1 ULB ಯೆಹೋವನೇ, ನಿತ್ಯವೂ ನಿನ್ನ ಕೃಪಾತಿಶಯವನ್ನು ಹಾಡಿಹರಸುವೆನು; ನನ್ನ ಬಾಯಿ ನಿನ್ನ ಸತ್ಯವನ್ನು, ಮುಂದಣ ಸಂತಾನದವರೆಲ್ಲರಿಗೂ ತಿಳಿಯಮಾಡುವುದು. BSB BSB: A Maskil of Ethan the Ezrahite. I will sing of the loving devotion of the LORD forever; with my mouth I will proclaim Your faithfulness to all generations.
2 ULB ನಿನ್ನ ಪ್ರೀತಿಸಂಕಲ್ಪವು ನಿತ್ಯವು ಸಿದ್ಧಿಗೆ ಬರುತ್ತಲೇ ಇರುವುದು; ಆಕಾಶದಲ್ಲಿ ನಿನ್ನ ಸತ್ಯತೆಯನ್ನು ಸ್ಥಾಪಿಸುವಿ ಎಂದು ತಿಳಿದುಕೊಂಡಿದ್ದೇನೆ. BSB BSB: For I have said, “Loving devotion is built up forever; in the heavens You establish Your faithfulness.”
3 ULB ನೀನು ನುಡಿದದ್ದೇನೆಂದರೆ, <<ನಾನು ಆರಿಸಿಕೊಂಡ ಸೇವಕನಾದ ದಾವೀದನ ಸಂಗಡ ಒಡಂಬಡಿಕೆ ಮಾಡಿಕೊಂಡು ಆಣೆಯಿಟ್ಟು, BSB BSB: You said, “I have made a covenant with My chosen one, I have sworn to David My servant:
4 ULB <ಶಾಶ್ವತವಾಗಿ ನಿನ್ನ ಸಂತತಿಯನ್ನು ಸ್ಥಾಪಿಸುವೆನು, ತಲತಲಾಂತರಗಳಿಗೂ ನಿನ್ನ ಸಿಂಹಾಸನವನ್ನು ಸ್ಥಿರಪಡಿಸುವೆನು ಎಂದು ಹೇಳಿದ್ದೇನೆ>>> ಎಂಬುವುದೇ. ಸೆಲಾ BSB BSB: ‘I will establish your offspring forever and build up your throne for all generations.’” Selah
5 ULB ಯೆಹೋವನೇ, ಗಗನವು ನಿನ್ನ ಮಹತ್ತನ್ನು ಪ್ರಸಿದ್ಧಪಡಿಸುವುದು; ನಿನ್ನ ಸತ್ಯವನ್ನು ಪರಿಶುದ್ಧರ ಸಭೆಯಲ್ಲಿ ಕೀರ್ತಿಸುವೆನು. BSB BSB: The heavens praise Your wonders, O LORD—Your faithfulness as well—in the assembly of the holy ones.
6 ULB ಮೇಘಮಂಡಲದಲ್ಲಿ ಯೆಹೋವನಿಗೆ ಸಮಾನರು ಯಾರು? ದೇವದೂತರಲ್ಲಿ ಯೆಹೋವನಿಗೆ ಸರಿಯಾದವರು ಯಾರು? BSB BSB: For who in the skies can compare with the LORD? Who among the heavenly beings is like the LORD?
7 ULB ಆತನು ಪರಿಶುದ್ಧರ ಸಭೆಯಲ್ಲಿ ಘನ ಹೊಂದುವ ದೇವರು; ತನ್ನ ಎಲ್ಲಾ ಪರಿವಾರದವರಿಗಿಂತ ಭಯಂಕರನು. BSB BSB: In the council of the holy ones, God is greatly feared, and awesome above all who surround Him.
8 ULB ಯೆಹೋವನೇ, ಸೇನಾಧೀಶ್ವರನಾದ ದೇವರೇ, ನಿನಗೆ ಸಮಾನರು ಯಾರು? ಯಾಹುವೇ, ನೀನು ಶಕ್ತನು, ಸತ್ಯತೆಯಿಂದ ಆವರಿಸಲ್ಪಟ್ಟವನು. BSB BSB: O LORD God of Hosts, who is like You? O mighty LORD, Your faithfulness surrounds You.
9 ULB ಸಮುದ್ರದ ಅಲ್ಲಕಲ್ಲೋಲಗಳನ್ನು ಅಧೀನದಲ್ಲಿ ಇಟ್ಟುಕೊಂಡಿರುವವನು ನೀನು; ತೆರೆಗಳು ಏಳುವಾಗ ಅವುಗಳನ್ನು ತಡೆಯುವವನು ನೀನು. BSB BSB: You rule the raging sea; when its waves mount up, You still them.
10 ULB ರಹಬನ್ನು ಛೇದಿಸಿ ಸಾಯಿಸಿದವನು ನೀನು; ನಿನ್ನ ಭುಜಬಲದಿಂದ ಶತ್ರುಗಳನ್ನು ಚದರಿಸಿಬಿಟ್ಟಿದ್ದಿ. BSB BSB: You crushed Rahab like a carcass; You scattered Your enemies with Your mighty arm.
11 ULB ಆಕಾಶವೂ ನಿನ್ನದು, ಭೂಮಿಯೂ ನಿನ್ನದೇ; ಲೋಕವನ್ನೂ ಅದರಲ್ಲಿರುವುದೆಲ್ಲವನ್ನೂ ನಿರ್ಮಿಸಿದವನು ನೀನು. BSB BSB: The heavens are Yours, and also the earth. The earth and its fullness You founded.
12 ULB ದಕ್ಷಿಣೋತ್ತರ ದಿಕ್ಕುಗಳನ್ನು ಉಂಟುಮಾಡಿದವನು ನೀನು. ತಾಬೋರ್, ಹೆರ್ಮೋನ್ ಪರ್ವತಗಳು ನಿನ್ನ ನಾಮದಲ್ಲಿ ಆನಂದಧ್ವನಿ ಮಾಡುತ್ತವೆ. BSB BSB: North and south You created; Tabor and Hermon shout for joy at Your name.
13 ULB ನಿನ್ನ ಭುಜಬಲವು ಮಹಾಬಲವುಳ್ಳದ್ದು. ನಿನ್ನ ಹಸ್ತವು ಶಕ್ತಿಯುಳ್ಳದ್ದು; ನಿನ್ನ ಬಲಗೈ ಮಹತ್ತುಗಳನ್ನು ನಡೆಸುತ್ತದೆ. BSB BSB: Mighty is Your arm; strong is Your hand. Your right hand is exalted.
14 ULB ನೀತಿ ಮತ್ತು ನ್ಯಾಯಗಳು ನಿನ್ನ ಸಿಂಹಾಸನದ ಅಸ್ತಿವಾರವು; ನಿನ್ನ ಸಾನ್ನಿಧ್ಯದೂತರು ಪ್ರೀತಿ ಮತ್ತು ಸತ್ಯತೆಗಳೇ. BSB BSB: Righteousness and justice are the foundation of Your throne; loving devotion and faithfulness go before You.
15 ULB ಉತ್ಸಾಹಧ್ವನಿಯನ್ನು ತಿಳಿದಿರುವ ಜನರು ಧನ್ಯರು; ಯೆಹೋವನೇ, ಅವರು ನಿನ್ನ ಮುಖಪ್ರಕಾಶದಲ್ಲಿ ಸಂಚರಿಸುತ್ತಾರೆ. BSB BSB: Blessed are those who know the joyful sound, who walk, O LORD, in the light of Your presence.
16 ULB ಯಾವಾಗಲೂ ನಿನ್ನ ನಾಮದಲ್ಲಿ ಆನಂದಿಸುತ್ತಾರೆ; ನಿನ್ನ ನೀತಿಯಿಂದ ಏಳಿಗೆ ಹೊಂದುತ್ತಾರೆ. BSB BSB: They rejoice in Your name all day long, and in Your righteousness they exult.
17 ULB ಅವರು ಹಿಗ್ಗುವ ಬಲವು ನೀನೇ. ನಿನ್ನ ಕರುಣೆಯ ಕಟಾಕ್ಷದಿಂದ ನಮ್ಮ ಕೊಂಬು ಎತ್ತಲ್ಪಟ್ಟಿರುವುದು. BSB BSB: For You are the glory of their strength, and by Your favor our horn is exalted.
18 ULB ನಮಗೆ ಗುರಾಣಿಯಂತಿರುವ ನಮ್ಮ ಅರಸನು ಯೆಹೋವನೇ; ಅವನು ಇಸ್ರಾಯೇಲರ ಸದಮಲಸ್ವಾಮಿಯ, ಸ್ವಕೀಯನು. BSB BSB: Surely our shield belongs to the LORD, and our king to the Holy One of Israel.
19 ULB ಆ ಕಾಲದಲ್ಲಿ ನೀನು ದರ್ಶನದಲ್ಲಿ ನಿನ್ನ ಭಕ್ತರಿಗೆ ಹೇಳಿದ್ದೇನೆಂದರೆ, <<ಒಬ್ಬ ಶೂರನಿಗೆ ರಕ್ಷಾಬಲವನ್ನು ಅನುಗ್ರಹಿಸಿದ್ದೇನೆ; ಪ್ರಜೆಗಳಲ್ಲಿ ಒಬ್ಬ ಯೌವನಸ್ಥನನ್ನು ಆರಿಸಿ ಉನ್ನತಸ್ಥಾನದಲ್ಲಿಟ್ಟಿದ್ದೇನೆ. BSB BSB: You once spoke in a vision; to Your godly ones You said, “I have bestowed help on a warrior; I have exalted one chosen from the people.
20 ULB ನನ್ನ ಸೇವಕನಾದ ದಾವೀದನನ್ನು ಕಂಡು, ಪರಿಶುದ್ಧ ತೈಲದಿಂದ ಅವನನ್ನು ಅಭಿಷೇಕಿಸಿದ್ದೇನೆ. BSB BSB: I have found My servant David; with My sacred oil I have anointed him.
21 ULB ನನ್ನ ಹಸ್ತವು ಅವನ ಮೇಲೆ ಸ್ಥಿರವಾಗಿರುವುದು; ನನ್ನ ಭುಜವು ಅವನನ್ನು ಬಲಪಡಿಸುವುದು. BSB BSB: My hand will sustain him; surely My arm will strengthen him.
22 ULB ವೈರಿಯ ಕುತಂತ್ರವು ಅವನಲ್ಲಿ ಸಾಗದು; ಯಾವ ಕೆಡುಕನೂ ಅವನನ್ನು ಕುಗ್ಗಿಸಲಾರನು. BSB BSB: No enemy will exact tribute; no wicked man will oppress him.
23 ULB ಅವನ ವಿರೋಧಿಗಳನ್ನು ಅವನ ಮುಂದೆಯೇ ಜಜ್ಜಿ ಹಾಕುವೆನು; ಅವನ ದ್ವೇಷಿಗಳನ್ನು ಹತಮಾಡಿಬಿಡುವೆನು. BSB BSB: I will crush his foes before him and strike down those who hate him.
24 ULB ಆದರೆ ನನ್ನ ಪ್ರೀತಿ ಮತ್ತು ಸತ್ಯತೆಗಳು ಅವನೊಡನೆ ಇರುವವು; ನನ್ನ ಹೆಸರಿನಿಂದ ಅವನ ಕೊಂಬು ಎತ್ತಲ್ಪಡುವುದು. BSB BSB: My faithfulness and loving devotion will be with him, and through My name his horn will be exalted.
25 ULB ಸಮುದ್ರದಿಂದ ನದಿಗಳವರೆಗೂ ಅವನ ಹಸ್ತಕ್ಕೆ ಅಧಿಕಾರವನ್ನು ಕೊಡುವೆನು. BSB BSB: I will set his hand over the sea, and his right hand upon the rivers.
26 ULB ಅವನು ನನಗೆ, <ನನ್ನ ತಂದೆಯೂ, ದೇವರೂ, ಆಶ್ರಯದುರ್ಗವೂ ನೀನೇ> ಎಂದು ಹೇಳುವನು. BSB BSB: He will call to Me, ‘You are my Father, my God, the Rock of my salvation.’
27 ULB ನಾನಾದರೋ ಅವನನ್ನು ಜ್ಯೇಷ್ಠಪುತ್ರನನ್ನಾಗಿಯೂ, ಭೂರಾಜರಲ್ಲಿ ಉನ್ನತನನ್ನಾಗಿಯೂ ಮಾಡಿಕೊಳ್ಳುವೆನು. BSB BSB: I will indeed appoint him as My firstborn, the highest of the kings of the earth.
28 ULB ನನ್ನ ಕೃಪೆಯು ಅವನಲ್ಲಿ ಶಾಶ್ವತವಾಗಿ ಇರುವುದು; ನನ್ನ ಒಡಂಬಡಿಕೆಯು ಅವನಲ್ಲಿ ಸ್ಥಿರವಾಗಿರುವುದು. BSB BSB: I will forever preserve My loving devotion for him, and My covenant with him will stand fast.
29 ULB ಅವನ ಸಂತಾನವನ್ನು ಯಾವಾಗಲೂ ಉಳಿಸುವೆನು. ಅವನ ಸಿಂಹಾಸನವು ಆಕಾಶವಿರುವವರೆಗೂ ಇರುವುದು. BSB BSB: I will establish his line forever, his throne as long as the heavens endure.
30 ULB ಅವನ ಸಂತಾನದವರು ನನ್ನ ಧರ್ಮಶಾಸ್ತ್ರವನ್ನು ಬಿಟ್ಟು, ನನ್ನ ಆಜ್ಞೆಗಳಲ್ಲಿ ನಡೆಯದೆ, BSB BSB: If his sons forsake My law and do not walk in My judgments,
31 ULB ನನ್ನ ವಿಧಿಗಳನ್ನು ಮೀರಿ, ನನ್ನ ನೇಮಗಳನ್ನು ಪಾಲಿಸದೆ ಹೋದರೆ, BSB BSB: if they violate My statutes and fail to keep My commandments,
32 ULB ಆಗ ನಾನು ಅವರ ದ್ರೋಹಕ್ಕಾಗಿ ಅವರನ್ನು ಬೆತ್ತದಿಂದ ಹೊಡೆಯುವೆನು; ಅವರ ಅಪರಾಧಕ್ಕಾಗಿ ಪೆಟ್ಟುಕೊಡುವೆನು. BSB BSB: I will attend to their transgression with the rod, and to their iniquity with stripes.
33 ULB ಆದರೂ ನಾನು ಅವನಲ್ಲಿಟ್ಟಿರುವ ಕೃಪೆಯನ್ನು ತಪ್ಪಿಸುವುದಿಲ್ಲ; ನನ್ನ ನಂಬಿಗಸ್ತಿಕೆಯಿಂದ ಜಾರುವುದಿಲ್ಲ. BSB BSB: But I will not withdraw My loving devotion from him, nor ever betray My faithfulness.
34 ULB ನನ್ನ ಒಡಂಬಡಿಕೆಯನ್ನು ಭಂಗಪಡಿಸುವುದಿಲ್ಲ; ನನ್ನ ಮಾತನ್ನು ಬದಲಿಸುವುದಿಲ್ಲ. BSB BSB: I will not violate My covenant or alter the utterance of My lips.
35 ULB ನನ್ನ ಪವಿತ್ರತ್ವದಲ್ಲಿ ಆಣೆಯಿಟ್ಟು ಒಂದು ಸಂಗತಿಯನ್ನು ಹೇಳಿದ್ದೇನೆ; ಅದರ ವಿಷಯದಲ್ಲಿ ನಾನು ದಾವೀದನಿಗೆ ಸುಳ್ಳುಗಾರನಾಗುವುದಿಲ್ಲ. BSB BSB: Once and for all I have sworn by My holiness—I will not lie to David—
36 ULB ಅದೇನೆಂದರೆ, ಅವನ ಸಂತತಿಯು ಶಾಶ್ವತವಾಗಿ ಇರುವುದು; ಅವನ ಸಿಂಹಾಸನವು ಸೂರ್ಯನಂತೆ ನನ್ನ ಎದುರಿನಲ್ಲಿದ್ದು, BSB BSB: his offspring shall endure forever, and his throne before Me like the sun,
37 ULB ಚಂದ್ರನಂತೆ ನಿತ್ಯಕ್ಕೂ ಸ್ಥಿರವಾಗಿರುವುದು. ಪರಲೋಕದ ಸಾಕ್ಷಿ ಸತ್ಯವೇ ಸರಿ.>> ಸೆಲಾ. BSB BSB: like the moon, established forever, a faithful witness in the sky.” Selah
38 ULB ಹೀಗೆ ಹೇಳಿದ ನೀನು ನಿನ್ನ ಅಭಿಷಿಕ್ತನ ಮೇಲೆ ಕೋಪಗೊಂಡವನಾಗಿ, ಅವನನ್ನು ಅಸಹ್ಯಿಸಿ ತಳ್ಳಿಬಿಟ್ಟಿದ್ದೀ. BSB BSB: Now, however, You have spurned and rejected him; You are enraged by Your anointed one.
39 ULB ನೀನು ನಿನ್ನ ಸೇವಕನ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ಭಂಗಪಡಿಸಿ, ಅವನ ಕಿರೀಟವನ್ನು ನೆಲಕ್ಕೆ ಹಾಕಿ ಅಪವಿತ್ರಮಾಡಿದ್ದೀ. BSB BSB: You have renounced the covenant with Your servant and sullied his crown in the dust.
40 ULB ಅವನ ದೇಶದ ಮೇರೆಗಳನ್ನು ಕೆಡವಿ, ಕೋಟೆಗಳನ್ನು ಹಾಳುಮಾಡಿದ್ದೀ. BSB BSB: You have broken down all his walls; You have reduced his strongholds to rubble.
41 ULB ದಾರಿಗರೆಲ್ಲರೂ ಅವನನ್ನು ಸುಲಿಗೆ ಮಾಡುತ್ತಾರೆ; ಅವನು ನೆರೆಹೊರೆಯವರ ಪರಿಹಾಸ್ಯಕ್ಕೆ ಗುರಿಯಾಗಿದ್ದಾನೆ. BSB BSB: All who pass by plunder him; he has become a reproach to his neighbors.
42 ULB ಅವನ ವಿರೋಧಿಗಳ ಹಸ್ತವನ್ನು ಉನ್ನತಪಡಿಸಿದ್ದೀ; ಅವನ ವೈರಿಗಳಿಗೆಲ್ಲಾ ಆನಂದವಾಗುವಂತೆ ಮಾಡಿದ್ದೀ. BSB BSB: You have exalted the right hand of his foes; You have made all his enemies rejoice.
43 ULB ಇದಲ್ಲದೆ ಅವನ ಕತ್ತಿಯನ್ನು ತಿರುಗಿಸಿಬಿಟ್ಟಿದ್ದೀ; ಅವನನ್ನು ಯುದ್ಧದಲ್ಲಿ ನಿಲ್ಲದಂತೆ ಮಾಡಿದ್ದೀ. BSB BSB: You have bent the edge of his sword and have not sustained him in battle.
44 ULB ಅವನ ವೈಭವವನ್ನು ತಡೆದುಬಿಟ್ಟಿದ್ದೀ; ಅವನ ಸಿಂಹಾಸನವನ್ನು ನೆಲಕ್ಕುರುಳಿಸಿದ್ದೀ. BSB BSB: You have ended his splendor and cast his throne to the ground.
45 ULB ಅವನ ಯೌವನದ ದಿನಗಳನ್ನು ಬೇಗ ಮುಗಿಸಿ, ನಾಚಿಕೆಯು ಅವನನ್ನು ಕವಿಯುವಂತೆ ಮಾಡಿದ್ದಿ. ಸೆಲಾ BSB BSB: You have cut short the days of his youth; You have covered him with shame. Selah
46 ULB ಯೆಹೋವನೇ, ಇನ್ನೆಷ್ಟರವರೆಗೆ ಮರೆಯಾಗಿರುವಿ? ನಿನ್ನ ಕೋಪಾಗ್ನಿಯು ನಮ್ಮ ಮೇಲೆ ಸದಾ ಉರಿಯುತ್ತಿರಬೇಕೋ? BSB BSB: How long, O LORD? Will You hide Yourself forever? Will Your wrath keep burning like fire?
47 ULB ನನ್ನ ಆಯುಷ್ಯವು ಎಷ್ಟು ಅಲ್ಪವೆಂದೂ, ಎಂಥಾ ವ್ಯರ್ಥ ಜೀವಿತಕ್ಕಾಗಿ ಮನುಷ್ಯರನ್ನು ನಿರ್ಮಿಸಿದ್ದಿ ಎಂದೂ ಜ್ಞಾಪಿಸಿಕೋ. BSB BSB: Remember the briefness of my lifespan! For what futility You have created all men!
48 ULB ತಮ್ಮನ್ನು ಪಾತಾಳಕ್ಕೆ ತಪ್ಪಿಸಿಕೊಂಡು, ಮರಣಹೊಂದದೆ ಚಿರಂಜೀವಿಯಾಗಿರುವವರು ಯಾರು? ಸೆಲಾ BSB BSB: What man can live and never see death? Can he deliver his soul from the power of Sheol? Selah
49 ULB ಕರ್ತನೇ, ನೀನು ನಿನ್ನ ಸತ್ಯತೆಯಲ್ಲಿ ಆಣೆಯಿಟ್ಟು, ದಾವೀದನಿಗೆ ವಾಗ್ದಾನಮಾಡಿ ನಡೆಸುತ್ತಿದ್ದ ಹಿಂದಿನ ಕೃಪಾಕಾರ್ಯಗಳು ಎಲ್ಲಿ? BSB BSB: Where, O Lord, is Your loving devotion of old, which You faithfully swore to David?
50 ULB ಯೆಹೋವನೇ, ನಿನ್ನ ವೈರಿಗಳು ನಿಂದಿಸುತ್ತಾರೆ; ನಿನ್ನ ಅಭಿಷಿಕ್ತನನ್ನು ಹೆಜ್ಜೆ ಹೆಜ್ಜೆಗೂ ಅಪಮಾನ ಮಾಡುತ್ತಾರೆ. BSB BSB: Remember, O Lord, the reproach of Your servants, which I bear in my heart from so many people—
51 ULB ಕರ್ತನೇ, ನಿನ್ನ ಸೇವಕರಿಗಾಗುವ ಅಪವಾದವನ್ನೂ, ನಾನು ಎಲ್ಲಾ ಜನಾಂಗಗಳ ನಿಂದಾಭಾರವನ್ನು ಉಡಿಲಲ್ಲಿ ಕಟ್ಟಿರುವುದನ್ನೂ ಜ್ಞಾಪಿಸಿಕೋ. BSB BSB: how Your enemies have taunted, O LORD, and have mocked every step of Your anointed one!
52 ULB ಯೆಹೋವನಿಗೆ ಸದಾಕಾಲವೂ ಕೊಂಡಾಟವಾಗಲಿ. ಆಮೆನ್, ಆಮೆನ್. BSB BSB: Blessed be the LORD forever! Amen and amen.
Select verses for actions: Enter goes to them and Escape comes back.