1 ULB ಕೆಟ್ಟವರನ್ನು ನೋಡಿ ಹೊಟ್ಟೆಕಿಚ್ಚುಪಡಬೇಡ, ಅವರ ಸಹವಾಸವನ್ನು ಬಯಸಬೇಡ. BSB BSB: Do not envy wicked men or desire their company;
2 ULB ಅವರ ಮನಸ್ಸು ಹಿಂಸೆಯನ್ನು ಯೋಚಿಸುತ್ತಿರುವುದು, ಅವರ ತುಟಿಯು ಹಾನಿಯನ್ನು ಪ್ರಸ್ತಾಪಿಸುತ್ತಿರುವುದು. BSB BSB: for their hearts devise violence, and their lips declare trouble.
3 ULB ಮನೆಯನ್ನು ಕಟ್ಟುವುದಕ್ಕೆ ಜ್ಞಾನವೇ ಸಾಧನ, ಅದನ್ನು ಸ್ಥಿರಪಡಿಸುವುದಕ್ಕೆ ವಿವೇಕವೇ ಆಧಾರ, BSB BSB: By wisdom a house is built and by understanding it is established;
4 ULB ಅದರ ಕೋಣೆಗಳನ್ನು ಅಮೂಲ್ಯವಾದ ಎಲ್ಲಾ, ಇಷ್ಟ ಸಂಪತ್ತಿನಿಂದ ತುಂಬಿಸುವುದಕ್ಕೆ, ತಿಳಿವಳಿಕೆಯೇ ಉಪಕರಣ. BSB BSB: through knowledge its rooms are filled with every precious and beautiful treasure.
5 ULB ಜ್ಞಾನಿಗೆ ತ್ರಾಣ, ಬಲ್ಲವನಿಗೆ ಬಹು ಬಲ. BSB BSB: A wise man is strong, and a man of knowledge enhances his strength.
6 ULB ಮಂತ್ರಾಲೋಚನೆಯಿಂದ ಯುದ್ಧವನ್ನು ನಡೆಸು, ಬಹು ಸುಮಂತ್ರಿಗಳು ಇರುವಲ್ಲಿ ಸುರಕ್ಷಣೆಯಿರುವುದು. BSB BSB: Only with sound guidance should you wage war, and victory lies in a multitude of counselors.
7 ULB ಜ್ಞಾನವು ಮೂರ್ಖನಿಗೆ ನಿಲುಕದು, ಅವನು ನ್ಯಾಯಸ್ಥಾನದಲ್ಲಿ ಬಾಯಿಬಿಡಲಾರನು. BSB BSB: Wisdom is too high for a fool; he does not open his mouth in the meeting place.
8 ULB ಕೇಡನ್ನು ಕಲ್ಪಿಸುವವನು, ಕುಯುಕ್ತಿಯುಳ್ಳವನು ಎನಿಸಿಕೊಳ್ಳುವನು. BSB BSB: He who plots evil will be called a schemer.
9 ULB ಮೂರ್ಖನ ಸಂಕಲ್ಪವು ಪಾಪವೇ, ಧರ್ಮನಿಂದಕನು ಮನುಷ್ಯರಿಗೆ ಅಸಹ್ಯ. BSB BSB: A foolish scheme is sin, and a mocker is detestable to men.
10 ULB ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ, ನಿನ್ನ ಬಲವೂ ಇಕ್ಕಟ್ಟೇ. BSB BSB: If you faint in the day of distress, how small is your strength!
11 ULB ಕೊಲೆಗೆ ಸೆಳೆಯಲ್ಪಟ್ಟವರನ್ನು ರಕ್ಷಿಸು, ಸಂಹಾರಕ್ಕೆ ಗುರಿಯಾದವರನ್ನು ತಪ್ಪಿಸು. BSB BSB: Rescue those being led away to death, and restrain those stumbling toward the slaughter.
12 ULB <<ಇದು ನನಗೆ ಗೊತ್ತಿರಲಿಲ್ಲ>> ಎಂದು ನೀನು ನೆವ ಹೇಳಿದರೆ, ಹೃದಯಶೋಧಕನು ಗ್ರಹಿಸುವುದಿಲ್ಲವೋ? ನಿನ್ನ ಆತ್ಮವನ್ನು ಕಾಯುವಾತನು ತಿಳಿಯುವುದಿಲ್ಲವೋ? ಪ್ರತಿಯೊಬ್ಬನ ಕರ್ಮಕ್ಕೆ ಪ್ರತಿಫಲವನ್ನು ಕೊಡದೆ ಬಿಟ್ಟಾನೇ? BSB BSB: If you say, “Behold, we did not know about this,” does not He who weighs hearts consider it? Does not the One who guards your life know? Will He not repay a man according to his deeds?
13 ULB ಕಂದಾ, ಜೇನು ಚೆನ್ನಾಗಿದೆಯಲ್ಲವೆ, ಜೇನುತುಪ್ಪವು ನಿನ್ನ ಬಾಯಿಗೆ ಸಿಹಿಯಷ್ಟೆ, ಅದನ್ನು ತಿನ್ನು. BSB BSB: Eat honey, my son, for it is good, and the honeycomb is sweet to your taste.
14 ULB ಜ್ಞಾನವು ನಿನ್ನ ಆತ್ಮಕ್ಕೆ ಹೀಗೆಯೇ ಇರುವುದೆಂದು ತಿಳಿದುಕೋ, ಅದನ್ನು ಪಡೆದುಕೊಂಡರೆ ಮುಂದೆ ಫಲಕಾಲ ಬರುವುದು, ನಿನ್ನ ನಿರೀಕ್ಷೆಯು ನಿರರ್ಥಕವಾಗದು. BSB BSB: Know therefore that wisdom is sweet to your soul. If you find it, there is a future for you, and your hope will never be cut off.
15 ULB ದುಷ್ಟನೇ, ಶಿಷ್ಟನ ಮನೆಗೆ ಹೊಂಚುಹಾಕಬೇಡ, ಅವನ ನಿವಾಸವನ್ನು ಸೂರೆಮಾಡಬೇಡ. BSB BSB: Do not lie in wait, O wicked man, near the dwelling of the righteous; do not destroy his resting place.
16 ULB ಶಿಷ್ಟನು ಏಳು ಸಾರಿ ಬಿದ್ದರೂ ಮತ್ತೆ ಏಳುವನು, ದುಷ್ಟನು ಕೇಡಿನಿಂದ ಬಿದ್ದೇಹೋಗುವನು. BSB BSB: For though a righteous man may fall seven times, he still gets up; but the wicked stumble in bad times.
17 ULB ನಿನ್ನ ಶತ್ರು ಬಿದ್ದರೆ ಹಿಗ್ಗಬೇಡ, ಎಡವಿದರೆ ನಿನ್ನ ಹೃದಯವು ಹರ್ಷಿಸದಿರಲಿ. BSB BSB: Do not gloat when your enemy falls, and do not let your heart rejoice when he stumbles,
18 ULB ಯೆಹೋವನು ನಿನ್ನ ಹರ್ಷವನ್ನು ಕಂಡು ಬೇಸರಗೊಂಡು, ತನ್ನ ಕೋಪವನ್ನು ಅವನ ಕಡೆಯಿಂದ ತಿರುಗಿಸಾನು. BSB BSB: or the LORD will see and disapprove, and turn His wrath away from him.
19 ULB ಕೆಡುಕರ ಮೇಲೆ ಉರಿಗೊಳ್ಳದಿರು, ದುಷ್ಟರನ್ನು ನೋಡಿ ಹೊಟ್ಟೆಕಿಚ್ಚುಪಡದಿರು. BSB BSB: Do not fret over evildoers, and do not be envious of the wicked.
20 ULB ಕೆಟ್ಟವನಿಗೆ ಶುಭಕಾಲವು ಬಾರದು, ದುಷ್ಟರ ದೀಪವು ಆರಿಯೇ ಹೋಗುವುದು. BSB BSB: For the evil man has no future; the lamp of the wicked will be extinguished.
21 ULB ಮಗನೇ, ಯೆಹೋವನಿಗೂ ಮತ್ತು ರಾಜನಿಗೂ ಭಯಪಡು, ತಿರುಗಿಬೀಳುವವರ ಗೊಡವೆಗೆ ಹೋಗಬೇಡ. BSB BSB: My son, fear the LORD and the king, and do not associate with the rebellious.
22 ULB ಅವರಿಬ್ಬರು ವಿಧಿಸುವ ವಿಪತ್ತು ಫಕ್ಕನೆ ಸಂಭವಿಸುವುದು, ಅವರಿಂದಾಗುವ ನಾಶವು ಯಾರಿಗೆ ತಿಳಿದೀತು? BSB BSB: For they will bring sudden destruction. Who knows what ruin they can bring?
23 ULB ಇವು ಕೂಡ ಜ್ಞಾನಿಗಳ ಮಾತುಗಳು: ನ್ಯಾಯವಿಚಾರಣೆಯಲ್ಲಿ ಪಕ್ಷಪಾತವು ಧರ್ಮವಲ್ಲ. BSB BSB: These also are sayings of the wise: To show partiality in judgment is not good.
24 ULB ಯಾವನು ಅಧರ್ಮಿಗೆ, <<ನೀನು ಧರ್ಮಾತ್ಮನು>> ಎಂದು ಹೇಳುತ್ತಾನೋ, ಅವನನ್ನು ಜನರು ಶಪಿಸುವರು, ಪ್ರಜೆಗಳು ದೂಷಿಸುವರು. BSB BSB: Whoever tells the guilty, “You are innocent”—peoples will curse him, and nations will denounce him;
25 ULB ದುಷ್ಟನನ್ನು ಗದರಿಸುವವರಿಗಾದರೋ ಶುಭವಾಗುವುದು, ಸುಖಕರವಾದ ಆಶೀರ್ವಾದವೂ ಲಭಿಸುವುದು. BSB BSB: but it will go well with those who convict the guilty, and rich blessing will come upon them.
26 ULB ಯಥಾರ್ಥವಾದ ಉತ್ತರವು, ತುಟಿಗೆ ಮುದ್ದು. BSB BSB: An honest answer given is like a kiss on the lips.
27 ULB ನಿನ್ನ ಕೆಲಸದ ಸಾಮಾನುಗಳನ್ನು ಸಿದ್ಧಮಾಡು, ನಂತರ ಹೊಲಗದ್ದೆಗಳ ಕೆಲಸವನ್ನು ಮುಗಿಸು, ಆಮೇಲೆ ನಿನ್ನ ಮನೆಯನ್ನು ಕಟ್ಟು. BSB BSB: Complete your outdoor work and prepare your field; after that, you may build your house.
28 ULB ಕಾರಣವಿಲ್ಲದೆ ನೆರೆಯವನಿಗೆ ವಿರುದ್ಧವಾಗಿ ಸಾಕ್ಷಿ ಹೇಳಬೇಡ, ಮಾತಿನಿಂದ ಮೋಸಮಾಡಬೇಡ. BSB BSB: Do not testify against your neighbor without cause, and do not deceive with your lips.
29 ULB <<ಅವನು ನನಗೆ ಮಾಡಿದಂತೆ ನಾನೂ ಅವನಿಗೆ ಮಾಡುವೆನು, ಅವನು ಮಾಡಿದ್ದಕ್ಕೆ ಸರಿಯಾಗಿ ಮುಯ್ಯಿತೀರಿಸುವೆನು>> ಅಂದುಕೊಳ್ಳಬೇಡ. BSB BSB: Do not say, “I will do to him as he has done to me; I will repay the man according to his work.”
30 ULB ಸೋಮಾರಿಯ ಹೊಲದ ಮೇಲೆಯೂ, ಬುದ್ಧಿಹೀನನ ದ್ರಾಕ್ಷಿಯ ತೋಟದ ಮೇಲೆಯೂ ಹಾದು ಹೋದೆನು. BSB BSB: I went past the field of a slacker and by the vineyard of a man lacking judgment.
31 ULB ಆಹಾ, ಮುಳ್ಳುಗಿಡಗಳು ಅದರಲ್ಲಿ ಹರಡಿಕೊಂಡಿದ್ದವು, ಕಳೆಗಳು ಅದನ್ನು ಮುಚ್ಚಿದ್ದವು, ಅದರ ಕಲ್ಲಿನ ಗೋಡೆಯು ಹಾಳಾಗಿತ್ತು. BSB BSB: Thorns had grown up everywhere, thistles had covered the ground, and the stone wall was broken down.
32 ULB ಆಗ ನಾನು ನೋಡಿ ಆಲೋಚಿಸಿದೆನು, ದೃಷ್ಟಿಸಿ ಶಿಕ್ಷಿತನಾದೆನು. BSB BSB: I observed and took it to heart; I looked and received instruction:
33 ULB ಇನ್ನು ಸ್ವಲ್ಪ ನಿದ್ದೆ, ಇನ್ನು ತುಸ ತೂಕಡಿಕೆ, ಇನ್ನೂ ಕೊಂಚ ನಿದ್ದೆಗಾಗಿ ಕೈಮುದುರಿಕೊಳ್ಳುವೆ ಅಂದುಕೊಳ್ಳುವಿಯಾ? BSB BSB: A little sleep, a little slumber, a little folding of the hands to rest,
34 ULB ಬಡತನವು ದಾರಿಗಳ್ಳನ ಹಾಗೂ, ಕೊರತೆಯು ಪಂಜುಗಳ್ಳನಂತೆಯೂ ನಿನ್ನ ಮೇಲೆ ಬೀಳುವವು. BSB BSB: and poverty will come upon you like a robber, and need like a bandit.
Select verses for actions: Enter goes to them and Escape comes back.