1 ULB ಆ ಮೇಲೆ ಅವನು ಸ್ಫಟಿಕದಂತೆ ಅತಿಶುದ್ಧವಾಗಿದ್ದ ಜೀವಜಲದ ನದಿಯನ್ನು ನನಗೆ ತೋರಿಸಿದನು. ಅದು ದೇವರ ಮತ್ತು ಯಜ್ಞದ ಕುರಿಮರಿಯಾದಾತನ ಸಿಂಹಾಸನದಿಂದ ಹೊರಟು, BSB BSB: Then the angel showed me a river of the water of life, as clear as crystal, flowing from the throne of God and of the Lamb
2 ULB ಪಟ್ಟಣದ ಬೀದಿಯ ಮಧ್ಯದಲ್ಲಿ ಹರಿಯುತ್ತಿತ್ತು. ಆ ನದಿಯ ಎರಡು ದಡಗಳಲ್ಲಿ ಜೀವವೃಕ್ಷವಿತ್ತು. ಅದು ಪ್ರತಿ ತಿಂಗಳು ಒಂದೊಂದ್ದು ತರಹದ ಫಲವನ್ನು ಬಿಡುತ್ತಾ ಹನ್ನೆರಡು ತರಹದ ಫಲಗಳನ್ನು ಕೊಡುತ್ತದೆ. ಆ ಮರದ ಎಲೆಗಳು ಜನಾಂಗಗಳವರನ್ನು ವಾಸಿಮಾಡುವಂಥದಾಗಿದ್ದವು. BSB BSB: down the middle of the main street of the city. On either side of the river stood a tree of life, bearing twelve kinds of fruit and yielding a fresh crop for each month. And the leaves of the tree are for the healing of the nations.
3 ULB ಇನ್ನೂ ಯಾವ ಶಾಪವು ಇರುವುದಿಲ್ಲ. ಆ ಪಟ್ಟಣದಲ್ಲಿ ದೇವರ ಮತ್ತು ಯಜ್ಞದ ಕುರಿಮರಿಯಾತನ ಸಿಂಹಾಸನವಿರುವುದು. ಆತನ ಸೇವಕರು ಆತನಿಗೆ ಸೇವೆ ಮಾಡುವರು. BSB BSB: No longer will there be any curse. The throne of God and of the Lamb will be within the city, and His servants will worship Him.
4 ULB ಅವರು ಆತನ ಮುಖವನ್ನು ನೋಡುವರು. ಅವರ ಹಣೆಯ ಮೇಲೆ ಆತನ ಹೆಸರು ಇರುವುದು. BSB BSB: They will see His face, and His name will be on their foreheads.
5 ULB ಇನ್ನು ರಾತ್ರಿಯೇ ಇರುವುದಿಲ್ಲ. ಅವರಿಗೆ ದೀಪದ ಬೆಳಕೂ ಸೂರ್ಯನ ಬೆಳಕೂ ಬೇಕಾಗಿರುವುದಿಲ್ಲ. ದೇವರಾದ ಕರ್ತನೇ ಅವರಿಗೆ ಬೆಳಕಾಗಿರುವನು. ಅವರು ಯುಗಯುಗಾಂತರಗಳಲ್ಲಿಯೂ ಆಳುವರು. BSB BSB: There will be no more night in the city, and they will have no need for the light of a lamp or of the sun. For the Lord God will shine on them, and they will reign forever and ever.
6 ULB ಆ ಮೇಲೆ ದೇವದೂತನು ನನಗೆ, <<ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ. ಪ್ರವಾದಿಗಳ ಆತ್ಮಗಳನ್ನು ಪ್ರೇರೇಪಿಸುವ ದೇವರಾದ ಕರ್ತನು ಅತಿಶೀಘ್ರದಲ್ಲಿ ಸಂಭವಿಸತಕ್ಕ ಸಂಗತಿಗಳನ್ನು ತನ್ನ ದಾಸರಿಗೆ ತೋರಿಸುವುದಕ್ಕಾಗಿ ತನ್ನ ದೇವದೂತನನ್ನು ಕಳುಹಿಸಿಕೊಟ್ಟನು. BSB BSB: Then the angel said to me, “These words are faithful and true. The Lord, the God of the spirits of the prophets, has sent His angel to show His servants what must soon take place.”
7 ULB <<ಇಗೋ ನೋಡು! ನಾನು ಅತಿಬೇಗನೆ ಬರುತ್ತೇನೆ! ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನಾ ವಾಕ್ಯಗಳನ್ನು ಕೈಕೊಂಡು ನಡೆಯುವವನು ಧನ್ಯನು>> ಎಂದು ಹೇಳಿದನು. BSB BSB: “Behold, I am coming soon. Blessed is the one who keeps the words of prophecy in this book.”
8 ULB ಯೋಹಾನನೆಂಬ ನಾನೇ, ಈ ಸಂಗತಿಗಳನ್ನು ಕೇಳಿದವನೂ ನೋಡಿದವನೂ ಆಗಿದ್ದೇನೆ. ನಾನು ಈ ಸಂಗತಿಗಳನ್ನು ಕೇಳಿ ಕಂಡಾಗ, ಈ ಸಂಗತಿಗಳನ್ನು ನನಗೆ ತೋರಿಸಿದ ದೇವದೂತನನ್ನು ಆರಾಧಿಸಬೇಕೆಂದು ಅವನ ಪಾದಕ್ಕೆ ಬಿದ್ದೆನು. BSB BSB: And I, John, am the one who heard and saw these things. And when I had heard and seen them, I fell down to worship at the feet of the angel who had shown me these things.
9 ULB ಆದರೆ ಅವನು ನನಗೆ, <<ನೀನು ಹಾಗೆ ಮಾಡಬೇಡ! ನೋಡು. ನಾನು ನಿನಗೂ ಪ್ರವಾದಿಗಳಾಗಿರುವ ನಿನ್ನ ಸಹೋದರರಿಗೂ, ಈ ಪುಸ್ತಕದಲ್ಲಿ ಬರೆದಿರುವ ವಾಕ್ಯಗಳನ್ನು ಕೈಕೊಂಡು ನಡೆಯುವವರಿಗೂ ಸೇವೆಯನ್ನು ಮಾಡುವ ಸೇವಕನಾಗಿದ್ದೇನೆ. ದೇವರನ್ನೇ ಆರಾಧಿಸು>> ಎಂದು ಹೇಳಿದನು. BSB BSB: But he said to me, “Do not do that! I am a fellow servant with you and your brothers the prophets, and with those who keep the words of this book. Worship God!”
10 ULB ಇದಲ್ಲದೆ ಅವನು ನನಗೆ ಈ ಪುಸ್ತಕದಲ್ಲಿರುವ <<ಪ್ರವಾದನಾ ವಾಕ್ಯಗಳಿಗೆ ಮುದ್ರೆಹಾಕಬೇಡ. ಏಕೆಂದರೆ ಇವು ನೆರವೇರುವ ಕಾಲವು ಸಮೀಪವಾಗಿದೆ. BSB BSB: Then he told me, “Do not seal up the words of prophecy in this book, because the time is near.
11 ULB ಅನ್ಯಾಯ ಮಾಡುವವನು ಇನ್ನೂ ಅನ್ಯಾಯ ಮಾಡಲಿ. ಮೈಲಿಗೆಯಾಗಿರುವವನು ತನ್ನನ್ನು ಇನ್ನು ಮೈಲಿಗೆಯ ಮಾಡಿಕೊಳ್ಳಲಿ, ನೀತಿವಂತನು ಇನ್ನೂ ನೀತಿವಂತನಾಗಲಿ ಮತ್ತು ಪವಿತ್ರನು ತನ್ನನ್ನು ಇನ್ನೂ ಪವಿತ್ರ ಮಾಡಿಕೊಳ್ಳಲಿ.>> BSB BSB: Let the unrighteous continue to be unrighteous, and the vile continue to be vile; let the righteous continue to practice righteousness, and the holy continue to be holy.”
12 ULB <<ನೋಡು! ನಾನು ಬೇಗನೇ ಬರುತ್ತೇನೆ. ನಾನು ಪ್ರತಿಯೊಬ್ಬನಿಗೂ ಅವನವನ ನಡತೆಗೆ ತಕ್ಕಂತೆ ಕೊಡತಕ್ಕ ಪ್ರತಿಫಲವು ನನ್ನಲ್ಲಿದೆ. BSB BSB: “Behold, I am coming soon, and My reward is with Me, to give to each one according to what he has done.
13 ULB ನಾನೇ ಆದಿಯೂ, ಅಂತ್ಯವೂ, ಮೊದಲನೆಯವನೂ, ಕಡೆಯವನೂ, ಪ್ರಾರಂಭವೂ, ಸಮಾಪ್ತಿಯೂ ಆಗಿದ್ದೇನೆ. BSB BSB: I am the Alpha and the Omega, the First and the Last, the Beginning and the End.”
14 ULB ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡು ಶುದ್ಧರಾಗಿರುವವರು ಧನ್ಯರು. ಅವರಿಗೆ ಜೀವವೃಕ್ಷದ ಹಕ್ಕು ಇರುವುದು. ಅವರು ಬಾಗಿಲುಗಳ ಮೂಲಕ ಆ ಪಟ್ಟಣದೊಳಗೆ ಬಂದು ಸೇರುವರು. BSB BSB: Blessed are those who wash their robes, so that they may have the right to the tree of life and may enter the city by its gates.
15 ULB ಆದರೆ ನಾಯಿಗಳಂತಿರುವವರೂ, ಮಾಟಗಾರರೂ, ಜಾರರೂ, ಕೊಲೆಗಾರರೂ, ವಿಗ್ರಹಾರಾಧಕರೂ, ಸುಳ್ಳನ್ನು ಪ್ರೀತಿಸಿ ಅದನ್ನು ಅಭ್ಯಾಸಮಾಡುವವರೆಲ್ಲರೂ ಹೊರಗಿರುವರು>> ಎಂದು ಹೇಳಿದನು. BSB BSB: But outside are the dogs, the sorcerers, the sexually immoral, the murderers, the idolaters, and everyone who loves and practices falsehood.
16 ULB <<ಯೇಸುವೆಂಬ ನಾನು ನನ್ನ ಸಭೆಗಳ ವಿಷಯವಾಗಿ ನಿಮಗೆ ಸಾಕ್ಷಿ ಹೇಳುವುದಕ್ಕೆ ನನ್ನ ದೂತನನ್ನು ಕಳುಹಿಸಿಕೊಟ್ಟೆನು. ನಾನು ದಾವೀದನ ವಂಶವೆಂಬ ಬುಡದಿಂದ ಹುಟ್ಟಿದ ಬೇರೂ ಅವನ ಸಂತತಿಯೂ ಪ್ರಕಾಶಮಾನವಾದ ಉದಯ ನಕ್ಷತ್ರವೂ ಆಗಿದ್ದೇನೆ.>> BSB BSB: “I, Jesus, have sent My angel to give you this testimony for the churches. I am the Root and the Offspring of David, the bright Morning Star.”
17 ULB ಆತ್ಮನು ಮತ್ತು ಮದಲಗಿತ್ತಿಯು, <<ಬಾ>> ಎನ್ನುತ್ತಾರೆ. ಕೇಳುವವನು, <<ಬಾ>> ಎನ್ನಲಿ. ಬಾಯಾರಿದವನು ಬರಲಿ, ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ಉಚಿತವಾಗಿ ತೆಗೆದುಕೊಳ್ಳಲಿ. BSB BSB: The Spirit and the bride say, “Come!” Let the one who hears say, “Come!” And let the one who is thirsty come, and the one who desires the water of life drink freely.
18 ULB ಈ ಪುಸ್ತಕದ ಪ್ರವಾದನಾ ವಾಕ್ಯಗಳನ್ನು ಕೇಳುವ ಪ್ರತಿಯೊಬ್ಬನಿಗೆ ನಾನು ಹೇಳುವ ಸಾಕ್ಷಿ ಏನೆಂದರೆ, ಇವುಗಳಿಗೆ ಯಾವನಾದರೂ ಹೆಚ್ಚು ಮಾತುಗಳನ್ನು ಕೂಡಿಸಿದರೆ, ದೇವರು ಅವನ ಮೇಲೆ ಈ ಪುಸ್ತಕದಲ್ಲಿ ಬರೆದಿರುವ ಉಪದ್ರವಗಳನ್ನು ಕೊಡುವನು. BSB BSB: I testify to everyone who hears the words of prophecy in this book: If anyone adds to them, God will add to him the plagues described in this book.
19 ULB ಯಾವನಾದರೂ ಈ ಪ್ರವಾದನಾ ಪುಸ್ತಕದಲ್ಲಿರುವ ಮಾತುಗಳಲ್ಲಿ ಒಂದನ್ನಾದರೂ ತೆಗೆದುಬಿಟ್ಟರೆ ಈ ಪುಸ್ತಕದಲ್ಲಿ ಬರೆದಿರುವ ಪರಿಶುದ್ಧ ಪಟ್ಟಣದಲ್ಲಿಯೂ ಜೀವವೃಕ್ಷದಲ್ಲಿಯೂ ಅವನಿಗಿರುವ ಪಾಲನ್ನು ದೇವರು ತೆಗೆದುಬಿಡುವನು. BSB BSB: And if anyone takes away from the words of this book of prophecy, God will take away his share in the tree of life and the holy city, which are described in this book.
20 ULB ಈ ವಿಷಯಗಳಲ್ಲಿ ಸಾಕ್ಷಿ ಹೇಳುವವನು, <<ಹೌದು ನಾನು ನಿಜವಾಗಿ ಬೇಗನೇ ಬರುತ್ತೇನೆ!>> ಎಂದು ಹೇಳುತ್ತಾನೆ. ಆಮೆನ್. ಕರ್ತನಾದ ಯೇಸುವೇ ಬಾ. BSB BSB: He who testifies to these things says, “Yes, I am coming soon.” Amen. Come, Lord Jesus!
21 ULB ಕರ್ತನಾದ ಯೇಸುವಿನ ಕೃಪೆಯು ಎಲ್ಲರೊಂದಿಗೆ ಇರಲಿ. ಆಮೆನ್! BSB BSB: The grace of the Lord Jesus be with all the saints. Amen.
Select verses for actions: Enter goes to them and Escape comes back.