1 ULB ಬೇಸಿಗೆಯಲ್ಲಿ ಹಿಮ, ಸುಗ್ಗಿಯಲ್ಲಿ ಮಳೆ ಹೇಗೋ, ಮೂಢನಿಗೆ ಮಾನವು ಹಾಗೆ ಸರಿಯಲ್ಲ. BSB BSB: Like snow in summer and rain at harvest, honor does not befit a fool.
2 ULB ಕುಪ್ಪಳಿಸುತ್ತಿರುವ ಗುಬ್ಬಿಯಂತೆ, ಹಾರಾಡುವ ಬಾನಕ್ಕಿಯ ಹಾಗೆ, ಕಾರಣವಿಲ್ಲದೆ ಕೊಟ್ಟ ಶಾಪವು ಎರಗಿ ನಿಲ್ಲದು. BSB BSB: Like a fluttering sparrow or darting swallow, an undeserved curse does not come to rest.
3 ULB ಕುದುರೆಗೆ ಚಬುಕು, ಕತ್ತೆಗೆ ಕಡಿವಾಣ, ಮೂಢನ ಬೆನ್ನಿಗೆ ಬೆತ್ತ. BSB BSB: A whip for the horse, a bridle for the donkey, and a rod for the backs of fools!
5 ULB ಮೂಢನ ಮೂರ್ಖತನಕ್ಕೆ ಸರಿಯಾಗಿ ಉತ್ತರ ಕೊಡು, ತನ್ನನ್ನು ಜ್ಞಾನಿಯೆಂದು ಎಣಿಸಿಕೊಂಡಾನು. BSB BSB: Answer a fool according to his folly, lest he become wise in his own eyes.
6 ULB ಮೂಢನ ಮೂಲಕ ಮಾತನ್ನು ಹೇಳಿಕಳುಹಿಸುವವನು, ತನ್ನ ಕಾಲುಗಳನ್ನು ತಾನೇ ಕಡಿದುಕೊಂಡು ಕೇಡನ್ನು ಕುಡಿಯುವನು. BSB BSB: Like cutting off one’s own feet or drinking violence is the sending of a message by the hand of a fool.
7 ULB ಮೂಢನ ಬಾಯಿಯ ಜ್ಞಾನೋಕ್ತಿಯು, ಜೋಲಾಡುವ ಕುಂಟಕಾಲು. BSB BSB: Like lame legs hanging limp is a proverb in the mouth of a fool.
8 ULB ಮೂಢನಿಗೆ ಕೊಡುವ ಮಾನವು, ಕವಣೆಯಲ್ಲಿಟ್ಟ ಕಲ್ಲಿನ ಹಾಗೆ. BSB BSB: Like binding a stone into a sling is the giving of honor to a fool.
9 ULB ಮೂಢನ ಬಾಯಿಗೆ ಸಿಕ್ಕಿದ ಜ್ಞಾನೋಕ್ತಿಯು, ಕುಡುಕನ ಕೈಗೆ ಸಿಕ್ಕಿದ ಮುಳ್ಳುಗೋಲಿನ ಹಾಗೆ. BSB BSB: Like a thorn that goes into the hand of a drunkard is a proverb in the mouth of a fool.
10 ULB ಮೂಢರನ್ನೂ, ತಿರುಗಾಡುವವರನ್ನೂ ಕೂಲಿಗೆ ಕರೆಯುವವನು, ಯಾರಿಗೋ ತಗಲಲಿ ಎಂದು ಬಾಣವನ್ನು ಎಸೆಯುವವನಂತೆ. BSB BSB: Like an archer who wounds at random is he who hires a fool or passerby.
11 ULB ನಾಯಿ ತಾನು ಕಕ್ಕಿದ್ದನ್ನು ನೆಕ್ಕುವುದಕ್ಕೆ ತಿರುಗಿಕೊಳ್ಳುವ ಹಾಗೆ, ಮೂಢನು ತಾನು ಮಾಡಿದ ಮೂರ್ಖತನವನ್ನೇ ಪುನಃ ಮಾಡುವನು. BSB BSB: As a dog returns to its vomit, so a fool repeats his folly.
12 ULB ತಾನೇ ಜ್ಞಾನಿಯೆಂದು ಎಣಿಸಿಕೊಳ್ಳುವವನನ್ನು ನೋಡು, ಅಂಥವನಿಗಿಂತಲೂ ಮೂಢನ ವಿಷಯದಲ್ಲಿ ಹೆಚ್ಚು ನಿರೀಕ್ಷೆಯನ್ನಿಡಬಹುದು. BSB BSB: Do you see a man who is wise in his own eyes? There is more hope for a fool than for him.
13 ULB <<ದಾರಿಯಲ್ಲಿ ಸಿಂಹವಿದೆ, ಬೀದಿಗಳಲ್ಲಿ ತಿರುಗಾಡುತ್ತಿದೆ>> ಎಂಬುದು ಸೋಮಾರಿಯ ನೆವ. BSB BSB: The slacker says, “A lion is in the road! A fierce lion roams the public square!”
14 ULB ಕದವು ತಿರುಗುಣಿಯಲ್ಲಿ ಹೇಗೋ, ಹಾಗೆ ಸೋಮಾರಿಯು ಹಾಸಿಗೆಯಲ್ಲಿ ಹೊರಳಾಡುತ್ತಿರುವನು. BSB BSB: As a door turns on its hinges, so the slacker turns on his bed.
15 ULB ಸೋಮಾರಿಯು ಪಾತ್ರೆಯೊಳಗೆ ಕೈ ಮುಳುಗಿಸಿದ ಮೇಲೆ, ತಿರುಗಿ ಬಾಯಿಯ ಹತ್ತಿರ ತರಲಾರದಷ್ಟು ಆಯಾಸಗೊಳ್ಳುತ್ತಾನೆ. BSB BSB: The slacker buries his hand in the dish; it wearies him to bring it back to his mouth.
16 ULB ವಿವೇಕದಿಂದ ಉತ್ತರಕೊಡಬಲ್ಲ ಏಳು ಜನರಿಗಿಂತಲೂ, ತಾನೇ ಜ್ಞಾನಿಯೆಂದು ಸೋಮಾರಿಯು ಎಣಿಸಿಕೊಳ್ಳುವನು. BSB BSB: The slacker is wiser in his own eyes than seven men who answer discreetly.
17 ULB ಒಬ್ಬನು ದಾರಿಯಲ್ಲಿ ಹೋಗುತ್ತಾ ಪರರ ವ್ಯಾಜ್ಯಕ್ಕೆ ಸೇರಿ ರೇಗಿಕೊಳ್ಳುವುದು, ನಾಯಿಯ ಕಿವಿಹಿಡಿದ ಹಾಗೆ. BSB BSB: Like one who grabs a dog by the ears is a passerby who meddles in a quarrel not his own.
18 ULB ನೆರೆಯವನನ್ನು ಮೋಸಗೊಳಿಸಿ, <<ತಮಾಷೆಗೋಸ್ಕರ, ಮಾಡಿದೆನಲ್ಲಾ>> ಎನ್ನುವವನು, BSB BSB: Like a madman shooting firebrands and deadly arrows,
19 ULB ಕೊಳ್ಳಿಗಳನ್ನೂ, ಅಂಬುಗಳನ್ನೂ, ಸಾವನ್ನೂ ಬೀರುವ, ದೊಡ್ಡ ಹುಚ್ಚನ ಹಾಗೆ. BSB BSB: so is the man who deceives his neighbor and says, “I was only joking!”
20 ULB ಕಟ್ಟಿಗೆಯಿಲ್ಲದಿದ್ದರೆ ಬೆಂಕಿ ಆರುವುದು, ಚಾಡಿಕೋರನು ಇಲ್ಲದಿದ್ದರೆ ಜಗಳ ಶಮನವಾಗುವುದು. BSB BSB: Without wood, a fire goes out; without gossip, a conflict ceases.
21 ULB ಕೆಂಡಕ್ಕೆ ಇದ್ದಲು, ಉರಿಗೆ ಕಟ್ಟಿಗೆ, ವ್ಯಾಜ್ಯದ ಕಿಚ್ಚನ್ನೆಬ್ಬಿಸುವುದಕ್ಕೆ ಜಗಳಗಂಟಿಗ. BSB BSB: Like charcoal for embers and wood for fire, so is a quarrelsome man for kindling strife.
22 ULB ಚಾಡಿಕೋರನ ಮಾತುಗಳು ರುಚಿಯಾದ ತುತ್ತುಗಳು, ಇವು ಹೊಟ್ಟೆಯೊಳಕ್ಕೇ ಇಳಿಯುವವು. BSB BSB: The words of a gossip are like choice morsels that go down into the inmost being.
23 ULB ಕೆಟ್ಟ ಹೃದಯದಿಂದ ಪ್ರೀತಿಯನ್ನಾಡುವ ತುಟಿಯು, ಬೆಳ್ಳಿ ಲೇಪನ ಮಾಡಿದ ಮಣ್ಣಿನ ಮಡಿಕೆಯ ಹಾಗೆ. BSB BSB: Like glaze covering an earthen vessel are burning lips and a wicked heart.
24 ULB ಶತ್ರುವು ಸ್ನೇಹಭಾವದಿಂದ ನಟಿಸುತ್ತಾನೆ, ಅಂತರಂಗದಲ್ಲಿ ಬರೀ ಮೋಸವನ್ನು ಇಟ್ಟುಕೊಂಡಿದ್ದಾನೆ. BSB BSB: A hateful man disguises himself with his speech, but he lays up deceit in his heart.
25 ULB ಸವಿಮಾತನಾಡಿದರೂ ಅವನನ್ನು ನಂಬಬೇಡ, ಅವನ ಹೃದಯದಲ್ಲಿ ಎಷ್ಟೋ ಹೇಯ ಕೃತ್ಯಗಳು. BSB BSB: When he speaks graciously, do not believe him, for seven abominations fill his heart.
26 ULB ತನ್ನ ಹಗೆಯನ್ನು ವಂಚನೆಯಿಂದ ಮರೆಮಾಚಿಕೊಂಡಿದ್ದರೂ, ಅವನ ಕೆಟ್ಟತನವು ಸಭೆಯಲ್ಲಿ ಬೈಲಾಗುವುದು. BSB BSB: Though his hatred is concealed by deception, his wickedness will be exposed in the assembly.
27 ULB ಗುಂಡಿಯನ್ನು ತೋಡುವವನು ತಾನೇ ಅದರಲ್ಲಿ ಬೀಳುವನು, ಹೊರಳಿಸುವವನ ಮೇಲೆಯೇ ಕಲ್ಲು ಹೊರಳುವುದು. BSB BSB: He who digs a pit will fall into it, and he who rolls a stone will have it roll back on him.
28 ULB ಸುಳ್ಳು ನಾಲಿಗೆಯವನು ತಾನು ಬಾಧಿಸಿದವರನ್ನೇ ದ್ವೇಷಿಸುವನು, ಕಪಟದ ಬಾಯಿ ನಾಶಕರ. BSB BSB: A lying tongue hates those it crushes, and a flattering mouth causes ruin.
Select verses for actions: Enter goes to them and Escape comes back.