1 ULB ಆಗ ನಾನು ಕಣ್ಣೆತ್ತಿ ನೋಡಲು ಇಗೋ, ಹಾರುತ್ತಿರುವ ಒಂದು ಸುರುಳಿಯು ಕಾಣಿಸಿತು. BSB BSB: Again I lifted up my eyes and saw before me a flying scroll.
2 ULB ಆಗ ದೂತನು ನನಗೆ, <<ನಿನಗೆ ಏನು ಕಾಣಿಸುತ್ತದೆ?>> ಎಂದಾಗ ನಾನು, ಹಾರುತ್ತಿರುವ ಒಂದು ಸುರುಳಿಯು ಕಾಣಿಸುತ್ತದೆ ಅದರ ಉದ್ದ ಇಪ್ಪತ್ತು ಮೊಳ, ಅಗಲ ಹತ್ತು ಮೊಳ ಎಂದು ಉತ್ತರಕೊಟ್ಟೆನು. BSB BSB: “What do you see?” asked the angel. “I see a flying scroll,” I replied, “twenty cubits long and ten cubits wide.”
3 ULB ಆಗ ದೂತನು ನನಗೆ, <<ದೇಶದ ಮೇಲೆಲ್ಲಾ ಹೊರಟು ಬಂದಿರುವ ಶಾಪವು ಇದೇ. ಕಳ್ಳತನ ಮಾಡುವ ಪ್ರತಿಯೊಬ್ಬರೂ ದೇಶದಿಂದ ಹೊರಗೆ ತೆಗೆದುಹಾಕಲ್ಪಡುವರು. ಇದಕ್ಕೆ ತಕ್ಕ ಹಾಗೆ ಪ್ರತಿಯೊಬ್ಬ ಸುಳ್ಳು ಸಾಕ್ಷಿಯೂ ದೇಶದಿಂದ ಹೊರಗೆ ತೆಗೆದುಹಾಕಲ್ಪಡುವನು. BSB BSB: Then he told me, “This is the curse that is going out over the face of all the land, for according to one side of the scroll, every thief will be removed; and according to the other side, every perjurer will be removed.
4 ULB ನಾನು ಶಾಪವನ್ನು ಕಳುಹಿಸುತ್ತೇನೆ. ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ, <ನನ್ನ ಅಪ್ಪಣೆಯಂತೆ ಅದು ಕಳ್ಳನ ಮನೆಯಲ್ಲಿಯೂ, ನನ್ನ ಹೆಸರೆತ್ತಿ ಸುಳ್ಳು ಸಾಕ್ಷಿಹೇಳುವವನ ಮನೆಯೊಳಗೆ ನುಗ್ಗಿ ಮತ್ತು ಅವನ ಮನೆಯಲ್ಲಿನ ಮರಗಳನ್ನೂ, ಅದರ ಕಲ್ಲುಗಳನ್ನೂ ನಾಶಮಾಡುವುದು>>> ಎಂದು ಹೇಳಿದನು. BSB BSB: I will send it out, declares the LORD of Hosts, and it will enter the house of the thief and the house of him who swears falsely by My name. It will remain inside his house and destroy it, down to its timbers and stones.”
5 ULB ಆಗ ನನ್ನ ಸಂಗಡ ಮಾತನಾಡುತ್ತಿದ್ದ ದೂತನು ಬಂದು, <<ಕಂಡು ಬರುತ್ತಿರುವ ಆ ವಸ್ತು ಏನೆಂದು ನೋಡು>> ಎಂಬುದಾಗಿ ನನಗೆ ಹೇಳಿದನು. BSB BSB: Then the angel who was speaking with me came forward and told me, “Now lift up your eyes and see what is approaching.”
6 ULB ನಾನು, <<ಏನದು?>> ಎಂದು ಕೇಳಿದ್ದಕ್ಕೆ ಅವನು, <<ಇದು ಅಳೆಯುವ ಬುಟ್ಟಿ>> ಎಂದನು. ಇದಲ್ಲದೆ ಅವನು, <<ಇದೇ ಸಮಸ್ತ ಭೂಮಿಯಲ್ಲಿಯ ಜನರ ಅಧರ್ಮವು>> ಎಂದನು. BSB BSB: “What is it?” I asked. And he replied, “A measuring basket is going forth.” Then he continued, “This is their iniquity in all the land.”
7 ULB ಇಗೋ, ತಟ್ಟೆಯಾಕಾರದ ಸೀಸದ ಮುಚ್ಚಳವು ತೆರೆಯಲ್ಪಡಲಾಗಿ ಆಹಾ, ಒಬ್ಬ ಸ್ತ್ರೀ ಅದರಲ್ಲಿ ಕುಳಿತುಕೊಂಡಿದ್ದಳು. BSB BSB: And behold, the cover of lead was raised, and there was a woman sitting inside the basket.
8 ULB ಆಗ ದೂತನು ಹೇಳಿದ್ದೇನೆಂದರೆ, <<ಇದು ದುಷ್ಟತ್ವವು>> ಎಂದು ಹೇಳಿ ಅವಳನ್ನು ಬುಟ್ಟಿಯೊಳಗೆ ಪುನಃ ಅದುಮಿ ಆ ಬುಟ್ಟಿಯ ಮುಚ್ಚಳವನ್ನು ಮುಚ್ಚಿದನು. BSB BSB: “This is Wickedness,” he said. And he shoved her down into the basket, pushing down the lead cover over its opening.
9 ULB ನಾನು ಕಣ್ಣೆತ್ತಿ ನೋಡಲು, ಆಹಾ ಕೊಕ್ಕರೆಯ ರೆಕ್ಕೆಯಂತಿರುವ ರೆಕ್ಕೆಯುಳ್ಳ ಇಬ್ಬರು ಹೆಂಗಸರು ಕಂಡುಬಂದರು. ಅವರ ರೆಕ್ಕೆಗಳೊಳಗೆ ಗಾಳಿಯು ತುಂಬಿಕೊಂಡಿತ್ತು. ಅವರು ಅಳತೆಯ ಬುಟ್ಟಿಯನ್ನು ಎತ್ತಿಕೊಂಡು ಹಾರಿ ಹೋದರು. BSB BSB: Then I lifted up my eyes and saw two women approaching, with the wind in their wings. Their wings were like those of a stork, and they lifted up the basket between heaven and earth.
10 ULB ಆಗ ನಾನು ನನ್ನ ಸಂಗಡ ಮಾತನಾಡಿದ ದೂತನಿಗೆ, <<ಇವರು ಅಳತೆಯ ಬುಟ್ಟಿಯನ್ನು ಎಲ್ಲಿಗೆ ಹೊತ್ತುಕೊಂಡು ಹೋಗುತ್ತಾರೆ?>> ಎಂದು ಹೇಳಿದೆನು. BSB BSB: “Where are they taking the basket?” I asked the angel who was speaking with me.
11 ULB ದೂತನು ನನಗೆ, <<ಶಿನಾರ್ ದೇಶದಲ್ಲಿ ಅವಳಿಗೆ ಮನೆಕಟ್ಟುವುದಕ್ಕಾಗಿ ಹೋಗುತ್ತಾರೆ. ಅಲ್ಲಿ ಅದು ಸ್ಥಾಪಿಸಲ್ಪಟ್ಟು ತನ್ನ ಸ್ವಂತ ಸ್ಥಾನದಲ್ಲಿ ಇರಿಸಲ್ಪಡುವುದು>> ಎಂದನು. BSB BSB: “To build a house for it in the land of Shinar,” he told me. “And when it is ready, the basket will be set there on its pedestal.”