1 ULB ಆ ಮೇಲೆ ದೇವರಾತ್ಮವು ನನ್ನನ್ನು ಎತ್ತಿ ಪೂರ್ವದಿಕ್ಕಿಗೆ ಅಭಿಮುಖವಾಗಿರುವ ಯೆಹೋವನ ಆಲಯದ ಮೂಡಣ ಬಾಗಿಲಿಗೆ ತಂದುಬಿಟ್ಟಿತು; ಇಗೋ, ಬಾಗಿಲ ಮುಂದೆ ಇಪ್ಪತ್ತೈದು ಜನರು ನಿಂತಿದ್ದರು; ಅವರ ಮಧ್ಯದಲ್ಲಿ ಅಜ್ಜೂರನ ಮಗನಾದ ಯಾಜನ್ಯ, ಬೆನಾಯನ ಮಗನಾದ ಪೆಲತ್ಯ ಎಂಬ ಜನನಾಯಕರನ್ನು ನಾನು ನೋಡಿದೆ. BSB BSB: Then the Spirit lifted me up and brought me to the gate of the house of the LORD that faces east. And there at the entrance of the gate were twenty-five men. Among them I saw Jaazaniah son of Azzur and Pelatiah son of Benaiah, who were leaders of the people.
2 ULB ಅಲ್ಲಿ ದೇವರು ನನಗೆ, <<ನರಪುತ್ರನೇ, ಪಟ್ಟಣದಲ್ಲಿ ಕುತಂತ್ರಗಳನ್ನು ಕಲ್ಪಿಸಿ ದುರಾಲೋಚನೆಯನ್ನು ಹೇಳಿಕೊಡುವವರು ಈ ಜನರೇ. BSB BSB: And the LORD said to me, “Son of man, these are the men who plot evil and give wicked counsel in this city.
3 ULB ಇವರು, <ಮನೆಗಳನ್ನು ಕಟ್ಟಿಕೊಳ್ಳುವ ಕಾಲವು ಬಂದಿಲ್ಲ; ಈ ಪಟ್ಟಣವು ಒಂದು ಹಂಡೆ, ನಾವು ಅದರಲ್ಲಿನ ಮಾಂಸ> ಎಂದು ಹೇಳುತ್ತಾರೆ. BSB BSB: They are saying, ‘Is not the time near to build houses? The city is the cooking pot, and we are the meat.’
4 ULB ಆದಕಾರಣ, ನರಪುತ್ರನೇ, ನೀನು ಇವರ ವಿಷಯವಾಗಿ ಅಹಿತವನ್ನು ನುಡಿ, ತಪ್ಪದೆ ನುಡಿ>> ಎಂದು ಆಜ್ಞಾಪಿಸಿದನು. BSB BSB: Therefore prophesy against them; prophesy, O son of man!”
5 ULB ಆಗ ಯೆಹೋವನ ಆತ್ಮವು ನನ್ನಲ್ಲಿ ಆವೇಶ ಉಂಟುಮಾಡಿ, ಹೀಗೆ ಸಾರಬೇಕೆಂದು ಅಪ್ಪಣೆಯಾಯಿತು. ಯೆಹೋವನು ಇಂತೆನ್ನುತ್ತಾನೆ, <<ಇಸ್ರಾಯೇಲ್ ವಂಶದವರೇ, ನೀವು ಹೀಗೆ ಮಾತನಾಡುತ್ತಿದ್ದೀರಿ, ಸರಿ; ನಿಮ್ಮ ಮನಸ್ಸಿನಲ್ಲಿ ಹುಟ್ಟಿರುವ ಆಲೋಚನೆಗಳು ನನಗೆ ಗೊತ್ತೇ ಇವೆ. BSB BSB: And the Spirit of the LORD fell upon me and told me to declare that this is what the LORD says: “That is what you are thinking, O house of Israel; and I know the thoughts that arise in your minds.
6 ULB ನೀವು ಈ ಪಟ್ಟಣದಲ್ಲಿ ನರಹತ್ಯವನ್ನು ಹೆಚ್ಚೆಚ್ಚಾಗಿ ಮಾಡಿ, ಹತರಾದವರಿಂದ ಬೀದಿಗಳನ್ನು ತುಂಬಿಸಿದ್ದೀರಿ. BSB BSB: You have multiplied those you killed in this city and filled its streets with the dead.
7 ULB <<ಆದಕಾರಣ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, <ನಿಮ್ಮ ದೋಷದಿಂದ ಹತರಾಗಿ ಪಟ್ಟಣದಲ್ಲಿ ಬಿದ್ದಿರುವ ನಿಮ್ಮವರ ಶವಗಳೇ ಹಂಡೆಯಲ್ಲಿನ ಮಾಂಸ, ಈ ಪಟ್ಟಣವೇ ಹಂಡೆ, ನಿಮ್ಮನ್ನಾದರೋ ನಾನು ಪಟ್ಟಣದೊಳಗಿಂದ ಕಿತ್ತುಹಾಕುವೆನು. BSB BSB: Therefore this is what the Lord GOD says: The slain you have laid within this city are the meat, and the city is the pot; but I will remove you from it.
8 ULB ಖಡ್ಗಕ್ಕೆ ಹೆದರಿದ ನಿಮ್ಮನ್ನೇ ಖಡ್ಗಕ್ಕೆ ಗುರಿಮಾಡುವೆನು>>> ಇದು ಕರ್ತನಾದ ಯೆಹೋವನ ನುಡಿ. BSB BSB: You fear the sword, so I will bring the sword against you, declares the Lord GOD.
9 ULB <<ನಾನು ಪಟ್ಟಣದೊಳಗಿಂದ ನಿಮ್ಮನ್ನು ಕಿತ್ತು ಅನ್ಯರ ಕೈಗೆ ಕೊಟ್ಟು ದಂಡಿಸುವೆನು. BSB BSB: I will bring you out of the city and deliver you into the hands of foreigners, and I will execute judgments against you.
10 ULB ನೀವು ಖಡ್ಗಕ್ಕೆ ತುತ್ತಾಗುವಿರಿ. ಇಸ್ರಾಯೇಲಿನ ಮೇರೆಯಲ್ಲಿ ನಿಮಗೆ ದಂಡನೆಯನ್ನು ವಿಧಿಸುವೆನು, ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವುದು. BSB BSB: You will fall by the sword, and I will judge you even to the borders of Israel. Then you will know that I am the LORD.
11 ULB ಈ ಪಟ್ಟಣವು ನಿಮಗೆ ಹಂಡೆಯಾಗುವುದಿಲ್ಲ; ನೀವು ಅದರಲ್ಲಿನ ಮಾಂಸವಾಗುವುದಿಲ್ಲ. ಇಸ್ರಾಯೇಲಿನ ಮೇರೆಯಲ್ಲಿ ನಿಮಗೆ ದಂಡನೆಯನ್ನು ವಿಧಿಸುವೆನು. BSB BSB: The city will not be a pot for you, nor will you be the meat within it. I will judge you even to the borders of Israel.
12 ULB << <ನಾನೇ ಯೆಹೋವನು> ಎಂದು ನಿಮಗೆ ಗೊತ್ತಾಗುವುದು; ನೀವು ನನ್ನ ವಿಧಿಗಳನ್ನು ಕೈಕೊಳ್ಳದೆ, ನನ್ನ ನಿಯಮಗಳನ್ನು ಅನುಸರಿಸದೆ, ನಿಮ್ಮ ಸುತ್ತಲಿನ ಜನಾಂಗಗಳ ಆಚಾರಗಳನ್ನೇ ಅನುಸರಿಸಿದ್ದರಿಂದ ಇದೆಲ್ಲಾ ಆಗುವುದು.>> BSB BSB: Then you will know that I am the LORD. For you have neither followed My statutes nor practiced My ordinances, but you have conformed to the ordinances of the nations around you.”
13 ULB ನಾನು ಈ ಮಾತನ್ನು ನುಡಿಯುತ್ತಿರುವಾಗಲೇ ಬೆನಾಯನ ಮಗನಾದ ಪೆಲತ್ಯನು ಸತ್ತುಹೋದನು. ಆಗ ನಾನು ಅಡ್ಡಬಿದ್ದು ಗಟ್ಟಿಯಾಗಿ ಕೂಗಿಕೊಂಡೆ, <<ಅಯ್ಯೋ, ಕರ್ತನಾದ ಯೆಹೋವನೇ, ಇಸ್ರಾಯೇಲಿನಲ್ಲಿ ಉಳಿದವರನ್ನು ಸಂಪೂರ್ಣವಾಗಿ ನಿರ್ಮೂಲಮಾಡುವಿಯೋ?>> ಎಂದು ಮೊರೆಯಿಟ್ಟೆನು. BSB BSB: Now as I was prophesying, Pelatiah son of Benaiah died. Then I fell facedown and cried out in a loud voice, “Oh, Lord GOD, will You bring the remnant of Israel to a complete end?”
14 ULB ಆಗ ಯೆಹೋವನು ಈ ಮಾತನ್ನು ನನಗೆ ದಯಪಾಲಿಸಿದನು, BSB BSB: Then the word of the LORD came to me, saying,
15 ULB <<ನರಪುತ್ರನೇ, ನಿನ್ನ ಸಹೋದರರು, ನಿನ್ನ ಅಣ್ಣತಮ್ಮಂದಿರು, ನಿನ್ನ ನೆಂಟರು ಅಂತು ಯೆರೂಸಲೇಮಿನವರು ಮತ್ತು ಇಸ್ರಾಯೇಲ್ ವಂಶದವರಲ್ಲಿ ಉಳಿದಿರುವವರು, <ಯೆಹೋವನ ಬಳಿಯಿಂದ ದೂರವಾಗಿ ತೊಲಗಿರಿ, ಈ ದೇಶವು ನಮಗೇ ಸ್ವತ್ತಾಗಿ ಸಿಕ್ಕಿದೆ> ಎಂದು ಹೀನೈಸಿದರೋ ಅವರೆಲ್ಲರು ಉಳಿದಿದ್ದಾರಲ್ಲಾ. BSB BSB: “Son of man, your brothers—your relatives, your fellow exiles, and the whole house of Israel—are those of whom the people of Jerusalem have said, ‘They are far away from the LORD; this land has been given to us as a possession.’
16 ULB <<ಆದಕಾರಣ ನೀನು ಹೀಗೆ ಸಾರು, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, <ನಾನು ಅವರನ್ನು ದೂರವಾಗಿ ತೊಲಗಿಸಿ, ಜನಾಂಗಗಳಲ್ಲಿ ಮತ್ತು ಅನ್ಯದೇಶದ ಜನಾಂಗಗಳಲ್ಲಿ ಚದರಿಸಿದರೂ ಅವರು ಸೇರಿರುವ ದೇಶಗಳಲ್ಲಿಯೇ ನಾನು ಸ್ವಲ್ಪ ಕಾಲದ ಮಟ್ಟಿಗೆ ಅವರಿಗೆ ಪವಿತ್ರಾಲಯವಾಗಿರುವೆನು.> BSB BSB: Therefore declare that this is what the Lord GOD says: ‘Although I sent them far away among the nations and scattered them among the countries, yet for a little while I have been a sanctuary for them in the countries to which they have gone.’
17 ULB <<ಕರ್ತನಾದ ಯೆಹೋವನು ಇಂತೆನ್ನುತ್ತಾನೆ, <ಅವರನ್ನು ಜನಾಂಗಗಳೊಳಗಿಂದ ಕೂಡಿಸುವೆನು, ಚದರಿರುವ ದೇಶಗಳಿಂದ ಅವರನ್ನು ಒಟ್ಟಿಗೆ ಬರಮಾಡಿ ಇಸ್ರಾಯೇಲ್ ದೇಶವನ್ನು ಅವರಿಗೆ ದಯಪಾಲಿಸುವೆನು.> BSB BSB: Therefore declare that this is what the Lord GOD says: ‘I will gather you from the peoples and assemble you from the countries to which you have been scattered, and I will give back to you the land of Israel.’
18 ULB ಅವರು ಅಲ್ಲಿಗೆ ಸೇರಿ ಎಲ್ಲಾ ಅಸಹ್ಯ ವಸ್ತುಗಳನ್ನೂ, ಸಮಸ್ತ ಅಸಹ್ಯ ವಿಗ್ರಹಗಳನ್ನೂ ಅಲ್ಲಿಂದ ತೆಗೆದುಹಾಕುವರು. BSB BSB: When they return to it, they will remove all its detestable things and all its abominations.
19 ULB <<ಅವರು ನನ್ನ ನಿಯಮಗಳನ್ನು ಅನುಸರಿಸಿ, ನನ್ನ ವಿಧಿಗಳನ್ನು ಕೈಕೊಂಡು ನೆರವೇರಿಸಲಿ ಎಂದು ನಾನು ಅವರಿಗೆ ಒಂದೇ ಮನಸ್ಸನ್ನು ದಯಪಾಲಿಸಿ ನೂತನ ಸ್ವಭಾವವನ್ನು ಅವರಲ್ಲಿ ಹುಟ್ಟಿಸುವೆನು. BSB BSB: And I will give them singleness of heart and put a new spirit within them; I will remove their heart of stone and give them a heart of flesh,
20 ULB ಕಲ್ಲಾದ ಹೃದಯವನ್ನು ಅವರೊಳಗಿಂದ ತೆಗೆದು ಮೃದುವಾದ ಹೃದಯವನ್ನು ಅವರಿಗೆ ಅನುಗ್ರಹಿಸುವೆನು; ಅವರು ನನಗೆ ಪ್ರಜೆಯಾಗಿರುವರು, ನಾನು ಅವರಿಗೆ ದೇವರಾಗಿರುವೆನು. BSB BSB: so that they may follow My statutes, keep My ordinances, and practice them. Then they will be My people, and I will be their God.
21 ULB ಆದರೆ ಯಾರ ಮನಸ್ಸು ತಮ್ಮ ಅಸಹ್ಯ ವಸ್ತುಗಳನ್ನೂ, ಅಸಹ್ಯ ವಿಗ್ರಹಗಳನ್ನೂ ಅನುಸರಿಸುತ್ತದೋ ಅವರ ದುರ್ನಡತೆಯನ್ನು ಅವರ ತಲೆಗೆ ಕಟ್ಟುವೆನು>> ಇದು ಕರ್ತನಾದ ಯೆಹೋವನ ನುಡಿ. BSB BSB: But as for those whose hearts pursue detestable things and abominations, I will bring their conduct down upon their own heads, declares the Lord GOD.”
22 ULB ಬಳಿಕ ಚಕ್ರಗಳ ಪಕ್ಕದಲ್ಲಿದ್ದ ಕೆರೂಬಿಗಳು ರೆಕ್ಕೆಗಳನ್ನು ಹರಡಿಕೊಂಡವು, ಇಸ್ರಾಯೇಲಿನ ದೇವರ ತೇಜಸ್ಸು ಅವುಗಳ ಮೇಲ್ಗಡೆ ನೆಲೆಸಿತ್ತು. BSB BSB: Then the cherubim, with the wheels beside them, spread their wings, and the glory of the God of Israel was above them.
23 ULB ಆಗ ಯೆಹೋವನ ತೇಜಸ್ಸು ಪಟ್ಟಣದ ಮಧ್ಯದೊಳಗಿಂದ ಏರಿ ಪಟ್ಟಣಕ್ಕೆ ಪೂರ್ವದಲ್ಲಿರುವ ಗುಡ್ಡದ ಮೇಲೆ ನಿಂತಿತು. BSB BSB: And the glory of the LORD rose up from within the city and stood over the mountain east of the city.
24 ULB ಆಮೇಲೆ ದೇವರಾತ್ಮ ಪರವಶನಾದ ನನ್ನನ್ನು ಎತ್ತಿ, ದಿವ್ಯ ದರ್ಶನದ ಮುಖಾಂತರ ಕಸ್ದೀಯರ ದೇಶದಲ್ಲಿ ಸೆರೆಯಾದವರ ಬಳಿಗೆ ಕರೆತಂದಿತು. ನನಗಾದ ದಿವ್ಯದರ್ಶನವು ಆಗ ಮಾಯವಾಯಿತು. BSB BSB: And the Spirit lifted me up and carried me back to Chaldea, to the exiles in the vision given by the Spirit of God. After the vision had gone up from me,
25 ULB ಯೆಹೋವನು ತೋರಿಸಿದ ಎಲ್ಲವುಗಳನ್ನು ಕೂಡಲೆ ಸೆರೆಯವರಿಗೆ ತಿಳಿಸಿದೆನು. BSB BSB: I told the exiles everything the LORD had shown me.
Select verses for actions: Enter goes to them and Escape comes back.