1 ULB ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು, BSB BSB: And the word of the LORD came to me, saying,
2 ULB <<ನರಪುತ್ರನೇ, ರೋಷಿನವರನ್ನೂ, ಮೆಷೆಕಿನವರನ್ನೂ, ತೂಬಲಿನವರನ್ನೂ ಆಳುವ ಮಾಗೋಗ್ ದೇಶದ ದೊರೆಯಾದ ಗೋಗನ ಕಡೆಗೆ ಮುಖಮಾಡಿ ಅವನಿಗೆ ಈ ಪ್ರವಾದನೆಯನ್ನು ನುಡಿ, BSB BSB: “Son of man, set your face against Gog of the land of Magog, the chief prince of Meshech and Tubal. Prophesy against him
3 ULB ಕರ್ತನಾದ ಯೆಹೋವನು ಇಂತೆನ್ನುತ್ತಾನೆ, <ರೋಷ್, ಮೆಷೆಕ್, ತೂಬಲ್ ಜನಾಂಗಗಳ ಪ್ರಭುವಾದ ಗೋಗನೇ, ನಾನು ನಿನಗೆ ವಿರುದ್ಧವಾಗಿದ್ದೇನೆ. BSB BSB: and declare that this is what the Lord GOD says: Behold, I am against you, O Gog, chief prince of Meshech and Tubal.
4 ULB ನಾನು ನಿನ್ನನ್ನು ಹಿಂದಕ್ಕೆ ತಿರುಗಿಸಿ, ನಿನ್ನ ದವಡೆಗಳಲ್ಲಿ ಕೊಕ್ಕೆಗಳನ್ನು ಹಾಕಿ, ನಿನ್ನ ಎಲ್ಲಾ ಸೈನ್ಯವನ್ನೂ, ಕುದರೆಗಳನ್ನೂ ಮತ್ತು ಕುದರೆ ಸವಾರರನ್ನೂ ಮುಂದೆ ತರುವೆನು. ಇವರೆಲ್ಲರೂ ನಾನಾ ತರವಾದ ಆಯುಧಗಳನ್ನು ತೊಟ್ಟಿರುವರು, ಇವರೊಂದಿಗೆ ಖೇಡ್ಯ ಮತ್ತು ಗುರಾಣಿಗಳುಳ್ಳ ಮಹಾಸಮೂಹವನ್ನು ತರುವೆನು. ಇವರೆಲ್ಲರೂ ಖಡ್ಗವನ್ನು ಹಿಡಿದಿರುವರು. BSB BSB: I will turn you around, put hooks in your jaws, and bring you out with all your army—your horses, your horsemen in full armor, and a great company armed with shields and bucklers, all brandishing their swords.
5 ULB ಅವರೊಂದಿಗೆ ಪಾರಸಿಯರು, ಕೂಷ್ಯರು, ಪೂಟ್ಯರು ಇವರೆಲ್ಲರೊಂದಿಗೆ ಗುರಾಣಿ ಮತ್ತು ಶಿರಸ್ತ್ರಾಣಗಳು ಇದ್ದವು. BSB BSB: Persia, Cush, and Put will accompany them, all with shields and helmets,
6 ULB ಉತ್ತರದಿಕ್ಕಿನ ಕಟ್ಟಕಡೆಯಿಂದ ಬಂದ ಗೋಮೆರ್ ಮತ್ತು ಸೈನ್ಯದವರನ್ನೂ, ತೋಗರ್ಮದವರನ್ನು ಮತ್ತು ಅನೇಕ ಜನರನ್ನು ನಿನ್ನೊಂದಿಗೆ ಬರಮಾಡುವೆನು. BSB BSB: as well as Gomer with all its troops, and Beth-togarmah from the far north with all its troops—the many nations with you.
7 ULB << <ಸಿದ್ಧವಾಗಿರು! ನಿನ್ನಲ್ಲಿ ಕೂಡಿಬಂದಿರುವ ಎಲ್ಲಾ ತಂಡಗಳೊಡನೆ ನಿನ್ನನ್ನು ಸಿದ್ಧಮಾಡಿಕೋ; ನೀನು ಅವರ ದಂಡ ನಾಯಕನಾಗಿರು. BSB BSB: Get ready; prepare yourself, you and all your company gathered around you; you will be their guard.
8 ULB ಬಹಳ ದಿನಗಳಾದ ಮೇಲೆ ನಾನು ನಿನ್ನನ್ನು ಕರೆಯುತ್ತೇನೆ; ಕೆಲವು ವರ್ಷಗಳ ನಂತರ ಖಡ್ಗದಿಂದ ಉಳಿದುಕೊಂಡ ದೇಶಕ್ಕೂ, ಯಾವಾಗಲೂ ಹಾಳಾಗಿದ್ದ ಇಸ್ರಾಯೇಲಿನ ಪರ್ವತಗಳ ಮೇಲೆಯೂ, ಜನಾಂಗಗಳೊಳಗಿಂದ ಕೂಡಿಸಲ್ಪಟ್ಟು ಎಲ್ಲರೂ ಭದ್ರವಾಗಿ ವಾಸಿಸುವವರ ಬಳಿಗೆ ನೀನು ಬರುವಿ. BSB BSB: After a long time you will be summoned. In the latter years you will enter a land that has recovered from war, whose people were gathered from many nations to the mountains of Israel, which had long been desolate. They had been brought out from the nations, and all now dwell securely.
9 ULB ನೀನು ಮೇಲೇರಿ ಬಿರುಗಾಳಿಯಂತೆ ಹೊರಟು ಬರುವೆ. ನಿನ್ನ ಎಲ್ಲಾ ದಂಡುಗಳೂ ಅನೇಕ ಜನರ ಸಹಿತವಾಗಿ ಕಾರ್ಮುಗಿಲಿನಂತೆ ದೇಶವನ್ನು ಮುಚ್ಚಿಬಿಡುವುದು.>>> BSB BSB: You and all your troops, and many peoples with you will go up, advancing like a thunderstorm; you will be like a cloud covering the land.
10 ULB ಕರ್ತನಾದ ಯೆಹೋವನು ಇಂತೆನ್ನುತ್ತಾನೆ, <<ಆಗ ನಿನ್ನ ಮನಸ್ಸಿನಲ್ಲಿ ಆಲೋಚನೆಗಳು ಹುಟ್ಟುವವು ಮತ್ತು ನೀನು ಕೆಟ್ಟ ಯೋಚನೆಯನ್ನು ಮಾಡುವಿ. BSB BSB: This is what the Lord GOD says: On that day, thoughts will arise in your mind, and you will devise an evil plan.
11 ULB ಆಗ ನೀನು, <ಆಹಾ, ನಾನು ಪೌಳಿಗೋಡೆಯಿಲ್ಲದ ಹಳ್ಳಿಗಳಿಂದ ತುಂಬಿದ ದೇಶವನ್ನು ನುಗ್ಗಿ, ಅಗುಳಿ, ಬಾಗಿಲು, ಗೋಡೆಗಳಿಲ್ಲದೆ ನೆಮ್ಮದಿಯಿಂದ ನಿರ್ಭಯವಾಗಿರುವವರ ಮೇಲೆ ಬೀಳುವೆನು> ಅಂದುಕೊಂಡೆ. BSB BSB: You will say, ‘I will go up against a land of unwalled villages; I will come against a quiet people who dwell securely, all of them living without walls or bars or gates—
12 ULB ಸುಲಿಗೆಯನ್ನು, ಕೊಳ್ಳೆಯನ್ನು ಹೊಡೆಯಬೇಕೆಂತಲೂ, ನಿರ್ಜನವಾಗಿದ್ದು ಜನಭರಿತವಾದ ಪ್ರದೇಶಗಳ ಮೇಲೆ ಕೈಮಾಡಬೇಕೆಂತಲೂ ಜನಾಂಗಗಳೊಳಗಿಂದ ಕೂಡಿಸಲ್ಪಟ್ಟ ಧನ ಕನಕ ಮೊದಲಾದ ಸೊತ್ತನ್ನು ಸಂಗ್ರಹಿಸಿಕೊಂಡು, ಭೂಮಿಯ ಮಧ್ಯದಲ್ಲಿ ವಾಸಿಸುವವರನ್ನು ಹತಿಸಬೇಕೆಂತಲೂ ಕುತಂತ್ರವನ್ನು ಕಲ್ಪಿಸುವಿ. BSB BSB: in order to seize the spoil and carry off the plunder, to turn a hand against the desolate places now inhabited and against a people gathered from the nations, who have acquired livestock and possessions and who live at the center of the land.’
13 ULB ಶೆಬದವರೂ, ದೆದಾನಿನವರೂ, ತಾರ್ಷೀಷಿನ ವರ್ತಕರೂ, ಅದರ ಸಿಂಹಪ್ರಾಯರೆಲ್ಲರೂ ನಿನ್ನನ್ನು ನೋಡಿ, <ನೀನು ಸೂರೆಮಾಡಲಿಕ್ಕೆ ಬಂದಿಯೋ? ಕೊಳ್ಳೆಹೊಡೆದು ಬೆಳ್ಳಿಬಂಗಾರವನ್ನು ದೋಚಿಕೊಂಡು, ಧನ ಕನಕ ಮುಂತಾದ ಸೊತ್ತನ್ನು ಅಪಹರಿಸಿ, ಅಪಾರವಾದ ಆಸ್ತಿಯನ್ನು ಸುಲಿದುಕೊಂಡು ಹೋಗಲು ನಿನ್ನ ತಂಡವನ್ನು ಕೂಡಿಸಿಕೊಂಡು ಬಂದೆಯಾ?>>> ಎಂದು ಕೇಳುವರು. BSB BSB: Sheba and Dedan and the merchants of Tarshish with all its villages will ask, ‘Have you come to capture the plunder? Have you assembled your hordes to carry away loot, to make off with silver and gold, to take cattle and goods, to seize great spoil?’
14 ULB ಹೀಗಿರಲು, <<ನರಪುತ್ರನೇ, ನೀನು ಗೋಗನಿಗೆ ಈ ಪ್ರವಾದನೆಯನ್ನು ನುಡಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, <ನನ್ನ ಜನರಾದ ಇಸ್ರಾಯೇಲರು ನೆಮ್ಮದಿಯಾಗಿ ವಾಸಿಸುವ ಕಾಲದಲ್ಲಿ ಆ ನೆಮ್ಮದಿಯು ನಿನಗೆ ಗೊತ್ತಾಗುವುದು. BSB BSB: Therefore prophesy, son of man, and tell Gog that this is what the Lord GOD says: On that day when My people Israel are dwelling securely, will you not take notice of this?
15 ULB ನೀನು ನಿನ್ನ ಸ್ಥಳವನ್ನು ಬಿಟ್ಟು, ಅಶ್ವಬಲದ ಮಹಾಸೈನ್ಯವಾಗಿ ಗುಂಪು ಕೂಡಿದ ಅನೇಕ ಜನಾಂಗಗಳೊಡನೆ ಉತ್ತರದಿಕ್ಕಿನ ಕಟ್ಟಕಡೆಯಿಂದ ಬರುವಿ. BSB BSB: And you will come from your place out of the far north—you and many peoples with you, all riding horses—a mighty horde, a huge army.
16 ULB ನನ್ನ ಜನರಾದ ಇಸ್ರಾಯೇಲರ ಮೇಲೆ ಬಿದ್ದು, ಕಾರ್ಮುಗಿಲಿನಂತೆ ದೇಶವನ್ನು ಮುಚ್ಚಿಬಿಡುವಿ; ಗೋಗನೇ, ಜನಾಂಗಗಳ ಕಣ್ಣೆದುರಿಗೆ ನಿನ್ನ ನಾಶದಿಂದ ನನ್ನ ಗೌರವವನ್ನು ಕಾಪಾಡಿಕೊಂಡು ನಾನೇ ಯೆಹೋವನೆಂದು ಜನಾಂಗಗಳಿಗೆ ಗೋಚರವಾಗುವಂತೆ ನಾನು ನಿನ್ನನ್ನು ಕಾಲಾನುಕಾಲಕ್ಕೆ ನನ್ನ ದೇಶದ ಮೇಲೆ ಬೀಳಮಾಡುವೆನು.>>> BSB BSB: You will advance against My people Israel like a cloud covering the land. It will happen in the latter days, O Gog, that I will bring you against My land, so that the nations may know Me when I show Myself holy in you before their eyes.
17 ULB ಕರ್ತನಾದ ಯೆಹೋವನು ಇಂತೆನ್ನುತ್ತಾನೆ, <<ನನ್ನ ಸೇವಕರಾದ ಇಸ್ರಾಯೇಲಿನ ಪ್ರವಾದಿಗಳು ಪುರಾತನ ಕಾಲದಲ್ಲಿ ಬಹು ವರ್ಷ ಪ್ರವಾದಿಸುತ್ತಾ, ನಾನು ಒಬ್ಬನನ್ನು ಇಸ್ರಾಯೇಲರ ಮೇಲೆ ಬೀಳ ಮಾಡುವೆನು>> ಎಂದು ಮುಂತಿಳಿಸಿದಂತೆ; ನಾನು ಅವರ ಮೂಲಕ ಮುಂತಿಳಿಸಿದವನು ನೀನೇ ಅಲ್ಲವೇ. BSB BSB: This is what the Lord GOD says: Are you the one of whom I have spoken in former days through My servants, the prophets of Israel, who in those times prophesied for years that I would bring you against them?
18 ULB ಕರ್ತನಾದ ಯೆಹೋವನು ಇಂತೆನ್ನುತ್ತಾನೆ, <<ಗೋಗನು ಇಸ್ರಾಯೇಲ್ ದೇಶದ ಮೇಲೆ ಬೀಳುವ ದಿನದಲ್ಲಿ ನಾನು ಸಿಟ್ಟಿನಿಂದ ಬುಸುಗುಟ್ಟುವೆನು. BSB BSB: Now on that day when Gog comes against the land of Israel, declares the Lord GOD, My wrath will flare up.
19 ULB ನಾನು ರೋಷದಿಂದ ಮತ್ತು ಕೋಪದಿಂದ ಉರಿಯುತ್ತಾ ಹೀಗೆ ನುಡಿದಿದ್ದೇನೆ, <ಆಹಾ, ಆ ದಿನದಲ್ಲಿ ಇಸ್ರಾಯೇಲ್ ದೇಶದೊಳಗೆ ಮಹಾಕಂಪನವಾಗುವುದು ಖಂಡಿತ. BSB BSB: In My zeal and fiery rage I proclaim that on that day there will be a great earthquake in the land of Israel.
20 ULB ಆಗ ಸಮುದ್ರದ ಮೀನುಗಳು, ಆಕಾಶದ ಪಕ್ಷಿಗಳು, ಕಾಡುಮೃಗಳು ನೆಲದಲ್ಲಿ ಹರಿದಾಡುವ ಕ್ರಿಮಿಕೀಟಗಳು, ಭೂಮಂಡಲದ ಸಕಲ ಮನುಷ್ಯರೂ ನನ್ನೆದುರಿಗೆ ನಡುಗುವವು; ಪರ್ವತಗಳು ಉರುಳಿಹೋಗುವವು, ಝರಿಗಳು ಕವಚಿಗೊಳ್ಳುವವು, ಎಲ್ಲಾ ಗೋಡೆಗಳು ನೆಲಸಮವಾಗುವವು.>>> BSB BSB: The fish of the sea, the birds of the air, the beasts of the field, every creature that crawls upon the ground, and all mankind on the face of the earth will tremble at My presence. The mountains will be thrown down, the cliffs will collapse, and every wall will fall to the ground.
21 ULB ಕರ್ತನಾದ ಯೆಹೋವನು ಇಂತೆನ್ನುತ್ತಾನೆ, <<ಖಡ್ಗವು ನನ್ನ ಪರ್ವತಗಳಲ್ಲೆಲ್ಲಾ ಗೋಗನನ್ನು ಸಂಹರಿಸಲಿ ಎಂದು ಅಪ್ಪಣೆಕೊಡುವೆನು; ಪ್ರತಿಯೊಬ್ಬ ಮನುಷ್ಯನ ಕತ್ತಿಯೂ ಅವನ ಸಹೋದರನಿಗೆ ವಿರುದ್ಧವಾಗಿರುವುದು. BSB BSB: And I will summon a sword against Gog on all My mountains, declares the Lord GOD, and every man’s sword will be against his brother.
22 ULB ನಾನು ಗೋಗನ ಸಂಗಡ ವ್ಯಾಜ್ಯಮಾಡುತ್ತಾ ಅವನನ್ನು ವ್ಯಾಧಿಗೂ, ಸಾವಿಗೂ ಗುರಿಮಾಡಿ, ನಾನು ಅವನ ಮೇಲೆಯೂ, ಅವನ ದಂಡುಗಳ ಮೇಲೆಯೂ, ಅವನೊಂದಿಗಿರುವ ಅನೇಕ ಜನಾಂಗಗಳ ಮೇಲೆಯೂ ವಿಪರೀತ ಮಳೆ, ದೊಡ್ಡ ಆನೆಕಲ್ಲು, ಬೆಂಕಿ, ಗಂಧಕ, ಇವುಗಳನ್ನು ಸುರಿಸುವೆನು. BSB BSB: I will execute judgment upon him with plague and bloodshed. I will pour out torrents of rain, hailstones, fire, and sulfur on him and on his troops and on the many nations with him.
23 ULB ಹೀಗೆ ನಾನು ನನ್ನ ಮಹಿಮೆಯನ್ನು ತೋರ್ಪಡಿಸಿ, ನನ್ನ ಗೌರವವನ್ನು ಕಾಪಾಡಿಕೊಂಡು, ಅನೇಕ ಜನಾಂಗಗಳು ನಾನೇ ಯೆಹೋವನು ಎಂದು ತಿಳಿದುಕೊಳ್ಳುವಂತೆ ಅವುಗಳ ಕಣ್ಣೆದುರಿಗೆ ವ್ಯಕ್ತವಾಗುವೆನು.>> BSB BSB: I will magnify and sanctify Myself, and I will reveal Myself in the sight of many nations. Then they will know that I am the LORD.
Select verses for actions: Enter goes to them and Escape comes back.