1 ULB ಕುರಿಮರಿಯಾದಾತನು ಆ ಏಳು ಮುದ್ರೆಗಳಲ್ಲಿ ಒಂದು ಮುದ್ರೆಯನ್ನು ಒಡೆಯುವಾಗ ನಾನು ನೋಡಿದೆನು ಮತ್ತು ಆ ನಾಲ್ಕು ಜೀವಿಗಳಲ್ಲಿ ಒಂದು ಜೀವಿಯು ಗುಡುಗಿನಂತಿದ್ದ ಸ್ವರದಿಂದ <<ಬಾ!>> ಎಂದು ಹೇಳುವುದನ್ನು ಕೇಳಿದೆನು. BSB BSB: Then I watched as the Lamb opened one of the seven seals, and I heard one of the four living creatures say in a voice like thunder, “Come!”
2 ULB ನಾನು ನೋಡಲು ಇಗೋ ಒಂದು ಬಿಳಿ ಕುದುರೆ ಕಾಣಿಸಿತು. ಅದರ ಮೇಲೆ ಕುಳಿತಿದ್ದವನು ಕೈಯಲ್ಲಿ ಒಂದು ಬಿಲ್ಲನ್ನು ಹಿಡಿದಿದ್ದನು. ಅವನಿಗೆ ಒಂದು ಕಿರೀಟವು ಕೊಡಲ್ಪಟ್ಟಿತು. ಅವನು ಜಯಿಸುವವನಾಗಿ ಜಯಿಸುವುದಕ್ಕೋಸ್ಕರ ಹೊರಟನು. BSB BSB: So I looked and saw a white horse, and its rider held a bow. And he was given a crown, and he rode out to overcome and conquer.
3 ULB ಆತನು ಎರಡನೆಯ ಮುದ್ರೆಯನ್ನು ಒಡೆದಾಗ ಎರಡನೆಯ ಜೀವಿಯು <<ಬಾ>>! ಎಂದು ಹೇಳುವುದನ್ನು ಕೇಳಿದೆನು. BSB BSB: And when the Lamb opened the second seal, I heard the second living creature say, “Come!”
4 ULB ಆಗ ಕೆಂಪಾಗಿರುವ ಮತ್ತೊಂದು ಕುದುರೆಯು ಹೊರಟು ಬಂದಿತು. ಅದರ ಮೇಲೆ ಸವಾರಿಮಾಡುವವನಿಗೆ ಭೂಲೋಕದಿಂದ ಸಮಾಧಾನವನ್ನು ತೆಗೆದುಬಿಡುವುದಕ್ಕೆ ಅಧಿಕಾರ ಕೊಡಲ್ಪಟ್ಟಿತು, ಇದರಿಂದ ಜನರು ಒಬ್ಬರನ್ನೊಬ್ಬರು ಕೊಲ್ಲುವವರಾದರು. ಅವನಿಗೆ ದೊಡ್ಡದೊಂದು ಖಡ್ಗವೂ ಕೊಡಲ್ಪಟ್ಟಿತು. BSB BSB: Then another horse went forth. It was bright red, and its rider was granted permission to take away peace from the earth and to make men slay one another. And he was given a great sword.
5 ULB ಆತನು ಮೂರನೆಯ ಮುದ್ರೆಯನ್ನು ಒಡೆದಾಗ ಮೂರನೆಯ ಜೀವಿಯು <<ಬಾ>>! ಎಂದು ಹೇಳುವುದನ್ನು ಕೇಳಿದೆನು. ಆಗ, ನಾನು ನೋಡಲು ಇಗೋ, ನನಗೆ ಕಪ್ಪು ಕುದುರೆಯು ಕಾಣಿಸಿತು. ಅದರ ಮೇಲೆ ಕುಳಿತಿದ್ದವನ ಕೈಯಲ್ಲಿ ತಕ್ಕಡಿ ಇತ್ತು. BSB BSB: And when the Lamb opened the third seal, I heard the third living creature say, “Come!” Then I looked and saw a black horse, and its rider held in his hand a pair of scales.
6 ULB ಆ ಮೇಲೆ ನಾಲ್ಕು ಜೀವಿಗಳ ಮಧ್ಯದಿಂದ ಒಬ್ಬನ ಧ್ವನಿಯು ಹೊರಟ ಹಾಗೆ ಕೇಳಿದೆನು. ಒಂದು <<ದೀನಾರಿಗೆ ಒಂದು ಸೇರು ಗೋದಿ ಮತ್ತು ಒಂದು ದೀನಾರಿಗೆ ಮೂರು ಸೇರು ಜವೆಗೋದಿ, ಆದರೆ ಎಣ್ಣೆಯನ್ನು ಮತ್ತು ದ್ರಾಕ್ಷಾರಸವನ್ನು ಕೆಡಿಸಬೇಡ>> ಎಂದು ಹೇಳಿತು. BSB BSB: And I heard what sounded like a voice from among the four living creatures, saying, “A quart of wheat for a denarius, and three quarts of barley for a denarius, and do not harm the oil and wine.”
7 ULB ಆತನು ನಾಲ್ಕನೆಯ ಮುದ್ರೆಯನ್ನು ಒಡೆದಾಗ ನಾಲ್ಕನೆಯ ಜೀವಿಯು <<ಬಾ>>! ಎನ್ನುವ ಶಬ್ದವನ್ನು ಕೇಳಿದೆನು. BSB BSB: And when the Lamb opened the fourth seal, I heard the voice of the fourth living creature say, “Come!”
8 ULB ಆಗ ನಾನು ನೋಡಲು ಇಗೋ, ನಸು ಹಸಿರು ಬಣ್ಣದ ಕುದುರೆಯು ಕಾಣಿಸಿತು. ಅದರ ಮೇಲೆ ಕುಳಿತಿದ್ದವನ ಹೆಸರು ಮೃತ್ಯು ಎಂದು. ಮೃತ್ಯುಲೋಕ ಅವನನ್ನು ಹಿಂಬಾಲಿಸುತ್ತಿತ್ತು. ಅವನಿಗೆ ಭೂಮಿಯ ನಾಲ್ಕನೇ ಒಂದು ಭಾಗವನ್ನು ಕತ್ತಿಯಿಂದಲೂ, ಕ್ಷಾಮದಿಂದಲೂ, ಅಂಟುರೋಗದಿಂದಲೂ, ಭೂಮಿಯ ಕಾಡುಮೃಗಗಳಿಂದಲೂ ಕೊಂದುಹಾಕುವುದಕ್ಕೆ ಅಧಿಕಾರ ಕೊಡಲಾಗಿತ್ತು. BSB BSB: Then I looked and saw a pale green horse. Its rider’s name was Death, and Hades followed close behind. And they were given authority over a fourth of the earth, to kill by sword, by famine, by plague, and by the beasts of the earth.
9 ULB ಆತನು ಐದನೆಯ ಮುದ್ರೆಯನ್ನು ಒಡೆದಾಗ, ದೇವರ ವಾಕ್ಯದ ನಿಮಿತ್ತವಾಗಿಯೂ, ತಮಗಿದ್ದ ದೃಢವಾದ ಸಾಕ್ಷಿಯ ನಿಮಿತ್ತವಾಗಿಯೂ, ಹತರಾದವರ ಆತ್ಮಗಳು ಯಜ್ಞವೇದಿಯ ಕೆಳಗಿರುವುದನ್ನು ಕಂಡೆನು. BSB BSB: And when the Lamb opened the fifth seal, I saw under the altar the souls of those who had been slain for the word of God and for the testimony they had upheld.
10 ULB ಅವರು, <<ಸರ್ವಶಕ್ತನಾದ ಕರ್ತನೇ, ಪರಿಶುದ್ಧನೂ, ಸತ್ಯವಂತನೂ, ಆಗಿರುವಾತನೇ, ನಮ್ಮ ರಕ್ತವನ್ನು ಸುರಿಸಿದ ಭೂಲೋಕ ನಿವಾಸಿಗಳಿಗೆ ನೀನು ಇನ್ನೆಷ್ಟು ಸಮಯ ನ್ಯಾಯತೀರಿಸದೆಯೂ, ಪ್ರತಿದಂಡನೆ ಮಾಡದೆಯೂ ಇರುವಿ?>> ಎಂದು ಮಹಾಶಬ್ದದಿಂದ ಕೂಗಿದರು. BSB BSB: And they cried out in a loud voice, “How long, O Lord, holy and true, until You judge those who dwell upon the earth and avenge our blood?”
11 ULB ಆಗ ಅವರಲ್ಲಿ ಪ್ರತಿಯೊಬ್ಬನಿಗೆ ಒಂದೊಂದು ಬಿಳೀ ನಿಲುವಂಗಿಯು ಕೊಡಲ್ಪಟ್ಟಿತು ಇನ್ನೂ ಸ್ವಲ್ಪ ಸಮಯ ವಿಶ್ರಮಿಸಿಕೊಂಡಿರಬೇಕು. ನಿಮ್ಮ ಹಾಗೆ ವಧಿಸಲ್ಪಡಬೇಕಾಗಿರುವ ನಿಮ್ಮ ಸಹೋದರರ ಮತ್ತು ನಿಮ್ಮ ಜೊತೆ ಸೇವಕರ ಸಂಖ್ಯೆ ಪೂರ್ಣವಾಗುವ ತನಕ ಕಾದಿರಬೇಕೆಂದು ಅವರಿಗೆ ಅಪ್ಪಣೆಯಾಯಿತು. BSB BSB: Then each of them was given a white robe and told to rest a little while longer until the full number of their fellow servants, their brothers, were killed, just as they had been killed.
12 ULB ಆತನು ಆರನೆಯ ಮುದ್ರೆಯನ್ನು ಒಡೆಯುವುದನ್ನು ಕಂಡೆನು. ಆಗ ಮಹಾಭೂಕಂಪ ಉಂಟಾಯಿತು. ಸೂರ್ಯನು ಕರೀಕಂಬಳಿಯಂತೆ ಕಪ್ಪಾದನು ಮತ್ತು ಪೂರ್ಣಚಂದ್ರನು ರಕ್ತದಂತಾದನು. BSB BSB: And I watched as the Lamb opened the sixth seal, and there was a great earthquake, and the sun became black like sackcloth of goat hair, and the whole moon turned blood red,
13 ULB ಅಂಜೂರದ ಮರವು ಬಿರುಗಾಳಿಯಿಂದ ಬಡಿಯಲ್ಪಟ್ಟು ತನ್ನ ಕಾಯಿಗಳನ್ನು ಉದುರಿಸುವ ಹಾಗೆ ಆಕಾಶದಿಂದ ನಕ್ಷತ್ರಗಳು ಭೂಮಿಗೆ ಉದುರಿ ಬಿದ್ದವು. BSB BSB: and the stars of the sky fell to the earth like unripe figs dropping from a tree shaken by a great wind.
14 ULB ಆಕಾಶವು ಸುರುಳಿಯಂತೆ ಸುತ್ತಲ್ಪಟ್ಟು ಮರೆಯಾಯಿತು. ಎಲ್ಲಾ ಬೆಟ್ಟಗಳು ಮತ್ತು ದ್ವೀಪಗಳು ತಮ್ಮತಮ್ಮ ಸ್ಥಳಗಳಿಂದ ಕದಲಿದವು. BSB BSB: The sky receded like a scroll being rolled up, and every mountain and island was moved from its place.
15 ULB ಆಗ ಭೂರಾಜರುಗಳೂ, ಮಹಾಪುರುಷರೂ, ಸಹಸ್ರಾಧಿಪತಿಗಳೂ, ಐಶ್ವರ್ಯವಂತರೂ, ಪರಾಕ್ರಮಶಾಲಿಗಳೂ, ಎಲ್ಲಾ ದಾಸರೂ ಮತ್ತು ಸ್ವತಂತ್ರರೂ ಬೆಟ್ಟಗಳ ಗವಿಗಳಿಗೂ ಮತ್ತು ಬಂಡೆಗಳ ಸಂದುಗಳಿಗೂ ಓಡಿಹೋಗಿ ತಮ್ಮನ್ನು ಮರೆಮಾಡಿಕೊಂಡರು. BSB BSB: Then the kings of the earth, the nobles, the commanders, the rich, the mighty, and every slave and free man hid in the caves and among the rocks of the mountains.
16 ULB ಬೆಟ್ಟಗಳಿಗೂ ಬಂಡೆಗಳಿಗೂ, <<ನಮ್ಮ ಮೇಲೆ ಬೀಳಿರಿ!, ಸಿಂಹಾಸನದ ಮೇಲೆ ಕುಳಿತಿರುವಾತನ ಮುಖವನ್ನು ನೋಡದ ಹಾಗೆಯೂ ಕುರಿಮರಿಯ ಕೋಪಾಗ್ನಿಯು ತಟ್ಟದ ಹಾಗೆಯೂ ನಮ್ಮನ್ನು ಮರೆಮಾಡಿರಿ. BSB BSB: And they said to the mountains and the rocks, “Fall on us and hide us from the face of the One seated on the throne, and from the wrath of the Lamb.
17 ULB ಏಕೆಂದರೆ ಅವರ ಕೋಪಾಗ್ನಿಯು ಕಾಣಿಸುವ ಮಹಾ ದಿನವು ಬಂದಿದೆ, ಅದರ ಮುಂದೆ ನಿಲ್ಲುವುದಕ್ಕೆ ಯಾರಿಂದಾದೀತು?>> ಎಂದು ಹೇಳಿದರು. BSB BSB: For the great day of Their wrath has come, and who is able to withstand it?”
Select verses for actions: Enter goes to them and Escape comes back.