2 ULB ಸದ್ಭಕ್ತರು ದೇಶದೊಳಗಿಂದ ನಾಶವಾಗಿದ್ದಾರೆ. ಜನರಲ್ಲಿ ಸತ್ಯವಂತರೇ ಇಲ್ಲ. ಸರ್ವರೂ ರಕ್ತಸುರಿಸಬೇಕೆಂದು ಹೊಂಚುಹಾಕುತ್ತಾರೆ. ಒಬ್ಬರನ್ನೊಬ್ಬರು ಬಲೆಯೊಡ್ಡಿ ಬೇಟೆಯಾಡುತ್ತಾರೆ. BSB BSB: The godly man has perished from the earth; there is no one upright among men. They all lie in wait for blood; they hunt one another with a net.
3 ULB ಎರಡು ಕೈಗಳನ್ನು ಹಾಕಿ ಕೆಟ್ಟ ಕೆಲಸವನ್ನು ಚೆನ್ನಾಗಿ ಮಾಡುತ್ತಾರೆ. ಪ್ರಭುವು ಧನವನ್ನು ಕೇಳುತ್ತಾನೆ. ನ್ಯಾಯಾಧಿಪತಿಯು ಲಂಚಕ್ಕೆ ಕೈಯೊಡ್ಡುತ್ತಾನೆ. ದೊಡ್ಡ ಮನುಷ್ಯನು ತನ್ನ ದುರಾಶೆಯನ್ನು ತಿಳಿಸುತ್ತಾನೆ. ಹೀಗೆ ಕುಯುಕ್ತಿಯನ್ನು ಹೆಣೆಯುತ್ತಾರೆ. BSB BSB: Both hands are skilled at evil; the prince and the judge demand a bribe. When the powerful utters his evil desire, they all conspire together.
4 ULB ಅವರಲ್ಲಿ ಉತ್ತಮನೂ ಮುಳ್ಳಿನ ಪೊದೆಗೆ ಸಮಾನ, ಸತ್ಯವಂತನೂ ಕೂಡ ಮುಳ್ಳುಬೇಲಿಗಿಂತ ಕಡೆ. ನಿನ್ನ ಕಾವಲುಗಾರರು ಮುಂತಿಳಿಸಿದ ದಿನ ನಿನ್ನ ದಂಡನೆಯ ದಿನ ಬಂದಿದೆ. ಈಗ ನಿನ್ನ ಜನರಿಗೆ ಭ್ರಾಂತಿ ಹಿಡಿಯುವುದು. BSB BSB: The best of them is like a brier; the most upright is sharper than a hedge of thorns. The day for your watchmen has come, the day of your visitation. Now is the time of their confusion.
5 ULB ಮಿತ್ರನನ್ನು ನಂಬಬೇಡ, ಆಪ್ತನಲ್ಲಿ ಭರವಸವಿಡಬೇಡ. ನಿನ್ನ ಎದೆಯ ಮೇಲೆ ಒರಗುವವಳಿಗೆ ನಿನ್ನ ರಹಸ್ಯ ತಿಳಿಸಬೇಡ ಭದ್ರವಾಗಿಟ್ಟುಕೋ. BSB BSB: Do not rely on a friend; do not trust in a companion. Seal the doors of your mouth from her who lies in your arms.
7 ULB ನಾನಂತು ಯೆಹೋವನನ್ನು ಎದುರುನೋಡುವೆನು. ನನ್ನ ರಕ್ಷಕನಾದ ದೇವರನ್ನು ನಿರೀಕ್ಷಿಸಿಕೊಂಡಿರುವೆ. ನನ್ನ ದೇವರು ನನ್ನ ಕಡೆಗೆ ಕಿವಿಗೊಡುವನು. BSB BSB: But as for me, I will look to the LORD; I will wait for the God of my salvation. My God will hear me.
8 ULB ನನ್ನ ಶತ್ರುವೇ, ನನ್ನ ವಿಷಯದಲ್ಲಿ ಹಿಗ್ಗಬೇಡ. ನಾನು ಬಿದ್ದಿದ್ದರೂ ಏಳುವೆನು, ಕತ್ತಲಲ್ಲಿ ಕುಳಿತ್ತಿದ್ದರೂ ಯೆಹೋವನು ನನಗೆ ಬೆಳಕಾಗಿರುವನು. BSB BSB: Do not gloat over me, my enemy! Though I have fallen, I will arise; though I sit in darkness, the LORD will be my light.
9 ULB ನಾನು ಯೆಹೋವನಿಗೆ ಪಾಪ ಮಾಡಿದ್ದರಿಂದ ಆತನ ಕೋಪವನ್ನು ತಾಳಿಕೊಂಡಿರುವೆನು. ಕಾಲಾನುಕಾಲಕ್ಕೆ ಆತನು ತನ್ನ ವ್ಯಾಜ್ಯವನ್ನು ನಿರ್ವಹಿಸಿ, ನನಗೆ ನ್ಯಾಯವನ್ನು ತೀರಿಸುವನು. ನನ್ನನ್ನು ಬೆಳಕಿಗೆ ತರುವನು. ಆತನ ರಕ್ಷಣಾಧರ್ಮವನ್ನು ನೋಡುವೆನು. BSB BSB: Because I have sinned against Him, I must endure the rage of the LORD, until He argues my case and executes justice for me. He will bring me into the light; I will see His righteousness.
10 ULB <<ನಿನ್ನ ದೇವರಾದ ಯೆಹೋವನು ಎಲ್ಲಿ?>> ಎಂದು ನನ್ನನ್ನು ಹೀಯಾಳಿಸಿದ ಶತ್ರುಗಳು ಇದನ್ನು ನೋಡುವಾಗ ನಾಚಿಕೆಯು ಅವರನ್ನು ಕವಿದುಕೊಳ್ಳುವುದು. ನಾನು ಅವರನ್ನು ಕಣ್ಣಾರೆ ನೋಡುವೆನು. ಈಗಲೇ ಬೀದಿಗಳ ಕೆಸರಿನಂತೆ ತುಳಿತಕ್ಕೀಡಾಗುವರು. BSB BSB: Then my enemy will see and will be covered with shame—she who said to me, “Where is the LORD your God?” My eyes will see her; at that time she will be trampled like mud in the streets.
11 ULB ಆಹಾ, ನಿನ್ನ ಪೌಳಿಗೋಡೆಗಳನ್ನು ಕಟ್ಟುವ ದಿನವು ಬರುವುದು. ಆ ದಿನದಲ್ಲಿ ನಿನ್ನ ಮೇರೆಯು ದೂರದ ತನಕ ವಿಸ್ತರಿಸಿಕೊಂಡಿರುವುದು. BSB BSB: The day for rebuilding your walls will come—the day for extending your boundary.
12 ULB ಅದೇ ದಿನದಲ್ಲಿ ನಿನ್ನ ಜನರು ಅಶ್ಶೂರದಿಂದಲೂ, ಐಗುಪ್ತದ ಪಟ್ಟಣಗಳಿಂದಲೂ ನಿನ್ನ ಬಳಿಗೆ ಕೂಡಿ ಬರುವರು. ಸಮುದ್ರದಿಂದ ಸಮುದ್ರದವರೆಗೆ, ಪರ್ವತದಿಂದ ಪರ್ವತದವರೆಗೆ ಅಂತು ಐಗುಪ್ತದಿಂದ ಯೂಫ್ರೆಟಿಸ್ ನದಿಯವರೆಗೂ ಚದುರಿರುವ ನಿನ್ನ ಸಕಲ ಜನರು ನಿನ್ನನ್ನು ಸೇರುವರು. BSB BSB: On that day they will come to you from Assyria and the cities of Egypt, even from Egypt to the Euphrates, from sea to sea and mountain to mountain.
13 ULB ಆದರೆ ಅಷ್ಟರೊಳಗೆ ಈ ದೇಶವು ತನ್ನ ನಿವಾಸಿಗಳ ನಿಮಿತ್ತ ಅವರ ದುಷ್ಕೃತ್ಯಗಳ ಫಲವಾಗಿ ಹಾಳುಬಿದ್ದಿರುವುದು. BSB BSB: Then the earth will become desolate because of its inhabitants, as the fruit of their deeds.
14 ULB ಫಲವತ್ತಾದ ಭೂಮಿಯ ಮಧ್ಯದಲ್ಲಿನ ಕಾಡಿನೊಳಗೆ ಪ್ರತ್ಯೇಕವಾಗಿ ತಂಗುವ ನಿನ್ನ ಜನರನ್ನು, ನಿನ್ನ ಸ್ವತ್ತಾದ ಹಿಂಡನ್ನು ನಿನ್ನ ದಿವ್ಯಹಸ್ತದಿಂದ ಮೇಯಿಸು. ಪೂರ್ವಕಾಲದಂತೆ ಬಾಷಾನಿನಲ್ಲಿಯೂ, ಗಿಲ್ಯಾದಿನಲ್ಲಿಯೂ ಮೇಯಲಿ. BSB BSB: Shepherd with Your staff Your people, the flock of Your inheritance. They live alone in a woodland, surrounded by pastures. Let them graze in Bashan and Gilead, as in the days of old.
15 ULB ನೀನು ಐಗುಪ್ತದೇಶದೊಳಗಿಂದ ಪಾರಾಗಿ ಬಂದ ಕಾಲದಲ್ಲಿ ನಾನು ತೋರಿಸಿದಂತೆ ಅದ್ಭುತಗಳನ್ನು ತೋರಿಸುವೆನು. BSB BSB: As in the days when you came out of Egypt, I will show My wonders.
16 ULB ಜನಾಂಗಗಳವರು ನೋಡಿ ತಮ್ಮ ಮಹಾ ಶಕ್ತಿಗೂ ನಾಚಿಕೆಪಡುವರು. ಬಾಯಿಯ ಮೇಲೆ ಕೈಯಿಟ್ಟುಕೊಳ್ಳುವರು. ಅವರ ಕಿವಿ ಕೇಳದಿರುವುದು. BSB BSB: Nations will see and be ashamed, deprived of all their might. They will put their hands over their mouths, and their ears will become deaf.
17 ULB ಹಾವಿನಂತೆ ಧೂಳನ್ನು ನೆಕ್ಕುವರು. ನೆಲದಲ್ಲಿ ಹರಿದಾಡುವ ಕ್ರಿಮಿಕೀಟಗಳ ಹಾಗೆ ತಮ್ಮ ಗುಪ್ತಸ್ಥಳಗಳಿಂದ ನಡುಗುತ್ತಾ ಈಚೆಗೆ ಹೊರಡುವರು. ಯೆಹೋವನೆಂಬ ನಮ್ಮ ದೇವರಾದ ನಿನ್ನನ್ನು ಅಂಜುತ್ತಾ, ಸೇವಿಸಿ ನಿನಗೆ ಭಯಪಡುವರು. BSB BSB: They will lick the dust like a snake, like reptiles slithering on the ground. They will come trembling from their strongholds in the presence of the LORD our God; they will tremble in fear of You.
18 ULB ನಿನಗೆ ಯಾವ ದೇವರು ಸಮಾನ? ನೀನು ನಿನ್ನ ಸ್ವತ್ತಿನವರಲ್ಲಿ ಉಳಿದಿರುವ ಅಪರಾಧವನ್ನು ಕ್ಷಮಿಸುವವನೂ, ಅವರ ದ್ರೋಹವನ್ನು ಲಕ್ಷಿಸದವನೂ ಆಗಿದ್ದೀ. ಹೌದು ನಮ್ಮ ದೇವರು ನಿತ್ಯವೂ ಕೋಪಿಸುವವನಲ್ಲ. ಕರುಣೆಯೇ ಆತನಿಗೆ ಇಷ್ಟ. BSB BSB: Who is a God like You, who pardons iniquity and passes over the transgression of the remnant of His inheritance—who does not retain His anger forever, because He delights in loving devotion?
19 ULB ಆತನು ಮತ್ತೊಮ್ಮೆ ನಮ್ಮನ್ನು ಕನಿಕರಿಸುವನು. ನಮ್ಮ ಅಪರಾಧಗಳನ್ನು ಅಣಗಿಸುವವನು. ದೇವರೇ, ನಿನ್ನ ಜನರ ಪಾಪಗಳನ್ನೆಲ್ಲಾ ಸಮುದ್ರದ ತಳಕ್ಕೆ ಬೀಸಾಡಿಬಿಡುವಿ. BSB BSB: He will again have compassion on us; He will vanquish our iniquities. You will cast out all our sins into the depths of the sea.
20 ULB ನೀನು ಪುರಾತನ ಕಾಲದಿಂದಲೂ ನಮ್ಮ ಪೂರ್ವಿಕರಿಗೆ ಪ್ರಮಾಣಮಾಡಿರುವಂತೆ ಯಾಕೋಬನ ವಂಶದವರಿಗೆ ಸತ್ಯಪರನಾಗಿಯೂ, ಅಬ್ರಹಾಮನ ವಂಶದವರಿಗೆ ಪ್ರೀತಿಪರನಾಗಿಯೂ ನಡೆಯುವಿ. BSB BSB: You will show faithfulness to Jacob and loving devotion to Abraham, as You swore to our fathers from the days of old.