1 ULB ಯೆಹೋವನಿಗೆ ಸ್ತೋತ್ರ! ನಮ್ಮ ದೇವರನ್ನು ಸ್ತುತಿಸುವುದು ಒಳ್ಳೆಯದೂ, ಸಂತೋಷಕರವೂ ಆಗಿದೆ, ಆತನನ್ನು ಕೀರ್ತಿಸುವುದು ಯುಕ್ತವಾಗಿದೆ. BSB BSB: Hallelujah! How good it is to sing praises to our God, how pleasant and lovely to praise Him!
2 ULB ಯೆಹೋವನು ಯೆರೂಸಲೇಮನ್ನು ಕಟ್ಟಿಸುತ್ತಿದ್ದಾನೆ, ಚದರಿಹೋಗಿದ್ದ ಇಸ್ರಾಯೇಲರನ್ನು ಕೂಡಿಸುತ್ತಿದ್ದಾನೆ, BSB BSB: The LORD builds up Jerusalem; He gathers the exiles of Israel.
3 ULB ಮುರಿದ ಮನಸ್ಸುಳ್ಳವರನ್ನು ವಾಸಿಮಾಡುತ್ತಾನೆ, ಅವರ ಗಾಯಗಳನ್ನು ಕಟ್ಟುತ್ತಾನೆ. BSB BSB: He heals the brokenhearted and binds up their wounds.
4 ULB ಅವನು ನಕ್ಷತ್ರಗಳ ಸಂಖ್ಯೆಯನ್ನು ಗೊತ್ತುಮಾಡಿ, ಪ್ರತಿಯೊಂದಕ್ಕೂ ಹೆಸರಿಟ್ಟಿದ್ದಾನೆ. BSB BSB: He determines the number of the stars; He calls them each by name.
5 ULB ನಮ್ಮ ಕರ್ತನು ದೊಡ್ಡವನೂ, ಪರಾಕ್ರಮಿಯೂ ಆಗಿದ್ದಾನೆ, ಆತನ ಜ್ಞಾನವು ಅಪರಿಮಿತವಾಗಿದೆ. BSB BSB: Great is our Lord, and mighty in power; His understanding has no limit.
6 ULB ಯೆಹೋವನು ದೀನರಿಗೆ ಆಧಾರವಾಗಿದ್ದಾನೆ, ದುಷ್ಟರನ್ನು ನೆಲಕ್ಕೆ ಹಾಕಿ ತುಳಿದುಬಿಡುತ್ತಾನೆ. BSB BSB: The LORD sustains the humble, but casts the wicked to the ground.
7 ULB ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ, ಕಿನ್ನರಿಯೊಡನೆ ನಮ್ಮ ದೇವರನ್ನು ಕೊಂಡಾಡಿರಿ. BSB BSB: Sing to the LORD with thanksgiving; make music on the harp to our God,
8 ULB ಆತನು ಆಕಾಶದಲ್ಲಿ ಮೋಡಗಳನ್ನು ಕವಿಸುತ್ತಾನೆ, ಭೂಮಿಗೋಸ್ಕರ ಮಳೆಯನ್ನು ಸಿದ್ಧಮಾಡುತ್ತಾನೆ, ಬೆಟ್ಟಗಳಲ್ಲಿ ಹುಲ್ಲನ್ನು ಬೆಳೆಸುತ್ತಾನೆ. BSB BSB: who covers the sky with clouds, who prepares rain for the earth, who makes grass to grow on the hills.
9 ULB ಆತನು ಪಶುಗಳಿಗೂ, ಕೂಗುತ್ತಿರುವ ಕಾಗೆಮರಿಗಳಿಗೂ ಬೇಕಾದ ಆಹಾರಕೊಡುತ್ತಾನೆ. BSB BSB: He provides food for the animals, and for the young ravens when they call.
10 ULB ಕುದುರೆಯ ಶಕ್ತಿಯಲ್ಲಿ ಆತನಿಗೆ ಇಷ್ಟವಿಲ್ಲ, ಆಳಿನ ತೊಡೆಯ ಬಲವನ್ನು ಆತನು ಮೆಚ್ಚುವುದಿಲ್ಲ. BSB BSB: He does not delight in the strength of the horse; He takes no pleasure in the legs of a man.
11 ULB ಯೆಹೋವನು ಆನಂದಿಸುವುದು ತನ್ನ ಕೃಪೆಯನ್ನು ನಿರೀಕ್ಷಿಸುವ ಭಕ್ತರಲ್ಲೇ. BSB BSB: The LORD is pleased with those who fear Him, who hope in His loving devotion.
12 ULB ಯೆರೂಸಲೇಮೇ, ಯೆಹೋವನನ್ನು ಕೀರ್ತಿಸು, ಚೀಯೋನೇ, ನಿನ್ನ ದೇವರನ್ನು ಸ್ತುತಿಸು. BSB BSB: Exalt the LORD, O Jerusalem; praise your God, O Zion!
13 ULB ಆತನು ನಿನ್ನ ಹೆಬ್ಬಾಗಿಲುಗಳ ಅಗುಳಿಗಳನ್ನು ಬಲಪಡಿಸಿದ್ದಾನೆ, ನಿನ್ನ ಮಕ್ಕಳನ್ನು ಆಶೀರ್ವದಿಸಿದ್ದಾನೆ. BSB BSB: For He strengthens the bars of your gates and blesses the children within you.
14 ULB ಆತನು ನಿನ್ನ ಪ್ರಾಂತ್ಯದೊಳಗೆ ಸೌಭಾಗ್ಯವನ್ನು ಉಂಟುಮಾಡುತ್ತಾನೆ, ಶ್ರೇಷ್ಠವಾದ ಗೋದಿಯಿಂದ ನಿನ್ನನ್ನು ತೃಪ್ತಿಗೊಳಿಸುತ್ತಾನೆ. BSB BSB: He makes peace at your borders; He fills you with the finest wheat.
15 ULB ತನ್ನ ನುಡಿಯನ್ನು ಭೂಲೋಕಕ್ಕೆ ಕಳುಹಿಸುತ್ತಾನೆ, ಆತನ ವಾಕ್ಯವು ಬಹು ವೇಗಶಾಲಿಯಾಗಿದೆ. BSB BSB: He sends forth His command to the earth; His word runs swiftly.
16 ULB ಉಣ್ಣೆಯಂತಿರುವ ಹಿಮವನ್ನು ಬೀಳಿಸುತ್ತಾನೆ, ಇಬ್ಬನಿಯನ್ನು ಬೂದಿಯಂತೆ ಹರವುತ್ತಾನೆ. BSB BSB: He spreads the snow like wool; He scatters the frost like ashes;
17 ULB ರೊಟ್ಟಿ ತುಂಡುಗಳಂತಿರುವ ಆನೆಕಲ್ಲುಗಳನ್ನು ಸುರಿಸುತ್ತಾನೆ, ಆತನು ಚಳಿಯನ್ನು ಬರಮಾಡಲು ಅದನ್ನು ಸಹಿಸುವವರು ಯಾರು? BSB BSB: He casts forth His hail like pebbles. Who can withstand His icy blast?
18 ULB ಆತನು ಅಪ್ಪಣೆಕೊಡಲು ಅವು ಕರಗುತ್ತವೆ, ತನ್ನ ಗಾಳಿಯನ್ನು ಬೀಸಮಾಡಲು ನೀರು ಹರಿಯುತ್ತದೆ. BSB BSB: He sends forth His word and melts them; He unleashes His winds, and the waters flow.
19 ULB ಆತನು ತನ್ನ ವಾಕ್ಯವನ್ನು ಯಾಕೋಬ್ಯರಿಗೆ ತಿಳಿಸುತ್ತಾನೆ, ತನ್ನ ನಿಯಮವಿಧಿಗಳನ್ನು ಇಸ್ರಾಯೇಲರಿಗೆ ಪ್ರಕಟಿಸುತ್ತಾನೆ. BSB BSB: He declares His word to Jacob, His statutes and judgments to Israel.
20 ULB ಬೇರೆ ಯಾವ ಜನಾಂಗದವರಿಗೂ ಆತನು ಹೀಗೆ ಮಾಡಲಿಲ್ಲ, ಆತನ ನ್ಯಾಯವಿಧಿಗಳನ್ನು ಅವರು ಅರಿಯರು. ಯೆಹೋವನಿಗೆ ಸ್ತೋತ್ರ! BSB BSB: He has done this for no other nation; they do not know His judgments. Hallelujah!
Select verses for actions: Enter goes to them and Escape comes back.