1 ULB ದ್ವೀಪನಿವಾಸಿಗಳೇ, ನನ್ನ ಕಡೆಗೆ ತಿರುಗಿ ಮೌನದಿಂದಿರಿ. ಜನಾಂಗಗಳು ತಮ್ಮನ್ನು ಬಲಪಡಿಸಿಕೊಳ್ಳಲಿ; ಸಮೀಪಕ್ಕೆ ಬಂದು ಮಾತನಾಡಲಿ. ನ್ಯಾಯಸ್ಥಾನಕ್ಕೆ ಒಟ್ಟಿಗೆ ಹೋಗೋಣ. BSB BSB: “Be silent before Me, O islands, and let the peoples renew their strength. Let them come forward and testify; let us together draw near for judgment.
2 ULB ಮೂಡಣದಿಂದ ಒಬ್ಬನನ್ನು ಎಬ್ಬಿಸಿ, ನ್ಯಾಯದ ಸಂಕಲ್ಪಾನುಸಾರವಾಗಿ ತನ್ನ ಪಾದಸನ್ನಿಧಿಗೆ ಕರೆದು, ಜನಾಂಗಗಳನ್ನು ಅವನ ವಶಕ್ಕೆ ಕೊಟ್ಟು, ಅವನನ್ನು ರಾಜರ ಮೇಲೆ ಆಳುವಂತೆ ಮಾಡಿ, ಅವರ ಕತ್ತಿಯನ್ನು ಧೂಳನ್ನಾಗಿಯೂ, ಬಿಲ್ಲನ್ನು ಗಾಳಿ ಬಡಿದುಕೊಂಡು ಹೋಗುವ ಹುಲ್ಲನ್ನಾಗಿಯೂ ಅವರನ್ನು ಮಾಡಿದನು. BSB BSB: Who has aroused one from the east and called him to his feet in righteousness? He hands nations over to him and subdues kings before him. He turns them to dust with his sword, to windblown chaff with his bow.
3 ULB ತಾನು ಎಂದೂ ಹೆಜ್ಜೆಯಿಡದ ಮಾರ್ಗದಲ್ಲಿ ಸುರಕ್ಷಿತವಾಗಿ ಮುಂದೆ ಹಾದು ಹೋಗುವಂತೆ ಅವರನ್ನು ಹಿಂದಟ್ಟುತ್ತಾ ಹೋದನು. BSB BSB: He pursues them, going on safely, hardly touching the path with his feet.
4 ULB ಇದನ್ನೆಲ್ಲಾ ನಡೆಸಿ ನೆರವೇರಿಸಿದವನು ಯಾರು? ಆದಿಯಿಂದ ಈಗಿನವರೆಗೂ ತಲತಲಾಂತರಗಳನ್ನು ಬರಮಾಡುವವನಾದ ಯೆಹೋವನೆಂಬ ನಾನೇ; ಹೌದು, ಆದಿಪುರುಷನೂ, ಅಂತ್ಯಕಾಲದವರ ಸಂಗಡಿಗನೂ ಆಗಿರುವ ನಾನೊಬ್ಬನೇ. BSB BSB: Who has performed this and carried it out, calling forth the generations from the beginning? I, the LORD—the first and the last—I am He.”
5 ULB ದ್ವೀಪ ನಿವಾಸಿಗಳು ಕಂಡು ಬೆರಗಾದರು, ಭೂಮಿಯ ಕಟ್ಟ ಕಡೆಯವರು ನಡುಗಿದರು, ಎಲ್ಲರೂ ನೆರೆದು ಬಂದರು. BSB BSB: The islands see and fear; the ends of the earth tremble. They approach and come forward.
6 ULB ಒಬ್ಬರಿಗೊಬ್ಬರು ಸಹಾಯಮಾಡಿದರು, ಪ್ರತಿಯೊಬ್ಬನು ತನ್ನ ಸಹೋದರನಿಗೆ, <<ಧೈರ್ಯವಾಗಿರು>> ಎಂದು ಹೇಳಿದನು. BSB BSB: Each one helps the other and says to his brother, “Be strong!”
7 ULB ಹಾಗೆಯೇ ಶಿಲ್ಪಿಯು ಎರಕದವನನ್ನೂ, ಸುತ್ತಿಗೆಯಿಂದ ಸಮಮಾಡುವವನು ಅಡಿಗಲ್ಲಿನ ಮೇಲೆ ಕುಟ್ಟುವವನನ್ನೂ ಪ್ರೋತ್ಸಾಹಗೊಳಿಸಿದರು. <<ಬೆಸಿಗೆ ಚೆನ್ನಾಗಿದೆ>> ಎಂದು ಹೇಳಿ ವಿಗ್ರಹವನ್ನು ಕದಲದಂತೆ ಮೊಳೆಗಳಿಂದ ಜಡಿದರು. BSB BSB: The craftsman encourages the goldsmith, and he who wields the hammer cheers him who strikes the anvil, saying of the welding, “It is good.” He nails it down so it will not be toppled.
8 ULB ನನ್ನ ಸೇವಕನಾದ ಇಸ್ರಾಯೇಲೇ, ನಾನು ಆರಿಸಿಕೊಂಡ ಯಾಕೋಬೇ, ನನ್ನ ಸ್ನೇಹಿತನಾದ ಅಬ್ರಹಾಮನ ಸಂತತಿಯೇ, BSB BSB: “But you, O Israel, My servant, Jacob, whom I have chosen, descendant of Abraham My friend—
9 ULB ನಾನು ಭೂಮಿಯ ಕಟ್ಟಕಡೆಯಲ್ಲಿ ಹಿಡಿದು ದಿಗಂತಗಳಿಂದ ಕರೆದ ಜನವೇ, <<ನೀನು ನನ್ನ ಸೇವಕನು, ನಾನು ನಿನ್ನನ್ನು ಆರಿಸಿಕೊಂಡೆನು, ತಳ್ಳಲಿಲ್ಲ>> ಎಂದು ನಾನು ಹೇಳಿ ಸಂಬೋಧಿಸಿದ ಪ್ರಜೆಯೇ, BSB BSB: I brought you from the ends of the earth and called you from its farthest corners. I said, ‘You are My servant.’ I have chosen and not rejected you.
10 ULB ನೀನಂತು ಹೆದರಬೇಡ, ನಾನೇ ನಿನ್ನೊಂದಿಗಿದ್ದೇನೆ, ದಿಗ್ಭ್ರಮೆಗೊಳ್ಳದಿರು, ನಾನೇ ನಿನ್ನ ದೇವರು. ನಾನು ನಿನ್ನನ್ನು ಬಲಪಡಿಸುತ್ತೇನೆ. ಹೌದು, ನಿನಗೆ ಸಹಾಯಮಾಡುತ್ತೇನೆ. ನನ್ನ ಧರ್ಮದ ಬಲಗೈಯನ್ನು ನಿನಗೆ ಆಧಾರಮಾಡುತ್ತೇನೆ. BSB BSB: Do not fear, for I am with you; do not be afraid, for I am your God. I will strengthen you; I will surely help you; I will uphold you with My righteous right hand.
11 ULB ಆಹಾ, ನಿನ್ನ ಮೇಲೆ ಕಿಡಿಕಿಡಿಯಾದವರು ಆಶಾಭಂಗಪಟ್ಟು ಅವಮಾನಹೊಂದುವರು, ನಿನ್ನ ಸಂಗಡ ವ್ಯಾಜ್ಯವಾಡಿದವರು ನಾಶವಾಗಿ ಇಲ್ಲದೆ ಹೋಗುವರು. BSB BSB: Behold, all who rage against you will be ashamed and disgraced; those who contend with you will be reduced to nothing and will perish.
12 ULB ನಿನ್ನೊಡನೆ ಹೋರಾಡಿದವರನ್ನು ಹುಡುಕಿದರೂ ಅವರು ನಿನಗೆ ಕಾಣಿಸರು. ನಿನ್ನ ವಿರುದ್ಧವಾಗಿ ಯುದ್ಧ ಮಾಡಿದವರು ನಿರ್ನಾಮವಾಗುವರು. BSB BSB: You will seek them but will not find them. Those who wage war against you will come to nothing.
13 ULB ಏಕೆಂದರೆ ಯೆಹೋವನೆಂಬ ನಾನೇ ನಿನ್ನ ಕೈಹಿಡಿಯುತ್ತೇನೆ. <<ಭಯಪಡಬೇಡ, ನಿನಗೆ ಸಹಾಯಮಾಡುತ್ತೇನೆ. BSB BSB: For I am the LORD your God, who takes hold of your right hand and tells you: Do not fear, I will help you.
14 ULB ಕ್ರಿಮಿಪ್ರಾಯದವನಾದ ಯಾಕೋಬೇ, ಇಸ್ರಾಯೇಲ್ ಜನವೇ, ಭಯಪಡಬೇಡ, ನಾನೇ ನಿನಗೆ ಸಹಾಯಕನು, ಇಸ್ರಾಯೇಲಿನ ಸದಮಲಸ್ವಾಮಿಯು ನಿನಗೆ ವಿಮೋಚಕನು>> ಎಂದು ಯೆಹೋವನು ಹೇಳುತ್ತಾನೆ. BSB BSB: Do not fear, O Jacob, you worm, O few men of Israel. I will help you,” declares the LORD. “Your Redeemer is the Holy One of Israel.
15 ULB <<ಇಗೋ, ನಾನು ನಿನ್ನನ್ನು ಮಸೆದ ಮೊನೆಹಲ್ಲಿನ ಹೊಸ ಹಂತಿಕುಂಟೆಯನ್ನಾಗಿ ಮಾಡಿದ್ದೇನೆ, ನೀನು ಬೆಟ್ಟಗಳನ್ನು ಒಡೆದು ಪುಡಿಪುಡಿಮಾಡಿ ಗುಡ್ಡಗಳನ್ನು ಹೊಟ್ಟು ಮಾಡುವಿ. BSB BSB: Behold, I will make you into a threshing sledge, new and sharp, with many teeth. You will thresh the mountains and crush them, and reduce the hills to chaff.
16 ULB ನೀನು ತೂರಲು ಅವುಗಳನ್ನು ಗಾಳಿಯು ಬಡಿದುಕೊಂಡು ಹೋಗುವುದು, ಬಿರುಗಾಳಿಯು ಚೆಲ್ಲಾಪಿಲ್ಲಿ ಮಾಡುವುದು. ನೀನಂತೂ ಯೆಹೋವನಲ್ಲಿ ಆನಂದಿಸುವಿ, ಇಸ್ರಾಯೇಲಿನ ಸದಮಲಸ್ವಾಮಿಯಲ್ಲಿ ಹೆಚ್ಚಳಪಡುವಿ. BSB BSB: You will winnow them, and a wind will carry them away; a gale will scatter them. But you will rejoice in the LORD; you will glory in the Holy One of Israel.
17 ULB ಬಾಯಾರಿ ನಾಲಿಗೆ ಒಣಗಿ ನೀರನ್ನು ಹುಡುಕಿ ಹೊಂದದ ದೀನದರಿದ್ರರಿಗೆ ಯೆಹೋವನೆಂಬ ನಾನು ಪ್ರಸನ್ನನಾಗುವೆನು, ಇಸ್ರಾಯೇಲಿನ ದೇವರಾದ ನಾನು ಅವರನ್ನು ಕೈಬಿಡೆನು. BSB BSB: The poor and needy seek water, but there is none; their tongues are parched with thirst. I, the LORD, will answer them; I, the God of Israel, will not forsake them.
18 ULB ಬೋಳುಗುಡ್ಡಗಳಲ್ಲಿ ನದಿಗಳನ್ನು, ಕಣಿವೆಗಳಲ್ಲಿ ಒರತೆಗಳನ್ನು ಹೊರಡಿಸಿ, ಅರಣ್ಯವನ್ನು ಕೆರೆಯಾಗಿಯೂ, ಮರುಭೂಮಿಯನ್ನು ಬುಗ್ಗೆಗಳನ್ನಾಗಿಯೂ ಮಾಡುವೆನು. BSB BSB: I will open rivers on the barren heights, and fountains in the middle of the valleys. I will turn the desert into a pool of water, and the dry land into flowing springs.
19 ULB ಮರುಭೂಮಿಯಲ್ಲಿ ದೇವದಾರು, ಜಾಲಿಮರ, ಸುಗಂಧ ಒಲೀವ್ ಮರಗಳನ್ನು ನಾನು ನೆಡುವೆನು. ಮರುಭೂಮಿಯಲ್ಲಿ ತುರಾಯಿ, ತಪಸಿ, ತಿಲಕ ವೃಕ್ಷಗಳನ್ನು ಒಟ್ಟಿಗೆ ಬೆಳೆಯಿಸುವೆನು. BSB BSB: I will plant cedars in the wilderness, acacias, myrtles, and olive trees. I will set cypresses in the desert, elms and boxwood together,
20 ULB ಆಗ ಯೆಹೋವನ ಹಸ್ತವು ಇದನ್ನು ಮಾಡಿದೆ, ಹೌದು, ಇಸ್ರಾಯೇಲಿನ ಸದಮಲಸ್ವಾಮಿಯೇ ಸೃಷ್ಟಿಸಿದ್ದಾನೆ>> ಎಂದು ಎಲ್ಲರೂ ಕಂಡು ತಿಳಿದು ಮನಸ್ಸಿಗೆ ತಂದು ಗ್ರಹಿಸಿಕೊಳ್ಳುವರು. BSB BSB: so that all may see and know, may consider and understand, that the hand of the LORD has done this and the Holy One of Israel has created it.”
21 ULB ಯಾಕೋಬ್ಯರ ಅರಸನಾದ ಯೆಹೋವನು ಹೀಗೆನ್ನುತ್ತಾನೆ, <<ನಿಮ್ಮ ವ್ಯಾಜ್ಯವು ಈಚೆಗೆ ಬರಲಿ, ನಿಮ್ಮ ವಿಗ್ರಹಗಳಿಗಾಗಿ ನಿಮ್ಮ ಬಲವಾದ ನ್ಯಾಯಗಳನ್ನು ತೋರ್ಪಡಿಸಿರಿ>> BSB BSB: “Present your case,” says the LORD. “Submit your arguments,” says the King of Jacob.
22 ULB ತಮ್ಮ ನ್ಯಾಯಗಳನ್ನು ಮುಂದಕ್ಕೆ ತರಲಿ, ಭವಿಷ್ಯತ್ತನ್ನು ನಮಗೆ ತಿಳಿಸಲಿ; ನಡೆದ ಸಂಗತಿಗಳ ವಿಶೇಷವನ್ನು ಸೂಚಿಸಿರಿ, ನಾವು ಅವುಗಳನ್ನು ಮನಸ್ಸಿಗೆ ತಂದು ಅವುಗಳ ಪರಿಣಾಮವನ್ನು ಇಲ್ಲವೇ ಭವಿಷ್ಯತ್ತನ್ನು ತಿಳಿಸಿದರೆ ಗ್ರಹಿಸುವೆವು. BSB BSB: “Let them come and tell us what will happen. Tell the former things, so that we may reflect on them and know the outcome. Or announce to us what is coming.
23 ULB ನೀವು ದೇವರುಗಳೆಂದು ನಮಗೆ ಅರಿವು ಹುಟ್ಟುವಂತೆ ಮುಂದೆ ಆಗುವವುಗಳನ್ನು ತಿಳಿಸಿರಿ. ನಾವು ಒಟ್ಟಿಗೆ ಗಾಬರಿಯಿಂದ ಭಯಪಡುವ ಹಾಗೆ ಒಳ್ಳೆಯದನ್ನಾಗಲಿ, ಕೆಟ್ಟದ್ದನ್ನಾಗಲಿ ಮಾಡಿರಿ. BSB BSB: Tell us the things that are to come, so that we may know that you are gods. Yes, do something good or evil, that we may look on together in dismay.
24 ULB ಆಹಾ, ನೀವು ಶೂನ್ಯವೇ! ನಿಮ್ಮ ಕಾರ್ಯವು ಮಟ್ಟಮಾಯವೇ! ನಿಮ್ಮನ್ನು ಮೊರೆಹೋಗುವವರು ತುಚ್ಛರೇ ಸರಿ! BSB BSB: Behold, you are nothing and your work is of no value. Anyone who chooses you is detestable.
25 ULB ನಾನು ಉತ್ತರ ದಿಕ್ಕಿನಿಂದ ಒಬ್ಬನನ್ನು ಎಬ್ಬಿಸಿ ಕರೆದು ತಂದಿದ್ದೇನೆ, ನನ್ನ ನಾಮವನ್ನು ಪ್ರಚುರಪಡಿಸತಕ್ಕವನು ಮೂಡಲಿನಿಂದ ಬಂದಿದ್ದಾನೆ. ಅವನು ಉಪರಾಜರನ್ನು ಮಣ್ಣೇ ಎಂದು ಭಾವಿಸಿ ಅವರ ಮೇಲೆ ಬಿದ್ದು ಕುಂಬಾರನು ಜೇಡಿಮಣ್ಣನ್ನು ತುಳಿಯುವ ಹಾಗೆ ತುಳಿಯುವನು. BSB BSB: I have raised up one from the north, and he has come—one from the east who calls on My name. He will march over rulers as if they were mortar, like a potter who treads the clay.
26 ULB ಕಾರ್ಯವು ನಡೆಯುವುದಕ್ಕೆ ಮೊದಲು ಇವರಲ್ಲಿ ಯಾರು ಅದನ್ನು ತಿಳಿಸಿದ್ದಾರೆ? ಸಮಯಕ್ಕೆ ಮೊದಲೇ <<ಅವನು ಸತ್ಯವಂತನು>> ಎಂದು ಯಾರು ಮುಂತಿಳಿಸಿದ್ದಾರೆ? ಯಾರೂ ಏನನ್ನೂ ತಿಳಿಸಬಲ್ಲವರಲ್ಲ, ಏನನ್ನೂ ಹೇಳತಕ್ಕವರಲ್ಲ, ನಿಮ್ಮ ಮಾತುಗಳು ಯಾರ ಕಿವಿಗೂ ಬೀಳುವುದಿಲ್ಲ. BSB BSB: Who has declared this from the beginning, so that we may know, and from times past, so that we may say: ‘He was right’? No one announced it, no one foretold it, no one heard your words.
27 ULB ನಾನು ಮೊದಲನೆಯವನಾಗಿ ಚೀಯೋನಿಗೆ, <<ಇಗೋ, ಅವರನ್ನು ನೋಡು>> ಎಂದು ಹೇಳಿ ಶುಭಸಮಾಚಾರ ತರತಕ್ಕವನನ್ನು ಯೆರೂಸಲೇಮಿಗೆ ಅನುಗ್ರಹಿಸುವೆನು. BSB BSB: I was the first to tell Zion: ‘Look, here they are!’ And I gave to Jerusalem a herald of good news.
28 ULB ನಾನು ನೋಡಿದಾಗ ಇವರಲ್ಲಿ ಸಮರ್ಥರು ಯಾರೂ ಇಲ್ಲ. ನಾನು ಪ್ರಶ್ನೆ ಮಾಡಿದರೆ ಒಂದು ಮಾತನ್ನಾದರೂ ಹೇಳಬಲ್ಲ ಆಲೋಚಕನು ಇಲ್ಲವೇ ಇಲ್ಲ. BSB BSB: When I look, there is no one; there is no counselor among them; when I ask them, they have nothing to say.
29 ULB ಆಹಾ, ಅವರೆಲ್ಲಾ ವ್ಯರ್ಥವೇ, ಅವರ ಕಾರ್ಯಗಳು ವ್ಯರ್ಥವೇ, ಅವರ ಎರಕದ ಬೊಂಬೆಗಳು ಗಾಳಿ ಮತ್ತು ಶೂನ್ಯವೇ. BSB BSB: See, they are all a delusion; their works amount to nothing; their images are as empty as the wind.
Select verses for actions: Enter goes to them and Escape comes back.