1 ULB ಯಾಜಕರೇ, ಇದನ್ನು ಕೇಳಿರಿ, ಇಸ್ರಾಯೇಲ್ ಕುಲದವರೇ, ಆಲಿಸಿರಿ; ರಾಜವಂಶದವರೇ, ಕಿವಿಗೊಡಿರಿ; ನೀವು ಮಿಚ್ಪದಲ್ಲಿ ಉರುಲಾಗಿಯೂ, ತಾಬೋರಿನಲ್ಲಿ ಬಲೆಯಾಗಿಯೂ ಇದ್ದ ಕಾರಣ ನಿಮಗೆ ನ್ಯಾಯತೀರ್ಪು ಬಂದಿದೆ. BSB BSB: “Hear this, O priests! Take heed, O house of Israel! Give ear, O royal house! For this judgment is against you because you have been a snare at Mizpah, a net spread out on Tabor.
2 ULB ನನಗೆ ತಿರುಗಿಬಿದ್ದವರು ಅಗಾಧವಾದ ಕೊಲೆಯಲ್ಲಿ ಮಗ್ನರಾಗಿದ್ದಾರೆ; ನಾನೇ ಅವರೆಲ್ಲರನ್ನೂ ಶಿಕ್ಷಿಸುವೆನು. BSB BSB: The rebels are deep in slaughter; but I will chastise them all.
3 ULB ಎಫ್ರಾಯೀಮನ್ನು ಬಲ್ಲೆ, ಇಸ್ರಾಯೇಲ್ ನನಗೆ ಮರೆಯಾಗಿಲ್ಲ; ಎಫ್ರಾಯೀಮೇ, ನೀನೀಗ ವ್ಯಭಿಚಾರ ಮಾಡಿದ್ದಿ, ಇಸ್ರಾಯೇಲ್ ಹೊಲೆಯಾಗಿದೆ. BSB BSB: I know all about Ephraim, and Israel is not hidden from Me. For now, O Ephraim, you have turned to prostitution; Israel is defiled.
4 ULB ಅವರು ತಮ್ಮ ದೇವರ ಕಡೆಗೆ ತಿರುಗಿಕೊಳ್ಳಲು ಅವುಗಳ ದುಷ್ಕೃತ್ಯಗಳು ಅವರನ್ನು ಬಿಡುವುದಿಲ್ಲ; ವ್ಯಭಿಚಾರದ ಸ್ವಭಾವವು ಅವುಗಳಲ್ಲಿ ನೆಲೆಗೊಂಡಿದೆ, ಯೆಹೋವನನ್ನು ತಿಳಿದುಕೊಂಡಿಲ್ಲ. BSB BSB: Their deeds do not permit them to return to their God, for a spirit of prostitution is within them, and they do not know the LORD.
5 ULB ಇಸ್ರಾಯೇಲಿಗೆ ಅದರ ಹೆಮ್ಮೆಯೇ ವಿರುದ್ಧ ಸಾಕ್ಷಿಯಾಗಿದೆ; ಇಸ್ರಾಯೇಲೂ ಮತ್ತು ಎಫ್ರಾಯೀಮೂ ತಮ್ಮ ದುರ್ಮಾರ್ಗದಲ್ಲಿ ಎಡವಿ ಬೀಳುವವು; ಯೆಹೂದವೂ ಅವುಗಳೊಂದಿಗೆ ಬೀಳುವುದು. BSB BSB: Israel’s arrogance testifies against them; Israel and Ephraim stumble in their iniquity; even Judah stumbles with them.
6 ULB ಅವು ತಮ್ಮ ದನ ಮತ್ತು ಕುರಿಗಳ ಸಂಗಡ ಯೆಹೋವನಿಗೆ ಶರಣುಹೊಗಲು ಹೊರಡುವವು; ಆತನು ಸಿಕ್ಕುವುದಿಲ್ಲ, ಅವುಗಳಿಂದ ಮರೆಯಾಗಿದ್ದಾನೆ. BSB BSB: They go with their flocks and herds to seek the LORD, but they do not find Him; He has withdrawn Himself from them.
7 ULB ಅವು ಯೆಹೋವನ ಮಕ್ಕಳಲ್ಲದ ಮಕ್ಕಳನ್ನು ಪಡೆದು ಆತನಿಗೆ ದ್ರೋಹಮಾಡಿವೆ; ಅವುಗಳನ್ನೂ, ಅವುಗಳ ಭೂಸ್ವಾಸ್ತ್ಯಗಳನ್ನೂ ಈ ಅಮಾವಾಸ್ಯೆಯು ನುಂಗಿಬಿಡುವುದು. BSB BSB: They have been unfaithful to the LORD; for they have borne illegitimate children. Now the New Moon will devour them along with their land.
8 ULB ಗಿಬ್ಯದಲ್ಲಿ ತುತ್ತೂರಿಯನ್ನು ಊದಿರಿ, ರಾಮದಲ್ಲಿ ಕೊಂಬು ಕೂಗಲಿ, ಬೇತ್ ಅವೆನಿನಲ್ಲಿ ಆರ್ಭಟಿಸಿರಿ, ಬೆನ್ಯಾಮೀನೇ, ಹಿಂದೆ ನೋಡು! BSB BSB: Blow the ram’s horn in Gibeah, the trumpet in Ramah; raise the battle cry in Beth-aven: Lead on, O Benjamin!
9 ULB ದಂಡನೆಯ ದಿನದಲ್ಲಿ ಎಫ್ರಾಯೀಮು ಹಾಳಾಗುವುದು; ಇಸ್ರಾಯೇಲ್ ಕುಲಗಳ ಭವಿಷ್ಯತ್ತಿನ ನಿಶ್ಚಯವನ್ನು ತಿಳಿಯಪಡಿಸಿದ್ದೇನೆ. BSB BSB: Ephraim will be laid waste on the day of rebuke. Among the tribes of Israel I proclaim what is certain.
10 ULB ಯೆಹೂದದ ಮುಖಂಡರು ಮೇರೆಯನ್ನು ಒತ್ತುವವರಂತಿದ್ದಾರೆ; ಅವರ ಮೇಲೆ ನನ್ನ ರೌದ್ರವನ್ನು ನೀರಿನ ಹಾಗೆ ಹೊಯ್ದುಬಿಡುವೆನು. BSB BSB: The princes of Judah are like those who move boundary stones; I will pour out My fury upon them like water.
11 ULB ಎಫ್ರಾಯೀಮು ವ್ಯರ್ಥಾಚಾರಗಳನ್ನು ಅನುಸರಿಸಲು ಮನಸ್ಸುಮಾಡಿದ ಕಾರಣ, ಅದು ದೇವರ ನ್ಯಾಯತೀರ್ಪಿಗೆ ಗುರಿಯಾಗಿ ಹಿಂಸಿಸಲ್ಪಟ್ಟಿದೆ, ಜಜ್ಜಲ್ಪಟ್ಟಿದೆ. BSB BSB: Ephraim is oppressed, crushed in judgment, for he is determined to follow worthless idols.
12 ULB ನಾನು ಎಫ್ರಾಯೀಮಿಗೆ ನುಸಿ, ಯೆಹೂದ ಕುಲಕ್ಕೆ ಒಣ ಕುಂಟೆಯಂತಿರುವೆನು. BSB BSB: So I am like a moth to Ephraim, and like decay to the house of Judah.
13 ULB ಹೀಗಿರಲು ಎಫ್ರಾಯೀಮು ತಾನು ರೋಗಿಯೆಂದು ತಿಳುಕೊಂಡಿತು, ಯೆಹೂದವು ತನ್ನ ವ್ರಣವನ್ನು ನೋಡಿಕೊಂಡಿತು; ಆಗ ಎಫ್ರಾಯೀಮು ಅಶ್ಶೂರದ ಕಡೆಗೆ ತಿರುಗಿಕೊಂಡು ಜಗಳಗಂಟ ಮಹಾರಾಜನ ಬಳಿಗೆ ದೂತರನ್ನು ಕಳುಹಿಸಿತು; ಆದರೆ ಅವನು ನಿಮ್ಮನ್ನು ಸ್ವಸ್ಥಮಾಡಲಾರನು, ನಿಮ್ಮ ಗಾಯವನ್ನು ಗುಣಪಡಿಸಲಾರನು. BSB BSB: When Ephraim saw his sickness and Judah his wound, then Ephraim turned to Assyria and sent to the great king. But he cannot cure you or heal your wound.
14 ULB ನಾನು ಎಫ್ರಾಯೀಮಿಗೆ ಸಿಂಹವೂ, ಯೆಹೂದ ಕುಲಕ್ಕೆ ಪ್ರಾಯದ ಸಿಂಹವೂ ಆಗುವೆನು; ನಾನೇ ಸೀಳಿಬಿಟ್ಟು ಹೋಗುವೆನು, ನಾನು ಎತ್ತಿಕೊಂಡು ಹೋಗಲು ಯಾರೂ ಬಿಡಿಸರು. BSB BSB: For I am like a lion to Ephraim and like a young lion to the house of Judah. I, even I, will tear them to pieces and then go away. I will carry them off where no one can rescue them.
15 ULB ನನ್ನ ಜನರು ತಮ್ಮ ದೋಷಫಲವನ್ನು ಅನುಭವಿಸಿ, ನನ್ನ ಪ್ರಸನ್ನತೆಯನ್ನು ಬೇಡಿಕೊಳ್ಳುವ ತನಕ, ನಾನು ನನ್ನ ವಾಸಸ್ಥಾನಕ್ಕೆ ಹಿಂದಿರುಗಿ ಹೋಗುವೆನು; ಅವರು ಇಕ್ಕಟ್ಟಿಗೆ ಸಿಕ್ಕಿದ ಕೂಡಲೆ ನನ್ನನ್ನು ಆಶ್ರಯಿಸುವರು. BSB BSB: Then I will return to My place until they admit their guilt and seek My face; in their affliction they will earnestly seek Me.”