1 ULB ಅರಸನ ಆಜ್ಞಾನಿರ್ಣಯಗಳನ್ನು ನೆರವೇರಿಸತಕ್ಕ ಹನ್ನೆರಡನೆಯ ತಿಂಗಳಾದ ಫಾಲ್ಗುಣಮಾಸದ ಹದಿಮೂರನೆಯ ದಿನವು ಬಂದಿತು. ಆ ದಿನದಲ್ಲಿ ಯೆಹೂದ್ಯರನ್ನು ಸ್ವಾಧೀನ ಮಾಡಿಕೊಳ್ಳಬಹುದೆಂದು ಅವರ ವೈರಿಗಳು ನಿರೀಕ್ಷಿಸಿಕೊಂಡಿದ್ದರು. ಆದರೆ ಅದಕ್ಕೆ ಬದಲಾಗಿ ಯೆಹೂದ್ಯರೇ ತಮ್ಮ ವೈರಿಗಳನ್ನು ಸ್ವಾಧೀನಮಾಡಿಕೊಂಡರು. BSB BSB: On the thirteenth day of the twelfth month, the month of Adar, the king’s command and edict were to be executed. On this day the enemies of the Jews had hoped to overpower them, but their plan was overturned and the Jews overpowered those who hated them.
2 ULB ಆದುದರಿಂದ ಅರಸನಾದ ಅಹಷ್ವೇರೋಷನ ಸಮಸ್ತ ಸಂಸ್ಥಾನಗಳ ಆಯಾ ಪಟ್ಟಣಗಳಲ್ಲಿದ್ದ ಯೆಹೂದ್ಯರು ತಮಗೆ ಕೇಡು ಬಯಸಿದವರಿಗೆ ವಿರುದ್ಧವಾಗಿ ಕೈಯೆತ್ತುವುದಕ್ಕೆ ಸೇರಿಕೊಂಡಾಗ ಯಾರಿಗೂ ಅವರ ಎದುರಿನಲ್ಲಿ ನಿಲ್ಲಲಾಗಲಿಲ್ಲ. BSB BSB: In each of the provinces of King Xerxes, the Jews assembled in their cities to attack those who sought to harm them. No man could withstand them, because the fear of them had fallen upon all peoples.
3 ULB ಅವರಿಂದ ಎಲ್ಲಾ ಜನಾಂಗದವರಿಗೆ ಭಯವುಂಟಾಯಿತು; ಇದಲ್ಲದೆ ಅರಮನೆಯಲ್ಲಿ ಮೊರ್ದೆಕೈಯ ಪ್ರಾಬಲ್ಯವು ಹೆಚ್ಚಾಗುತ್ತಾ ಬಂದ ಹಾಗೆಲ್ಲಾ, ಅವನ ಸುದ್ದಿಯೂ ಸಕಲ ಸಂಸ್ಥಾನಗಳಲ್ಲಿಯೂ ಹಬ್ಬಿತು. BSB BSB: And all the officials of the provinces, the satraps, the governors, and the king’s administrators helped the Jews, because the fear of Mordecai had fallen upon them.
4 ULB ಸರ್ವ ಸಂಸ್ಥಾನಾಧಿಕಾರಿಗಳೂ, ಉಪರಾಜರೂ, ದೇಶಾಧಿಪತಿಗಳೂ ಮತ್ತು ಇತರ ರಾಜೋದ್ಯೋಗಸ್ಥರೂ ಅವನಿಗೆ ಹೆದರಿ ಯೆಹೂದ್ಯರಿಗೆ ಸಹಾಯಕರಾದರು. BSB BSB: For Mordecai exercised great power in the palace, and his fame spread throughout the provinces as he became more and more powerful.
5 ULB ಹೀಗೆ ಯೆಹೂದ್ಯರು ತಮ್ಮ ಎಲ್ಲಾ ವೈರಿಗಳನ್ನು ಸೋಲಿಸಿ, ಕತ್ತಿಯಿಂದ ಹೊಡೆದು ಕೊಂದು ನಿರ್ನಾಮಗೊಳಿಸಿದರು; ತಮ್ಮ ವೈರಿಗಳನ್ನು ಇಷ್ಟವಿದ್ದಂತೆ ಮಾಡಿದರು. BSB BSB: The Jews put all their enemies to the sword, killing and destroying them, and they did as they pleased to those who hated them.
6 ULB ಯೆಹೂದ್ಯರು ಶೂಷನ್ ಕೋಟೆಯಲ್ಲೇ ಐನೂರು ಜನರನ್ನು ಕೊಂದುಬಿಟ್ಟರು. BSB BSB: In the citadel of Susa, the Jews killed and destroyed five hundred men,
7 ULB ಹತರಾದವರಲ್ಲಿ ಪರ್ಷಂದಾತ, ದಲ್ಫೋನ್, ಅಸ್ಪಾತ, BSB BSB: including Parshandatha, Dalphon, Aspatha,
8 ULB ಪೋರಾತ, ಆದಲ್ಯ, ಅರೀದಾತ, BSB BSB: Poratha, Adalia, Aridatha,
9 ULB ಪರ್ಮಷ್ಟ, ಅರೀಸೈ, ಅರಿದೈ, ವೈಜಾತ ಎಂಬುವವರಿದ್ದರು. BSB BSB: Parmashta, Arisai, Aridai, and Vaizatha.
10 ULB ಇವರು ಯೆಹೂದ್ಯರನ್ನು ದ್ವೇಷಿಸುತ್ತಿದ್ದ ಹಮ್ಮೆದಾತನ ಮಗನಾದ ಹಾಮಾನನ ಹತ್ತು ಮಂದಿ ಮಕ್ಕಳು. ಇಷ್ಟು ಜನರನ್ನು ಕೊಂದರೂ ಯೆಹೂದ್ಯರು ಸುಲಿಗೆಗೆ ಕೈಹಾಕಲಿಲ್ಲ. BSB BSB: They killed these ten sons of Haman son of Hammedatha, the enemy of the Jews, but they did not lay a hand on the plunder.
11 ULB ಆ ದಿನ ಶೂಷನ್ ಕೋಟೆಯಲ್ಲಿ ಹತರಾದವರ ಸಂಖ್ಯೆಯನ್ನು ಅರಸನಿಗೆ ತಿಳಿಸಲಾಯಿತು. BSB BSB: On that day the number of those killed in the citadel of Susa was reported to the king,
12 ULB ಆಗ ಅರಸನು ಎಸ್ತೇರ್ ರಾಣಿಗೆ, <<ಯೆಹೂದ್ಯರು ಶೂಷನ್ ಕೋಟೆಯಲ್ಲೇ ಐನೂರು ಜನರನ್ನೂ, ಹಾಮಾನನ ಹತ್ತು ಮಂದಿ ಮಕ್ಕಳನ್ನೂ ಸಂಹರಿಸಿಬಿಟ್ಟಿದ್ದಾರೆ; ಉಳಿದ ರಾಜಸಂಸ್ಥಾನಗಳಲ್ಲಿ ಎಷ್ಟೋ ಜನರು ಹತರಾಗಿರಬಹುದು. ನಿನ್ನ ವಿಜ್ಞಾಪನೆ ಇನ್ನು ಯಾವುದಿದ್ದರೂ ನೆರವೇರುವುದು, ನೀನು ಏನು ಕೇಳಿಕೊಂಡರೂ ಕೊಡುವೆನು>> ಎಂದು ಹೇಳಿದನು. BSB BSB: who said to Queen Esther, “In the citadel of Susa the Jews have killed and destroyed five hundred men, including Haman’s ten sons. What have they done in the rest of the royal provinces? Now what is your petition? It will be given to you. And what further do you request? It will be fulfilled.”
13 ULB ಅದಕ್ಕೆ ಎಸ್ತೇರಳು, <<ಅರಸನ ಇಷ್ಟವಿದ್ದರೆ ನಾಳೆಯೂ ಇಂದಿನ ರಾಜಾಜ್ಞೆಯ ಪ್ರಕಾರ ಮಾಡುವುದಕ್ಕೂ ಹಾಮಾನನ ಹತ್ತು ಮಕ್ಕಳ ಶವಗಳನ್ನು ಗಲ್ಲಿಗೆ ಹಾಕುವುದಕ್ಕೂ ಶೂಷನಿನಲ್ಲಿರುವ ಯೆಹೂದ್ಯರಿಗೆ ಅಪ್ಪಣೆಯಾಗಬೇಕು>> ಎಂದು ಬೇಡಿಕೊಂಡಳು. BSB BSB: Esther replied, “If it pleases the king, may the Jews in Susa also have tomorrow to carry out today’s edict, and may the bodies of Haman’s ten sons be hanged on the gallows.”
14 ULB ಆಗ ಅರಸನು ಹಾಗೆ ಮಾಡುವುದಕ್ಕೆ ಅಪ್ಪಣೆಕೊಟ್ಟನು. ಕೂಡಲೆ ಈ ಸಂಬಂಧವಾದ ರಾಜಾಜ್ಞೆಯು ಶೂಷನ್ ಕೋಟೆಯಲ್ಲಿ ಪ್ರಕಟವಾಯಿತು ಮತ್ತು ಹಾಮಾನನ ಹತ್ತು ಮಕ್ಕಳನ್ನು ಗಲ್ಲಿಗೆ ಏರಿಸಲಾಯಿತು. BSB BSB: So the king commanded that this be done. An edict was issued in Susa, and they hanged the ten sons of Haman.
15 ULB ಶೂಷನಿನ ಯೆಹೂದ್ಯರು ಫಾಲ್ಗುಣಮಾಸದ ಹದಿನಾಲ್ಕನೆಯ ದಿನದಲ್ಲೂ ಒಟ್ಟಿಗೆ ಸೇರಿ ಅಲ್ಲಿನ ಮುನ್ನೂರು ಜನರನ್ನು ಕೊಂದರು; ಆದರೆ ಕೊಳ್ಳೆಗೆ ಕೈಹಾಕಲಿಲ್ಲ. BSB BSB: On the fourteenth day of the month of Adar, the Jews in Susa came together again and put to death three hundred men there, but they did not lay a hand on the plunder.
16 ULB ಅದೇ ಮೇರೆಗೆ ರಾಜಸಂಸ್ಥಾನಗಳಲ್ಲಿದ್ದ ಯೆಹೂದ್ಯರು ತಮ್ಮ ವಿರೋಧಿಗಳ ಕಾಟವನ್ನು ನಿಲ್ಲಿಸಿ, ಪ್ರಾಣ ರಕ್ಷಿಸಿಕೊಳ್ಳುವುದಕ್ಕಾಗಿ ಕೂಡಿಕೊಂಡು ತಮ್ಮ ವೈರಿಗಳಲ್ಲಿ ಎಪ್ಪತ್ತೈದು ಸಾವಿರ ಜನರನ್ನು ಸಂಹರಿಸಿದರು; ಆದರೆ ಸುಲಿಗೆಮಾಡುವುದಕ್ಕೆ ಕೈ ಹಾಕಲಿಲ್ಲ. BSB BSB: The rest of the Jews in the royal provinces also assembled to defend themselves and rid themselves of their enemies. They killed 75,000 who hated them, but they did not lay a hand on the plunder.
17 ULB ಇದು ಫಾಲ್ಗುಣಮಾಸದ ಹದಿಮೂರನೆಯ ದಿನದಲ್ಲಿ ನಡೆಯಿತು. ಅವರು ಹದಿನಾಲ್ಕನೆಯ ದಿನದಲ್ಲಿ ವಿಶ್ರಮಿಸಿಕೊಂಡು ಆ ದಿನವನ್ನು ಉತ್ಸವಭೋಜನ ದಿನವನ್ನಾಗಿ ಆಚರಿಸಿದರು. ಹಳ್ಳಿಪಳ್ಳಿಯ ಯೆಹೂದ್ಯರು ಫಾಲ್ಗುಣಮಾಸದ ಹದಿನಾಲ್ಕನೆಯ ದಿನವನ್ನು ನಗರಗಳ ಯೆಹೂದ್ಯರು ಹದಿನೈದನೆಯ ದಿನವನ್ನೂ ಶುಭದಿನವೆಂದು ಆಚರಿಸಿ ಉತ್ಸವಭೋಜನಮಾಡಿ ಒಬ್ಬರಿಗೊಬ್ಬರು ಭೋಜನ ಪದಾರ್ಥಗಳನ್ನು ವಿನಿಮಯ ಮಾಡಿಕೊಂಡರು. BSB BSB: This was done on the thirteenth day of the month of Adar, and on the fourteenth day they rested, making it a day of feasting and joy.
18 ULB ಆದರೆ ಶೂಷನಿನ ಯೆಹೂದ್ಯರು ಹದಿಮೂರನೆಯ ಮತ್ತು ಹದಿನಾಲ್ಕನೆಯ ದಿನಗಳನ್ನು ವೈರಿಗಳನ್ನು ವಧಿಸುವುದಕ್ಕೆ ನೇಮಿಸಿಕೊಂಡಿದ್ದರಿಂದ ಹದಿನೈದನೆಯ ದಿನದಲ್ಲಿ ವಿಶ್ರಮಿಸಿಕೊಂಡು ಆ ದಿನವನ್ನು ಉತ್ಸವಭೋಜನ ದಿನವನ್ನಾಗಿ ಆಚರಿಸಿದರು. BSB BSB: The Jews in Susa, however, had assembled on the thirteenth and the fourteenth days of the month. So they rested on the fifteenth day, making it a day of feasting and joy.
19 ULB ಆದುದರಿಂದ ಪೌಳಿಗೋಡೆ ಇಲ್ಲದ ಹಳ್ಳಿಪಳ್ಳಿಯ ಯೆಹೂದ್ಯರು ಫಾಲ್ಗುಣಮಾಸದ ಹದಿನಾಲ್ಕನೆಯ ದಿನವನ್ನೂ ನಗರಗಳ ಯೆಹೂದ್ಯರು ಹದಿನೈದನೆಯ ದಿನವನ್ನೂ ಶುಭದಿನವೆಂದು ಆಚರಿಸಿ, ಉತ್ಸವಭೋಜನಮಾಡಿ ಒಬ್ಬರಿಗೊಬ್ಬರು ಭೋಜನ ಪದಾರ್ಥಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. BSB BSB: This is why the rural Jews, who live in the villages, observe the fourteenth day of the month of Adar as a day of joy and feasting. It is a holiday for sending gifts to one another.
20 ULB ಮೊರ್ದಕೈಯು ಸಮೀಪದಲ್ಲಿಯೂ ದೂರದಲ್ಲಿಯೂ ಇದ್ದ ಅಹಷ್ವೇರೋಷನ ಎಲ್ಲಾ ಸಂಸ್ಥಾನಗಳ ಯೆಹೂದ್ಯರಿಗೆ ಪತ್ರಗಳ ಮುಖಾಂತರ ತಿಳಿಯಪಡಿಸಿದ ಸಂಗತಿಗಳು: BSB BSB: Mordecai recorded these events and sent letters to all the Jews in all the provinces of King Xerxes, both near and far,
21 ULB ಪ್ರತಿವರ್ಷವೂ ಫಾಲ್ಗುಣಮಾಸದ ಹದಿನಾಲ್ಕನೆಯ ಮತ್ತು ಹದಿನೈದನೆಯ ದಿನಗಳನ್ನು ಉತ್ಸವದಿನಗಳನ್ನಾಗಿ ಆಚರಿಸುವುದು ಶಾಶ್ವತನಿಯಮ ಎಂದೆಣಿಸಬೇಕು. BSB BSB: to establish among them an annual celebration on the fourteenth and fifteenth days of the month of Adar
22 ULB ಆ ದಿನಗಳಲ್ಲಿ ಯೆಹೂದ್ಯರಿಗೆ ಶತ್ರುಪೀಡೆ ತಪ್ಪಿ ವಿಶ್ರಾಂತಿ ಉಂಟಾಯಿತು. ಆ ತಿಂಗಳಿನಲ್ಲಿ ಸಂತಾಪವು ಪರಿಹಾರವಾಗಿ ಅವರಿಗೆ ಸಂತೋಷವುಂಟಾಯಿತು; ದುಃಖವು ಹೋಗಿ ಸುಖಕಾಲವು ಬಂದಿತು. ಆದುದರಿಂದ ಅವರು ಆ ದಿನಗಳಲ್ಲಿ ಉತ್ಸವಭೋಜನ ಮಾಡಿ ಒಬ್ಬರಿಗೊಬ್ಬರು ಭೋಜನ ಪದಾರ್ಥಗಳನ್ನು ವಿನಿಮಯ ಮಾಡಿಕೊಂಡು ಬಡವರಿಗೆ ದಾನಧರ್ಮ ಮಾಡಬೇಕು. BSB BSB: as the days on which the Jews gained rest from their enemies and the month in which their sorrow turned to joy and their mourning into a holiday. He wrote that these were to be days of feasting and joy, of sending gifts to one another and to the poor.
23 ULB ಅದರಂತೆ ಯೆಹೂದ್ಯರು ಮೊರ್ದೆಕೈಯ ಪತ್ರದಲ್ಲಿ ನಿರೂಪಿತವಾದದ್ದನ್ನು ಅಂಗೀಕರಿಸಿ, ಆ ವರ್ಷದಲ್ಲಿ ನಡೆದ ಉತ್ಸವವು ತಮ್ಮಲ್ಲಿ ವಾರ್ಷಿಕೋತ್ಸವವಾಗಿ ಆಚರಿಸಬೇಕೆಂದು ಗೊತ್ತುಮಾಡಿಕೊಂಡರು. BSB BSB: So the Jews agreed to continue the custom they had started, as Mordecai had written to them.
24 ULB ಎಲ್ಲಾ ಯೆಹೂದ್ಯರನ್ನು ದ್ವೇಷಿಸುತ್ತಿದ್ದ ಅಗಾಗನ ವಂಶದವನೂ ಹಮ್ಮೆದಾತನ ಮಗನೂ ಆದ ಹಾಮಾನನು ಯೆಹೂದ್ಯರನ್ನು ಸಂಹರಿಸಬೇಕೆಂದು ನಿರ್ಣಯಿಸಿಕೊಂಡು ಅವರನ್ನು ತಳಮಳಗೊಳಿಸಿ ಹಾಳುಮಾಡುವುದರ ವಿಷಯವಾಗಿ ಪೂರ್ ಅಂದರೆ ಚೀಟನ್ನು ಹಾಕಿಸಿದನಲ್ಲಾ. BSB BSB: For Haman son of Hammedatha, the Agagite, the enemy of all the Jews, had plotted against the Jews to destroy them and had cast the Pur (that is, the lot) to crush and destroy them.
25 ULB ಇದು ಅರಸನ ಮುಂದೆ ಬಂದಾಗ ಅವನು, <<ಹಾಮಾನನು ಯೆಹೂದ್ಯರಿಗೆ ವಿರುದ್ಧವಾಗಿ ಕಲ್ಪಿಸಿದ ಕುತಂತ್ರವು ಅವನ ತಲೆಯ ಮೇಲೆಯೇ ಬರಲಿ; ಅವನನ್ನೂ ಅವನ ಮಕ್ಕಳನ್ನೂ ಗಲ್ಲಿಗೆ ಹಾಕಬೇಕು>> ಎಂದು ಪತ್ರದ ಮೂಲಕ ಅಪ್ಪಣೆಮಾಡಿದನಷ್ಟೆ. BSB BSB: But when it came before the king, he commanded by letter that the wicked scheme which Haman had devised against the Jews should come back upon his own head, and that he and his sons should be hanged on the gallows.
26 ULB ಆ <<ಪೂರ್>> ಎಂಬ ಶಬ್ದದ ಆಧಾರದಿಂದ ಆ ದಿನಗಳಿಗೆ <<ಪೂರೀಮ್>> ಎಂದು ಹೆಸರಾಯಿತು. BSB BSB: Therefore these days are called Purim, from the word Pur. Because of all the instructions in this letter, and because of all they had seen and experienced,
27 ULB ಯೆಹೂದ್ಯರು ಆ ಪತ್ರದ ಮಾತುಗಳನ್ನೂ ಅವುಗಳ ಸಂಬಂಧವಾಗಿ ತಾವೇ ಅನುಭವಿಸಿದ್ದನ್ನೂ, ತಮಗೆ ಸಂಭವಿಸಿದ್ದನ್ನೂ ಮನಸ್ಸಿಗೆ ತೆಗೆದುಕೊಂಡು, BSB BSB: the Jews bound themselves to establish the custom that they and their descendants and all who join them should not fail to celebrate these two days at the appointed time each and every year, according to their regulation.
28 ULB ಪ್ರತಿವರ್ಷವೂ ಆ ಎರಡು ದಿನಗಳನ್ನು ಅವುಗಳ ಕುರಿತಾದ ಶಾಸನದ ಪ್ರಕಾರ ನೇಮಿತವಾದ ಕಾಲದಲ್ಲಿ ಆಚರಿಸುವುದು ತಮ್ಮೊಂದಿಗೆ ಸೇರಿಕೊಳ್ಳುವವರಲ್ಲಿಯೂ ಮೀರಬಾರದ ಪದ್ಧತಿ ನಿಯಮಗಳಾಗಬೇಕೆಂದೂ ಯುಗಯುಗಾಂತರಗಳಲ್ಲಿ ಎಲ್ಲಾ ಗೋತ್ರ ಸಂಸ್ಥಾನ ನಗರಗಳವರು ಈ ಪೂರೀಮ್ ಹಬ್ಬದ ಆಚರಣೆ ಯೆಹೂದ್ಯರಲ್ಲಿ ಎಂದೂ ನಿಂತುಹೋಗಬಾರದು. ಅದರ ಜ್ಞಾಪಕವು ಅವರ ಸಂತಾನದವರಲ್ಲಿ ಅಳಿದುಹೋಗಲೇಬಾರದು ಎಂದೂ ಗೊತ್ತುಮಾಡಿಕೊಂಡರು. BSB BSB: These days should be remembered and celebrated by every generation, family, province, and city, so that these days of Purim should not fail to be observed among the Jews, nor should the memory of them fade from their descendants.
29 ULB ಇದಲ್ಲದೆ ಅಬೀಹೈಲನ ಮಗಳಾದ ಎಸ್ತೇರ್ ರಾಣಿಯು ಅಧಿಕಾರಯುಕ್ತಳಾಗಿ ಪೂರೀಮ್ ಸಂಬಂಧವಾದ ಆ ಎರಡನೆಯ ಶಾಸನವನ್ನು ದೃಢಪಡಿಸುವುದಕ್ಕೋಸ್ಕರ ಯೆಹೂದ್ಯನಾದ ಮೊರ್ದೆಕೈಯ ಸಹಾಯದಿಂದ ಪತ್ರಗಳನ್ನು ಬರೆದಳು. BSB BSB: So Queen Esther daughter of Abihail, along with Mordecai the Jew, wrote with full authority to confirm this second letter concerning Purim.
30 ULB ಅವನು ಅಹಷ್ವೇರೋಷನ ರಾಜ್ಯದ ನೂರಿಪ್ಪತ್ತೇಳು ಸಂಸ್ಥಾನಗಳಲ್ಲಿದ್ದ ಯೆಹೂದ್ಯರೆಲ್ಲರಿಗೂ ಪತ್ರವನ್ನು ಕಳುಹಿಸಿದನು. BSB BSB: And Mordecai sent letters with words of peace and truth to all the Jews in the 127 provinces of the kingdom of Xerxes,
31 ULB ಆಕೆಯು ದಯಾಸತ್ಯತೆಗಳುಳ್ಳ ಮಾತುಗಳಿಂದ ಆ ಪತ್ರಗಳಲ್ಲಿ, <<ಯೆಹೂದ್ಯರು ತಮ್ಮಲ್ಲಿಯೂ ಮತ್ತು ತಮ್ಮ ಸಂತಾನದವರಲ್ಲಿಯೂ ಉಪವಾಸ ಮತ್ತು ಪ್ರಲಾಪ ದಿನಗಳನ್ನು ನೆನಪು ಮಾಡಿಕೊಳ್ಳುವುದಕ್ಕಾಗಿ ತಾವೇ ಗೊತ್ತುಮಾಡಿಕೊಂಡ ಪ್ರಕಾರ ಈ ಪೂರೀಮ್ ದಿನಗಳನ್ನೂ ನನ್ನ ಮತ್ತು ಯೆಹೂದ್ಯನಾದ ಮೊರ್ದೆಕೈಯ ನಿರೂಪದಂತೆ ಪ್ರತಿವರ್ಷ ತಪ್ಪದೆ ನೇಮಿತವಾದ ಕಾಲದಲ್ಲಿ ಆಚರಿಸಬೇಕು>> ಎಂದು ಬರೆದಿದ್ದಳು. BSB BSB: in order to confirm these days of Purim at their appointed time, just as Mordecai the Jew and Queen Esther had established them and had committed themselves and their descendants to the times of fasting and lamentation.
32 ULB ಎಸ್ತೇರಳ ಆ ಅಪ್ಪಣೆ ನಿರೂಪ ಪೂರೀಮ್ ಹಬ್ಬವನ್ನು ಸ್ಥಾಪಿಸಿತು. ಆ ನಿರೂಪವು ಅಪ್ಪಣೆಯು ಗ್ರಂಥದಲ್ಲಿ ದಾಖಲಿಸಲ್ಪಪಟ್ಟಿತು. BSB BSB: So Esther’s decree confirmed these regulations about Purim, which were written into the record.
Select verses for actions: Enter goes to them and Escape comes back.