1 ULB ಯೆಹೋವನು ಮಹೋನ್ನತನು; ನಮ್ಮ ದೇವರು ತನ್ನ ಪರಿಶುದ್ಧ ಪರ್ವತ ನಗರದಲ್ಲಿ ಸರ್ವಸ್ತುತಿಗೆ ಪಾತ್ರನಾಗಿದ್ದಾನೆ. BSB BSB: A song. A Psalm of the sons of Korah. Great is the LORD, and greatly to be praised in the city of our God, His holy mountain.
2 ULB ರಾಜಾಧಿರಾಜನ ಪಟ್ಟಣವಿರುವ ಚೀಯೋನ್ ಪರ್ವತವು ಉತ್ತರದಿಕ್ಕಿನಲ್ಲಿ ಉನ್ನತವಾಗಿಯೂ, ರಮ್ಯವಾಗಿಯೂ, ಭೂಲೋಕದಲ್ಲೆಲ್ಲಾ ಕಂಗೊಳಿಸುತ್ತಿರುವುದು. BSB BSB: Beautiful in loftiness, the joy of all the earth, like the peaks of Zaphon is Mount Zion, the city of the great King.
3 ULB ದೇವರು ಅದರ ಕೊತ್ತಲುಗಳಲ್ಲಿ, ತಾನೇ ಭದ್ರವಾದ ಬುರುಜೆಂದು ಕೀರ್ತಿಪಡೆದನು. BSB BSB: God is in her citadels; He has shown Himself to be a fortress.
4 ULB ರಾಜರು ಕೂಡಿಕೊಂಡರು; ಅವರು ಒಗ್ಗಟ್ಟಾಗಿ ಬಂದರು. BSB BSB: For behold, the kings assembled; they all advanced together.
5 ULB ನೋಡಿ ಬೆರಗಾದರು; ತಲ್ಲಣಿಸಿ ಓಡಿಹೋದರು. BSB BSB: They saw and were astounded; they fled in terror.
6 ULB ಕಂಪನವೂ ಹೆರುವವಳಂತೆ, ವೇದನೆಯೂ ಅವರಿಗೆ ಉಂಟಾಯಿತು. BSB BSB: Trembling seized them there, anguish like a woman in labor.
7 ULB ದೇವರೇ, ನೀನು ಬಿರುಗಾಳಿಯಿಂದ ತಾರ್ಷಿಷ್ ದೇಶದ ದೊಡ್ಡ ದೊಡ್ಡ ಹಡಗುಗಳನ್ನು ಒಡೆದುಬಿಟ್ಟಂತಾಯಿತು. BSB BSB: With a wind from the east You wrecked the ships of Tarshish.
8 ULB ನಾವು ಕಿವಿಯಿಂದ ಕೇಳಿದಂತೆಯೇ ಈಗ ಕಣ್ಣಾರೆ ಕಂಡೆವು; ನಮ್ಮ ದೇವರೂ ಸೇನಾಧೀಶನೂ ಆಗಿರುವ ಯೆಹೋವನ ಸಂಸ್ಥಾನದಲ್ಲಿ ಆತನ ಮಹತ್ತನ್ನು ನೋಡಿದ್ದೇವೆ. ದೇವರು ಅದನ್ನು ಶಾಶ್ವತವಾಗಿ ಸ್ಥಾಪಿಸುವನು. ಸೆಲಾ BSB BSB: As we have heard, so we have seen in the city of the LORD of Hosts, in the city of our God: God will establish her forever. Selah
9 ULB ದೇವರೇ, ನಾವು ನಿನ್ನ ಆಲಯದಲ್ಲಿ, ನಿನ್ನ ಪ್ರೀತಿಯನ್ನು ಸ್ಮರಿಸುತ್ತೇವೆ; BSB BSB: Within Your temple, O God, we contemplate Your loving devotion.
10 ULB ದೇವರೇ, ನಿನ್ನ ನಾಮದ ಘನತೆಗೆ ತಕ್ಕಂತೆಯೇ, ಲೋಕವೆಲ್ಲಾ ನಿನ್ನನ್ನು ಹೊಗಳುವುದು. ನಿನ್ನ ಬಲಗೈ ನೀತಿಯನ್ನು ನೆರವೇರಿಸಿತು. BSB BSB: Your name, O God, like Your praise, reaches to the ends of the earth; Your right hand is full of righteousness.
11 ULB ಚೀಯೋನ್ ಪಟ್ಟಣದವರು ಹರ್ಷಿಸಲಿ; ನೀನು ನ್ಯಾಯವನ್ನು ನಿರ್ಣಯಿಸಿದ್ದರಿಂದ, ಯೆಹೂದ ಸೀಮೆಯ ನಿವಾಸಿಗಳು ಆನಂದಪಡಲಿ. BSB BSB: Mount Zion is glad, the daughters of Judah rejoice, on account of Your judgments.
12 ULB ಚೀಯೋನ್ ಸಂಸ್ಥಾನದ ಸುತ್ತಲೂ ಸಂಚರಿಸಿ, ಅದರ ಬುರುಜುಗಳನ್ನು ಲೆಕ್ಕಿಸಿರಿ. BSB BSB: March around Zion, encircle her, count her towers,
13 ULB ಅದರ ಪ್ರಾಕಾರಗಳನ್ನು ಚೆನ್ನಾಗಿ ನೋಡಿರಿ; ಅದರ ಕೊತ್ತಲುಗಳನ್ನು ಸೂಕ್ಷ್ಮವಾಗಿ ಗಮನಿಸಿರಿ. BSB BSB: consider her ramparts, tour her citadels, that you may tell the next generation.
14 ULB ಆಗ ನೀವು ನಿಮ್ಮ ಮುಂದಣ ಸಂತತಿಯವರಿಗೆ, ದೇವರು ಇಂಥವನು; ಆತನು ಯುಗಯುಗಾಂತರಗಳಲ್ಲಿಯೂ ನಮ್ಮ ದೇವರು, ನಿರಂತರವೂ ನಮ್ಮನ್ನು ನಡೆಸುವವನಾಗಿದ್ದಾನೆ ಎಂದು ತಿಳಿಸುವಿರಿ. BSB BSB: For this God is our God forever and ever; He will be our guide even till death.
Select verses for actions: Enter goes to them and Escape comes back.