1 ULB ಆಗ ಲೇವಿಯನ ಮರಿಮಗನೂ, ಕೆಹಾತನ ಮೊಮ್ಮಗನೂ, ಇಚ್ಚಾರನ ರೂಬೇನ್ ಕುಲದವರಲ್ಲಿ ಎಲೀಯಾಬನ ಮಕ್ಕಳಾದ ದಾತಾನನೂ, ಅಬೀರಾಮನೂ ಮತ್ತು ಪೆಲೆತನ ಮಗನಾದ ಓನನೂ ಕರೆದುಕೊಂಡು, ಕೆಲವು ಜನರನ್ನು ಕೂಡಿಸಿದರು. BSB BSB: Now Korah son of Izhar, the son of Kohath son of Levi, along with some Reubenites—Dathan and Abiram, sons of Eliab, and On son of Peleth—conducted
2 ULB ಇಸ್ರಾಯೇಲರ ಸಮೂಹದವರಲ್ಲಿದ್ದ ಮುಖ್ಯಸ್ಥರೂ, ಪ್ರಸಿದ್ಧರಾಗಿ ಹೆಸರು ಹೊಂದಿದ ಇನ್ನೂರೈವತ್ತು ಜನರು ಮೋಶೆಗೆ ವಿರುದ್ಧವಾಗಿ ಪ್ರತಿಭಟಿಸಿ ತಿರುಗಿಬಿದ್ದರು. BSB BSB: a rebellion against Moses, along with 250 men of Israel renowned as leaders of the congregation and representatives in the assembly.
3 ULB ಅವರು ಒಟ್ಟಾಗಿ ಕೂಡಿಕೊಂಡು ಮೋಶೆ ಮತ್ತು ಆರೋನರ ಬಳಿಗೆ ಬಂದು ಅವರಿಗೆ, <<ನೀವು ಹೆಚ್ಚು ಅಧಿಕಾರ ನಡೆಸುತ್ತೀರಿ. ಈ ಸಮೂಹದವರಲ್ಲಿ ಪ್ರತಿಯೊಬ್ಬನು ದೇವರಿಗೆ ಪ್ರತಿಷ್ಠಿತನಾದವನು, ಯೆಹೋವನು ಇವರೆಲ್ಲರ ಮಧ್ಯದಲ್ಲಿ ಇದ್ದಾನೆ. ಹೀಗಿರಲಾಗಿ ಯೆಹೋವನ ಸಮೂಹದವರಿಗಿಂತಲೂ ನಿಮ್ಮನ್ನು ನೀವೇ ಹೆಚ್ಚಿಸಿಕೊಳ್ಳುವುದು ಏಕೆ?>> ಎಂದು ಕೇಳಿದರು. BSB BSB: They came together against Moses and Aaron and told them, “You have taken too much upon yourselves! For everyone in the entire congregation is holy, and the LORD is in their midst. Why then do you exalt yourselves above the assembly of the LORD?”
4 ULB ಮೋಶೆ ಆ ಮಾತನ್ನು ಕೇಳಿ ಬೋರಲುಬಿದ್ದನು. BSB BSB: When Moses heard this, he fell facedown.
5 ULB ಮೋಶೆಯು ಕೋರಹನಿಗೂ ಮತ್ತು ಅವನ ಎಲ್ಲಾ ಸಮೂಹದವರಿಗೂ, <<ತನ್ನವರು ಯಾರು ಎಂಬುದನ್ನು ಯೆಹೋವನು ನಾಳೆ ತಿಳಿಸುವನು. ಯಾರನ್ನು ಯೆಹೋವನು ಪ್ರತಿಷ್ಠಿಸಿದ್ದಾನೋ, ಯಾರನ್ನು ಆದುಕೊಂಡಿದ್ದಾನೋ ಅವರನ್ನು ಮಾತ್ರ ಆತನು ತನ್ನ ಹತ್ತಿರಕ್ಕೆ ಬರಗೊಡಿಸುವನು. BSB BSB: Then he said to Korah and all his followers, “Tomorrow morning the LORD will reveal who belongs to Him and who is holy, and He will bring that person near to Himself. The one He chooses He will bring near to Himself.
6 ULB ನೀವು ಇದನ್ನು ಮಾಡಿರಿ- ಕೋರಹನೂ ಮತ್ತು ಅವನ ಸಮೂಹದವರೆಲ್ಲರೂ ಧೂಪಾರತಿಗಳನ್ನು ತೆಗೆದುಕೊಂಡು, BSB BSB: You, Korah, and all your followers are to do as follows: Take censers,
7 ULB ಅವುಗಳಲ್ಲಿ ಕೆಂಡಗಳನ್ನಿಟ್ಟು ನಾಳೆ ಯೆಹೋವನ ಸನ್ನಿಧಿಯಲ್ಲಿ ಧೂಪಹಾಕಿರಿ. ಆಗ ಯೆಹೋವನು ಯಾರನ್ನು ಮೆಚ್ಚುವನೋ ಅವನೇ ದೇವರಿಗೆ ಪ್ರತಿಷ್ಠಿತನೆಂದು ತಿಳಿದುಕೊಳ್ಳುವಿರಿ. ಲೇವಿಯರೇ, ನಿಮ್ಮ ವರ್ತನೆ ಅತಿಯಾಯಿತು>> ಎಂದು ಹೇಳಿದನು. BSB BSB: and tomorrow you are to place fire and incense in them in the presence of the LORD. Then the man the LORD chooses will be the one who is holy. It is you sons of Levi who have taken too much upon yourselves!”
8 ULB ಪುನಃ ಮೋಶೆ ಕೋರಹನಿಗೆ, <<ಲೇವಿಯ ಸಂತಾನದವರೇ, ಈಗ ಕೇಳಿರಿ, BSB BSB: Moses also said to Korah, “Now listen, you sons of Levi!
9 ULB ಇಸ್ರಾಯೇಲರ ದೇವರಾದ ಯೆಹೋವನು ತನ್ನ ಗುಡಾರದ ಸೇವಾಕಾರ್ಯವನ್ನು ಮಾಡುವುದಕ್ಕೂ, ಸರ್ವಸಮೂಹದವರಿಗೋಸ್ಕರ ಸೇವೆಯನ್ನು ಮಾಡುವುದಕ್ಕೂ ನಿಮ್ಮನ್ನು ಹತ್ತಿರ ಬರಮಾಡಿಕೊಂಡು, ಸಮೂಹದವರಿಂದ ನಿಮ್ಮನ್ನು ಪ್ರತ್ಯೇಕಿಸಿದ್ದು ನಿಮಗೆ ಅಲ್ಪವಾಗಿ ತೋರುತ್ತದೋ? BSB BSB: Is it not enough for you that the God of Israel has separated you from the congregation of Israel and brought you near to Himself to perform the work at the LORD’s tabernacle, and to stand before the congregation to minister to them?
10 ULB ಆತನು ನಿನ್ನನ್ನೂ, ನಿನ್ನ ಸ್ವಕುಲದವರಾದ ಲೇವಿಯರನ್ನೂ ತನ್ನ ಹತ್ತಿರ ಬರಮಾಡಿಕೊಂಡಿದ್ದಾನೆ. ನೀವು ಸಹ ಯಾಜಕತ್ವವನ್ನು ಬಯಸುತ್ತಿರೋ? BSB BSB: He has brought you near, you and all your fellow Levites, but you are seeking the priesthood as well.
11 ULB ನೀನು ಮತ್ತು ನಿನ್ನ ಸಮೂಹದವರೆಲ್ಲರು ಯೆಹೋವನಿಗೆ ವಿರುದ್ಧವಾಗಿ ಕೂಡಿಕೊಂಡಿರಿ, ನನಗೆ ವಿಧೇಯನಾಗಿ ನಡೆಯುವ ಆರೋನನ ವಿರುದ್ಧವಾಗಿ ನೀವು ಗುಣಗುಟ್ಟುವುದೇಕೆ?>> ಎಂದು ಕೇಳಿದನು. BSB BSB: Therefore, it is you and all your followers who have conspired against the LORD! As for Aaron, who is he that you should grumble against him?”
12 ULB ಮೋಶೆಯು, ಎಲೀಯಾಬನ ಮಕ್ಕಳಾದ ದಾತಾನ್ ಮತ್ತು ಅಬೀರಾಮರನ್ನು ಕರೆದುಕೊಂಡು ಬರಲು ಹೇಳಿದರು ಅವರು ಅವನಿಗೆ, <<ನಾವು ಬರುವುದಿಲ್ಲ. BSB BSB: Then Moses summoned Dathan and Abiram, the sons of Eliab, but they said, “We will not come!
13 ULB ನೀನು ಹಾಲೂ ಮತ್ತು ಜೇನೂ ಹರಿಯುವ ದೇಶದಿಂದ ಕರೆದುಕೊಂಡು ಬಂದು ನಮ್ಮನ್ನು ಮರುಭೂಮಿಯಲ್ಲಿ ಸಾಯಿಸುವುದು ನಿನಗೆ ಸಾಕಾಗಲಿಲ್ಲವೋ? ನೀನು ನಮ್ಮ ಮೇಲೆ ದೊರೆತನ ಮಾಡಬೇಕು ಎಂದು ಕೋರುತ್ತಿಯೋ? BSB BSB: Is it not enough that you have brought us up out of a land flowing with milk and honey to kill us in the wilderness? Must you also appoint yourself as ruler over us?
14 ULB ಅಷ್ಟು ಮಾತ್ರವೇ ಅಲ್ಲ, ನೀನು ಹಾಲೂ ಜೇನೂ ಹರಿಯುವ ದೇಶಕ್ಕೆ ನಮ್ಮನ್ನು ಸೇರಿಸಲಿಲ್ಲ; ಹೊಲಗಳನ್ನೂ, ದ್ರಾಕ್ಷಿತೋಟಗಳನ್ನೂ ನಮಗೆ ಸ್ವಂತಕ್ಕೆ ಕೊಡಲೇ ಇಲ್ಲ; ಈ ಜನರ ಕಣ್ಣಿಗೆ ಮಣ್ಣು ಹಾಕಬೇಕೆಂದಿದ್ದೀಯೋ? ನಾವು ಬರುವುದಿಲ್ಲ>> ಎಂದು ಹೇಳಿದನು. BSB BSB: Moreover, you have not brought us into a land flowing with milk and honey or given us an inheritance of fields and vineyards. Will you gouge out the eyes of these men? No, we will not come!”
15 ULB ಅದಕ್ಕೆ ಮೋಶೆಯು ಬಹಳ ಕೋಪಗೊಂಡು ಯೆಹೋವನಿಗೆ, <<ನೀನು ಅವರ ನೈವೇದ್ಯವನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳಬೇಡ; ನಾನು ಅವರಿಂದ ಒಂದು ಕತ್ತೆಯನ್ನಾದರೂ ತೆಗೆದುಕೊಂಡವನಲ್ಲ; ಅವರಲ್ಲಿ ಒಬ್ಬನಿಗಾದರೂ ಹಾನಿ ಮಾಡಿದವನಲ್ಲ>> ಎಂದು ಮನವಿಮಾಡಿದನು. BSB BSB: Then Moses became very angry and said to the LORD, “Do not regard their offering. I have not taken one donkey from them or mistreated a single one of them.”
16 ULB ಮೋಶೆ ಕೋರಹನಿಗೆ, <<ನಾಳೆ ನೀನೂ, ನಿನ್ನ ಸಮೂಹದವರೆಲ್ಲರೂ ಮತ್ತು ಆರೋನನೂ ಯೆಹೋವನ ಸನ್ನಿಧಿಗೆ ಬರಬೇಕು. BSB BSB: And Moses said to Korah, “You and all your followers are to appear before the LORD tomorrow—you and they and Aaron.
17 ULB ಅವರಲ್ಲಿ ಒಬ್ಬೊಬ್ಬನು ತನ್ನ ತನ್ನ ಧೂಪಾರತಿಗಳನ್ನು, ಒಟ್ಟಾಗಿ ಇನ್ನೂರೈವತ್ತು ಧೂಪಾರತಿಯನ್ನು ತೆಗೆದುಕೊಂಡು ಧೂಪಹಾಕಿ ಯೆಹೋವನ ಸನ್ನಿಧಿಗೆ ಬರಬೇಕು. ಹಾಗೆಯೇ ನೀನು ಮತ್ತು ಆರೋನನು ನಿಮ್ಮ ನಿಮ್ಮ ಧೂಪಾರತಿಗಳನ್ನು ತೆಗೆದುಕೊಂಡು ಬರಬೇಕು>> ಎಂದು ಹೇಳಿದನು. BSB BSB: Each man is to take his censer, place incense in it, and present it before the LORD—250 censers. You and Aaron are to present your censers as well.”
18 ULB ಅದಕ್ಕೆ ಅನುಸಾರವಾಗಿ ಅವರೆಲ್ಲರೂ ತಮ್ಮ ತಮ್ಮ ಧೂಪಾರತಿಗಳನ್ನು ಕೈಯಲ್ಲಿ ತೆಗೆದುಕೊಂಡು ಅವುಗಳಲ್ಲಿ ಕೆಂಡಗಳನ್ನಿಟ್ಟು ಧೂಪದ್ರವ್ಯಗಳನ್ನು ಹಾಕಿ ಮೋಶೆ ಮತ್ತು ಆರೋನರ ಜೊತೆಯಲ್ಲಿ ದೇವದರ್ಶನದ ಗುಡಾರದ ಬಾಗಿಲಿನಲ್ಲಿ ನಿಂತುಕೊಂಡರು. BSB BSB: So each man took his censer, put fire and incense in it, and stood with Moses and Aaron at the entrance to the Tent of Meeting.
19 ULB ಅದಲ್ಲದೆ ಕೋರಹನು ತಮಗೆ ಎದುರಾದ ಸರ್ವಸಮೂಹದವರನ್ನು ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರಕ್ಕೆ ಕೂಡಿಸಿದನು. ಆಗ ಯೆಹೋವನ ತೇಜಸ್ಸು ಸಮೂಹದವರೆಲ್ಲರಿಗೂ ಕಾಣಿಸಿತು. BSB BSB: When Korah had gathered his whole assembly against them at the entrance to the Tent of Meeting, the glory of the LORD appeared to the whole congregation.
20 ULB ಯೆಹೋವನು ಮೋಶೆ ಮತ್ತು ಆರೋನನ ಸಂಗಡ ಮಾತನಾಡಿ ಹೇಳಿದ್ದೇನೆಂದರೆ, BSB BSB: And the LORD said to Moses and Aaron,
21 ULB <<ನೀವು ಈ ಸರ್ವಸಮೂಹದವರಿಂದ ಪ್ರತ್ಯೇಕವಾಗಿ ನಿಲ್ಲಿರಿ; ನಾನು ಇವರನ್ನು ಒಂದು ಕ್ಷಣದಲ್ಲಿ ದಹಿಸಿಬಿಡುತ್ತೇನೆ>> ಎಂದು ಆಜ್ಞಾಪಿಸಿದನು. BSB BSB: “Separate yourselves from this congregation so that I may consume them in an instant.”
22 ULB ಅವರು ಬೋರಲುಬಿದ್ದು, <<ದೇವರೇ, ಎಲ್ಲಾ ಮನುಷ್ಯರ ಆತ್ಮಗಳಿಗೆ ದೇವರಾಗಿರುವವನೇ, ಇವರಲ್ಲಿ ದೋಷಿಯಾದವನು ಒಬ್ಬನೇ ಆಗಿರಲಾಗಿ ಸರ್ವಸಮೂಹದವರೆಲ್ಲರ ಮೇಲೆ ಕೋಪಗೊಳ್ಳಬಹುದೋ?>> ಎಂದು ಬಿನ್ನೈಸಿದನು. BSB BSB: But Moses and Aaron fell facedown and said, “O God, the God of the spirits of all flesh, when one man sins, will You be angry with the whole congregation?”
23 ULB ಆಗ ಯೆಹೋವನು ಮೋಶೆಗೆ ಉತ್ತರವಾಗಿ, BSB BSB: Then the LORD said to Moses,
24 ULB <<ಇಸ್ರಾಯೇಲರ ಸಮೂಹದವರಿಗೆ, <ಕೋರಹ, ದಾತಾನ್ ಮತ್ತು ಅಬೀರಾಮರ ಗುಡಾರದಿಂದ ದೂರವಿರಬೇಕು> ಎಂದು ಅವರಿಗೆ ಆಜ್ಞಾಪಿಸು>> ಎಂದು ಹೇಳಿದನು. BSB BSB: “Tell the congregation to move away from the dwellings of Korah, Dathan, and Abiram.”
25 ULB ಆಗ ಮೋಶೆ ಎದ್ದು ದಾತಾನ್ ಮತ್ತು ಅಬೀರಾಮರ ಬಳಿಗೆ ಹೋದನು; ಇಸ್ರಾಯೇಲರ ಹಿರಿಯರು ಅವನ ಹಿಂದೆ ಹೋದರು. BSB BSB: So Moses got up and went to Dathan and Abiram, and the elders of Israel followed him.
26 ULB ಅವನು ಇಸ್ರಾಯೇಲರ ಸಮೂಹದವರಿಗೆ, <<ನೀವು ಈ ದುಷ್ಟರ ಡೇರೆಗಳ ಬಳಿಯಲ್ಲಿ ಇರದೆ ದೂರ ಹೋಗಬೇಕು; ಇವರ ಸೊತ್ತಿನಲ್ಲಿ ಯಾವುದನ್ನೂ ಮುಟ್ಟಬಾರದು; ಇವರ ದೋಷಗಳಿಗಾಗಿ ಉಂಟಾಗುವ ಶಿಕ್ಷೆ ನಿಮ್ಮನ್ನೂ ಕೊಚ್ಚಿಕೊಂಡು ಹೋದೀತು>> ಎಂದು ಹೇಳಿದನು. BSB BSB: And he warned the congregation, “Move away now from the tents of these wicked men. Do not touch anything that belongs to them, or you will be swept away because of all their sins.”
27 ULB ಆದಕಾರಣ ಅವರೆಲ್ಲರೂ ಕೋರಹ, ದಾತಾನ್ ಮತ್ತು ಅಬೀರಾಮರ ಗುಡಾರದಿಂದ ದೂರ ಹೋದರು. ದಾತಾನ್ ಮತ್ತು ಅಬೀರಾಮರೂ ಅವರ ಹೆಂಡತಿ, ಮಕ್ಕಳು ಮತ್ತು ಅವರಿಗೆ ಸಂಬಂಧಪಟ್ಟವರೆಲ್ಲರೂ ಹೊರಗೆ ಬಂದು ತಮ್ಮ ತಮ್ಮ ಡೇರೆಗಳ ಬಾಗಿಲುಗಳಲ್ಲಿ ನಿಂತುಕೊಂಡರು. BSB BSB: So they moved away from the dwellings of Korah, Dathan, and Abiram. Meanwhile, Dathan and Abiram had come out and stood at the entrances to their tents with their wives and children and infants.
28 ULB ಆಗ ಮೋಶೆ ಜನರಿಗೆ, <<ಈ ಕಾರ್ಯಗಳೆಲ್ಲಾ ನನ್ನ ಆಲೋಚನೆಯಿಂದ ಆಗಲಿಲ್ಲವೆಂದೂ ಮತ್ತು ಯೆಹೋವನೇ ಇವುಗಳನ್ನು ನಡಿಸುವುದಕ್ಕೆ ನನ್ನನ್ನು ಕಳುಹಿಸಿದನೆಂದೂ ನೀವೇ ತಿಳಿದುಕೊಳ್ಳುವಿರಿ. BSB BSB: Then Moses said, “This is how you will know that the LORD has sent me to do all these things, for it was not my own doing:
29 ULB ಹೇಗೆಂದರೆ, ಎಲ್ಲರೂ ಸಾಯುವ ರೀತಿಯಲ್ಲೇ ಇವರು ಸತ್ತರೆ, ಇಲ್ಲವೆ ಎಲ್ಲರಿಗೂ ಸಂಭವಿಸುವ ಗತಿ ಇವರಿಗುಂಟಾದರೆ ಯೆಹೋವನು ನನ್ನನ್ನು ಕಳುಹಿಸಲಿಲ್ಲವೆಂದು ತಿಳಿದುಕೊಳ್ಳಬೇಕು. BSB BSB: If these men die a natural death, or if they suffer the fate of all men, then the LORD has not sent me.
30 ULB ಆದರೆ ಯೆಹೋವನು ಇವರಿಗೋಸ್ಕರ ಭೂಮಿಯು ಬಾಯ್ದೆರೆದು ಇವರನ್ನೂ, ಇವರ ಸರ್ವಸ್ವವನ್ನೂ ನುಂಗಿ, ಇವರು ಸಜೀವಿಗಳಾಗಿ ಪಾತಾಳಕ್ಕೆ ಹೋಗಿಬಿಟ್ಟರೆ, ಇವರು ಯೆಹೋವನನ್ನು ತಿರಸ್ಕರಿಸಿದವರೆಂದು ನೀವು ತಿಳಿದುಕೊಳ್ಳಬೇಕು>> ಎಂದು ಹೇಳಿದನು. BSB BSB: But if the LORD brings about something unprecedented, and the earth opens its mouth and swallows them and all that belongs to them so that they go down alive into Sheol, then you will know that these men have treated the LORD with contempt.”
31 ULB ಮೋಶೆ ಈ ಮಾತುಗಳನ್ನು ಹೇಳಿ ಮುಗಿಸಿದ ಕೂಡಲೆ ಆ ಮನುಷ್ಯರ ಕೆಳಗಿದ್ದ ನೆಲವು ಸೀಳಿತು. BSB BSB: As soon as Moses had finished saying all this, the ground beneath them split open,
32 ULB ಭೂಮಿಯು ಬಾಯ್ದೆರೆದು ಅವರನ್ನೂ ಮತ್ತು ಕೋರಹನಿಗೆ ಸೇರಿದ ಮನುಷ್ಯರೆಲ್ಲರನ್ನೂ, ಅವರ ಸರ್ವಸ್ವವನ್ನೂ ನುಂಗಿಬಿಟ್ಟಿತು. BSB BSB: and the earth opened its mouth and swallowed them and their households—all Korah’s men and all their possessions.
33 ULB ಅವರು ಸಜೀವಿಗಳಾಗಿ ತಮ್ಮ ಸರ್ವಸ್ವ ಸಹಿತವಾಗಿ ಪಾತಾಳಕ್ಕೆ ಹೋಗಿಬಿಟ್ಟರು, ಭೂಮಿಯು ಅವರನ್ನು ಮುಚ್ಚಿಕೊಂಡಿತು. ಹೀಗೆ ಅವರು ಸಮೂಹದವರೊಳಗಿಂದ ನಾಶವಾದರು. BSB BSB: They went down alive into Sheol with all they owned. The earth closed over them, and they vanished from the assembly.
34 ULB ಅವರ ಸುತ್ತಲಿದ್ದ ಇಸ್ರಾಯೇಲರೆಲ್ಲರೂ ಹೆದರಿಕೊಂಡು, <<ಭೂಮಿಯು ನಮ್ಮನ್ನೂ ಸಹ ನುಂಗಿಬಿಟ್ಟೀತು!>> ಎಂದು ಹೇಳಿ ಓಡಿಹೋದರು. BSB BSB: At their cries, all the people of Israel who were around them fled, saying, “The earth may swallow us too!”
35 ULB ನಂತರ ಯೆಹೋವನ ಬಳಿಯಿಂದ ಬೆಂಕಿಹೊರಟು, ಧೂಪವನ್ನು ಅರ್ಪಿಸುತ್ತಿದ್ದ ಆ ಇನ್ನೂರೈವತ್ತು ಮಂದಿಯನ್ನು ದಹಿಸಬಿಟ್ಟಿತು. BSB BSB: And fire came forth from the LORD and consumed the 250 men who were offering the incense.
36 ULB ಆಗ ಯೆಹೋವನು ಮೋಶೆಯ ಸಂಗಡ ಮಾತನಾಡಿ BSB BSB: Then the LORD said to Moses,
37 ULB <<ಯಾಜಕನಾದ ಆರೋನನ ಮಗನಾದ ಎಲ್ಲಾಜಾರನಿಗೆ, ಧೂಪಾರತಿಗಳು ಪರಿಶುದ್ಧವಾಗಿರುವುದರಿಂದ ದಹಿಸಲ್ಪಟ್ಟವರ ಮಧ್ಯದಿಂದ ಆ ಧೂಪಾರತಿಗಳನ್ನು ತೆಗೆಯಬೇಕೆಂದು ಆಜ್ಞಾಪಿಸು ಮತ್ತು ನೀನು ಅವುಗಳಲ್ಲಿರುವ ಕೆಂಡಗಳನ್ನು ದೂರ ಚೆಲ್ಲು. BSB BSB: “Tell Eleazar son of Aaron the priest to remove the censers from the flames and to scatter the coals far away, because the censers are holy.
38 ULB ತಮ್ಮ ಪಾಪಗಳಿಂದ ಪ್ರಾಣವನ್ನು ಕಳೆದುಕೊಂಡ ಆ ದೋಷಿಗಳ ಧೂಪಾರತಿಗಳು ಯೆಹೋವನ ಸನ್ನಿಧಿಗೆ ತಂದ ಕಾರಣ ಅವು ಪರಿಶುದ್ಧವಾದವು. ಆದುದರಿಂದ ಅವುಗಳನ್ನು ತಗಡುಗಳನ್ನಾಗಿ ಮಾಡಿ, ಯಜ್ಞವೇದಿಗೆ ಮುಚ್ಚಳವನ್ನು ಮಾಡಿಸಬೇಕು. ಇಸ್ರಾಯೇಲರಿಗೆ ಅವು ಗುರುತುಗಳಾಗಿರಬೇಕು>> ಎಂದು ಹೇಳಿದನು. BSB BSB: As for the censers of those who sinned at the cost of their own lives, hammer them into sheets to overlay the altar, for these were presented before the LORD, and so have become holy. They will serve as a sign to the Israelites.”
39 ULB ಆಗ ಯಾಜಕನಾದ ಎಲ್ಲಾಜಾರನು ಯೆಹೋವನು ಮೋಶೆಯ ಮೂಲಕ ಹೇಳಿದ ಅಪ್ಪಣೆಯ ಪ್ರಕಾರ ದಹಿಸಿಹೋದವರು ಅರ್ಪಿಸಿದ ಆ ತಾಮ್ರದ ಧೂಪಾರತಿಗಳನ್ನು ತೆಗೆದುಕೊಂಡು ತಗಡುಗಳಾಗಿ ಮಾಡಿಸಿ, ಯಜ್ಞವೇದಿಯನ್ನು ಮುಚ್ಚಿದನು. BSB BSB: So Eleazar the priest took the bronze censers brought by those who had been burned up, and he had them hammered out to overlay the altar,
40 ULB ಆರೋನನ ಸಂತಾನಕ್ಕೆ ಸೇರದ ಬೇರೆ ಜನರು ಯೆಹೋವನ ಸನ್ನಿಧಿಗೆ ಬಂದು ಧೂಪವನ್ನು ಸಮರ್ಪಿಸಬಾರದು. ಸಮರ್ಪಿಸಿದರೆ ಕೋರಹನಿಗೂ ಮತ್ತು ಅವನ ಸಮೂಹದವರಿಗೂ ಆದ ಸ್ಥಿತಿಯೇ ಇವರಿಗೂ ಉಂಟಾಗುವುದೆಂಬುದನ್ನು ಇಸ್ರಾಯೇಲರಿಗೆ ಜ್ಞಾಪಿಸುವುದಕ್ಕೆ ಗುರುತಾಯಿತು. BSB BSB: just as the LORD commanded him through Moses. This was to be a reminder to the Israelites that no outsider who is not a descendant of Aaron should approach to offer incense before the LORD, lest he become like Korah and his followers.
41 ULB ಮರುದಿನ ಇಸ್ರಾಯೇಲರ ಸರ್ವಸಮೂಹದವರು ಮೋಶೆ ಮತ್ತು ಆರೋನರ ಮೇಲೆ ಗುಣುಗುಟ್ಟಿ, <<ನೀವೇ ಯೆಹೋವನ ಜನರನ್ನು ಸಾಯಿಸಿದಿರಿ>> ಎಂದು ಹೇಳುವವರಾದರು. BSB BSB: The next day the whole congregation of Israel grumbled against Moses and Aaron, saying, “You have killed the LORD’s people!”
42 ULB ಸರ್ವಸಮೂಹದವರೆಲ್ಲರೂ ಹೀಗೆ ಮೋಶೆ ಮತ್ತು ಆರೋನರಿಗೆ ವಿರುದ್ಧವಾಗಿ ಸೇರಿ ಬಂದಾಗ ದೇವದರ್ಶನದ ಗುಡಾರದ ಮೇಲೆ, ಮೇಘವು ಆವರಿಸಿಕೊಂಡಿತು ಮತ್ತು ಯೆಹೋವನ ತೇಜಸ್ಸು ಅಲ್ಲಿ ಕಾಣಿಸಿತು. BSB BSB: But when the congregation gathered against them, Moses and Aaron turned toward the Tent of Meeting, and suddenly the cloud covered it and the glory of the LORD appeared.
43 ULB ಮೋಶೆ ಮತ್ತು ಆರೋನರು ದೇವದರ್ಶನದ ಗುಡಾರದ ಮುಂಭಾಗಕ್ಕೆ ಬಂದರು. BSB BSB: Then Moses and Aaron went to the front of the Tent of Meeting,
44 ULB ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ, BSB BSB: and the LORD said to Moses,
45 ULB <<ನೀವಿಬ್ಬರೂ ಸಮೂಹದವರಲ್ಲಿ ಇರದೆ ಬೇರೆ ನಿಲ್ಲಬೇಕು. ನಾನು ಒಂದು ಕ್ಷಣಮಾತ್ರದಲ್ಲಿ ಅವರನ್ನು ದಹಿಸಿಬಿಡುತ್ತೇನೆ>> ಎಂದು ಹೇಳಿದನು. ಆಗ ಮೋಶೆ ಮತ್ತು ಆರೋನರು ಬೋರಲುಬಿದ್ದರು. BSB BSB: “Get away from this congregation so that I may consume them in an instant.” And Moses and Aaron fell facedown.
46 ULB ಮೋಶೆಯು ಆರೋನನಿಗೆ, <<ಯೆಹೋವನ ಕೋಪದಿಂದ ಈ ಜನರೊಳಗೆ ಘೋರವ್ಯಾಧಿಯು ಪ್ರಾರಂಭವಾಯಿತು. ನೀನು ಧೂಪಾರತಿಯನ್ನು ತೆಗೆದುಕೊಂಡು ಅದರಲ್ಲಿ ಯಜ್ಞವೇದಿಯಿಂದ ಕೆಂಡಗಳನ್ನು ಇಟ್ಟು ಧೂಪಹಾಕಿ, ಸಮೂಹದವರ ಬಳಿಗೆ ಬೇಗ ಹೋಗಿ ಅವರಿಗೋಸ್ಕರ ದೋಷಪರಿಹಾರವನ್ನು ಮಾಡಬೇಕು>> ಎಂದು ಹೇಳಿದನು. BSB BSB: Moses said to Aaron, “Take your censer, place fire from the altar in it, and add incense. Go quickly to the congregation and make atonement for them, because wrath has come out from the LORD; the plague has begun.”
47 ULB ಮೋಶೆ ಹೇಳಿದಂತೆ ಆರೋನನು ಧೂಪಾರತಿಯನ್ನು ತೆಗೆದುಕೊಂಡು ಸಮೂಹದವರ ಮಧ್ಯಕ್ಕೆ ಓಡಿದಾಗ ಘೋರವ್ಯಾಧಿಯು ಜನರೊಳಗೆ ಪ್ರಾರಂಭವಾಗಿತ್ತು. ಆದುದರಿಂದ ಅವನು ಧೂಪಹಾಕಿ ಜನರಿಗೋಸ್ಕರ ದೋಷಪರಿಹಾರವನ್ನು ಮಾಡಿದನು. BSB BSB: So Aaron took the censer as Moses had ordered and ran into the midst of the assembly. And seeing that the plague had begun among the people, he offered the incense and made atonement for the people.
48 ULB ಅವನು ಸತ್ತವರಿಗೂ, ಬದುಕುವವರಿಗೂ ಮಧ್ಯದಲ್ಲಿ ನಿಂತುಕೊಂಡುದರಿಂದ ಆ ವ್ಯಾಧಿಯು ಶಮನವಾಯಿತು. BSB BSB: He stood between the living and the dead, and the plague was halted.
49 ULB ಕೋರಹನ ನಿಮಿತ್ತ ಸತ್ತುಹೋದವರ ಹೊರತಾಗಿ ಆ ವ್ಯಾಧಿಯಿಂದ ಸತ್ತವರ ಸಂಖ್ಯೆ ಹದಿನಾಲ್ಕು ಸಾವಿರದ ಏಳುನೂರು ಮಂದಿ. BSB BSB: But those who died from the plague numbered 14,700, in addition to those who had died on account of Korah.
50 ULB ಆ ವ್ಯಾಧಿ ಶಮನವಾದಾಗ ಆರೋನನು ದೇವದರ್ಶನದ ಗುಡಾರದ ಬಾಗಿಲಿಗೆ ಮೋಶೆಯ ಬಳಿಗೆ ಹಿಂತಿರುಗಿ ಬಂದನು. BSB BSB: Then Aaron returned to Moses at the entrance to the Tent of Meeting, since the plague had been halted.
Select verses for actions: Enter goes to them and Escape comes back.