Psalm 6 6 Psalms Book 1 Kannada Unlocked Literal Bible 1 ULB ಯೆಹೋವನೇ, ಕೋಪದಿಂದ ನನ್ನನ್ನು ಗದರಿಸಬೇಡ; ರೋಷದಿಂದ ನನ್ನನ್ನು ದಂಡಿಸಬೇಡ. BSB BSB: For the choirmaster. With stringed instruments, according to Sheminith. A Psalm of David. O LORD, do not rebuke me in Your anger or discipline me in Your wrath.
2 ULB ಯೆಹೋವನೇ, ಕನಿಕರಿಸು; ನಾನು ನಿಶ್ಶಕ್ತನಾಗಿ ಹೋಗಿದ್ದೇನೆ. ಯೆಹೋವನೇ, ವಾಸಿಮಾಡು; ನನ್ನ ಎಲುಬುಗಳೆಲ್ಲಾ ಅದುರುತ್ತವೆ. BSB BSB: Be merciful to me, O LORD, for I am frail; heal me, O LORD, for my bones are in agony.
3 ULB ನನ್ನ ಪ್ರಾಣವು ಸಹ ಬಹಳವಾಗಿ ತತ್ತರಿಸುತ್ತದೆ. ಯೆಹೋವನೇ, ಎಷ್ಟರ ವರೆಗೆ ನನ್ನನ್ನು ಕೈಬಿಟ್ಟಿರುವಿ? BSB BSB: My soul is deeply distressed. How long, O LORD, how long?
4 ULB ಯೆಹೋವನೇ, ಹಿಂತಿರುಗು, ನನ್ನನ್ನು ಬಿಡಿಸು; ನಿನ್ನ ಕೃಪೆಯ ನಿಮಿತ್ತ ನನ್ನನ್ನು ರಕ್ಷಿಸು. BSB BSB: Turn, O LORD, and deliver my soul; save me because of Your loving devotion.
5 ULB ಮೃತರಿಗೆ ನಿನ್ನ ಜ್ಞಾಪಕವಿರುವುದಿಲ್ಲವಲ್ಲಾ; ಪಾತಾಳದಲ್ಲಿ ನಿನ್ನನ್ನು ಸ್ತುತಿಸುವವರು ಯಾರು? BSB BSB: For there is no mention of You in death; who can praise You from Sheol?
6 ULB ನಾನು ನರಳಿ ನರಳಿ ದಣಿದಿದ್ದೇನೆ; ಪ್ರತಿರಾತ್ರಿಯೂ ನನ್ನ ಮಂಚವು ಕಣ್ಣೀರಿನಿಂದ ತೇಲಾಡುತ್ತದೆ. ಹಾಸಿಗೆಯು ಕಣ್ಣೀರಿನಿಂದ ನೆನದುಹೋಗುತ್ತದೆ. BSB BSB: I am weary from groaning; all night I flood my bed with weeping and drench my couch with tears.
7 ULB ದುಃಖದಿಂದ ನನ್ನ ಕಣ್ಣು ಬತ್ತಿ ಹೋಯಿತು; ವಿರೋಧಿಗಳ ಬಾಧೆಯ ದೆಸೆಯಿಂದಲೇ ಅವು ಮೊಬ್ಬಾಯಿತು. BSB BSB: My eyes fail from grief; they grow dim because of all my foes.
8 ULB ಧರ್ಮವನ್ನು ಮೀರಿ ನಡೆಯುವವರೇ, ನೀವೆಲ್ಲರೂ ನನ್ನಿಂದ ತೊಲಗಿಹೋಗಿರಿ; ಯೆಹೋವನು ನನ್ನ ಗೋಳಾಟಕ್ಕೆ ಕಿವಿಗೊಟ್ಟಿದ್ದಾನೆ. BSB BSB: Depart from me, all you workers of iniquity, for the LORD has heard my weeping.
9 ULB ಆತನು ನನ್ನ ವಿಜ್ಞಾಪನೆಯನ್ನು ಕೇಳಿದ್ದಾನಲ್ಲಾ; ನನ್ನ ಪ್ರಾರ್ಥನೆಯನ್ನು ಅಂಗೀಕರಿಸುವನು. BSB BSB: The LORD has heard my cry for mercy; the LORD accepts my prayer.
10 ULB ನನ್ನ ವಿರೋಧಿಗಳೆಲ್ಲರು ನಾಚಿಕೆಯಿಂದ ಕಳವಳಗೊಳ್ಳುವರು; ಅವರು ಪಕ್ಕನೆ ಲಜ್ಜೆಗೊಂಡು ಹಿಂದಿರುಗುವರು. BSB BSB: All my enemies will be ashamed and dismayed; they will turn back in sudden disgrace.
Select verses for actions: Enter goes to them and Escape comes back.
Chapter complete
You’ve read Psalm 6
Make Opened yours A free account keeps your place, highlights and notes on every device. Add Plus to ask Study Help about Psalm 6, and keep Opened free for readers who can’t pay.