1 ULB ಮೋಶೆಯು ಬೆಟ್ಟದಿಂದ ಇಳಿದು ಬರುವುದರಲ್ಲಿ ತಡವಾದುದನ್ನು ಇಸ್ರಾಯೇಲರು ನೋಡಿ, ಆರೋನನ ಬಳಿಗೆ ಒಟ್ಟಾಗಿ ಸೇರಿ ಬಂದು ಆತನಿಗೆ, <<ಏಳು, ನಮ್ಮನ್ನು ಮುನ್ನಡೆಸಿಕೊಂಡು ಹೋಗುವುದಕ್ಕೆ ನಮಗೊಬ್ಬ ದೇವರನ್ನು ಮಾಡಿಕೊಡು ಏಕೆಂದರೆ ಐಗುಪ್ತದೇಶದಿಂದ ನಮ್ಮನ್ನು ಕರೆದುಕೊಂಡು ಬಂದ ಆ ಮೋಶೆಯು ಏನಾದನೋ ಗೊತ್ತಿಲ್ಲ>> ಎಂದು ಹೇಳಿದರು. BSB BSB: Now when the people saw that Moses was delayed in coming down from the mountain, they gathered around Aaron and said, “Come, make us gods who will go before us. As for this Moses who brought us up out of the land of Egypt, we do not know what has happened to him!”
2 ULB ಅದಕ್ಕೆ ಆರೋನನು ಅವರಿಗೆ, <<ನಿಮ್ಮ ಹೆಂಡತಿಯರ ಹಾಗು ಗಂಡುಹೆಣ್ಣು ಮಕ್ಕಳ ಕಿವಿಯಲ್ಲಿ ಹಾಕಿಕೊಂಡಿರುವ ಚಿನ್ನದ ಓಲೆಗಳನ್ನು ಬಿಚ್ಚಿ ನನಗೆ ಒಪ್ಪಿಸಿರಿ>> ಎಂದು ಹೇಳಿದನು. BSB BSB: So Aaron told them, “Take off the gold earrings that are on your wives and sons and daughters, and bring them to me.”
3 ULB ಅವರೆಲ್ಲರೂ ತಮ್ಮ ಕಿವಿಗಳಲ್ಲಿದ್ದ ಚಿನ್ನದ ಓಲೆಗಳನ್ನು ಬಿಚ್ಚಿ ಆರೋನನ ಬಳಿಗೆ ತಂದು ಕೊಟ್ಟರು. BSB BSB: Then all the people took off their gold earrings and brought them to Aaron.
4 ULB ಅವನು ಆ ಚಿನ್ನವನ್ನು ತನ್ನ ವಶಕ್ಕೆ ತೆಗೆದುಕೊಂಡು ಹೋರಿಕರುವಿನ ಆಕಾರವನ್ನು ಉಳಿಯಿಂದ ರೂಪಿಸಿ ಎರಕ ಹೊಯ್ಯಿಸಿದನು. ಆಗ ಅವರು <<ಇಸ್ರಾಯೇಲರೇ ನೋಡಿರಿ, ಇದೇ ನಿಮ್ಮನ್ನು ಐಗುಪ್ತದೇಶದಿಂದ ಕರೆದುಕೊಂಡು ಬಂದ ದೇವರು>> ಎಂದು ಹೇಳಿದರು. BSB BSB: He took the gold from their hands, and with an engraving tool he fashioned it into a molten calf. And they said, “These, O Israel, are your gods, who brought you up out of the land of Egypt!”
5 ULB ಆರೋನನು ಅದನ್ನು ನೋಡಿದಾಗ ಹೋರಿಕರುವಿಗೆ ಎದುರಾಗಿ ಒಂದು ಯಜ್ಞವೇದಿಯನ್ನು ಕಟ್ಟಿಸಿ, <<ನಾಳೆ ಯೆಹೋವನಿಗೆ ಹಬ್ಬವಾಗಬೇಕು>> ಎಂದು ಪ್ರಕಟಿಸಿದನು. BSB BSB: When Aaron saw this, he built an altar before the calf and proclaimed: “Tomorrow shall be a feast to the LORD.”
6 ULB ಆದುದರಿಂದ ಮರುದಿನದಲ್ಲಿ ಜನರು ಬೆಳಿಗ್ಗೆ ಎದ್ದು ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸಿದರು. ಆನಂತರ ಜನರು ತಿನ್ನುವುದಕ್ಕೂ ಕುಡಿಯುವುದಕ್ಕೂ ಕುಳಿತುಕೊಂಡರು. ಆಮೇಲೆ ಕುಣಿದಾಡಲು ಎದ್ದರು. BSB BSB: So the next day they arose, offered burnt offerings, and presented peace offerings. And the people sat down to eat and drink and got up to indulge in revelry.
7 ULB ಹೀಗಿರಲಾಗಿ ಯೆಹೋವನು ಮೋಶೆಗೆ, <<ನೀನು ಬೆಟ್ಟದಿಂದ ಇಳಿದುಹೋಗು ಐಗುಪ್ತದೇಶದಿಂದ ನೀನು ಕರೆದುಕೊಂಡು ಬಂದ ನಿನ್ನ ಜನರು ಕೆಟ್ಟುಹೋದರು. BSB BSB: Then the LORD said to Moses, “Go down at once, for your people, whom you brought up out of the land of Egypt, have corrupted themselves.
8 ULB ನಾನು ಅವರಿಗೆ ಅಜ್ಞಾಪಿಸಿದ ಮಾರ್ಗವನ್ನು ಅವರು ಬೇಗನೇ ಬಿಟ್ಟು ಹೋಗಿ ತಮಗೆ ಎರಕ ಹೊಯ್ದ ಹೋರಿಕರುವನ್ನು ಮಾಡಿಸಿಕೊಂಡು ಅದಕ್ಕೆ ಅಡ್ಡಬಿದ್ದು ಯಜ್ಞಗಳನ್ನು ಅರ್ಪಿಸಿ, <ಇಸ್ರಾಯೇಲ್ಯರೇ ನೋಡಿರಿ ಇದೇ ನಿಮ್ಮನ್ನು ಐಗುಪ್ತದೇಶದಿಂದ ಕರೆದುಕೊಂಡು ಬಂದ ದೇವರು ಎಂದು ಹೇಳಿಕೊಳ್ಳುತ್ತಿದ್ದಾರೆ>>> ಎಂದು ಹೇಳಿದನು. BSB BSB: How quickly they have turned aside from the way that I commanded them! They have made for themselves a molten calf and have bowed down to it. They have sacrificed to it and said, ‘These, O Israel, are your gods, who brought you up out of the land of Egypt.’”
9 ULB ಅದಲ್ಲದೆ ಯೆಹೋವನು ಮೋಶೆಗೆ, <<ಈ ಜನರ ಸ್ವಭಾವವನ್ನು ನಾನು ನೋಡಿದ್ದೇನೆ. ಇವರು ಮೊಂಡುತನವುಳ್ಳ ಜನರಾಗಿದ್ದಾರೆ BSB BSB: The LORD also said to Moses, “I have seen this people, and they are indeed a stiff-necked people.
10 ULB ಆದಕಾರಣ ನೀನು ನನ್ನನ್ನು ತಡೆಯಬೇಡ. ನನ್ನ ಕೋಪಾಗ್ನಿ ಉರಿಯಲಿ, ಅವರನ್ನು ಭಸ್ಮಮಾಡಿಬಿಡುವೆನು. ತರುವಾಯ ನಿನ್ನಿಂದಲೇ ಒಂದು ಮಹಾ ಜನಾಂಗವನ್ನು ಉಂಟುಮಾಡುವೆನು>> ಎಂದು ಹೇಳಿದನು. BSB BSB: Now leave Me alone, so that My anger may burn against them and consume them. Then I will make you into a great nation.”
11 ULB ಆಗ ಮೋಶೆ ತನ್ನ ದೇವರಾದ ಯೆಹೋವನನ್ನು ಬೇಡಿಕೊಂಡು, <<ಯೆಹೋವನೇ ನೀನು ಮಹಾ ಶಕ್ತಿಯಿಂದಲೂ, ಭುಜಬಲದಿಂದಲೂ ಐಗುಪ್ತ ದೇಶದಿಂದ ಹೊರಗೆ ಕರೆತಂದ ನಿನ್ನ ಪ್ರಜೆಗಳ ಮೇಲೆ ಕೋಪದಿಂದುರಿಯುವುದೇತಕೆ? BSB BSB: But Moses sought the favor of the LORD his God, saying, “O LORD, why does Your anger burn against Your people, whom You brought out of the land of Egypt with great power and a mighty hand?
12 ULB ಐಗುಪ್ತ್ಯರು ನಿನ್ನ ವಿಷಯದಲ್ಲಿ, <ಯೆಹೋವನು ಕೇಡು ಮಾಡಬೇಕೆಂಬ ಅಭಿಪ್ರಾಯದಿಂದಲೇ ಇಸ್ರಾಯೇಲರನ್ನು ಇಲ್ಲಿಂದ ಕರೆದುಕೊಂಡು ಹೋದನಲ್ಲಾ. ಅವರನ್ನು ಬೆಟ್ಟಗಳಲ್ಲಿ ಸಾಯಿಸಲಿಕ್ಕೂ ಭೂಮಿಯಿಂದ ನಿರ್ಮೂಲ ಮಾಡುವುದಕ್ಕೂ ಅವರನ್ನು ಕರೆದುಕೊಂಡು ಹೋದನೆಂದು ಹೇಳಿಕೊಳ್ಳುವುದೇತಕ್ಕೆ?> ನೀನು ರೋಷಾಗ್ನಿಯನ್ನು ಬಿಟ್ಟು ನಿನ್ನ ಪ್ರಜೆಗಳಿಗೆ ಕೆಡುಕನ್ನು ಮಾಡದೆ ಮನಸ್ಸನ್ನು ಬದಲು ಮಾಡಿಕೋ. BSB BSB: Why should the Egyptians declare, ‘He brought them out with evil intent, to kill them in the mountains and wipe them from the face of the earth’? Turn from Your fierce anger and relent from doing harm to Your people.
13 ULB ನಿನ್ನ ಸೇವಕರಾದ ಅಬ್ರಹಾಮ್, ಇಸಾಕ್ ಹಾಗು ಯಾಕೋಬರನ್ನು ನೆನಪಿಗೆ ತಂದುಕೋ. ನೀನು ನಿನ್ನ ಜೀವದಾಣೆ ಪ್ರಮಾಣ ಮಾಡಿ ಅವರಿಗೆ, <ನಾನು ನಿಮ್ಮ ಸಂತತಿಯನ್ನು ಹೆಚ್ಚಿಸಿ ಆಕಾಶದ ನಕ್ಷತ್ರಗಳಷ್ಟು ಅಸಂಖ್ಯವಾಗಿ ಈ ಪ್ರದೇಶವನ್ನೆಲ್ಲಾ ನಿಮ್ಮ ಸಂತತಿಯವರಿಗೆ ಕೊಡುವೆನೆಂದೂ ಇಸ್ರಾಯೇಲರು ಈ ದೇಶವನ್ನು ಶಾಶ್ವತವಾಗಿ ಸ್ವಾಧೀನ ಮಾಡಿಕೊಳ್ಳುವರೆಂದೂ ಮಾತುಕೊಡಲಿಲ್ಲವೇ>>> ಅಂದನು. BSB BSB: Remember Your servants Abraham, Isaac, and Israel, to whom You swore by Your very self when You declared, ‘I will make your descendants as numerous as the stars in the sky, and I will give your descendants all this land that I have promised, and it shall be their inheritance forever.’”
14 ULB ಆಗ ಯೆಹೋವನು ತನ್ನ ಪ್ರಜೆಗಳಿಗೆ ಮಾಡುವೆನೆಂದು ತಾನು ಹೇಳಿದ ಕೇಡಿನ ವಿಷಯದಲ್ಲಿ ಮನಸ್ಸನ್ನು ಬದಲಾಯಿಸಿಕೊಂಡನು. BSB BSB: So the LORD relented from the calamity He had threatened to bring on His people.
15 ULB ಆಜ್ಞಾಶಾಸನಗಳಾದ ಆ ಎರಡು ಕಲ್ಲಿನ ಹಲಿಗೆಗಳನ್ನು ಮೋಶೆಯು ಕೈಯಲ್ಲಿ ಹಿಡಿದುಕೊಂಡು ಬೆಟ್ಟದಿಂದ ಇಳಿದು ಬಂದನು. ಆ ಹಲಿಗೆಗಳ ಎರಡು ಪಕ್ಕಗಳಲ್ಲಿಯೂ ಅಕ್ಷರಗಳು ಬರೆದಿದ್ದವು. ಈ ಕಡೆಯೂ ಆ ಕಡೆಯೂ ಬರಹವಿತ್ತು. BSB BSB: Then Moses turned and went down the mountain with the two tablets of the Testimony in his hands. They were inscribed on both sides, front and back.
16 ULB ಆ ಶಿಲಾಶಾಸನಗಳು ದೇವರ ಕೆಲಸವೇ ಆಗಿದ್ದು, ಅವುಗಳಲ್ಲಿ ಕೆತ್ತಿದ ಅಕ್ಷರಗಳು ದೇವರೇ ಬರೆದದ್ದಾಗಿತ್ತು. BSB BSB: The tablets were the work of God, and the writing was the writing of God, engraved on the tablets.
17 ULB ಇಸ್ರಾಯೇಲರು ಉತ್ಸಾಹದಿಂದ ಕೂಗಾಡುತ್ತಾ ಇರಲಾಗಿ ಯೆಹೋಶುವನು ಆ ಶಬ್ದವನ್ನು ಕೇಳಿ, <<ಪಾಳೆಯದ ಕಡೆಯಿಂದ ಯುದ್ಧಧ್ವನಿ ಕೇಳಿಸುತ್ತದೆ>> ಎಂದು ಮೋಶೆಗೆ ಹೇಳಿದನು. BSB BSB: When Joshua heard the sound of the people shouting, he said to Moses, “The sound of war is in the camp.”
18 ULB ಅದಕ್ಕವನು, <<ನನಗೆ ಕೇಳಿಸುವುದು ಜಯ ಧ್ವನಿಯೂ ಅಲ್ಲ, ವಿಜಯಗೀತೆಯೂ ಅಲ್ಲ ಸೋತು ಗೋಳಾಡುವವರ ಧ್ವನಿಯೂ ಅಲ್ಲ, ಗಾನಮಾಡುವವರ ಉಲ್ಲಾಸದ ಧ್ವನಿಯೇ ಆಗಿದೆ>> ಅಂದನು. BSB BSB: But Moses replied: “It is neither the cry of victory nor the cry of defeat; I hear the sound of singing!”
19 ULB ಮೋಶೆಯು ಪಾಳೆಯದ ಹತ್ತಿರಕ್ಕೆ ಬಂದು ಆ ಹೋರಿಕರುವನ್ನೂ ಮತ್ತು ಜನರು ಕುಣಿದಾಡುವುದನ್ನೂ ಕಂಡಾಗ ಬಹು ಕೋಪಗೊಂಡು ಕೈಯಲ್ಲಿದ್ದ ಶಿಲಾಶಾಸನಗಳನ್ನು ಬೆಟ್ಟದ ತಗ್ಗಿನಲ್ಲಿ ನೆಲಕ್ಕೆ ಹಾಕಿ ಒಡೆದುಬಿಟ್ಟನು. BSB BSB: As Moses approached the camp and saw the calf and the dancing, he burned with anger and threw the tablets out of his hands, shattering them at the base of the mountain.
20 ULB ಜನರು ಮಾಡಿಸಿಕೊಂಡಿದ್ದ ಹೋರಿಕರುವನ್ನು ಅವನು ಬೆಂಕಿಯಿಂದ ಸುಟ್ಟು ಅರೆದು ಪುಡಿ ಪುಡಿ ಮಾಡಿ ನೀರಿನಲ್ಲಿ ಕಲಸಿ ಇಸ್ರಾಯೇಲರಿಗೆ ಆ ನೀರನ್ನು ಕುಡಿಸಿದನು. BSB BSB: Then he took the calf they had made, burned it in the fire, ground it to powder, and scattered the powder over the face of the water. Then he forced the Israelites to drink it.
21 ULB ಆಗ ಮೋಶೆ ಆರೋನನನ್ನು ಕುರಿತು, <<ನೀನು ಈ ಜನರಿಂದ ಮಹಾ ಅಪರಾಧವನ್ನು ಮಾಡಿಸಿದಿಯಲ್ಲಾ ಹೀಗೆ ಮಾಡಿಸುವುದಕ್ಕೆ ಇವರು ನಿನಗೇನು ಮಾಡಿದರು?>> ಎಂದು ವಿಚಾರಿಸಲು, BSB BSB: “What did this people do to you,” Moses asked Aaron, “that you have led them into so great a sin?”
22 ULB ಆರೋನನು, <<ಸ್ವಾಮಿಯವರು, ರೋಷಗೊಳ್ಳಬಾರದು ಈ ಜನರು ದುಷ್ಟಸ್ವಭಾದವರು, ಹಠಮಾರಿಗಳು ಎಂಬುದು ನಿನಗೆ ಗೊತ್ತಿಲ್ಲವೇ? BSB BSB: “Do not be enraged, my lord,” Aaron replied. “You yourself know that the people are intent on evil.
23 ULB ಅವರು ನನ್ನ ಬಳಿಗೆ ಬಂದು, <ನಮ್ಮನ್ನು ಮುನ್ನಡೆಸಿಕೊಂಡು ಹೋಗುವುದಕ್ಕೆ ಒಬ್ಬ ದೇವರನ್ನು ಮಾಡಿಸಿಕೊಡು, ಐಗುಪ್ತ ದೇಶದಿಂದ ನಮ್ಮನ್ನು ಕರೆದುಕೊಂಡು ಬಂದ ಮೋಶೆಗೆ ಏನಾಯಿತೋ ಗೊತ್ತಿಲ್ಲ> ಅಂದರು. BSB BSB: They told me, ‘Make us gods who will go before us. As for this Moses who brought us up out of the land of Egypt, we do not know what has happened to him!’
24 ULB ಅದಕ್ಕೆ ನಾನು <ಯಾರಲ್ಲಿ ಚಿನ್ನದ ಒಡವೆಯಿದೆಯೋ ಅವರೆಲ್ಲರೂ ಅದನ್ನು ಬಿಚ್ಚಿ ನನಗೆ ಕೊಡಬೇಕು> ಅಂದೆನು. ಅವರು ಹಾಗೆ ಕೊಡಲಾಗಿ ನಾನು ಆ ಚಿನ್ನವನ್ನು ಬೆಂಕಿಯಲ್ಲಿ ಹಾಕಿದಾಗ ಈ ಹೋರಿಕರುವಿನ ರೂಪವು ಉಂಟಾಯಿತು>> ಅಂದನು. BSB BSB: So I said to them, ‘Whoever has gold, let him take it off,’ and they gave it to me. And when I threw it into the fire, out came this calf!”
25 ULB ಮೋಶೆಯು ಜನರು ಅಂಕೆ ತಪ್ಪಿ ತಮ್ಮ ಇಷ್ಟಬಂದಂತೆ ಮಾಡುವುದಕ್ಕೆ ಆರೋನನು ಅವರನ್ನು ಸಡಿಲವಾಗಿ ಬಿಟ್ಟಿದ್ದರಿಂದ ಅವನ ವಿರೋಧಿಗಳು ಅಪಹಾಸ್ಯಮಾಡುವುದಕ್ಕೆ ಆಸ್ಪದವಾಯಿತು, BSB BSB: Moses saw that the people were out of control, for Aaron had let them run wild and become a laughingstock to their enemies.
26 ULB ಅವರು ಕ್ರಮವಿಲ್ಲದೆ ಸ್ವೇಚ್ಛೆಯಾಗಿ ನಡೆದುಕೊಳ್ಳುವುದನ್ನು ನೋಡಿ ಪಾಳೆಯದ ಬಾಗಿಲಲ್ಲಿ ನಿಂತುಕೊಂಡು, <<ಯೆಹೋವನ ಪಕ್ಷದವರೆಲ್ಲರೂ ನನ್ನ ಬಳಿಗೆ ಬರಬೇಕು>> ಎಂದು ಹೇಳಿದನು. ಆಗ ಲೇವಿಯ ಕುಲದವರೆಲ್ಲರೂ ಅವನ ಬಳಿಗೆ ಸೇರಿ ಬಂದರು. BSB BSB: So Moses stood at the entrance to the camp and said, “Whoever is for the LORD, come to me.” And all the Levites gathered around him.
27 ULB ಮೋಶೆ ಅವರಿಗೆ, <<ಇಸ್ರಾಯೇಲರ ದೇವರಾದ ಯೆಹೋವನು ಅಪ್ಪಣೆಮಾಡುವುದೇನೆಂದರೆ, <ನಿಮ್ಮಲ್ಲಿ ಪ್ರತಿಯೊಬ್ಬನೂ ಕತ್ತಿಯನ್ನು ಸೊಂಟಕ್ಕೆ ಕಟ್ಟಿಕೊಂಡು ಪಾಳೆಯದ ಮಧ್ಯದಲ್ಲಿ ಒಂದು ಬಾಗಿಲಿನಿಂದ ಮತ್ತೊಂದು ಬಾಗಿಲಿನ ವರೆಗೂ ಹೋಗುತ್ತಾ ಬರುತ್ತಾ ತಮ್ಮತಮ್ಮ ಸಹೋದರ, ಗೆಳೆಯ ಮತ್ತು ನೆರೆಯವ ಎಂದು ಲಕ್ಷಿಸದೆ ಜನರನ್ನು ಸಂಹರಿಸಬೇಕು>>> ಎಂದು ಹೇಳಿದನು. BSB BSB: He told them, “This is what the LORD, the God of Israel, says: ‘Each of you men is to fasten his sword to his side, go back and forth through the camp from gate to gate, and slay his brother, his friend, and his neighbor.’”
28 ULB ಲೇವಿಯ ಕುಲದವರು ಮೋಶೆಯ ಆಜ್ಞೆಯ ಪ್ರಕಾರವೇ ಮಾಡಿದರು. ಆ ದಿನದಲ್ಲಿ ಜನರೊಳಗೆ ಹೆಚ್ಚು ಕಡಿಮೆ ಮೂರು ಸಾವಿರ ಮಂದಿ ಹತರಾದರು. BSB BSB: The Levites did as Moses commanded, and that day about three thousand of the people fell dead.
29 ULB ಮೋಶೆಯು ಲೇವಿಯರಿಗೆ, <<ಈ ಹೊತ್ತು ನಿಮ್ಮಲ್ಲಿ ಪ್ರತಿಯೊಬ್ಬನು ಮಗನನ್ನಾದರೂ ಸಹೋದರರನ್ನಾದರೂ ಲಕ್ಷ್ಯಕ್ಕೆ ತೆಗೆದುಕೊಳ್ಳದೇ ನಿಮ್ಮನ್ನು ಯೆಹೋವನ ಸೇವೆಗೆ ಪ್ರತಿಷ್ಠಿಸಿಕೊಂಡಿದ್ದೀರಿ. ಆದುದರಿಂದ ಆತನು ಈ ದಿನ ನಿಮ್ಮನ್ನು ಆಶೀರ್ವದಿಸುವನು>> ಎಂದು ಹೇಳಿದನು. BSB BSB: Afterward, Moses said, “Today you have been ordained for service to the LORD, since each man went against his son and his brother; so the LORD has bestowed a blessing on you this day.”
30 ULB ಮರುದಿನದಲ್ಲಿ ಮೋಶೆಯು ಜನರಿಗೆ, <<ನೀವು ಮಹಾ ಪಾಪವನ್ನು ಮಾಡಿರುವಿರಿ. ಆದರೂ ನಾನು ಬೆಟ್ಟವನ್ನು ಹತ್ತಿ ಯೆಹೋವನ ಸನ್ನಿಧಿಗೆ ಹೋಗುವೆನು. ಒಂದು ವೇಳೆ ನೀವು ಮಾಡಿದ ಪಾಪಕೃತ್ಯಕ್ಕೆ ಪ್ರಾಯಶ್ಚಿತ್ತವನ್ನು ನಾನು ಮಾಡಬಹುದೇನೋ>> ಎಂದು ಹೇಳಿದನು. BSB BSB: The next day Moses said to the people, “You have committed a great sin. Now I will go up to the LORD; perhaps I can make atonement for your sin.”
31 ULB ಆಗ ಮೋಶೆ ಯೆಹೋವನ ಬಳಿಗೆ ತಿರುಗಿ ಹೋಗಿ, <<ಅಯ್ಯೋ! ಈ ಜನರು ಮಹಾ ಪಾಪವನ್ನು ಮಾಡಿದ್ದಾರೆ. ಚಿನ್ನದ ಹೋರಿಕರುವನ್ನು ಮಾಡಿ ದೇವರೆಂದುಕೊಂಡಿದ್ದಾರೆ. BSB BSB: So Moses returned to the LORD and said, “Oh, what a great sin these people have committed! They have made gods of gold for themselves.
32 ULB ಆದರೂ ನೀನು ಕರುಣೆಯಿಟ್ಟು ಅವರ ಪಾಪವನ್ನು ಕ್ಷಮಿಸಬೇಕು. ಇಲ್ಲವಾದರೆ ನೀನು ಬರೆದಿರುವ ಜೀವಿತರ ಪುಸ್ತಕದಿಂದ ನನ್ನ ಹೆಸರನ್ನೂ ಅಳಿಸಿಬಿಡಬೇಕೆಂದು ಕೇಳಿಕೊಳ್ಳುತ್ತೇನೆ>> ಎಂದು ಪ್ರಾರ್ಥಿಸಿದನು. BSB BSB: Yet now, if You would only forgive their sin.... But if not, please blot me out of the book that You have written.”
33 ULB ಅದಕ್ಕೆ ಯೆಹೋವನು ಮೋಶೆಗೆ, <<ಯಾರು ನನ್ನ ಮಾತನ್ನು ಮೀರಿ ಪಾಪಮಾಡಿದರೋ ಅವರ ಹೆಸರುಗಳನ್ನೇ ನನ್ನ ಬಳಿಯಲ್ಲಿರುವ ಪುಸ್ತಕದಿಂದ ನಾನು ಅಳಿಸಿಬಿಡುವೆನು. BSB BSB: The LORD replied to Moses, “Whoever has sinned against Me, I will blot out of My book.
34 ULB ನೀನು ಇಲ್ಲಿಂದ ಹೊರಟು ನಾನು ನಿನಗೆ ಹೇಳಿದ ದೇಶಕ್ಕೆ ಈ ಜನರನ್ನು ನಡೆಸಿಕೊಂಡು ಹೋಗು. ನೋಡು, ನನ್ನ ದೂತನು ನಿನ್ನ ಮುಂದೆ ನಡೆದು ಮುನ್ನಡೆಸುವನು, ಆದರೂ ನನ್ನ ನ್ಯಾಯತೀರ್ಪಿನ ದಿನದಲ್ಲಿ ನಾನು ಅವರ ಪಾಪಕ್ಕೆ ತಕ್ಕಂತೆ ಅವರನ್ನು ದಂಡಿಸುವೆನು.>> BSB BSB: Now go, lead the people to the place I described. Behold, My angel shall go before you. But on the day I settle accounts, I will punish them for their sin.”
35 ULB ಇಸ್ರಾಯೇಲರು ಆರೋನನ ಕೈಯಿಂದ ಆ ಹೋರಿಕರುವನ್ನು ಮಾಡಿಸಿಕೊಂಡಿದ್ದರಿಂದ ಯೆಹೋವನು ಅವರನ್ನು ದಂಡಿಸಿದನು. BSB BSB: And the LORD sent a plague on the people because of what they had done with the calf that Aaron had made.
Select verses for actions: Enter goes to them and Escape comes back.