1 ULB ಬಲಿಷ್ಠ ದೇವರಾದ ಯೆಹೋವನು ಪೂರ್ವದಿಂದ ಪಶ್ಚಿಮ ದಿಕ್ಕಿನವರೆಗೂ ಇರುವ ಭೂನಿವಾಸಿಗಳೆಲ್ಲರನ್ನೂ, ತನ್ನ ಸನ್ನಿಧಿಯಲ್ಲಿ ಬರಬೇಕೆಂದು ಕರೆಯುತ್ತಾನೆ. BSB BSB: A Psalm of Asaph. The Mighty One, God the LORD, speaks and summons the earth from where the sun rises to where it sets.
2 ULB ಅತ್ಯಂತ ರಮಣೀಯವಾದ ಚೀಯೋನಿನಲ್ಲಿರುವ, ದೇವರು ಪ್ರಕಾಶಿಸುತ್ತಾನೆ. BSB BSB: From Zion, perfect in beauty, God shines forth.
3 ULB ನಮ್ಮ ದೇವರು ಪ್ರತ್ಯಕ್ಷನಾಗುವನು, ಎಷ್ಟು ಮಾತ್ರವೂ ಸುಮ್ಮನಿರುವುದಿಲ್ಲ; ಆತನ ಮುಂಭಾಗದಲ್ಲಿ ಬೆಂಕಿ ಪ್ರಜ್ವಲಿಸುತ್ತದೆ; ಆತನ ಸುತ್ತಲು ಬಿರುಗಾಳಿ ಬೀಸುತ್ತದೆ. BSB BSB: Our God approaches and will not be silent! Consuming fire precedes Him, and a tempest rages around Him.
4 ULB ಆತನು ತನ್ನ ಪ್ರಜೆಗಳ ನ್ಯಾಯವಿಚಾರಣೆಯಲ್ಲಿ ಭೂಮ್ಯಾಕಾಶಗಳನ್ನು ಸಾಕ್ಷಿಗಳನ್ನಾಗಿ ನೇಮಿಸುತ್ತಾನೆ. BSB BSB: He summons the heavens above, and the earth, that He may judge His people:
5 ULB <<ನನ್ನೊಡನೆ ಯಜ್ಞದ ಮೂಲಕ ಒಡಂಬಡಿಕೆಯನ್ನು ಮಾಡಿಕೊಂಡ ನನ್ನ ಭಕ್ತರನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ>> ಎಂದು ಆಜ್ಞಾಪಿಸುತ್ತಾನೆ. BSB BSB: “Gather to Me My saints, who made a covenant with Me by sacrifice.”
6 ULB ದೇವರು ತಾನೇ ನ್ಯಾಯಾಧಿಪತಿ; ಆತನು ನೀತಿಸ್ವರೂಪನೆಂದು ಆಕಾಶಮಂಡಲವು ಘೋಷಿಸುತ್ತದೆ. ಸೆಲಾ BSB BSB: And the heavens proclaim His righteousness, for God Himself is Judge. Selah
7 ULB ಆತನು ಆಜ್ಞಾಪಿಸುವುದು ಏನೆಂದರೆ, <<ಪ್ರಜೆಗಳಿರಾ, ಇಸ್ರಾಯೇಲ್ಯರೇ, ದೇವರಾದ ನಾನೇ ನಿಮ್ಮ ದೇವರು; ನಿಮಗೆ ಖಂಡಿತವಾಗಿ ಹೇಳುತ್ತೇನೆ>> ಕೇಳಿರಿ. BSB BSB: “Hear, O My people, and I will speak, O Israel, and I will testify against you: I am God, your God.
8 ULB ನಾನು ನಿಮ್ಮ ಯಜ್ಞದ ವಿಷಯದಲ್ಲಿ ತಪ್ಪೆಣಿಸುವುದಿಲ್ಲ; ಸರ್ವಾಂಗಹೋಮಗಳನ್ನು ನೀವು ನಿತ್ಯವೂ ನನಗೆ ಸಮರ್ಪಿಸುತ್ತೀರಲ್ಲಾ. BSB BSB: I do not rebuke you for your sacrifices, and your burnt offerings are ever before Me.
9 ULB ಆದರೂ ನಿಮ್ಮ ಮನೆಗಳಿಂದ ನನಗೆ ಹೋರಿ ಬೇಕಾಗಿಲ್ಲ; ನಿಮ್ಮ ದೊಡ್ಡಿಗಳಿಂದ ಹೋತ ಬೇಕಿಲ್ಲ. BSB BSB: I have no need for a bull from your stall or goats from your pens,
10 ULB ಕಾಡಿನಲ್ಲಿರುವ ಸರ್ವಮೃಗಗಳೂ, ಗುಡ್ಡಗಳಲ್ಲಿರುವ ಸಾವಿರಾರು ಪಶುಗಳೂ ನನ್ನವೇ. BSB BSB: for every beast of the forest is Mine—the cattle on a thousand hills.
11 ULB ಬೆಟ್ಟಗಳ ಪಕ್ಷಿಗಳನ್ನೆಲ್ಲಾ ನಾನು ಬಲ್ಲೆ; ಅಡವಿಯ ಜೀವಜಂತುಗಳೆಲ್ಲಾ ನನಗೆ ಗೊತ್ತುಂಟು. BSB BSB: I know every bird in the mountains, and the creatures of the field are Mine.
12 ULB ನನಗೆ ಹಸಿವೆಯಿದ್ದರೆ ನಿಮಗೆ ತಿಳಿಸುವುದಿಲ್ಲ; ಏಕೆಂದರೆ ಲೋಕವೂ ಅದರಲ್ಲಿರುವುದೆಲ್ಲವೂ ನನ್ನದಲ್ಲವೇ. BSB BSB: If I were hungry, I would not tell you, for the world is Mine, and the fullness thereof.
13 ULB ನಾನು ಹೋರಿಗಳ ಮಾಂಸವನ್ನು ತಿನ್ನುವುದೂ, ಹೋತಗಳ ರಕ್ತವನ್ನು ಕುಡಿಯುವುದೂ ಉಂಟೇ? BSB BSB: Do I eat the flesh of bulls, or drink the blood of goats?
14 ULB ಸ್ತುತಿಯಜ್ಞವನ್ನೇ ದೇವರಿಗೆ ಸಮರ್ಪಿಸಿರಿ; ವಾಗ್ದಾನ ಮಾಡಿದ ಹರಕೆಗಳನ್ನು ಪರಾತ್ಪರನಾದ ದೇವರಿಗೆ ಸಲ್ಲಿಸಿರಿ. BSB BSB: Sacrifice a thank offering to God, and fulfill your vows to the Most High.
15 ULB ಕಷ್ಟಕಾಲದಲ್ಲಿ ನನಗೆ ಮೊರೆಯಿಡಿರಿ, ಬಿಡಿಸುವೆನು; ಆಗ ನನ್ನನ್ನು ಕೊಂಡಾಡುವಿರಿ. BSB BSB: Call upon Me in the day of trouble; I will deliver you, and you will honor Me.”
16 ULB ದುಷ್ಟರಿಗಾದರೋ ದೇವರು ಹೇಳುವುದು ಏನೆಂದರೆ, <<ನನ್ನ ವಿಧಿಗಳನ್ನು ಹೇಳುವುದಕ್ಕೆ ನಿಮಗೇನು ಬಾಧ್ಯತೆ ಉಂಟು? ನನ್ನ ಒಡಂಬಡಿಕೆಯನ್ನು ನಿಮ್ಮ ಬಾಯಲ್ಲಿ ಉಚ್ಚರಿಸುವುದೇಕೆ? BSB BSB: To the wicked, however, God says, “What right have you to recite My statutes and to bear My covenant on your lips?
17 ULB ನೀವೋ ನನ್ನ ಸುಶಿಕ್ಷಣವನ್ನು ಹಗೆಮಾಡುತ್ತೀರಲ್ಲಾ; ನನ್ನ ಆಜ್ಞೆಯನ್ನು ಉಲ್ಲಂಘಿಸುತ್ತೀರಿ. BSB BSB: For you hate My instruction and cast My words behind you.
18 ULB ನೀವು ಕಳ್ಳರೊಡನೆ ಸೇರಿ ಅವರಿಗೆ ಸಮ್ಮತಿ ನೀಡುತ್ತೀರಿ; ಜಾರರ ಒಡನಾಟದಲ್ಲಿ ನೀವು ಸಂತೋಷದಿಂದ ಇರುತ್ತೀರಿ. BSB BSB: When you see a thief, you befriend him, and throw in your lot with adulterers.
19 ULB ನಿಮ್ಮ ಬಾಯಿಯನ್ನು ಕೇಡಿಗೆ ಒಪ್ಪಿಸುತ್ತೀರಿ; ನಾಲಿಗೆಯು ಮೋಸವನ್ನು ನೇಯುತ್ತದೆ. BSB BSB: You unleash your mouth for evil and harness your tongue to deceit.
20 ULB ನೀವು ಕುಳಿತುಕೊಂಡು ನಿಮ್ಮ ಸಹೋದರರ ವಿರುದ್ಧವಾಗಿ ಮಾತನಾಡುತ್ತೀರಿ; ನಿಮ್ಮ ಒಡಹುಟ್ಟಿದವರನ್ನು ದೂರುತ್ತೀರಿ. BSB BSB: You sit and malign your brother; you slander your own mother’s son.
21 ULB ನೀವು ಹೀಗೆ ಮಾಡಿದರೂ ನಾನು ಮೌನವಾಗಿದ್ದೆನು. ಆದುದರಿಂದ, <ದೇವರೂ ನಮ್ಮಂಥವನೇ> ಎಂದು ತಿಳಿದುಕೊಂಡಿರಿ. ಈಗಲಾದರೋ ನಾನು ಎಲ್ಲವನ್ನು, ನಿಮ್ಮ ಮುಂದೆ ವಿವರಿಸಿ ನಿಮ್ಮನ್ನು ಅಪರಾಧಿಗಳೆಂದು ಸ್ಥಾಪಿಸುವೆನು. BSB BSB: You have done these things, and I kept silent; you thought I was just like you. But now I rebuke you and accuse you to your face.
22 ULB ದೇವರನ್ನು ಬಿಟ್ಟವರೇ, ಇದನ್ನು ಮನದಟ್ಟು ಮಾಡಿಕೊಳ್ಳಿರಿ; ಇಲ್ಲವಾದರೆ ನಿಮ್ಮನ್ನು ಹರಿದುಬಿಟ್ಟೇನು. ನಿಮ್ಮನ್ನು ತಪ್ಪಿಸುವವರು ಯಾರೂ ಇರುವುದಿಲ್ಲ. BSB BSB: Now consider this, you who forget God, lest I tear you to pieces, with no one to rescue you:
23 ULB ಯಾರು ಸ್ತುತಿಯಜ್ಞವನ್ನು ಸಮರ್ಪಿಸುತ್ತಾರೋ ಅವರೇ ನನ್ನನ್ನು ಗೌರವಿಸುವವರು; ತಮ್ಮ ನಡತೆಯನ್ನು ಸರಿಪಡಿಸಿಕೊಳ್ಳುವವರಿಗೆ ನನ್ನ ವಿಶೇಷವಾದ ರಕ್ಷಣೆಯನ್ನು ತೋರಿಸುವೆನು.>> BSB BSB: He who sacrifices a thank offering honors Me, and to him who rightly orders his way, I will show the salvation of God.”
Select verses for actions: Enter goes to them and Escape comes back.