಲ್ಪ ಭಾಗ ಮಾತ್ರ ರಕ್ಷಿಸಲ್ಪಡುವುದು.>> BSB BSB: This is what the LORD says: “As the shepherd snatches from the mouth of the lion two legs or a piece of an ear, so the Israelites dwelling in Samaria will be rescued having just the corner of a bed or the cushion of a couch.
13 ULB ಸೇನಾಧೀಶ್ವರ ದೇವನಾದ ಯೆಹೋವನು ಇಂತೆನ್ನುತ್ತಾನೆ; ಕೇಳಿರಿ, ಯಾಕೋಬ ವಂಶದವರಿಗೆ ವಿರುದ್ಧವಾಗಿ ಸಾಕ್ಷಿಕೊಡಿರಿ. BSB BSB: Hear and testify against the house of Jacob, declares the Lord GOD, the God of Hosts.
14 ULB <<ನಾನು ಇಸ್ರಾಯೇಲಿನ ದ್ರೋಹಗಳಿಗಾಗಿ ಅವರನ್ನು ಶಿಕ್ಷಿಸುವ ದಿನಗಳಲ್ಲಿ, ಬೇತೇಲಿನ ಯಜ್ಞವೇದಿಗಳನ್ನು ಧ್ವಂಸಮಾಡುವೆನು. ಯಜ್ಞವೇದಿಯ ಕೊಂಬುಗಳು ಕಡಿಯಲ್ಪಟ್ಟು ನೆಲದ ಮೇಲೆ ಉರುಳುವವು. BSB BSB: On the day I punish Israel for their transgressions, I will visit destruction on the altars of Bethel; the horns of the altar will be cut off, and they will fall to the ground.