1 ULB ಯೆಹೋವನು ಸೀನಾಯಿ ಬೆಟ್ಟದಲ್ಲಿ ಮೋಶೆಯ ಸಂಗಡ ಮಾತನಾಡಿದ ಕಾಲದಲ್ಲಿದ್ದ ಮೋಶೆ ಮತ್ತು ಆರೋನರ ವಂಶದವರು. BSB BSB: This is the account of Aaron and Moses at the time the LORD spoke with Moses on Mount Sinai.
2 ULB ಆರೋನನ ಮಕ್ಕಳ ಹೆಸರುಗಳು: ಚೊಚ್ಚಲ ಮಗನಾದ ನಾದಾಬ್, ಅಬೀಹೂ, ಎಲ್ಲಾಜಾರ್ ಮತ್ತು ಈತಾಮಾರ್ ಎಂಬುವವರೇ. BSB BSB: These are the names of the sons of Aaron: Nadab the firstborn, then Abihu, Eleazar, and Ithamar.
3 ULB ಇವರು ಯಾಜಕ ಉದ್ಯೋಗವನ್ನು ನಡೆಸುವುದಕ್ಕಾಗಿ ಅಭಿಷೇಕಹೊಂದಿದವರಾಗಿ ಪ್ರತಿಷ್ಠಿತರಾದ ಆರೋನನ ಮಕ್ಕಳು. BSB BSB: These were Aaron’s sons, the anointed priests, who were ordained to serve as priests.
4 ULB ಆದರೆ ನಾದಾಬ್ ಮತ್ತು ಅಬೀಹೂ ಎಂಬುವವರು ಸೀನಾಯಿ ಮರುಭೂಮಿಯಲ್ಲಿ ಯೆಹೋವನು ಆಜ್ಞಾಪಿಸದೇ ಇದ್ದ ಬೇರೆ ಬೆಂಕಿಯಿಂದ ಧೂಪವನ್ನು ಸಮರ್ಪಿಸಿದ್ದರಿಂದ ಆತನ ಸನ್ನಿಧಿಯಲ್ಲೇ ಸತ್ತು ಹೋದರು. ಅವರಿಗೆ ಮಕ್ಕಳಿರಲಿಲ್ಲ. ಆದುದರಿಂದ ಎಲ್ಲಾಜಾರ್ ಮತ್ತು ಈತಾಮಾರ್ ಎಂಬಿಬ್ಬರು ತಮ್ಮ ತಂದೆಯಾದ ಆರೋನನ ಕೈಕೆಳಗೆ ಯಾಜಕಧರ್ಮವನ್ನು ನಡೆಸಿದರು. BSB BSB: Nadab and Abihu, however, died in the presence of the LORD when they offered unauthorized fire before the LORD in the Wilderness of Sinai. And since they had no sons, only Eleazar and Ithamar served as priests during the lifetime of their father Aaron.
5 ULB ಯೆಹೋವನು ಮೋಶೆಗೆ ಆಜ್ಞಾಪಿಸಿದ್ದೇನೆಂದರೆ, BSB BSB: Then the LORD said to Moses,
6 ULB <<ನೀನು ಲೇವಿಯ ಕುಲದವರನ್ನು ಹತ್ತಿರಕ್ಕೆ ಕರೆದು ಅವರು ದೇವರ ಸೇವಕಾರ್ಯಕ್ಕಾಗಿ ಯಾಜಕನಾದ ಆರೋನನ ಕೈಕೆಳಗಿರುವಂತೆ ಅವನ ಮುಂದೆ ನಿಲ್ಲಿಸು. BSB BSB: “Bring the tribe of Levi and present them to Aaron the priest to assist him.
7 ULB <<ಅವರು ದೇವದರ್ಶನದ ಗುಡಾರದ ಬಳಿಯಲ್ಲಿದ್ದು, ಆರೋನನಿಗೋಸ್ಕರವೂ ಸರ್ವಸಮೂಹದವರಿಗೋಸ್ಕರವೂ ದೇವಸ್ಥಾನದ ಸೇವಾಕಾರ್ಯವನ್ನು ನಡೆಸಬೇಕು. BSB BSB: They are to perform duties for him and for the whole congregation before the Tent of Meeting, attending to the service of the tabernacle.
8 ULB ಅವರು ದೇವದರ್ಶನದ ಗುಡಾರದ ಸಾಮಾನುಗಳನ್ನು ಕಾಯಬೇಕು. ಇಸ್ರಾಯೇಲರಿಗೋಸ್ಕರ ದೇವಸ್ಥಾನದ ಸೇವಕಾರ್ಯವನ್ನು ನಡೆಸಬೇಕು. BSB BSB: They shall take care of all the furnishings of the Tent of Meeting and fulfill obligations for the Israelites by attending to the service of the tabernacle.
9 ULB <<ನೀನು ಲೇವಿಯರನ್ನು ಆರೋನನಿಗೂ ಮತ್ತು ಅವನ ಮಕ್ಕಳಿಗೂ ಒಪ್ಪಿಸಬೇಕು. ಇಸ್ರಾಯೇಲರಲ್ಲಿ ಆರೋನನಿಗೆ ಸಂಪೂರ್ಣವಾಗಿ ಒಪ್ಪಿಸಲ್ಪಟ್ಟವರು ಇವರೇ. BSB BSB: Assign the Levites to Aaron and his sons; they have been given exclusively to him from among the Israelites.
10 ULB ಯಾಜಕ ಉದ್ಯೋಗವನ್ನು ನಡೆಸುವುದಕ್ಕಾಗಿ ಆರೋನನನ್ನು ಮತ್ತು ಅವನ ಮಕ್ಕಳನ್ನು ನೇಮಿಸಬೇಕು. ಇತರರು ಆ ಕೆಲಸಕ್ಕೆ ಕೈಹಾಕಿದರೆ ಅವರಿಗೆ ಮರಣಶಿಕ್ಷೆಯಾಗಬೇಕು>> ಎಂದು ಹೇಳಿದನು. BSB BSB: So you shall appoint Aaron and his sons to carry out the duties of the priesthood; but any outsider who approaches the tabernacle must be put to death.”
11 ULB ಯೆಹೋವನು ಮೋಶೆಯ ಸಂಗಡ ಮಾತನಾಡಿ ಅವನಿಗೆ ಹೇಳಿದ್ದೇನೆಂದರೆ, BSB BSB: Again the LORD spoke to Moses, saying,
12 ULB <<ನಾನು ಇಸ್ರಾಯೇಲರಲ್ಲಿ ಚೊಚ್ಚಲಾದ ಗಂಡಸರಿಗೆ ಬದಲಾಗಿ ಲೇವಿಯರನ್ನು ತೆಗೆದುಕೊಂಡಿದ್ದೇನೆ ಎಂದು ತಿಳಿದುಕೋ. ಆದುದರಿಂದ ಲೇವಿಯರು ನನ್ನ ಸೊತ್ತು. BSB BSB: “Behold, I have taken the Levites from among the children of Israel in place of every firstborn Israelite from the womb. The Levites belong to Me,
13 ULB ಇಸ್ರಾಯೇಲರಲ್ಲಿ ಚೊಚ್ಚಲಾದವರು ನನ್ನ ಸೊತ್ತು. ಐಗುಪ್ತ ದೇಶದಲ್ಲಿದ್ದ ಚೊಚ್ಚಲಾದದ್ದನ್ನೆಲ್ಲಾ ನಾನು ಸಂಹಾರಮಾಡಿದಾಗ ಇಸ್ರಾಯೇಲರಲ್ಲಿರುವ ಚೊಚ್ಚಲಾದ ಮನುಷ್ಯರನ್ನೂ, ಪಶುಗಳನ್ನೂ ನನ್ನ ಸ್ವಂತವಾಗಿ ಪ್ರತಿಷ್ಠಿಸಿಕೊಂಡೆನು; ಅವರು ನನ್ನವರಾಗಿರಬೇಕು. ನಾನೇ ಯೆಹೋವನು>> ಎಂದು ಹೇಳಿದನು. BSB BSB: for all the firstborn are Mine. On the day I struck down every firstborn in the land of Egypt, I consecrated to Myself all the firstborn in Israel, both man and beast. They are Mine; I am the LORD.”
14 ULB ಯೆಹೋವನು ಸೀನಾಯಿ ಮರುಭೂಮಿಯಲ್ಲಿ ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ, BSB BSB: Then the LORD spoke to Moses in the Wilderness of Sinai, saying,
15 ULB <<ನೀನು ಲೇವಿಯರಲ್ಲಿ ಒಂದು ತಿಂಗಳು ಮತ್ತು ಅದಕ್ಕೆ ಮೇಲ್ಪಟ್ಟ ವಯಸ್ಸುಳ್ಳ ಗಂಡಸರನ್ನೆಲ್ಲಾ ಗೋತ್ರಕುಟುಂಬಗಳ ಪ್ರಕಾರ ಲೆಕ್ಕಿಸಬೇಕು>> ಎಂದು ಆಜ್ಞಾಪಿಸಿದನು. BSB BSB: “Number the Levites by their families and clans. You are to count every male a month old or more.”
16 ULB ಯೆಹೋವನ ಅಪ್ಪಣೆಯ ಮೇರೆಗೆ ಮೋಶೆ ಅವರನ್ನು ಲೆಕ್ಕಿಸಿದನು. BSB BSB: So Moses numbered them according to the word of the LORD, as he had been commanded.
17 ULB ಲೇವಿಯ ಮಕ್ಕಳು ಯಾರೆಂದರೆ: ಗೇರ್ಷೋನ್, ಕೆಹಾತ್ ಮತ್ತು ಮೆರಾರೀ ಇವರೇ. BSB BSB: These were the sons of Levi by name: Gershon, Kohath, and Merari.
18 ULB ಗೋತ್ರಸ್ಥಾಪಕರಾದ ಗೇರ್ಷೋನನ ಮಕ್ಕಳು: ಲಿಬ್ನೀ, ಶಿಮ್ಮೀ ಇವರೇ. BSB BSB: These were the names of the sons of Gershon by their clans: Libni and Shimei.
19 ULB ಗೋತ್ರಸ್ಥಾಪಕರಾದ ಕೆಹಾತನ ಮಕ್ಕಳು: ಅಮ್ರಾಮ್, ಇಚ್ಹಾರ್, ಹೆಬ್ರೋನ್, ಉಜ್ಜೀಯೇಲ್, ಎಂಬುವವರು. BSB BSB: The sons of Kohath by their clans were Amram, Izhar, Hebron, and Uzziel.
20 ULB ಗೋತ್ರಸ್ಥಾಪಕರಾದ ಮೆರಾರೀಯ ಮಕ್ಕಳು: ಮಹ್ಲೀ, ಮೂಷೀ ಎಂಬುವವರು. ಗೋತ್ರಕುಟುಂಬಗಳ ಪ್ರಕಾರ ಇವರೇ ಲೇವಿಯ ವಂಶದವರು. BSB BSB: And the sons of Merari by their clans were Mahli and Mushi. These were the clans of the Levites, according to their families.
21 ULB ಗೇರ್ಷೋನ್ ವಂಶದವರಲ್ಲಿ ಲಿಬ್ನೀ ಗೋತ್ರದವರೂ ಶಿಮ್ಮೀ ಗೋತ್ರದವರೂ ಇದ್ದರು. BSB BSB: From Gershon came the Libnite clan and the Shimeite clan; these were the Gershonite clans.
22 ULB ಅವರಲ್ಲಿ ಲೆಕ್ಕಿಸಲ್ಪಟ್ಟ ಒಂದು ತಿಂಗಳು ಮತ್ತು ಅದಕ್ಕೆ ಮೇಲ್ಪಟ್ಟ ವಯಸ್ಸುಳ್ಳ ಗಂಡಸರ ಸಂಖ್ಯೆ 7,500 ಮಂದಿ. BSB BSB: The number of all the males a month old or more was 7,500.
23 ULB ಗೇರ್ಷೋನ್ಯರ ಗೋತ್ರದವರು ದೇವದರ್ಶನದ ಗುಡಾರದ ಹಿಂದೆ ಅಂದರೆ ಪಶ್ಚಿಮ ದಿಕ್ಕಿನಲ್ಲಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. BSB BSB: The Gershonite clans were to camp on the west, behind the tabernacle,
24 ULB ಗೇರ್ಷೋನ್ಯರ ಗೋತ್ರಗಳ ಪ್ರಧಾನಪುರುಷನು ಲಾಯೇಲನ ಮಗನಾದ ಎಲ್ಯಾಸಾಫ್. BSB BSB: and the leader of the families of the Gershonites was Eliasaph son of Lael.
25 ULB ದೇವದರ್ಶನದ ಗುಡಾರದ ಉಪಕರಣಗಳಲ್ಲಿ ಗೇರ್ಷೋನನ ವಂಶದವರು ನೋಡಿಕೊಳ್ಳಬೇಕಾದವುಗಳು ಯಾವುದೆಂದರೆ: ಗುಡಾರ ಅದರ ಮೇಲಣ ಡೇರೆಯ ಬಟ್ಟೆ, ಅದರ ಮೇಲ್ಹೊದಿಕೆ, ದೇವದರ್ಶನದ ಗುಡಾರದ ಬಾಗಿಲಲ್ಲಿರುವ ಪರದೆಗಳು, BSB BSB: The duties of the Gershonites at the Tent of Meeting were the tabernacle and tent, its covering, the curtain for the entrance to the Tent of Meeting,
26 ULB ಗುಡಾರದ ಮತ್ತು ಯಜ್ಞವೇದಿಯ ಸುತ್ತಲಿರುವ ಅಂಗಳದ ತೆರೆಗಳೂ, ಅಂಗಳದ ಬಾಗಿಲಿನ ಪರದೆಗಳು, ಇವುಗಳ ಹಗ್ಗಗಳೂ ಇವೇ. ಇಂತಹ ಸಕಲವಿಧವಾದ ಸೇವಕಾರ್ಯವನ್ನು ಗೇರ್ಷೋನ್ಯರು ಮಾಡಬೇಕು. BSB BSB: the curtains of the courtyard, the curtain for the entrance to the courtyard that surrounds the tabernacle and altar, and the cords—all the service for these items.
27 ULB ಕೆಹಾತ್ ವಂಶದವರಲ್ಲಿ ಅಮ್ರಾಮ್ ಗೋತ್ರದವರು, ಇಚ್ಹಾರ್ ಗೋತ್ರದವರೂ, ಹೆಬ್ರೋನ್ ಗೋತ್ರದವರೂ, ಉಜ್ಜೀಯೇಲ್ ಗೋತ್ರದವರೂ ಇದ್ದರು. BSB BSB: From Kohath came the clans of the Amramites, the Izharites, the Hebronites, and the Uzzielites; these were the clans of the Kohathites.
28 ULB ಅವರಲ್ಲಿ ದೇವಸ್ಥಾನವನ್ನು ನೋಡಿಕೊಳ್ಳತಕ್ಕವರು ಅಂದರೆ ಒಂದು ತಿಂಗಳು ಮತ್ತು ಅದಕ್ಕೆ ಮೇಲ್ಪಟ್ಟ ವಯಸ್ಸುಳ್ಳ ಗಂಡಸರ ಸಂಖ್ಯೆ 8,600 ಮಂದಿ. BSB BSB: The number of all the males a month old or more was 8,600. They were responsible for the duties of the sanctuary.
29 ULB ಕೆಹಾತ್ಯರ ಗೋತ್ರಗಳವರು ದೇವದರ್ಶನದ ಗುಡಾರದ ದಕ್ಷಿಣ ದಿಕ್ಕಿನಲ್ಲಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. BSB BSB: The clans of the Kohathites were to camp on the south side of the tabernacle,
30 ULB ಕೆಹಾತ್ಯರ ಗೋತ್ರಗಳ ಪ್ರಧಾನಪುರುಷನು ಉಜ್ಜೀಯೇಲನ ಮಗನಾದ ಎಲೀಚಾಫಾನ್. BSB BSB: and the leader of the families of the Kohathites was Elizaphan son of Uzziel.
31 ULB ಅವರು ನೋಡಿಕೊಳ್ಳಬೇಕಾದವುಗಳು ಯಾವುದೆಂದರೆ: ಮಂಜೂಷವು, ಮೇಜು, ದೀಪಸ್ತಂಭಗಳು, ಯಜ್ಞವೇದಿಗಳು, ದೇವಸ್ಥಾನದ ಸೇವೆಯ ಉಪಕರಣಗಳು, ಒಳಗಣ ತೆರೆಗಳು ಇವುಗಳೇ. ಇವುಗಳ ಸಕಲವಿಧವಾದ ಸೇವಕಾರ್ಯವನ್ನು ಅವರು ಮಾಡಬೇಕು. BSB BSB: Their duties were the ark, the table, the lampstand, the altars, the articles of the sanctuary used with them, and the curtain—all the service for these items.
32 ULB ಅದಲ್ಲದೆ ಮಹಾಯಾಜಕ ಆರೋನನ ಮಗನಾದ ಎಲ್ಲಾಜಾರನು ಲೇವಿಯರ ಪ್ರಧಾನಪುರುಷರ ಅಧ್ಯಕ್ಷನಾಗಿ ದೇವಸ್ಥಾನವನ್ನು ನೋಡಿಕೊಳ್ಳುವವರ ಮೇಲ್ವಿಚಾರಕನಾಗಿರಬೇಕು. BSB BSB: The chief of the leaders of the Levites was Eleazar son of Aaron the priest; he oversaw those responsible for the duties of the sanctuary.
33 ULB ಮೆರಾರೀ ವಂಶದವರಲ್ಲಿ ಮಹ್ಲೀ ಗೋತ್ರದವರೂ, ಮೂಷೀ ಗೋತ್ರದವರೂ ಇದ್ದರು. BSB BSB: From Merari came the clans of the Mahlites and Mushites; these were the Merarite clans.
34 ULB ಅವರಲ್ಲಿ ಲೆಕ್ಕಿಸಲ್ಪಟ್ಟ ಒಂದು ತಿಂಗಳು ಮತ್ತು ಅದಕ್ಕೆ ಮೇಲ್ಪಟ್ಟ ವಯಸ್ಸುಳ್ಳ ಗಂಡಸರ ಸಂಖ್ಯೆ 6,200 ಮಂದಿ. BSB BSB: The number of all the males a month old or more was 6,200.
35 ULB ಮೆರಾರೀಯರ ಗೋತ್ರಗಳ ಪ್ರಧಾನಪುರುಷನು ಅಬೀಹೈಲನ ಮಗನಾದ ಚೂರೀಯೇಲ್. ಇವರು ದೇವದರ್ಶನದ ಗುಡಾರದ ಉತ್ತರ ದಿಕ್ಕಿನಲ್ಲಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. BSB BSB: The leader of the families of the Merarites was Zuriel son of Abihail; they were to camp on the north side of the tabernacle.
36 ULB ಮೆರಾರೀ ವಂಶದವರು ನೋಡಿಕೊಳ್ಳಬೇಕಾದವುಗಳು ಯಾವುವೆಂದರೆ: ಗುಡಾರದ ಚೌಕಟ್ಟುಗಳು, ಅಗುಳಿಗಳು, ಕಂಬಗಳು, ಗದ್ದಿಗೆಕಲ್ಲುಗಳು, ಇವುಗಳ ಉಪಕರಣಗಳು, BSB BSB: The duties assigned to the sons of Merari were the tabernacle’s frames, crossbars, posts, bases, and all its equipment—all the service for these items,
37 ULB ಅಂಗಳದ ಸುತ್ತಲಿರುವ ಕಂಬಗಳು, ಇವುಗಳ ಗದ್ದಿಗೆಕಲ್ಲುಗಳು, ಗೂಟಗಳು, ಹಗ್ಗಗಳು ಇವುಗಳೇ. ಇವುಗಳ ಸಕಲ ವಿಧವಾದ ಸೇವಕಾರ್ಯವನ್ನು ಇವರೇ ಮಾಡಬೇಕು. BSB BSB: as well as the posts of the surrounding courtyard with their bases, tent pegs, and ropes.
38 ULB ದೇವದರ್ಶನದ ಗುಡಾರದ ಪೂರ್ವ ದಿಕ್ಕಿನಲ್ಲಿ ಅಂದರೆ ಸೂರ್ಯೋದಯವಾಗುವ ದಿಕ್ಕಿನಲ್ಲಿ ಮೋಶೆ, ಆರೋನನೂ ಮತ್ತು ಅವನ ಮಕ್ಕಳೂ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಅವರು ಇಸ್ರಾಯೇಲರಿಗೋಸ್ಕರವಾಗಿ ದೇವಸ್ಥಾನವನ್ನು ನೋಡಿಕೊಳ್ಳಬೇಕು. ಇತರರು ಆ ಕೆಲಸಕ್ಕೆ ಕೈಹಾಕಿದರೆ ಅವರಿಗೆ ಮರಣಶಿಕ್ಷೆಯಾಗಬೇಕು. BSB BSB: Moses, Aaron, and Aaron’s sons were to camp to the east of the tabernacle, toward the sunrise, before the Tent of Meeting. They were to perform the duties of the sanctuary as a service on behalf of the Israelites; but any outsider who approached the sanctuary was to be put to death.
39 ULB ಮೋಶೆ ಮತ್ತು ಆರೋನರು ಯೆಹೋವನ ಅಪ್ಪಣೆಯ ಮೇರೆಗೆ ಗೋತ್ರಗಳ ಪ್ರಕಾರ ಲೆಕ್ಕಿಸಿದ ಲೇವಿಯರ ಅಂದರೆ ಒಂದು ತಿಂಗಳು ಮತ್ತು ಅದಕ್ಕೆ ಮೇಲ್ಪಟ್ಟ ವಯಸ್ಸುಳ್ಳ ಗಂಡಸರ ಒಟ್ಟು ಸಂಖ್ಯೆ 22,000 ಮಂದಿ. BSB BSB: The total number of Levites that Moses and Aaron counted by their clans at the LORD’s command, including all the males a month old or more, was 22,000.
40 ULB ಇದಲ್ಲದೆ ಯೆಹೋವನು ಮೋಶೆಗೆ, <<ನೀನು ಇಸ್ರಾಯೇಲರಲ್ಲಿ ಒಂದು ತಿಂಗಳು ಮತ್ತು ಅದಕ್ಕೆ ಮೇಲ್ಪಟ್ಟ ವಯಸ್ಸುಳ್ಳ ಚೊಚ್ಚಲು ಗಂಡಸರನ್ನು ಹೆಸರು ಹಿಡಿದು ಎಣಿಕೆಮಾಡು. BSB BSB: Then the LORD said to Moses, “Number every firstborn male of the Israelites a month old or more, and list their names.
41 ULB ಇಸ್ರಾಯೇಲರಲ್ಲಿರುವ ಚೊಚ್ಚಲಾದವರಿಗೆ ಬದಲಾಗಿ ಲೇವಿಯರನ್ನೂ ಇಸ್ರಾಯೇಲರ ಚೊಚ್ಚಲು ಪಶುಗಳಿಗೆ ಬದಲಾಗಿ ಲೇವಿಯರ ಪಶುಗಳನ್ನೂ ನನಗೋಸ್ಕರ ತೆಗೆದುಕೋ, ನಾನೇ ಯೆಹೋವನು>> ಎಂದನು. BSB BSB: You are to take the Levites for Me—I am the LORD—in place of all the firstborn of Israel, and the livestock of the Levites in place of all the firstborn of the livestock of the Israelites.”
42 ULB ಯೆಹೋವನ ಅಪ್ಪಣೆಯ ಮೇರೆಗೆ ಮೋಶೆಯು, ಇಸ್ರಾಯೇಲರಲ್ಲಿದ್ದ ಚೊಚ್ಚಲಾದವರನ್ನು ಲೆಕ್ಕಿಸಿದನು. BSB BSB: So Moses numbered all the firstborn of the Israelites, as the LORD had commanded him.
43 ULB ಹೆಸರು ಹಿಡಿದು ಎಣಿಕೆ ಮಾಡಲ್ಪಟ್ಟ ಚೊಚ್ಚಲಾದವರು ಅಂದರೆ ಒಂದು ತಿಂಗಳು ಮತ್ತು ಅದಕ್ಕೆ ಮೇಲ್ಪಟ್ಟ ವಯಸ್ಸುಳ್ಳ ಗಂಡಸರ ಸಂಖ್ಯೆ 22,273 ಮಂದಿ. BSB BSB: The total number of the firstborn males a month old or more, listed by name, was 22,273.
44 ULB ಪುನಃ ಯೆಹೋವನು ಮೋಶೆಯ ಸಂಗಡ ಮಾತನಾಡಿ ಆಜ್ಞಾಪಿಸಿದ್ದೇನೆಂದರೆ, BSB BSB: Again the LORD spoke to Moses, saying,
45 ULB <<ನೀನು ಇಸ್ರಾಯೇಲರ ಚೊಚ್ಚಲಾದವರಿಗೆ ಬದಲಾಗಿ ಲೇವಿಯರನ್ನು, ಅವರ ಚೊಚ್ಚಲಾದ ಪಶುಗಳಿಗೆ ಬದಲಾಗಿ ಲೇವಿಯರ ಪಶುಗಳನ್ನು ತೆಗೆದುಕೋ. ಲೇವಿಯರೇ ನನ್ನ ಸೊತ್ತಾಗಿರುವರು; ನಾನೇ ಯೆಹೋವನು. BSB BSB: “Take the Levites in place of all the firstborn of Israel, and the livestock of the Levites in place of their livestock. The Levites belong to Me; I am the LORD.
46 ULB <<ಲೇವಿಯರ ಸಂಖ್ಯೆಗಿಂತ ಹೆಚ್ಚಾಗಿ 273 ಮಂದಿ ಚೊಚ್ಚಲರು ಹೆಚ್ಚಾಗಿ ಇಸ್ರಾಯೇಲರಲ್ಲಿ ಇರುವುದರಿಂದ ಅವರನ್ನು ಬಿಡಿಸುವುದಕ್ಕಾಗಿ ಒಬ್ಬೊಬ್ಬರಿಗೆ ಐದೈದು ಶೆಕೆಲ್ ಮೇರೆಗೆ ಈಡು ತೆಗೆದುಕೊಳ್ಳಬೇಕು. BSB BSB: To redeem the 273 firstborn Israelites who outnumber the Levites,
47 ULB ದೇವಸ್ಥಾನದ ಸೇವೆಗೆ ನೇಮಕವಾದ ಶೆಕೆಲ್ ಗಳ ಮೇರೆಯ ಪ್ರಕಾರ ಒಬ್ಬೊಬ್ಬನಿಗೆ ಐದು ಬೆಳ್ಳಿಯ ನಾಣ್ಯಗಳನ್ನು ತೆಗೆದುಕೊಳ್ಳಬೇಕು. BSB BSB: you are to collect five shekels for each one, according to the sanctuary shekel of twenty gerahs.
48 ULB ಅವರೊಳಗೆ ಹೆಚ್ಚಾಗಿರುವವರ ಬಿಡುಗಡೆಗೋಸ್ಕರ ಅವರು ಕೊಡುವ ಹಣವನ್ನು ನೀನು ಆರೋನನಿಗೂ ಮತ್ತು ಅವನ ಮಕ್ಕಳಿಗೂ ಕೊಡಬೇಕು>> ಎಂದನು. BSB BSB: Give the money to Aaron and his sons as the redemption price for the excess among the Israelites.”
49 ULB ಅದಕ್ಕೆ ಅನುಸಾರವಾಗಿ ಮೋಶೆ ಲೇವಿಯರಿಗಿಂತ ಹೆಚ್ಚಾದ ಚೊಚ್ಚಲರನ್ನು ಬಿಡಿಸುವುದಕ್ಕಾಗಿ ಹಣವನ್ನು ತೆಗೆದುಕೊಂಡನು. BSB BSB: So Moses collected the redemption money from those in excess of the number redeemed by the Levites.
50 ULB ಇಸ್ರಾಯೇಲರಲ್ಲಿ ಚೊಚ್ಚಲಾದವರಿಂದ ದೇವಸ್ಥಾನದ ಸೇವೆಗೆ ನೇಮಕವಾದ ರೂಪಾಯಿಯಲ್ಲಿ 1,365 ಶೆಕೆಲ್ ಗಳನ್ನು ತೆಗೆದುಕೊಂಡನು. BSB BSB: He collected the money from the firstborn of the Israelites: 1,365 shekels, according to the sanctuary shekel.
51 ULB ಯೆಹೋವನ ಆಜ್ಞೆಯಂತೆ ಮೋಶೆ ಆ ಬಿಡುಗಡೆಯ ಹಣವನ್ನು ಆರೋನನಿಗೂ ಮತ್ತು ಅವನ ಮಕ್ಕಳಿಗೂ ಕೊಟ್ಟನು. BSB BSB: And Moses gave the redemption money to Aaron and his sons in obedience to the word of the LORD, just as the LORD had commanded him.
Select verses for actions: Enter goes to them and Escape comes back.