1 ULB ಯಾಕೋಬನಿಗೆ ಲೇಯಳಲ್ಲಿ ಹುಟ್ಟಿದ ಮಗಳಾದ ದೀನಳು ಒಂದು ದಿನ ಆ ದೇಶದ ಸ್ತ್ರೀಯರನ್ನು ನೋಡುವುದಕ್ಕೆ ಹೊರಗೆ ಬಂದಳು. BSB BSB: Now Dinah, the daughter Leah had borne to Jacob, went out to visit the daughters of the land.
2 ULB ದೇಶಾಧಿಪತಿಯಾಗಿರುವ ಹಿವ್ವಿಯನಾದ ಹಮೋರನ ಮಗ ಶೆಕೆಮನು ಆಕೆಯನ್ನು ನೋಡಿ ತೆಗೆದುಕೊಂಡು ಹೋಗಿ ಮಾನಭಂಗಪಡಿಸಿದನು. BSB BSB: When Shechem son of Hamor the Hivite, the prince of the region, saw her, he took her and lay with her by force.
3 ULB ಅವನ ಮನಸ್ಸು ಯಾಕೋಬನ ಮಗಳಾದ ದೀನಳ ಮೇಲೆಯೇ ಇತ್ತು. ಆ ಹುಡುಗಿಯನ್ನು ಪ್ರೀತಿಸಿ ಆಕೆಯ ಸಂಗಡ ಮನವೊಲಿಸುವ ಮಾತುಗಳನ್ನಾಡಿದನು. BSB BSB: And his soul was drawn to Dinah, the daughter of Jacob. He loved the young girl and spoke to her tenderly.
4 ULB ಶೆಕೆಮನು ತನ್ನ ತಂದೆಯಾದ ಹಮೋರನಿಗೆ, <<ನೀನು ಈ ಹುಡುಗಿಯನ್ನು ನನಗೆ ಮದುವೆಮಾಡಿಸಬೇಕು>> ಎಂದು ಕೇಳಿಕೊಂಡನು. BSB BSB: So Shechem told his father Hamor, “Get me this girl as a wife.”
5 ULB ಯಾಕೋಬನು ತನ್ನ ಮಗಳಾದ ದೀನಳಿಗೆ ಶೆಕೆಮನಿಂದ ಮಾನಭಂಗವಾದ ವರ್ತಮಾನವನ್ನು ಕೇಳಿದಾಗ ಅವನ ಗಂಡುಮಕ್ಕಳು ಅಡವಿಯಲ್ಲಿ ದನಗಳನ್ನು ಕಾಯುತ್ತಿದ್ದರು. ಅವರು ಬರುವ ತನಕ ಅವನು ಸುಮ್ಮನೇ ಇದ್ದನು. BSB BSB: Jacob heard that Shechem had defiled his daughter Dinah, but since his sons were with his livestock in the field, he remained silent about it until they returned.
6 ULB ಅಷ್ಟರಲ್ಲಿ ಶೆಕೆಮನ ತಂದೆಯಾದ ಹಮೋರನು ಯಾಕೋಬನ ಸಂಗಡ ಮಾತನಾಡುವುದಕ್ಕೆ ಬಂದನು. BSB BSB: Meanwhile, Shechem’s father Hamor came to speak with Jacob.
7 ULB ಯಾಕೋಬನ ಗಂಡುಮಕ್ಕಳು ತಂಗಿಯ ಸಂಗತಿಯನ್ನು ಕೇಳಿ ಅಡವಿಯಿಂದ ಬಂದಾಗ ವ್ಯಸನಪಟ್ಟು ಬಹಳ ಕೋಪಗೊಂಡರು. ಶೆಕೆಮನು ಯಾಕೋಬನ ಮಗಳ ಮಾನಭಂಗ ಮಾಡಿ ಇಸ್ರಾಯೇಲರೊಳಗೆ ಬಹಳ ಅವಮಾನಕರವಾದ ಕೆಲಸವನ್ನು ಮಾಡಿದನು. BSB BSB: When Jacob’s sons heard what had happened, they returned from the field. They were filled with grief and fury, because Shechem had committed an outrage in Israel by lying with Jacob’s daughter—a thing that should not be done.
8 ULB ಹಮೋರನು ಅವರಿಗೆ, <<ನನ್ನ ಮಗನಾದ ಶೆಕೆಮನು ನಿಮ್ಮ ಹುಡುಗಿಯನ್ನು ಬಹಳ ಆಶೆಯಿಂದ ಮೋಹಿಸಿದ್ದಾನೆ, ಆಕೆಯನ್ನು ಅವನಿಗೆ ಮದುವೆ ಮಾಡಿಕೊಡಬೇಕು ಎಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ. BSB BSB: But Hamor said to them, “My son Shechem longs for your daughter. Please give her to him as his wife.
9 ULB ಇದಲ್ಲದೆ ನೀವು ನಮ್ಮಲ್ಲೇ ವಾಸವಾಗಿದ್ದು ನಿಮ್ಮ ಹೆಣ್ಣು ಮಕ್ಕಳನ್ನು ನಮಗೆ ಕೊಡುತ್ತಾ ನಮ್ಮ ಹೆಣ್ಣುಮಕ್ಕಳನ್ನು ನೀವು ತೆಗೆದುಕೊಳ್ಳುತ್ತಾ ನಮ್ಮೊಂದಿಗೆ ಬೀಗರಾಗಿರಿ. BSB BSB: Intermarry with us; give us your daughters and take our daughters for yourselves.
10 ULB ದೇಶವೆಲ್ಲಾ ನಿಮ್ಮ ಮುಂದೆ ಇದೆ ಅಲ್ಲಿ ವಾಸಮಾಡಿಕೊಂಡು ವ್ಯಾಪಾರ ಮಾಡಿ, ಆಸ್ತಿಯನ್ನು ಸಂಪಾದಿಸಿಕೊಳ್ಳಬಹುದು>> ಎಂದು ಹೇಳಿದನು. BSB BSB: You may settle among us, and the land will be open to you. Live here, move about freely, and acquire your own property.”
11 ULB ಬಳಿಕ ಶೆಕೆಮನು ಆ ಹುಡುಗಿಯ ತಂದೆಗೂ ಅಣ್ಣಂದಿರಿಗೂ, <<ನಿಮ್ಮ ದಯೆ ನನ್ನ ಮೇಲೆ ಇರಲಿ, ನೀವು ಹೇಳುವಷ್ಟು ಕೊಡುತ್ತೇನೆ. BSB BSB: Then Shechem said to Dinah’s father and brothers, “Grant me this favor, and I will give you whatever you ask.
12 ULB ನೀವು ಹೇಳುವ ಮೇರೆಗೆ ಎಷ್ಟಾದರೂ ತೆರವನ್ನೂ ಕಾಣಿಕೆಯನ್ನೂ ಹೆಣ್ಣಿಗಾಗಿ ಕೊಡುತ್ತೇನೆ. ಆದರೆ ಆ ಹುಡುಗಿಯನ್ನು ನನಗೆ ಹೆಂಡತಿಯಾಗಿ ಕೊಡಿರಿ>> ಎಂದನು. BSB BSB: Demand a high dowry and an expensive gift, and I will give you whatever you ask. Only give me the girl as my wife!”
13 ULB ಶೆಕೆಮನು ತಮ್ಮ ತಂಗಿಯಾದ ದೀನಳನ್ನು ಮಾನಭಂಗ ಮಾಡಿದ್ದರಿಂದ ಯಾಕೋಬನ ಮಕ್ಕಳು ಅವನಿಗೂ ಅವನ ತಂದೆಯಾದ ಹಮೋರನಿಗೂ ವಂಚನೆಯ ಉತ್ತರಕೊಟ್ಟರು. BSB BSB: But because Shechem had defiled their sister Dinah, Jacob’s sons answered him and his father Hamor deceitfully.
14 ULB ಯಾಕೋಬನ ಮಕ್ಕಳು ಅವರಿಗೆ, <<ನಾವು ಈ ಕಾರ್ಯವನ್ನು ಮಾಡಲಾರೆವು. ಸುನ್ನತಿಯಿಲ್ಲದವನಿಗೆ ನಮ್ಮ ತಂಗಿಯನ್ನು ಕೊಡುವುದಕ್ಕಾಗುವುದಿಲ್ಲ, ಹಾಗೆ ಕೊಡುವುದು ನಮಗೆ ಅವಮಾನ. BSB BSB: “We cannot do such a thing,” they said. “To give our sister to an uncircumcised man would be a disgrace to us.
15 ULB ನಿಮ್ಮಲ್ಲಿನ ಪುರುಷರೆಲ್ಲರೂ ಸುನ್ನತಿಮಾಡಿಸಿಕೊಂಡು ನಮ್ಮ ಹಾಗೆ ಆಗಬೇಕು. ಹೀಗಾಗುವ ಪಕ್ಷದಲ್ಲಿ ಮಾತ್ರ ನಾವು ನಿಮ್ಮ ಮಾತಿಗೆ ಒಪ್ಪುವೆವು. BSB BSB: We will consent to this on one condition, that you become circumcised like us—every one of your males.
16 ULB ನಮ್ಮ ಹೆಣ್ಣುಮಕ್ಕಳನ್ನು ನಿಮಗೆ ಕೊಡುತ್ತಾ ನಿಮ್ಮ ಹೆಣ್ಣುಮಕ್ಕಳನ್ನು ನಾವು ತೆಗೆದುಕೊಳ್ಳುತ್ತಾ ನಿಮ್ಮಲ್ಲಿ ವಾಸಮಾಡಿ ನಿಮ್ಮೊಂದಿಗೆ ಒಂದೇ ಕುಲವಾಗಿರುವೆವು. BSB BSB: Then we will give you our daughters and take your daughters for ourselves. We will dwell among you and become one people.
17 ULB ಆದರೆ ನೀವು ನಮ್ಮ ಮಾತಿಗೆ ಒಪ್ಪದೆ ಸುನ್ನತಿ ಮಾಡಿಸಿಕೊಳ್ಳದೆ ಹೋದರೆ ನಾವು ನಮ್ಮ ಹುಡುಗಿಯನ್ನು ಕರೆದುಕೊಂಡು ಹೊರಟು ಹೋಗುತ್ತೇವೆ>> ಎಂದನು. BSB BSB: But if you will not agree to be circumcised, then we will take our sister and go.”
18 ULB ಅವರ ಮಾತುಗಳು ಹಮೋರನಿಗೂ, ಅವನ ಮಗನಾದ ಶೆಕೆಮನಿಗೂ ಒಳ್ಳೆಯದೆಂದು ತೋಚಿತು. BSB BSB: Their offer seemed good to Hamor and his son Shechem.
19 ULB ಆ ಯೌವನಸ್ಥನು ಯಾಕೋಬನ ಮಗಳನ್ನು ಮೆಚ್ಚಿಕೊಂಡಿದ್ದರಿಂದ ಅವರು ಹೇಳಿದಂತೆ ಮಾಡುವುದಕ್ಕೆ ತಡಮಾಡಲಿಲ್ಲ. ಅವನು ತನ್ನ ತಂದೆಯ ಮನೆಯವರೆಲ್ಲರಿಗಿಂತ ಗೌರವವುಳ್ಳವನಾಗಿದ್ದನು. BSB BSB: The young man, who was the most respected of all his father’s household, did not hesitate to fulfill this request, because he was delighted with Jacob’s daughter.
20 ULB ಆಗ ಹಮೋರನೂ ಅವನ ಮಗನಾದ ಶೆಕೆಮನೂ ಊರ ಬಾಗಿಲಿಗೆ ಬಂದು ಊರಿನವರೆಲ್ಲರ ಸಂಗಡ ಮಾತನಾಡಿ ಅವರಿಗೆ, BSB BSB: So Hamor and his son Shechem went to the gate of their city and addressed the men of their city:
21 ULB <<ಈ ಜನರು ನಮ್ಮ ಸಂಗಡ ಸಮಾಧಾನವಾಗಿದ್ದಾರೆ, ಆದ್ದರಿಂದ ಅವರು ನಮ್ಮ ದೇಶದಲ್ಲೇ ವಾಸ ಮಾಡಿಕೊಂಡು ವ್ಯಾಪಾರ ಮಾಡಲಿ. ಈ ದೇಶವು ಅವರಿಗೂ ನಮಗೂ ಸಾಕಾಗುವಷ್ಟು ವಿಸ್ತಾರವಾಗಿದೆ. ನಾವು ಅವರ ಹೆಣ್ಣುಮಕ್ಕಳನ್ನು ಮದುವೆಮಾಡಿಕೊಳ್ಳೋಣ ನಮ್ಮ ಹೆಣ್ಣುಮಕ್ಕಳನ್ನು ಅವರಿಗೆ ಕೊಡೋಣ. BSB BSB: “These men are at peace with us. Let them live and trade in our land; indeed, it is large enough for them. Let us take their daughters in marriage and give our daughters to them.
22 ULB <<ಆದರೆ ಅವರು ಸುನ್ನತಿ ಮಾಡಿಸಿಕೊಂಡವರಾದ್ದರಿಂದ ನಮ್ಮಲ್ಲಿಯೂ ಪುರುಷರೆಲ್ಲರು ಸುನ್ನತಿ ಮಾಡಿಸಿಕೊಳ್ಳಬೇಕನ್ನುತ್ತಾರೆ. ಹೀಗಾದರೆ ಮಾತ್ರ ಅವರು ನಮ್ಮಲ್ಲಿ ವಾಸ ಮಾಡುವುದಕ್ಕೂ ನಮ್ಮ ಸಂಗಡ ಒಂದೇ ಕುಲವಾಗುವುದಕ್ಕೂ ಒಪ್ಪುವರು. BSB BSB: But only on this condition will the men agree to dwell with us and be one people: if all our men are circumcised as they are.
23 ULB ಅವರ ಕುರಿದನಗಳೂ, ಅವರ ಆಸ್ತಿಯೂ ಅವರ ಎಲ್ಲಾ ಪಶುಪ್ರಾಣಿಗಳೂ ನಮ್ಮದಾಗುವುದಲ್ಲವೇ? ಆದುದರಿಂದ ಅವರು ನಮ್ಮಲ್ಲಿ ವಾಸಮಾಡುವ ಹಾಗೆ ನಾವು ಅವರ ಮಾತಿಗೆ ಒಪ್ಪಿಕೊಳ್ಳೋಣ>> ಎಂದು ಹೇಳಿದನು. BSB BSB: Will not their livestock, their possessions, and all their animals become ours? Only let us consent to them, and they will dwell among us.”
24 ULB ಆಗ ಪಟ್ಟಣದ ದ್ವಾರದಲ್ಲಿ ಹೋಗುವವರೆಲ್ಲಾ, ಹಮೋರನ ಮಗನಾದ ಶೆಕೆಮನೂ ಹೇಳಿದ ಮಾತಿಗೆ ಊರಿನವರೆಲ್ಲರೂ ಸಮ್ಮತಿಸಿದ್ದರಿಂದ ಅವರಲ್ಲಿದ್ದ ಪುರುಷರೆಲ್ಲರೂ ಸುನ್ನತಿಮಾಡಿಸಿಕೊಂಡರು. BSB BSB: All the men who went out of the city gate listened to Hamor and his son Shechem, and every male of the city was circumcised.
25 ULB ಮೂರನೆಯ ದಿನದಲ್ಲಿ ಅವರು ಗಾಯದಿಂದ ಬಹು ಬಾಧೆಪಡುತ್ತಿರುವಾಗ ಯಾಕೋಬನ ಮಕ್ಕಳೂ, ದೀನಳ ಅಣ್ಣಂದಿರಾದ ಸಿಮೆಯೋನ್, ಲೇವಿ ಎಂಬ ಇಬ್ಬರು ಕೈಯಲ್ಲಿ ಕತ್ತಿಯನ್ನು ತೆಗೆದುಕೊಂಡು ಧೈರ್ಯವಾಗಿ ಪಟ್ಟಣಕ್ಕೆ ಬಂದು ಗಂಡಸರನ್ನೆಲ್ಲಾ ಕೊಂದು ಹಾಕಿದನು. BSB BSB: Three days later, while they were still in pain, two of Jacob’s sons (Dinah’s brothers Simeon and Levi) took their swords, went into the unsuspecting city, and slaughtered every male.
26 ULB ಊರಿನವರ ಮೇಲೆ ಬಿದ್ದು ಹಮೋರ ಮತ್ತು ಅವನ ಮಗನಾದ ಶೆಕೆಮ್ ಸಹಿತವಾಗಿ ಪುರುಷರೆಲ್ಲರನ್ನೂ ದಾಕ್ಷಿಣ್ಯವಿಲ್ಲದೆ ಕತ್ತಿಯಿಂದ ಕೊಂದು ಶೆಕೆಮನ ಮನೆಯಿಂದ ದೀನಳನ್ನು ಕರೆದುಕೊಂಡು ಹೊರಟುಹೋದರು. BSB BSB: They killed Hamor and his son Shechem with their swords, took Dinah out of Shechem’s house, and went away.
27 ULB ಅವರು ಹತವಾದ ನಂತರ ಯಾಕೋಬನ ಮಕ್ಕಳು ಬಂದು, ಇವರು ನಮ್ಮ ತಂಗಿಯನ್ನು ಮಾನಭಂಗಪಡಿಸಿದ್ದಾರೆ ಎಂದು ಹೇಳಿ ಊರನ್ನು ಸೂರೆಮಾಡಿಬಿಟ್ಟರು. BSB BSB: Jacob’s other sons came upon the slaughter and looted the city, because their sister had been defiled.
28 ULB ಅವರ ಕುರಿಗಳನ್ನು, ದನಗಳನ್ನು ಹಾಗೂ ಕತ್ತೆಗಳನ್ನು ಊರಿನಲ್ಲಿಯೂ ಅಡವಿಯಲ್ಲಿಯೂ ಇದ್ದ ಅವರ ಆಸ್ತಿಯೆಲ್ಲವನ್ನೂ ತೆಗೆದುಕೊಂಡರು. BSB BSB: They took their flocks and herds and donkeys, and everything else in the city or in the field.
29 ULB ಅವರ ಮಕ್ಕಳನ್ನೂ ಹೆಂಡತಿಯರನ್ನೂ ಸೆರೆಹಿಡಿದು ಮನೆಯಲ್ಲಿದ್ದುದ್ದೆಲ್ಲವನ್ನು ಕೊಳ್ಳೆ ಹೊಡೆದರು. BSB BSB: They carried off all their possessions and women and children, and they plundered everything in their houses.
30 ULB ಆಗ ಯಾಕೋಬನು ಸಿಮೆಯೋನನಿಗೂ ಲೇವಿಗೂ, <<ನೀವು ಈ ದೇಶದ ನಿವಾಸಿಗಳಾದ ಕಾನಾನ್ಯರಲ್ಲಿಯೂ ಪೆರಿಜೀಯರಲ್ಲಿಯೂ ನನ್ನ ಹೆಸರನ್ನು ಕೆಡಿಸಿದ್ದರಿಂದ ನನ್ನನ್ನು ಅಪಾಯಕ್ಕೆ ಗುರಿಮಾಡಿದ್ದೀರಿ. ನನಗಿರುವ ಜನರು ಸ್ವಲ್ಪವೇ. ಈ ದೇಶದವರು ಒಟ್ಟಾಗಿ ನನ್ನ ವಿರುದ್ಧ ಯುದ್ಧಕ್ಕೆ ಬಂದು ನನ್ನನ್ನು ಹೊಡೆದರೆ ನಾನೂ ನನ್ನ ಮನೆಯವರೆಲ್ಲರೂ ನಾಶವಾಗುವೆವು>> ಎಂದನು. BSB BSB: Then Jacob said to Simeon and Levi, “You have brought trouble upon me by making me a stench to the Canaanites and Perizzites, the people of this land. We are few in number; if they unite against me and attack me, I and my household will be destroyed.”
31 ULB ಅದಕ್ಕೆ ಅವರು, <<ನಮ್ಮ ತಂಗಿಯನ್ನು ವೇಶ್ಯೆಯಂತೆ ಉಪಯೋಗಿಸಿಕೊಂಡಿದ್ದು ಸರಿಯೇ>> ಎಂದು ಕೇಳಿದರು. BSB BSB: But they replied, “Should he have treated our sister like a prostitute?”