1 ULB ಆಗ ಭೂಲೋಕದವರೆಲ್ಲರಿಗೂ ಒಂದೇ ಭಾಷೆ; ಒಂದೇ ಮಾತು ಇತ್ತು. ಭಾಷಾಭೇದಗಳೇನೂ ಇರಲಿಲ್ಲ. BSB BSB: Now the whole world had one language and a common form of speech.
2 ULB ಜನರು ಪೂರ್ವ ದಿಕ್ಕಿಗೆ ಪ್ರಯಾಣಮಾಡುತ್ತಿರುವಾಗ ಶಿನಾರ್ ದೇಶದ ಬಯಲು ಸೀಮೆಯನ್ನು ಕಂಡು ಅಲ್ಲೇ ನೆಲೆಸಿದರು. BSB BSB: And as people journeyed eastward, they found a plain in the land of Shinar and settled there.
3 ULB <<ಅವರೆಲ್ಲರೂ ಬನ್ನಿ, ನಾವು ಇಟ್ಟಿಗೆಗಳನ್ನು ಮಾಡಿ, ಚೆನ್ನಾಗಿ ಸುಡೋಣ,>> ಎಂದು ಅವರು ಒಬ್ಬರಿಗೊಬ್ಬರು ಮಾತನಾಡಿಕೊಂಡರು. ಅವರು ಕಲ್ಲಿಗೆ ಬದಲಾಗಿ ಇಟ್ಟಿಗೆಯನ್ನು, ಸುಣ್ಣಕ್ಕೆ ಬದಲಾಗಿ ಜೇಡಿಮಣ್ಣನ್ನು ಉಪಯೋಗಿಸಿದರು. BSB BSB: And they said to one another, “Come, let us make bricks and bake them thoroughly.” So they used brick instead of stone, and tar instead of mortar.
4 ULB ಅವರು, <<ಬನ್ನಿರಿ, ಒಂದು ಪಟ್ಟಣವನ್ನು ಕಟ್ಟೋಣ, ಆಕಾಶವನ್ನು ಮುಟ್ಟುವ ಒಂದು ಗೋಪುರವನ್ನೂ ಕಟ್ಟಿ ದೊಡ್ಡ ಹೆಸರನ್ನು ಸಂಪಾದಿಸಿಕೊಳ್ಳೋಣ; ಹೀಗೆ ಮಾಡಿದರೆ ಭೂಮಿಯ ಮೇಲೆಲ್ಲಾ ಚದರಿಹೋಗುವುದಕ್ಕೆ ಆಸ್ಪದವಾಗುವುದಿಲ್ಲ>> ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. BSB BSB: “Come,” they said, “let us build for ourselves a city with a tower that reaches to the heavens, that we may make a name for ourselves and not be scattered over the face of all the earth.”
5 ULB ಮನುಷ್ಯರು ಕಟ್ಟುತ್ತಿದ್ದ ಆ ಪಟ್ಟಣವನ್ನೂ, ಗೋಪುರವನ್ನೂ ನೋಡುವುದಕ್ಕೆ ಯೆಹೋವನು ಇಳಿದು ಬಂದನು. BSB BSB: Then the LORD came down to see the city and the tower that the sons of men were building.
6 ULB ನೋಡಿದ ಮೇಲೆ ಯೆಹೋವನು, <<ಇವರು ಒಂದೇ ಜನಾಂಗ; ಇವರೆಲ್ಲರಿಗೂ ಒಂದೇ ಭಾಷೆ. ಪ್ರಾರಂಭದಲ್ಲೇ ಇವರು ಇಷ್ಟು ದೊಡ್ಡ ಯೋಜನೆಯೊಂದಿಗೆ ಒಟ್ಟಾಗಿ ಕೆಲಸ ಮಾಡಲಾರಂಭಿಸಿದ್ದಾರೆ. ಇನ್ನು ಮುಂದೆ ಇವರು ಏನು ಮಾಡಲು ಉದ್ದೇಶಿಸಿದರೂ ಇವರಿಗೆ ಯಾವುದೂ ಅಸಾಧ್ಯವಾಗುವುದಿಲ್ಲ. BSB BSB: And the LORD said, “If they have begun to do this as one people speaking the same language, then nothing they devise will be beyond them.
7 ULB ಇವರಲ್ಲಿ ಒಬ್ಬರ ಮಾತು ಒಬ್ಬರಿಗೆ ತಿಳಿಯದಂತೆ ಇವರ ಭಾಷೆಯನ್ನು ಗಲಿಬಿಲಿ ಮಾಡೋಣ ಬನ್ನಿ>> ಎಂದನು. BSB BSB: Come, let Us go down and confuse their language, so that they will not understand one another’s speech.”
8 ULB ಯೆಹೋವನು ಅದೇ ಪ್ರಕಾರ ಅವರನ್ನು ಭೂಲೋಕದಲ್ಲೆಲ್ಲಾ ಚದರಿಸಿ ಬಿಟ್ಟನು. ಅವರು ಆ ಪಟ್ಟಣ ಕಟ್ಟುವುದನ್ನು ನಿಲ್ಲಿಸಿಬಿಟ್ಟರು. BSB BSB: So the LORD scattered them from there over the face of all the earth, and they stopped building the city.
9 ULB ಸಮಸ್ತ ಲೋಕದ ಭಾಷೆಯನ್ನು ಯೆಹೋವನು ಅಲ್ಲಿ ಗಲಿಬಿಲಿ ಮಾಡಿ, ಅವರನ್ನು ಭೂಲೋಕದಲ್ಲೆಲ್ಲಾ ಚದರಿಸಿದ್ದರಿಂದ ಆ ಪಟ್ಟಣಕ್ಕೆ ಬಾಬೆಲ್ (ದೇವರ ಬಾಗಿಲು) ಎಂಬ ಹೆಸರಾಯಿತು. BSB BSB: That is why it is called Babel, for there the LORD confused the language of the whole world, and from that place the LORD scattered them over the face of all the earth.
11 ULB ಶೇಮನು ಅರ್ಪಕ್ಷದನನ್ನು ಪಡೆದ ಮೇಲೆ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಐನೂರು ವರ್ಷ ಬದುಕಿದನು. BSB BSB: And after he had become the father of Arphaxad, Shem lived 500 years and had other sons and daughters.
13 ULB ಅರ್ಪಕ್ಷದನು ಶೆಲಹನನ್ನು ಪಡೆದ ಮೇಲೆ ಗಂಡು ಹೆಣ್ಣು ಮಕ್ಕಳನ್ನು ಪಡೆದು ನಾನೂರ ಮೂರು ವರ್ಷ ಬದುಕಿದನು. BSB BSB: And after he had become the father of Shelah, Arphaxad lived 403 years and had other sons and daughters.
14 ULB ಶೆಲಹನು ಮೂವತ್ತನಾಲ್ಕು ವರ್ಷದವನಾಗಿ ಎಬರನನ್ನು ಪಡೆದನು. BSB BSB: When Shelah was 30 years old, he became the father of Eber.
15 ULB ಶೆಲಹನು ಎಬರನನ್ನು ಪಡೆದ ಮೇಲೆ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ನಾನೂರ ಮೂರು ವರ್ಷ ಬದುಕಿದನು. BSB BSB: And after he had become the father of Eber, Shelah lived 403 years and had other sons and daughters.
16 ULB ಎಬರನು ಮೂವತ್ತನಾಲ್ಕು ವರ್ಷದವನಾಗಿ ಪೆಲೆಗನನ್ನು ಪಡೆದನು. BSB BSB: When Eber was 34 years old, he became the father of Peleg.
17 ULB ಎಬರನು ಪೆಲೆಗನನ್ನು ಪಡೆದ ಮೇಲೆ ಗಂಡು ಹೆಣ್ಣು ಮಕ್ಕಳನ್ನು ಪಡೆದು ನಾನೂರ ಮೂವತ್ತು ವರ್ಷ ಬದುಕಿದನು. BSB BSB: And after he had become the father of Peleg, Eber lived 430 years and had other sons and daughters.
18 ULB ಪೆಲೆಗನು ಮೂವತ್ತು ವರ್ಷದವನಾಗಿ ರೆಗೂವನನ್ನು ಪಡೆದನು. BSB BSB: When Peleg was 30 years old, he became the father of Reu.
19 ULB ಪೆಲೆಗನು ರೆಗೂವನನ್ನು ಪಡೆದ ಮೇಲೆ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಇನ್ನೂರ ಒಂಭತ್ತು ವರ್ಷ ಬದುಕಿದನು. BSB BSB: And after he had become the father of Reu, Peleg lived 209 years and had other sons and daughters.
20 ULB ರೆಗೂವನು ಮೂವತ್ತೆರಡು ವರ್ಷದವನಾಗಿ ಸೆರೂಗನನ್ನು ಪಡೆದನು. BSB BSB: When Reu was 32 years old, he became the father of Serug.
21 ULB ಸೆರೂಗನು ರೆಗೂವನನ್ನು ಪಡೆದ ಮೇಲೆ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಇನ್ನೂರ ಏಳು ವರ್ಷ ಬದುಕಿದನು. BSB BSB: And after he had become the father of Serug, Reu lived 207 years and had other sons and daughters.
22 ULB ಸೆರೂಗನು ಮೂವತ್ತು ವರ್ಷದವನಾಗಿ ನಾಹೋರನನ್ನು ಪಡೆದನು. BSB BSB: When Serug was 30 years old, he became the father of Nahor.
23 ULB ಸೆರೂಗನು ನಾಹೋರನನ್ನು ಪಡೆದ ಮೇಲೆ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಇನ್ನೂರು ವರ್ಷ ಬದುಕಿದನು. BSB BSB: And after he had become the father of Nahor, Serug lived 200 years and had other sons and daughters.
24 ULB ನಾಹೋರನು ಇಪ್ಪತ್ತೊಂಭತ್ತು ವರ್ಷದವನಾಗಿ ತೆರಹನನ್ನು ಪಡೆದನು. BSB BSB: When Nahor was 29 years old, he became the father of Terah.
25 ULB ನಾಹೋರ್ ತೆರಹನನ್ನು ಪಡೆದ ಮೇಲೆ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ನೂರ ಹತ್ತೊಂಬತ್ತು ವರ್ಷ ಬದುಕಿದನು. BSB BSB: And after he had become the father of Terah, Nahor lived 119 years and had other sons and daughters.
26 ULB ತೆರಹನು ಎಪ್ಪತ್ತು ವರ್ಷದವನಾಗಿ ಅಬ್ರಾಮ, ನಾಹೋರ್, ಹಾರಾನ್ ಎಂಬ ಮಕ್ಕಳನ್ನು ಪಡೆದನು. BSB BSB: When Terah was 70 years old, he became the father of Abram, Nahor, and Haran.
27 ULB ತೆರಹನ ವಂಶದವರ ಚರಿತ್ರೆಯು: ತೆರಹನು ಅಬ್ರಾಮ, ನಾಹೋರ್, ಹಾರಾನ್ ಎಂಬುವರನ್ನು ಪಡೆದನು. ಹಾರಾನನು ಲೋಟನನ್ನು ಪಡೆದನು. BSB BSB: This is the account of Terah. Terah became the father of Abram, Nahor, and Haran. And Haran became the father of Lot.
28 ULB ಹಾರಾನನು ತಾನು ಹುಟ್ಟಿದ ದೇಶದೊಳಗೆ ಕಲ್ದೀಯರ ಊರ್ ಎಂಬ ಪಟ್ಟಣದಲ್ಲಿ ತನ್ನ ತಂದೆಯಾದ ತೆರಹನ ಮುಂದೆಯೇ ಸತ್ತನು. BSB BSB: During his father Terah’s lifetime, Haran died in his native land, in Ur of the Chaldeans.
29 ULB ಅಬ್ರಾಮನೂ ನಾಹೋರನೂ ಮದುವೆಮಾಡಿಕೊಂಡರು. ಅಬ್ರಾಮನ ಹೆಂಡತಿಯ ಹೆಸರು ಸಾರಯಳು, ನಾಹೋರನ ಹೆಂಡತಿಯ ಹೆಸರು ಮಿಲ್ಕಾ. ಈಕೆಯು ಹಾರಾನನ ಮಗಳು; ಹಾರಾನನು ಮಿಲ್ಕಳಿಗೂ ಇಸ್ಕಳಿಗೂ ತಂದೆ. BSB BSB: And Abram and Nahor took wives for themselves. Abram’s wife was named Sarai, and Nahor’s wife was named Milcah; she was the daughter of Haran, who was the father of both Milcah and Iscah.
30 ULB ಸಾರಯಳು ಬಂಜೆಯಾಗಿದುದರಿಂದ ಆಕೆಗೆ ಮಕ್ಕಳಿರಲಿಲ್ಲ. BSB BSB: But Sarai was barren; she had no children.
32 ULB ತೆರಹನು ಇನ್ನೂರ ಐದು ವರ್ಷ ಬದುಕಿ ನಂತರ ಹಾರಾನಿನಲ್ಲಿ ಸತ್ತನು. BSB BSB: Terah lived 205 years, and he died in Haran.