1 ULB ಇಸ್ರಾಯೇಲನ ಚೊಚ್ಚಲ ಮಗನಾದ ರೂಬೇನನ ವಂಶಾವಳಿ. ರೂಬೇನನು ಚೊಚ್ಚಲ ಮಗನಾಗಿದ್ದರೂ ಅವನು ತನ್ನ ತಂದೆಯ ಉಪಪತ್ನಿಯೊಂದಿಗೆ ಸಂಗಮಿಸಿ ಹಾಸಿಗೆಯನ್ನು ಹೊಲೆ ಮಾಡಿದ್ದರಿಂದ ಅವನ ಹಕ್ಕು ಇಸ್ರಾಯೇಲನ ಮಗನಾದ ಯೋಸೇಫನ ಕುಲಕ್ಕೆ ಕೊಡಲ್ಪಟ್ಟಿತು. BSB BSB: These were the sons of Reuben the firstborn of Israel. Though he was the firstborn, his birthright was given to the sons of Joseph son of Israel, because Reuben defiled his father’s bed. So he is not reckoned according to birthright.
2 ULB ಆದರೆ ಯೆಹೂದನು ಎಲ್ಲಾ ಸಹೋದರರಲ್ಲಿ ಬಲಿಷ್ಠನಾದುದರಿಂದಲೂ, ರಾಜಾಧಿಕಾರವು ಇವನ ಕುಲಕ್ಕೆ ಬಂದುದರಿಂದಲೂ ಯೋಸೇಫನು ವಂಶಾವಳಿಯ ಪಟ್ಟಿಗಳಲ್ಲಿ ಚೊಚ್ಚಲ ಮಗನೆಂದು ಲಿಖಿತವಾಗಲಿಲ್ಲ. ಆದರೂ ಚೊಚ್ಚಲ ಮಗನಿಗೆ ಸಿಕ್ಕತಕ್ಕ ಪಾಲು ಅವನಿಗೆ ಸಿಕ್ಕಿತು. BSB BSB: And though Judah prevailed over his brothers and a ruler came from him, the birthright belonged to Joseph.
3 ULB ಇಸ್ರಾಯೇಲನ ಚೊಚ್ಚಲ ಮಗನಾದ ರೂಬೇನನ ಮಕ್ಕಳು: ಹನೋಕ್, ಫಲ್ಲೂ, ಹೆಚ್ರೋನ್ ಮತ್ತು ಕರ್ಮೀ. BSB BSB: The sons of Reuben, the firstborn of Israel: Hanoch, Pallu, Hezron, and Carmi.
4 ULB ಯೋವೇಲನ ವಂಶಾವಳಿ: ಇವನ ಮಗ ಶೆಮಾಯ; ಶೆಮಾಯನ ಮಗ ಗೋಗ್. BSB BSB: The descendants of Joel: Shemaiah his son, Gog his son, Shimei his son,
5 ULB ಗೋಗನ ಮಗ ಶಿಮ್ಮೀ; ಇವನ ಮಗ ಮೀಕ. ಮೀಕನ ಮಗ ರೆವಾಯ, ಇವನ ಮಗ ಬಾಳ್. BSB BSB: Micah his son, Reaiah his son, Baal his son,
6 ULB ಬಾಳನ ಮಗ ಬೇರ. ರೂಬೇನ್ಯರ ಪ್ರಭುಗಳಲ್ಲೊಬ್ಬನಾಗಿದ್ದ ಇವನನ್ನು ಅಶ್ಶೂರದ ಅರಸನಾದ ತಿಗ್ಲತ್ ಫಿಲ್ನೇಸರನು ಸೆರೆಯೊಯ್ದನು. BSB BSB: and Beerah his son, whom Tiglath-pileser king of Assyria carried into exile. Beerah was a leader of the Reubenites.
7 ULB ವಂಶಾವಳಿಯ ಪಟ್ಟಿಯಲ್ಲಿ ಇವನ ಗೋತ್ರ ಸಂಬಂಧಿಗಳಾಗಿ ಲಿಖಿತರಾದವರು ನಾಯಕನಾದ ಯೆಗೀಯೇಲ್, ಜೆಕರ್ಯ, ಬೆಳ ಇವರೇ. ಬೆಳನು ಅಜಾಜನ ಮಗ. BSB BSB: His relatives by their clans are recorded in their genealogy: Jeiel the chief, Zechariah,
8 ULB ಬೆಳನು ಅಜಾಜನ ಮಗ. ಅಜಾಜನು ಶೆಮಯನ ಮಗ. ಶೆಮಯನು ಯೋವೇಲನ ಮಗ. ಯೋವೇಲ್ಯರು ಅರೋಯೇರಿನಿಂದ ನೆಬೋ ಮತ್ತು ಬಾಳ್ಮೆಯೋನ್ ಎಂಬ ಸ್ಥಳಗಳವರೆಗೂ ವಾಸಿಸುತ್ತಿದ್ದರು. BSB BSB: and Bela son of Azaz, the son of Shema, the son of Joel. They settled in Aroer and as far as Nebo and Baal-meon.
9 ULB ಪೂರ್ವ ದಿಕ್ಕಿನಲ್ಲಿ ಯೂಫ್ರೆಟಿಸ್ ನದಿಯ ಈಚೆಯಲ್ಲಿರುವ ಅರಣ್ಯವು ಇವರ ಮೇರೆ. ಇವರಿಗೆ ಗಿಲ್ಯಾದ್ ದೇಶದಲ್ಲಿ ಅನೇಕ ದನ ಕುರಿಹಿಂಡುಗಳಿದ್ದವು. BSB BSB: They also settled in the east as far as the edge of the desert that extends to the Euphrates River, because their livestock had increased in the land of Gilead.
10 ULB ಇವರು ಸೌಲನ ಕಾಲದಲ್ಲಿ ಹಗ್ರೀಯರೊಡನೆ ಯುದ್ಧಮಾಡಿ, ಅವರನ್ನು ಸಂಹರಿಸಿ, ಗಿಲ್ಯಾದಿನ ಪೂರ್ವದಿಕ್ಕಿನ ಪ್ರಾಂತ್ಯಗಳಲ್ಲಿದ್ದ ಅವರ ಡೇರೆಗಳಲ್ಲಿ ವಾಸಮಾಡ ತೊಡಗಿದನು. BSB BSB: During the days of Saul they waged war against the Hagrites, who were defeated at their hands, and they occupied the dwellings of the Hagrites throughout the region east of Gilead.
11 ULB ರೂಬೇನ್ಯರ ಎದುರಿನಲ್ಲಿ ಬಾಷಾನ್ ಸೀಮೆಯ ಸಲ್ಕದವರೆಗೂ ವಾಸಿಸುತ್ತಿದ್ದವರು ಗಾದ್ ಕುಲದವರು: BSB BSB: The descendants of Gad lived next to the Reubenites in the land of Bashan, as far as Salecah:
12 ULB ಪ್ರಧಾನನಾದ ಯೋವೇಲ್, ಎರಡನೆಯವನಾದ ಶಾಫಾಮ್, ಯನ್ನೈ, ಬಾಷಾನಿನಲ್ಲಿರುವ ಶಾಫಾಟ್ ಇವರೂ ನಾಯಕರಾಗಿದ್ದರು. BSB BSB: Joel was the chief, Shapham the second, then Jaanai and Shaphat, who lived in Bashan.
13 ULB ಮೀಕಾಯೇಲ್, ಮೆಷುಲ್ಲಾಮ್, ಶೆಬ, ಯೋರೈ, ಯಕ್ಕಾನ್, ಜೀಯ ಮತ್ತು ಏಬೆರ್ ಎಂಬ ಏಳು ಕುಟುಂಬಗಳೂ ಇವರ ಕುಲಸಂಬಂಧಿಗಳು. BSB BSB: Their kinsmen by families were Michael, Meshullam, Sheba, Jorai, Jacan, Zia, and Eber—seven in all.
14 ULB ಇವರು ಅಬೀಹೈಲನ ಮಕ್ಕಳು: ಅಬೀಹೈಲನು ಹೂರೀಯ ಮಗ, ಇವನು ಯಾರೋಹನ ಮಗ. ಯಾರೋಹನು ಗಿಲ್ಯಾದನ ಮಗ, ಇವನು ಮೀಕಾಯೇಲನ ಮಗ. ಮೀಕಾಯೇಲನು ಯೆಷೀಷೈಯನ ಮಗ, ಇವನು ಯಹ್ದೋವಿನ ಮಗ, ಇವನು ಅಹೀಬೂಜನ ಮಗ. BSB BSB: These were the sons of Abihail son of Huri, the son of Jaroah, the son of Gilead, the son of Michael, the son of Jeshishai, the son of Jahdo, the son of Buz.
15 ULB ಅಹೀಬೂಜನು ಅಬ್ದೀಯೇಲನ ಮಗ. ಅಬ್ದೀಯೇಲನು ಗೂನೀಯನ ಮಗ. ಇವನು ಇವರ ಗೋತ್ರದ ಮೂಲಪುರುಷನು. BSB BSB: Ahi son of Abdiel, the son of Guni, was head of their family.
16 ULB ಗಾದ್ಯರು ಗಿಲ್ಯಾದಿನಲ್ಲಿಯೂ ಬಾಷಾನಿನಲ್ಲಿಯೂ, ಅದರ ಗ್ರಾಮಗಳಲ್ಲಿಯೂ, ಶಾರೋನಿನ ಎಲ್ಲಾ ಹುಲ್ಲುಗಾವಲುಗಳಲ್ಲಿಯೂ ಅವುಗಳ ಮೇರೆಗಳಲ್ಲಿಯೂ ವಾಸಿಸುತ್ತಿದ್ದರು. BSB BSB: They lived in Gilead, in Bashan and its towns, and throughout the pasturelands of Sharon.
17 ULB ಅವರೆಲ್ಲರೂ ಯೆಹೂದ್ಯರ ಅರಸನಾದ ಯೋತಾಮನ ಕಾಲದಲ್ಲಿಯೂ, ಇಸ್ರಾಯೇಲರ ಅರಸನಾದ ಯಾರೊಬ್ಬಾಮನ ಕಾಲದಲ್ಲಿಯೂ ವಂಶಾವಳಿಯ ಪಟ್ಟಿಯಲ್ಲಿ ದಾಖಲಿಸಲ್ಪಟ್ಟರು. BSB BSB: All of them were recorded in the genealogies during the reigns of Jotham king of Judah and Jeroboam king of Israel.
18 ULB ರೂಬೇನ್ಯರು, ಗಾದ್ಯರು, ಮನಸ್ಸೆ ಕುಲದ ಅರ್ಧ ಜನರು ಇವರಲ್ಲಿ ರಣವೀರರೂ ಗುರಾಣಿ ಖಡ್ಗಗಳನ್ನು ಹಿಡಿಯುವವರೂ, ಬಿಲ್ಲನ್ನು ಬೊಗ್ಗಿಸುವವರೂ, ಯುದ್ಧ ನಿಪುಣರೂ ಆಗಿರುವ ನಲ್ವತ್ತನಾಲ್ಕು ಸಾವಿರದ ಏಳು ನೂರ ಅರವತ್ತು ಸೈನಿಕರಿದ್ದರು. BSB BSB: The Reubenites, the Gadites, and the half-tribe of Manasseh had 44,760 warriors—valiant men who carried the shield and sword, drew the bow, and were trained for battle.
19 ULB ಅವರು ಹೋಗಿ ಹಗ್ರೀಯ, ಯೆಟೂರ್, ನಾಫೀಷ್ ಮತ್ತು ನೋದಾಬ್ ಇವರೊಡನೆಯೂ ಯುದ್ಧಮಾಡಿದರು. BSB BSB: They waged war against the Hagrites, as well as Jetur, Naphish, and Nodab.
20 ULB ಅವರು ದೇವರ ಮೇಲೆ ಭರವಸೆ ಇಟ್ಟಿದ್ದರಿಂದ ಮೊರೆಯಿಟ್ಟ ಅವರ ಪ್ರಾರ್ಥನೆಗೆ ಕಿವಿಗೊಟ್ಟು ಯುದ್ಧದಲ್ಲಿ ಜಯವನ್ನು ಅನುಗ್ರಹಿಸಿದನು. ಹಗ್ರೀಯರೂ ಇವರ ಜೊತೆಯಲ್ಲಿದ್ದವರೂ ಅವರ ಕೈಯಲ್ಲಿ ಕೊಡಲ್ಪಟ್ಟರು. BSB BSB: And because they cried out to God in battle, they were helped against their enemies, and the Hagrites and all their allies were delivered into their hands. Because they put their trust in God, He answered their prayers.
21 ULB ಈ ಯುದ್ಧದಲ್ಲಿ ಅವರ ಹಿಂಡುಗಳನ್ನು ಅಂದರೆ, ಐವತ್ತು ಸಾವಿರ ಒಂಟೆಗಳು, ಎರಡು ಲಕ್ಷದ ಐವತ್ತು ಸಾವಿರ ಕುರಿಗಳೂ, ಎರಡು ಸಾವಿರ ಕತ್ತೆಗಳು ಮತ್ತು ಒಂದು ಲಕ್ಷ ಜನರನ್ನೂ ಕೊಳ್ಳೆಹಿಡಿದರು. BSB BSB: They seized the livestock of the Hagrites—50,000 camels, 250,000 sheep, and 2,000 donkeys. They also took 100,000 captives,
22 ULB ಏಕೆಂದರೆ ದೇವರು ಅವರ ಪರವಾಗಿ ಯುದ್ಧಮಾಡಿದ್ದರಿಂದ ಅವರು ವೈರಿಗಳಲ್ಲಿ ಅನೇಕರನ್ನು ತಿವಿದು ಕೊಂದದ್ದಲ್ಲದೆ, ತಾವು ಸೆರೆಯಾಗಿ ಹೋಗುವವರೆಗೂ ಅವರ ಊರುಗಳಲ್ಲಿ ವಾಸಿಸಿದರು. BSB BSB: and many others fell slain, because the battle belonged to God. And they occupied the land until the exile.
23 ULB ಮನಸ್ಸೆ ಕುಲದ ಅರ್ಧಜನರು ಬಾಷಾನಿನಿಂದ ಬಾಳ್ ಹೆರ್ಮೋನ್, ಸೆನೀರ್, ಹೆರ್ಮೋನ್ ಗಿರಿ ಇವುಗಳ ವರೆಗೂ ವಿಸ್ತರಿಸಿಕೊಂಡಿರುವ ಪ್ರಾಂತ್ಯಗಳಲ್ಲಿ ವಾಸಿಸಿದರು. BSB BSB: Now the people of the half-tribe of Manasseh were numerous. They settled in the land from Bashan to Baal-hermon (that is, Senir, also known as Mount Hermon).
24 ULB ಇವರ ಗೋತ್ರಗಳ ಪ್ರಧಾನ ಪುರುಷರು ಏಫೆರ್, ಇಷ್ಷೀ, ಎಲೀಯೇಲ್, ಅಜ್ರೀಯೇಲ್, ಯೆರೆಮೀಯ, ಹೋದವ್ಯ ಮತ್ತು ಯೆಹ್ತೀಯೇಲ್. ಇವರು ರಣವೀರರೂ ಪ್ರಖ್ಯಾತಿ ಹೊಂದಿದವರು ಗೋತ್ರಪ್ರಧಾನರೂ ಆಗಿದ್ದರು. BSB BSB: These were the heads of their families: Epher, Ishi, Eliel, Azriel, Jeremiah, Hodaviah, and Jahdiel. They were mighty men of valor, famous men, and heads of their families.
25 ULB ಅವರು ತಮ್ಮ ಪೂರ್ವಿಕರ ದೇವರಿಗೆ ದ್ರೋಹಿಗಳಾಗಿದರು. ಯೆಹೋವನು ತಮ್ಮ ಮುಂದೆಯೇ ಸಂಹರಿಸಿದ ಆ ದೇಶದ ನಿವಾಸಿಗಳ ದೇವರುಗಳನ್ನು ಆರಾಧಿಸತೊಡಗಿದರು. BSB BSB: But they were unfaithful to the God of their fathers, and they prostituted themselves with the gods of the peoples of the land, whom God had destroyed before them.
26 ULB ಆದುದರಿಂದ ಅಶ್ಶೂರದ ಅರಸನಾದ ಪೂಲ್, ತಿಗ್ಲತ್ಪಿಲೆಸರ್ ಎಂಬವರು ಇಸ್ರಾಯೇಲ್ ದೇವರ ಪ್ರೇರಣೆಯಿಂದ ಬಂದು ರೂಬೇನ್ಯರು, ಗಾದ್ಯರು, ಮನಸ್ಸೆ ಕುಲದ ಅರ್ಧ ಜನರು ಇವರನ್ನು ಹಲಹ, ಹಾಬೋರ್, ಹಾರ ಎಂಬ ಪ್ರಾಂತ್ಯಗಳಿಗೂ, ಗೋಜಾನ್ ನದಿಯ ಪ್ರದೇಶಗಳಿಗೂ ಸೆರೆ ಹಿಡಿದು ಕರೆದೊಯ್ದರು. ಅವರು ಇಂದಿನವರೆಗೂ ಅಲ್ಲಿಯೇ ನೆಲೆಸುವಂತೆ ಮಾಡಿದ್ದಾನೆ ದೇವರು. BSB BSB: So the God of Israel stirred up the spirit of Pul king of Assyria (that is, Tiglath-pileser king of Assyria) to take the Reubenites, the Gadites, and the half-tribe of Manasseh into exile. And he brought them to Halah, Habor, Hara, and the river of Gozan, where they remain to this day.
Select verses for actions: Enter goes to them and Escape comes back.