1 ULB ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ; ಆತನು ಒಳ್ಳೆಯವನು. ಆತನ ಕೃಪೆಯು ಶಾಶ್ವತವಾಗಿದೆ. BSB BSB: Give thanks to the LORD, for He is good; His loving devotion endures forever.
2 ULB ಇಸ್ರಾಯೇಲರು, <<ಆತನ ಕೃಪೆಯು ಶಾಶ್ವತ>> ಎಂದು ಹೇಳಲಿ. BSB BSB: Let Israel say, “His loving devotion endures forever.”
3 ULB ಆರೋನನ ಮನೆತನದವರು, <<ಆತನ ಕೃಪೆಯು ಶಾಶ್ವತ>> ಎಂದು ಹೇಳಲಿ. BSB BSB: Let the house of Aaron say, “His loving devotion endures forever.”
4 ULB ಯೆಹೋವನ ಭಕ್ತರು, <<ಆತನ ಕೃಪೆಯು ಶಾಶ್ವತ>> ಎಂದು ಹೇಳಲಿ. BSB BSB: Let those who fear the LORD say, “His loving devotion endures forever.”
5 ULB ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಟ್ಟೆನು; ಆತನು ಸದುತ್ತರವನ್ನು ದಯಪಾಲಿಸಿ, ನನ್ನನ್ನು ವಿಶಾಲವಾದ ಸ್ಥಳದಲ್ಲಿ ನೆಲೆಸುವಂತೆ ಮಾಡಿದನು. BSB BSB: In my distress I called to the LORD, and He answered and set me free.
6 ULB ಯೆಹೋವನು ನನ್ನ ಕಡೆ ಇದ್ದಾನೆ; ಭಯಪಡೆನು. ಮನುಷ್ಯನು ನನಗೆ ಏನು ಮಾಡಾನು? BSB BSB: The LORD is on my side; I will not be afraid. What can man do to me?
7 ULB ಯೆಹೋವನು ನನಗೆ ಇದ್ದಾನೆ; ಆತನೇ ನನಗೆ ಸಹಾಯಕನು; ನನ್ನ ವೈರಿಗಳಿಗಾಗುವ ಶಿಕ್ಷೆಯನ್ನು ನೋಡುವೆನು. BSB BSB: The LORD is on my side; He is my helper. Therefore I will look in triumph on those who hate me.
8 ULB ಮನುಷ್ಯರಲ್ಲಿ ಭರವಸವಿಡುವುದಕ್ಕಿಂತ, ಯೆಹೋವನನ್ನು ಆಶ್ರಯಿಸುವುದು ಒಳ್ಳೆಯದು. BSB BSB: It is better to take refuge in the LORD than to trust in man.
9 ULB ಪ್ರಭುಗಳಲ್ಲಿ ಭರವಸವಿಡುವುದಕ್ಕಿಂತ, ಯೆಹೋವನನ್ನು ಆಶ್ರಯಿಸುವುದು ಒಳ್ಳೆಯದು. BSB BSB: It is better to take refuge in the LORD than to trust in princes.
10 ULB ಜನಾಂಗದವರೆಲ್ಲಾ ನನ್ನನ್ನು ಸುತ್ತಿಕೊಂಡರು; ಯೆಹೋವನ ಬಲದಿಂದ ಅವರನ್ನು ಸಂಹರಿಸುವೆನು. BSB BSB: All the nations surrounded me, but in the name of the LORD I cut them off.
11 ULB ಅವರು ನನ್ನನ್ನು ಸುತ್ತಲೂ ಮುತ್ತಿದರು; ಯೆಹೋವನ ಹೆಸರಿನ ಬಲದಿಂದ ಅವರನ್ನು ಸಂಹರಿಸುವೆನು. BSB BSB: They surrounded me on every side, but in the name of the LORD I cut them off.
12 ULB ಅವರು ಜೇನು ನೊಣಗಳಂತೆ ನನ್ನನ್ನು ಕವಿದರೂ; ಮುಳ್ಳಿನ ಬೆಂಕಿಯಂತೆ ಕ್ಷಣದಲ್ಲಿ ಅಳಿದುಹೋಗುವರು. ಯೆಹೋವನ ಹೆಸರಿನಿಂದ ಅವರನ್ನು ಸಂಹರಿಸುವೆನು. BSB BSB: They swarmed around me like bees, but they were extinguished like burning thorns; in the name of the LORD I cut them off.
13 ULB ವೈರಿಯೇ, ನನ್ನನ್ನು ಬೀಳುವಂತೆ ಮಾಡಿದಿ; ಆದರೆ ಯೆಹೋವನು ನನಗೆ ಸಹಾಯ ಮಾಡಿದನು. BSB BSB: I was pushed so hard I was falling, but the LORD helped me.
14 ULB ನನ್ನ ಬಲವು, ಕೀರ್ತನೆಯು ಯೆಹೋವನೇ; ಆತನಿಂದ ನನಗೆ ರಕ್ಷಣೆಯುಂಟಾಯಿತು. BSB BSB: The LORD is my strength and my song, and He has become my salvation.
15 ULB ಉತ್ಸಾಹಧ್ವನಿಯು, ಜಯಘೋಷವು ನೀತಿವಂತರ ಗುಡಾರಗಳಲ್ಲಿವೆ; ಯೆಹೋವನ ಬಲಗೈ ಪರಾಕ್ರಮವನ್ನು ನಡೆಸುತ್ತದೆ. BSB BSB: Shouts of joy and salvation resound in the tents of the righteous: “The right hand of the LORD performs with valor!
16 ULB ಯೆಹೋವನ ಬಲಗೈ ಉನ್ನತವಾಗಿದೆ; ಯೆಹೋವನ ಬಲಗೈ ಪರಾಕ್ರಮವನ್ನು ನಡೆಸುತ್ತದೆ. BSB BSB: The right hand of the LORD is exalted! The right hand of the LORD performs with valor!”
17 ULB ನಾನು ಸಾಯುವುದಿಲ್ಲ; ಜೀವದಿಂದಿದ್ದು ಯೆಹೋವನ ಕ್ರಿಯೆಗಳನ್ನು ಸಾರುವೆನು. BSB BSB: I will not die, but I will live and proclaim what the LORD has done.
18 ULB ಯೆಹೋವನು ನನ್ನನ್ನು ಕಠಿಣವಾಗಿ ಶಿಕ್ಷಿಸಿದನು; ಆದರೆ ಮರಣಕ್ಕೆ ಒಪ್ಪಿಸಲಿಲ್ಲ. BSB BSB: The LORD disciplined me severely, but He has not given me over to death.
19 ULB ನೀತಿದ್ವಾರಗಳನ್ನು ತೆರೆಯಿರಿ; ನಾನು ಒಳಗೆ ಪ್ರವೇಶಿಸಿ ಯೆಹೋವನನ್ನು ಕೊಂಡಾಡುವೆನು. BSB BSB: Open to me the gates of righteousness, that I may enter and give thanks to the LORD.
20 ULB ಇದು ಯೆಹೋವನ ಮಂದಿರದ್ವಾರವು; ಇದರೊಳಗೆ ಪ್ರವೇಶಿಸತಕ್ಕವರು ನೀತಿವಂತರೇ. BSB BSB: This is the gate of the LORD; the righteous shall enter through it.
21 ULB ನನಗೆ ಸದುತ್ತರವನ್ನು ದಯಪಾಲಿಸಿ ರಕ್ಷಿಸಿದಾತನೇ, ನಿನ್ನನ್ನು ಕೊಂಡಾಡುತ್ತೇನೆ. BSB BSB: I will give You thanks, for You have answered me, and You have become my salvation.
22 ULB ಮನೆಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ, ಮುಖ್ಯವಾದ ಮೂಲೆಗಲ್ಲಾಯಿತು; BSB BSB: The stone the builders rejected has become the cornerstone.
23 ULB ಇದು ಯೆಹೋವನಿಂದಲೇ ಆಯಿತು; ನಮಗೆ ಆಶ್ಚರ್ಯವಾಗಿ ತೋರುತ್ತದೆ. BSB BSB: This is from the LORD, and it is marvelous in our eyes.
24 ULB ಈ ದಿನವು ಯೆಹೋವನಿಂದಲೇ ನೇಮಕವಾದದ್ದು; ಇದರಲ್ಲಿ ನಾವು ಉಲ್ಲಾಸದಿಂದ ಆನಂದಿಸೋಣ. BSB BSB: This is the day that the LORD has made; we will rejoice and be glad in it.
25 ULB ಯೆಹೋವನೇ, ದಯವಿಟ್ಟು ರಕ್ಷಿಸು; ಯೆಹೋವನೇ, ದಯವಿಟ್ಟು ಸಾಫಲ್ಯಕೊಡು. BSB BSB: O LORD, save us, we pray. We beseech You, O LORD, cause us to prosper!
26 ULB ಯೆಹೋವನ ಹೆಸರಿನಲ್ಲಿ ಒಳಗೆ ಬರುವವನಿಗೆ ಆಶೀರ್ವಾದ; ಯೆಹೋವನ ಮಂದಿರದಲ್ಲಿರುವ ನಾವು ನಿಮ್ಮನ್ನು ಆಶೀರ್ವದಿಸುತ್ತೇವೆ. BSB BSB: Blessed is he who comes in the name of the LORD. From the house of the LORD we bless you.
27 ULB ಯೆಹೋವನೇ ದೇವರು; ಆತನು ನಮಗೆ ಪ್ರಕಾಶವನ್ನು ಅನುಗ್ರಹಿಸಿದ್ದಾನೆ. ರೆಂಬೆಗಳನ್ನು ಹಿಡಿದುಕೊಂಡು ಮೆರವಣಿಗೆಯಾಗಿ ಯಜ್ಞವೇದಿಯ ಕೊಂಬುಗಳ ಸಮೀಪಕ್ಕೆ ಬನ್ನಿರಿ. BSB BSB: The LORD is God; He has made His light to shine upon us. Bind the festal sacrifice with cords to the horns of the altar.
28 ULB ನೀನು ನನ್ನ ದೇವರು; ನಿನ್ನನ್ನು ಕೊಂಡಾಡುತ್ತೇನೆ; ನನ್ನ ದೇವರೇ, ನಿನ್ನನ್ನು ಘನಪಡಿಸುತ್ತೇನೆ. BSB BSB: You are my God, and I will give You thanks. You are my God, and I will exalt You.
29 ULB ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ; ಆತನು ಒಳ್ಳೆಯವನು. ಆತನ ಕೃಪೆಯು ಶಾಶ್ವತವಾದದ್ದು. BSB BSB: Give thanks to the LORD, for He is good; His loving devotion endures forever.
Select verses for actions: Enter goes to them and Escape comes back.