1 ULB ಈಗಲಾದರೋ, ಯಾಕೋಬನ ವಂಶವೇ, ಇಸ್ರಾಯೇಲ್ ಸಂತಾನವೇ, ನಿನ್ನನ್ನು ಸೃಷ್ಟಿಸಿ ರೂಪಿಸಿದವನಾದ ಯೆಹೋವನು ಹೀಗೆನ್ನುತ್ತಾನೆ, <<ಭಯಪಡಬೇಡ, ನಾನು ನಿನ್ನನ್ನು ವಿಮೋಚಿಸಿದೆನಲ್ಲಾ, ನಿನ್ನ ಹೆಸರು ಹಿಡಿದು ಕರೆದೆನಲ್ಲಾ, ನೀನು ನನ್ನವನೇ. BSB BSB: But now, this is what the LORD says—He who created you, O Jacob, and He who formed you, O Israel: “Do not fear, for I have redeemed you; I have called you by your name; you are Mine!
2 ULB ನೀನು ಜಲರಾಶಿಯನ್ನು ಹಾದು ಹೋಗುವಾಗ ನಾನು ನಿನ್ನ ಸಂಗಡ ಇರುವೆನು, ನದಿಗಳನ್ನು ದಾಟುವಾಗ ಅವು ನಿನ್ನನ್ನು ಮುಳುಗಿಸುವುದಿಲ್ಲ, ಬೆಂಕಿಯಲ್ಲಿ ನಡೆಯುವಾಗ ನೀನು ಸುಟ್ಟುಹೋಗುವುದಿಲ್ಲ, ಜ್ವಾಲೆಯು ನಿನ್ನನ್ನು ದಹಿಸದು. BSB BSB: When you pass through the waters, I will be with you; and when you go through the rivers, they will not overwhelm you. When you walk through the fire, you will not be scorched; the flames will not set you ablaze.
3 ULB ಏಕೆಂದರೆ ಯೆಹೋವನೆಂಬ ನಾನು ನಿನ್ನ ದೇವರು, ಇಸ್ರಾಯೇಲರ ಸದಮಲಸ್ವಾಮಿಯಾದ ನಾನು ನಿನ್ನ ರಕ್ಷಕನು. ಐಗುಪ್ತವನ್ನು ನಿನ್ನ ವಿಮೋಚನೆಗೆ ಈಡುಮಾಡಿದ್ದೇನೆ. ನಿನ್ನ ಬದಲಾಗಿ ಕೂಷ್ ಮತ್ತು ಸೆಬಾ ಸೀಮೆಗಳನ್ನು ಕೊಟ್ಟಿದ್ದೇನೆ. BSB BSB: For I am the LORD your God, the Holy One of Israel, your Savior; I give Egypt for your ransom, Cush and Seba in your place.
4 ULB ನೀನು ನನ್ನ ದೃಷ್ಟಿಯಲ್ಲಿ ಅಮೂಲ್ಯನೂ, ಮಾನ್ಯನೂ, ಪ್ರಿಯನೂ ಆಗಿರುವುದರಿಂದ, ನಾನು ನಿನ್ನ ಬದಲಾಗಿ ಮನುಷ್ಯರನ್ನೂ, ನಿನ್ನ ಪ್ರಾಣಕ್ಕೆ ಪ್ರತಿಯಾಗಿ ಜನಾಂಗಗಳನ್ನೂ ಕೊಡುವೆನು. BSB BSB: Because you are precious and honored in My sight, and because I love you, I will give men in exchange for you and nations in place of your life.
5 ULB ಭಯಪಡಬೇಡ, ನಾನು ನಿನ್ನ ಸಂಗಡ ಇದ್ದೇನೆ; ನಿನ್ನ ಸಂತತಿಯವರನ್ನು ಪೂರ್ವದಿಂದ ತರುವೆನು, ನಿನ್ನವರನ್ನು ಪಶ್ಚಿಮದಿಂದ ಕೂಡಿಸುವೆನು. BSB BSB: Do not be afraid, for I am with you; I will bring your offspring from the east and gather you from the west.
6 ULB <ಅವರನ್ನು ಒಪ್ಪಿಸಿಬಿಡು> ಎಂದು ಉತ್ತರದಿಕ್ಕಿಗೂ <ತಡೆಯಬೇಡ> ಎಂದು ದಕ್ಷಿಣಕ್ಕೂ ಹೇಳಿ, ದೂರದಲ್ಲಿರುವ ನನ್ನ ಕುಮಾರರನ್ನೂ, ದಿಗಂತಗಳಲ್ಲಿರುವ ನನ್ನ ಕುಮಾರಿಯರನ್ನೂ, BSB BSB: I will say to the north, ‘Give them up!’ and to the south, ‘Do not hold them back!’ Bring My sons from afar, and My daughters from the ends of the earth—
7 ULB ನನ್ನ ಮಹಿಮೆಗಾಗಿ ನಾನು ಸೃಷ್ಟಿಸಿ ರೂಪಿಸಿ ಉಂಟುಮಾಡಿದ ನನ್ನ ಹೆಸರಿನವರೆಲ್ಲರನ್ನೂ ಬರಮಾಡಬೇಕೆಂದು ಅಪ್ಪಣೆಕೊಡುವೆನು. BSB BSB: everyone called by My name and created for My glory, whom I have indeed formed and made.”
8 ULB ಕಣ್ಣಿದ್ದರೂ ಕುರುಡಾದ, ಕಿವಿಯಿದ್ದರೂ ಕಿವುಡಾದ ಜನರನ್ನು ಕರೆ. BSB BSB: Bring out a people who have eyes but are blind, and who have ears but are deaf.
9 ULB ಎಲ್ಲಾ ಜನಾಂಗಗಳು ಒಟ್ಟಿಗೆ ಬರಲಿ, ಸಕಲದೇಶೀಯರು ನೆರೆಯಲಿ, ಇವರ ದೇವರುಗಳಲ್ಲಿ ಯಾರು ಈ ಸಂಗತಿಯನ್ನು ಮುಂತಿಳಿಸಬಲ್ಲರು? ನಡೆದ ಸಂಗತಿಗಳನ್ನು ಯಾರು ವಿವರಿಸಾರು? ತಾವು ಸತ್ಯವಂತರೆಂದು ಸ್ಥಾಪಿಸಿಕೊಳ್ಳುವುದಕ್ಕೆ ಸಾಕ್ಷಿಗಳನ್ನು ಕರೆದುತರಲಿ. ಆ ಸಾಕ್ಷಿಗಳು ಇವರ ಮಾತನ್ನು ಕೇಳಿ <ಇದು ನಿಜ> ಎಂದು ಹೇಳಲಿ. BSB BSB: All the nations gather together and the peoples assemble. Who among them can declare this, and proclaim to us the former things? Let them present their witnesses to vindicate them, so that others may hear and say, “It is true.”
11 ULB ನಾನೇ, ನಾನೇ ಯೆಹೋವನು, ನನ್ನ ಹೊರತು ಯಾವ ರಕ್ಷಕನೂ ಇಲ್ಲ. BSB BSB: I, yes I, am the LORD, and there is no Savior but Me.
12 ULB ನಾನೇ ರಕ್ಷಣೆಯನ್ನು ಮುಂತಿಳಿಸಿ ನೆರವೇರಿಸಿ ಪ್ರಕಟಿಸಿದ್ದೇನೆ, ನಿಮ್ಮಲ್ಲಿ ಅನ್ಯದೇವರು ಯಾರೂ ಇರಲಿಲ್ಲವಲ್ಲ; ನೀವೇ ನನ್ನ ಸಾಕ್ಷಿಗಳು, ನಾನೊಬ್ಬನೇ ದೇವರು. BSB BSB: I alone decreed and saved and proclaimed—I, and not some foreign god among you. So you are My witnesses,” declares the LORD, “that I am God.
13 ULB ಹೌದು, ಇಂದಿನಿಂದ ನಾನೇ ದೇವರು. ನನ್ನ ಕೈಯಿಂದ ಬಿಡಿಸಬಲ್ಲವರು ಯಾರೂ ಇಲ್ಲ. ನನ್ನ ಕೆಲಸಕ್ಕೆ ಯಾರು ಅಡ್ಡಿ ಬರುವರು?>>> ಎಂಬುದೇ ಯೆಹೋವನ ಮಾತು. BSB BSB: Even from eternity I am He, and none can deliver out of My hand. When I act, who can reverse it?”
14 ULB ನಿಮ್ಮ ವಿಮೋಚಕನೂ, ಇಸ್ರಾಯೇಲರ ಸದಮಲಸ್ವಾಮಿಯೂ ಆದ ಯೆಹೋವನು ಹೀಗೆನ್ನುತ್ತಾನೆ, <<ನಾನು ನಿಮಗೋಸ್ಕರ ದೂತನನ್ನು ಬಾಬೆಲೋನಿಗೆ ಕಳುಹಿಸಿ, ಕಸ್ದೀಯರನ್ನೆಲ್ಲಾ ತಮ್ಮ ವಿನೋದದ ಹಡಗುಗಳ ಮೇಲೆ ಪಲಾಯನ ಮಾಡುವಂತೆ ಅಟ್ಟಿಬಿಡುವೆನು. BSB BSB: Thus says the LORD your Redeemer, the Holy One of Israel: “For your sake, I will send to Babylon and bring them all as fugitives, even the Chaldeans, in the ships in which they rejoice.
15 ULB ನಾನು ಯೆಹೋವನು, ನಿಮ್ಮ ಸದಮಲಸ್ವಾಮಿಯು, ಇಸ್ರಾಯೇಲನ್ನು ಸೃಷ್ಟಿಸಿದವನು, ನಿಮ್ಮ ಅರಸನೂ ಆಗಿದ್ದೇನೆ. BSB BSB: I am the LORD, your Holy One, the Creator of Israel, and your King.”
16 ULB ಯಾರು ಸಮುದ್ರದಲ್ಲಿ ದಾರಿಮಾಡಿ ಜಲಪ್ರವಾಹಗಳಲ್ಲಿ ಮಾರ್ಗವನ್ನು ಏರ್ಪಡಿಸಿದನೋ, BSB BSB: Thus says the LORD, who makes a way in the sea and a path through the surging waters,
17 ULB ಯಾರು ರಥಗಳನ್ನು, ಕುದರೆಗಳನ್ನು, ಸೈನ್ಯಗಳನ್ನು, ಪರಾಕ್ರಮಶಾಲಿಗಳನ್ನು ಹೊರಡಿಸಿ, ಅವು ಬಿದ್ದು ಏಳಲಾರದಂತೆಯೂ, ದೀಪದೋಪಾದಿಯಲ್ಲಿ ನಂದಿ ಆರಿಹೋಗುವಂತೆಯೂ ಮಾಡಿದವನು>> ಯೆಹೋವನು ಹೀಗೆನ್ನುತ್ತಾನೆ, BSB BSB: who brings out the chariots and horses, the armies and warriors together, to lie down, never to rise again; to be extinguished, snuffed out like a wick:
18 ULB ಹಿಂದಿನ ಸಂಗತಿಗಳನ್ನು ಜ್ಞಾಪಕಕ್ಕೆ ತಂದುಕೊಳ್ಳಬೇಡಿರಿ, ಪುರಾತನ ಕಾರ್ಯಗಳನ್ನು ಮರೆತುಬಿಡಿರಿ. BSB BSB: “Do not call to mind the former things; pay no attention to the things of old.
19 ULB ಇಗೋ, ಹೊಸ ಕಾರ್ಯವನ್ನು ಮಾಡುವೆನು, ಈಗ ತಲೆದೋರುತ್ತಲಿದೆ. ಇದು ನಿಮಗೆ ಕಾಣುವುದಿಲ್ಲವೋ? ನಾನು ಅರಣ್ಯದಲ್ಲಿ ಮಾರ್ಗವನ್ನು ಏರ್ಪಡಿಸಿ, ಅರಣ್ಯದಲ್ಲಿ ನದಿಗಳನ್ನು ಹರಿಸುವೆನು. BSB BSB: Behold, I am about to do something new; even now it is coming. Do you not see it? Indeed, I will make a way in the wilderness and streams in the desert.
20 ULB ಬಯಲಿನ ಮೃಗಗಳು, ನರಿಗಳು, ಗೂಬೆಗಳು ನನ್ನನ್ನು ಸನ್ಮಾನಿಸುತ್ತವೆ. ಅರಣ್ಯದಲ್ಲಿ ನೀರನ್ನು, ಮರುಭೂಮಿಯಲ್ಲಿ ನದಿಗಳನ್ನು ನಾನು ಆರಿಸಿಕೊಂಡ ನನ್ನ ಪ್ರಜೆಗಳಿಗೆ ಕುಡಿಯುವುದಕ್ಕೆ ಕೊಟ್ಟೆನು. ನಾನು ಸೃಷ್ಟಿಸಿಕೊಂಡ ಆಪ್ತಜನರ ಜಲಪಾನಕ್ಕಾಗಿ, BSB BSB: The beasts of the field will honor Me, the jackals and the ostriches, because I provide water in the wilderness and rivers in the desert, to give drink to My chosen people.
21 ULB ನನ್ನ ಸ್ತೋತ್ರವನ್ನು ಪ್ರಚುರಪಡಿಸಲಿ ಎಂದು ನಾನು ಈ ಜನರನ್ನು ಸೃಷ್ಟಿಸಿಕೊಂಡಿದ್ದೇನೆ. BSB BSB: The people I formed for Myself will declare My praise.
22 ULB <<ಯಾಕೋಬೇ, ನೀನಾದರೋ ನನ್ನನ್ನು ಪ್ರಾರ್ಥಿಸಲಿಲ್ಲ, ಇಸ್ರಾಯೇಲೇ, ನೀನು ನನ್ನ ವಿಷಯದಲ್ಲಿ ಬೇಸರಗೊಂಡಿದ್ದಿ. BSB BSB: But you have not called on Me, O Jacob, because you have grown weary of Me, O Israel.
23 ULB ನೀನು ನನಗೆ ಹೋಮಕ್ಕಾಗಿ ಕುರಿ ಮೇಕೆಗಳನ್ನು ತಂದು ಯಜ್ಞಗಳಿಂದ ನನ್ನನ್ನು ಘನಪಡಿಸಲಿಲ್ಲ. ಕಾಣಿಕೆಗಳನ್ನು ಕೇಳಿ ನಿನ್ನನ್ನು ನಾನು ತೊಂದರೆಪಡಿಸಲಿಲ್ಲ, ಧೂಪಕ್ಕಾಗಿ ನಿನ್ನನ್ನು ಬೇಸರಗೊಳಿಸಲಿಲ್ಲ. BSB BSB: You have not brought Me sheep for burnt offerings, nor honored Me with your sacrifices. I have not burdened you with offerings, nor wearied you with frankincense.
24 ULB ನೀನು ನನಗೋಸ್ಕರ ಹಣಕೊಟ್ಟು ತೈಲವನ್ನು ತರಲಿಲ್ಲ, ಯಜ್ಞಪಶುಗಳ ಕೊಬ್ಬಿನಿಂದ ನನ್ನನ್ನು ತೃಪ್ತಿಪಡಿಸಲಿಲ್ಲ. ಆದರೆ ನಿನ್ನ ಪಾಪಗಳಿಂದ ನನ್ನನ್ನು ನೀನು ತೊಂದರೆಗೆ ಗುರಿಮಾಡಿರುವೆ. ನಿನ್ನ ದೋಷಗಳಿಂದ ನನ್ನನ್ನು ಬೇಸರಗೊಳಿಸಿದ್ದೀ. BSB BSB: You have not bought Me sweet cane with your silver, nor satisfied Me with the fat of your sacrifices. But you have burdened Me with your sins; you have wearied Me with your iniquities.
25 ULB ನಾನಾಗಿ ನಾನೇ ನನಗೋಸ್ಕರ ನಿನ್ನ ದ್ರೋಹಗಳನ್ನು ಅಳಿಸಿ ಬಿಡುತ್ತೇನೆ. ನಿನ್ನ ಪಾಪಗಳನ್ನು ನನ್ನ ನೆನಪಿನಲ್ಲಿಡುವುದಿಲ್ಲ. BSB BSB: I, yes I, am He who blots out your transgressions for My own sake and remembers your sins no more.
26 ULB ನನಗೆ ನನ್ನ ಪಾಪಗಳನ್ನು ಜ್ಞಾಪಕಪಡಿಸು, ನಾವಿಬ್ಬರೂ ನಿನ್ನ ಅಪಾರಾಧ ಕುರಿತು ವಾದಿಸುವ, ನಿನ್ನ ಸದ್ಧರ್ಮವು ಗೊತ್ತಾಗುವಂತೆ ನಿನ್ನ ನ್ಯಾಯವನ್ನು ತೋರ್ಪಡಿಸು. BSB BSB: Remind Me, let us argue the matter together. State your case, so that you may be vindicated.
27 ULB ನಿನ್ನ ಮೂಲಪಿತೃ ಪಾಪಮಾಡಿದ್ದಾನೆ, ನಿನ್ನ ಬೋಧಕರು ನನಗೆ ದ್ರೋಹಮಾಡಿದ್ದಾರೆ. BSB BSB: Your first father sinned, and your spokesmen rebelled against Me.
28 ULB ಆದಕಾರಣ ನಾನು ಪವಿತ್ರಾಲಯದ ಪ್ರಧಾನರನ್ನು ಹೊಲಸಿಗೆ ತಂದು ಯಾಕೋಬನ್ನು ಶಾಪಕ್ಕೂ, ಇಸ್ರಾಯೇಲನ್ನು ದೂಷಣೆಗೂ ಒಪ್ಪಿಸಿಬಿಟ್ಟಿದ್ದೇನೆ.>> BSB BSB: So I will disgrace the princes of your sanctuary, and I will devote Jacob to destruction and Israel to reproach.”
Select verses for actions: Enter goes to them and Escape comes back.