1 ULB ಆ ಘೋರವಾದ ವ್ಯಾಧಿ ನಿಂತ ಮೇಲೆ ಯೆಹೋವನು ಮೋಶೆಗೂ ಮತ್ತು ಆರೋನನ ಮಗನೂ, ಯಾಜಕನೂ ಆಗಿರುವ ಎಲ್ಲಾಜಾರನ ಸಂಗಡ ಮಾತನಾಡಿ, BSB BSB: After the plague had ended, the LORD said to Moses and Eleazar son of Aaron the priest,
2 ULB <<ನೀವು ಇಸ್ರಾಯೇಲರ ಸರ್ವಸಮೂಹದವರಲ್ಲಿ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಿನ ವಯಸ್ಸುಳ್ಳವರನ್ನು ಅಂದರೆ ಯುದ್ಧಕ್ಕೆ ಹೊರಡತಕ್ಕವರನ್ನು ಗೋತ್ರಗೋತ್ರಗಳ ಪ್ರಕಾರ ಲೆಕ್ಕಿಸಬೇಕು>> ಎಂದು ಆಜ್ಞಾಪಿಸಿದನು. BSB BSB: “Take a census of the whole congregation of Israel by the houses of their fathers—all those twenty years of age or older who can serve in the army of Israel.”
3 ULB ಆಗ ಮೋಶೆಯೂ ಯಾಜಕನಾದ ಎಲ್ಲಾಜಾರನೂ ಮೋವಾಬ್ಯರ ಬಯಲುಗಳಲ್ಲಿ ಯೆರಿಕೋ ಪಟ್ಟಣಕ್ಕೆ ಎದುರಾಗಿ ಯೊರ್ದನ್ ನದಿಯ ಹತ್ತಿರ ಅವರ ಸಂಗಡ ಮಾತನಾಡಿ, BSB BSB: So on the plains of Moab by the Jordan, across from Jericho, Moses and Eleazar the priest issued the instruction,
4 ULB <<ಯೆಹೋವನು ಮೋಶೆಗೆ ಅಜ್ಞಾಪಿಸಿದಂತೆ ಐಗುಪ್ತ ದೇಶದಿಂದ ಹೊರಟ್ಟಿದ್ದ ಮತ್ತು ಮಹಾಯಾಜಕನಾದ ಎಲ್ಲಾಜಾರನೂ ಯೊರ್ದನ್ ನದಿಯ ತೀರದಲ್ಲಿ ಮೋವಾಬ್ಯರ ಮೈದಾನದಲ್ಲಿ ಇಸ್ರಾಯೇಲರಲ್ಲಿ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಿನ ವಯಸ್ಸುಳ್ಳವರನ್ನು ಲೆಕ್ಕಿಸಿರಿ>> ಎಂದನು. BSB BSB: “Take a census of the men twenty years of age or older, as the LORD has commanded Moses.” And these were the Israelites who came out of the land of Egypt:
5 ULB ಇಸ್ರಾಯೇಲನ ಚೊಚ್ಚಲು ಮಗನಾದ ರೂಬೇನನಿಂದುಂಟಾದ ಕುಟುಂಬಗಳು ಯಾವುವೆಂದರೆ: ಹನೋಕನ ವಂಶಸ್ಥರಾದ ಹನೋಕ್ಯರು, ಪಲ್ಲೂವಿನ ವಂಶಸ್ಥರಾದ ಪಲ್ಲೂವಿನವರು, BSB BSB: Reuben was the firstborn of Israel. These were the descendants of Reuben: The Hanochite clan from Hanoch, the Palluite clan from Pallu,
6 ULB ಹೆಚ್ರೋನನ ವಂಶಸ್ಥರಾದ ಹೆಚ್ರೋನ್ಯರು, ಕರ್ಮೀಯ ವಂಶಸ್ಥರಾದ ಕರ್ಮೀಯರು ಇವರೇ. BSB BSB: the Hezronite clan from Hezron, and the Carmite clan from Carmi.
7 ULB ಇವೇ ರೂಬೇನ್ಯರ ಕುಟುಂಬದವರು, ಇವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ- 43,730 ಮಂದಿ. BSB BSB: These were the clans of Reuben, and their registration numbered 43,730.
8 ULB ಪಲ್ಲೂವಿನ ಮಗನು ಎಲೀಯಾಬ್. BSB BSB: Now the son of Pallu was Eliab,
9 ULB ಎಲೀಯಾಬನ ಮಕ್ಕಳು: ನೆಮೂವೇಲ್, ದಾತಾನ್, ಅಬೀರಾಮ್ ಎಂಬುವವರೇ. ಕೋರಹನ ಗುಂಪಿನವರು ಯೆಹೋವನಿಗೆ ವಿರುದ್ಧವಾಗಿ ವಿವಾದಿಸಿದ ಕಾಲದಲ್ಲಿ ಅವರೊಳಗೆ ಸೇರಿಕೊಂಡು ಮೋಶೆ ಮತ್ತು ಆರೋನರಿಗೆ ವಿರುದ್ಧವಾಗಿ ವಿವಾದಿಸಿದ ಆಲೋಚನಾಕರ್ತರಾದ ದಾತಾನ್ ಮತ್ತು ಅಬೀರಾಮರು ಇವರೇ. BSB BSB: and the sons of Eliab were Nemuel, Dathan, and Abiram. It was Dathan and Abiram, chosen by the congregation, who rebelled against Moses and Aaron with the followers of Korah who rebelled against the LORD.
10 ULB ಭೂಮಿಯು ಬಾಯ್ದೆರೆದು ಅವರನ್ನೂ ಮತ್ತು ಕೋರಹನನ್ನೂ ನುಂಗಿಬಿಟ್ಟಿತು ಮತ್ತು ಬೆಂಕಿಯು ಆ ಗುಂಪಿನವರಲ್ಲಿ ಬೇರೆ ಇನ್ನೂರೈವತ್ತು ಮಂದಿಯನ್ನು ದಹಿಸಿ ಇಸ್ರಾಯೇಲರಿಗೆ ಎಚ್ಚರಿಕೆಯನ್ನು ಉಂಟುಮಾಡಿತು. BSB BSB: And the earth opened its mouth and swallowed them along with Korah, whose followers died when the fire consumed 250 men. They serve as a warning sign.
11 ULB ಆ ಗುಂಪಿನವರೆಲ್ಲರು ಸತ್ತರೂ ಕೋರಹನ ಮಕ್ಕಳು ಆ ಕಾಲದಲ್ಲಿ ಸಾಯಲಿಲ್ಲ. BSB BSB: However, the line of Korah did not die out.
12 ULB ಸಿಮೆಯೋನ್ ಕುಲದ ಕುಟುಂಬಗಳು ಯಾವುವೆಂದರೆ: ನೆಮೂವೇಲನ ವಂಶಸ್ಥರಾದ ನೆಮೂವೇಲ್ಯರು, ಯಾಮೀನನ ವಂಶಸ್ಥರಾದ ಯಾಮೀನ್ಯರು, ಯಾಕೀನನ ವಂಶಸ್ಥರಾದ ಯಾಕೀನ್ಯರು, BSB BSB: These were the descendants of Simeon by their clans: The Nemuelite clan from Nemuel, the Jaminite clan from Jamin, the Jachinite clan from Jachin,
13 ULB ಜೆರಹನ ವಂಶಸ್ಥರಾದ ಜೆರಹಿಯರು, ಸೌಲನ ವಂಶಸ್ಥರಾದ ಸೌಲ್ಯರು ಇವರೇ. BSB BSB: the Zerahite clan from Zerah, and the Shaulite clan from Shaul.
14 ULB ಸಿಮೆಯೋನ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ- 22,200 ಮಂದಿ. BSB BSB: These were the clans of Simeon, and there were 22,200 men.
15 ULB ಗಾದ್ ಕುಲದ ಕುಟುಂಬಗಳು ಯಾವುವೆಂದರೆ: ಚೆಫೋನನ ವಂಶಸ್ಥರಾದ ಚೆಫೋನ್ಯರು, ಹಗ್ಗೀಯ ವಂಶಸ್ಥರಾದ ಹಗ್ಗೀಯರು, ಶೂನೀಯ ವಂಶಸ್ಥರಾದ ಶೂನೀಯರು, BSB BSB: These were the descendants of Gad by their clans: The Zephonite clan from Zephon, the Haggite clan from Haggi, the Shunite clan from Shuni,
16 ULB ಒಜ್ನೀಯ ವಂಶಸ್ಥರಾದ ಒಜ್ನೀಯರು, ಏರೀಯ ವಂಶಸ್ಥರಾದ ಏರೀಯರು, BSB BSB: the Oznite clan from Ozni, the Erite clan from Eri,
17 ULB ಅರೋದನ ವಂಶಸ್ಥರಾದ ಅರೋದ್ಯರು, ಅರೇಲೀಯ ವಂಶಸ್ಥರಾದ ಅರೇಲೀಯರು ಇವರೇ. BSB BSB: the Arodite clan from Arod, and the Arelite clan from Areli.
18 ULB ಗಾದ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ- 40,500 ಮಂದಿ. BSB BSB: These were the clans of Gad, and their registration numbered 40,500.
19 ULB ಯೆಹೂದನ ಮಕ್ಕಳಲ್ಲಿ ಏರ್ ಮತ್ತು ಓನಾನರು ಕಾನಾನ್ ದೇಶದಲ್ಲೇ ಸತ್ತರು. BSB BSB: The sons of Judah were Er and Onan, but they died in the land of Canaan.
20 ULB ಯೆಹೂದನ ಕುಲದಲ್ಲಿ ಉಳಿದ ಕುಟುಂಬಗಳು ಯಾವುವೆಂದರೆ: ಶೇಲಹನ ವಂಶಸ್ಥರಾದ ಶೇಲಾನ್ಯರು, ಪೆರೆಹನ ವಂಶಸ್ಥರಾದ ಪೆರೆಚ್ಯರು, ಜೆರಹನ ವಂಶಸ್ಥರಾದ ಜೆರಹಿಯರು ಇವರೇ. BSB BSB: These were the descendants of Judah by their clans: The Shelanite clan from Shelah, the Perezite clan from Perez, and the Zerahite clan from Zerah.
21 ULB ಪೆರೆಚನಿಂದುಂಟಾದ ಕುಟುಂಬಗಳು: ಹೆಚ್ರೋನನ ವಂಶಸ್ಥರಾದ ಹೆಚ್ರೋನ್ಯರೂ ಹಾಮೂಲನ ವಂಶಸ್ಥರಾದ ಹಾಮೂಲ್ಯರೂ. BSB BSB: And these were the descendants of Perez: the Hezronite clan from Hezron and the Hamulite clan from Hamul.
22 ULB ಯೆಹೂದ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ- 76,500 ಮಂದಿ. BSB BSB: These were the clans of Judah, and their registration numbered 76,500.
23 ULB ಇಸ್ಸಾಕಾರ್ ಕುಲದ ಕುಟುಂಬಗಳು ಯಾವುವೆಂದರೆ: ತೋಲನ ವಂಶಸ್ಥರಾದ ತೋಲಾಯರು, ಪುವ್ವನ ವಂಶಸ್ಥರಾದ ಪೂನ್ಯರು, BSB BSB: These were the descendants of Issachar by their clans: The Tolaite clan from Tola, the Punite clan from Puvah,
24 ULB ಯಾಶೂಬನ ವಂಶಸ್ಥರಾದ ಯಾಶೂಬ್ಯರು, ಶಿಮ್ರೋನನ ವಂಶಸ್ಥರಾದ ಶಿಮ್ರೋನ್ಯರು ಇವರೇ. BSB BSB: the Jashubite clan from Jashub, and the Shimronite clan from Shimron.
25 ULB ಇಸ್ಸಾಕಾರ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ- 64,300 ಮಂದಿ. BSB BSB: These were the clans of Issachar, and their registration numbered 64,300.
26 ULB ಜೆಬುಲೂನ್ ಕುಲದ ಕುಟುಂಬಗಳು ಯಾವುವೆಂದರೆ: ಸೆರೆದನ ವಂಶಸ್ಥರಾದ ಸೆರೆದ್ಯರು, ಏಲೋನನ ವಂಶಸ್ಥರಾದ ಏಲೋನ್ಯರು, ಯಹಲೇಲನ ವಂಶಸ್ಥರಾದ ಯಹಲೇಲ್ಯರು. BSB BSB: These were the descendants of Zebulun by their clans: The Seredite clan from Sered, the Elonite clan from Elon, and the Jahleelite clan from Jahleel.
27 ULB ಜೆಬುಲೂನ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ- 60,500 ಮಂದಿ. BSB BSB: These were the clans of Zebulun, and their registration numbered 60,500.
28 ULB ಕುಟುಂಬಗಳ ಪ್ರಕಾರ ಯೋಸೇಫನ ಮಕ್ಕಳು ಮನಸ್ಸೆ ಮತ್ತು ಎಫ್ರಾಯೀಮ್. BSB BSB: The descendants of Joseph included the clans of Manasseh and Ephraim.
29 ULB ಮನಸ್ಸೆ ಕುಲದ ಕುಟುಂಬಗಳು ಯಾವುವೆಂದರೆ: ಮಾಕೀರನ ವಂಶಸ್ಥರಾದ ಮಾಕೀರ್ಯರು, ಮಾಕೀರನ ಮಗನಾದ ಗಿಲ್ಯಾದನ ವಂಶಸ್ಥರಾದ ಗಿಲ್ಯಾದ್ಯರು ಇವರೇ. BSB BSB: These were the descendants of Manasseh: The Machirite clan from Machir, the father of Gilead, and the Gileadite clan from Gilead.
30 ULB ಗಿಲ್ಯಾದನ ವಂಶದವರು ಯಾರೆಂದರೆ: ಈಯೆಜೆರನ ವಂಶಸ್ಥರಾದ ಈಯೆಜೆರ್ಯರು, ಹೇಲೆಕನ ವಂಶಸ್ಥರಾದ ಹೇಲೆಕ್ಯರು, BSB BSB: These were the descendants of Gilead: the Iezerite clan from Iezer, the Helekite clan from Helek,
31 ULB ಅಸ್ರೀಯೇಲನ ವಂಶಸ್ಥರಾದ ಅಸ್ರೀಯೇಲ್ಯರು, ಶೆಕೆಮನ ವಂಶಸ್ಥರಾದ ಶೆಕೆಮ್ಯರು, BSB BSB: the Asrielite clan from Asriel, the Shechemite clan from Shechem,
32 ULB ಶೆಮೀದಾಯನ ವಂಶಸ್ಥರಾದ ಶೆಮೀದಾಯರು, ಹೇಫೆರನ ವಂಶಸ್ಥರಾದ ಹೇಫೆರ್ಯರು ಇವರೇ. BSB BSB: the Shemidaite clan from Shemida, and the Hepherite clan from Hepher.
33 ULB ಹೇಫೆರನ ಮಗನಾದ ಚಲ್ಪಹಾದನಿಗೆ ಹೆಣ್ಣು ಮಕ್ಕಳು ಹುಟ್ಟಿದರೇ ಹೊರತು ಗಂಡುಮಕ್ಕಳು ಹುಟ್ಟಲಿಲ್ಲ. ಅವನ ಹೆಣ್ಣುಮಕ್ಕಳು: ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ, ತಿರ್ಚಾ ಎಂಬುವವರೇ. BSB BSB: Now Zelophehad son of Hepher had no sons but only daughters. The names of his daughters were Mahlah, Noah, Hoglah, Milcah, and Tirzah.
34 ULB ಮನಸ್ಸೆ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ- 52,700 ಮಂದಿ. BSB BSB: These were the clans of Manasseh, and their registration numbered 52,700.
35 ULB ಎಫ್ರಾಯೀಮ್ ಕುಲದ ಕುಟುಂಬಗಳು ಯಾವುವೆಂದರೆ: ಶೂತೆಲಹನ ವಂಶಸ್ಥರಾದ ಶೂತೆಲಹ್ಯರು, ಬೆಕೆರನ ವಂಶಸ್ಥರಾದ ಬೆಕೆರ್ಯರು, ತಹನನ ವಂಶಸ್ಥರಾದ ತಹನಿಯರು, BSB BSB: These were the descendants of Ephraim by their clans: The Shuthelahite clan from Shuthelah, the Becherite clan from Becher, and the Tahanite clan from Tahan.
36 ULB ಶೂತೆಲಹನ ಮಗನಾದ ಏರಾನನ ವಂಶಸ್ಥರಾದ ಏರಾನ್ಯರು ಇವರೇ. BSB BSB: And the descendants of Shuthelah were the Eranite clan from Eran.
37 ULB ಎಫ್ರಾಯೀಮ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ- 32,500 ಮಂದಿ. ಇದೇ ಯೋಸೇಫ್ ವಂಶದ ಕುಟುಂಬಗಳ ವಿವರ. BSB BSB: These were the clans of Ephraim, and their registration numbered 32,500. These clans were the descendants of Joseph.
38 ULB ಬೆನ್ಯಾಮೀನ್ ಕುಲದ ಕುಟುಂಬಗಳು ಯಾವುವೆಂದರೆ: ಬೆಲಗನ ವಂಶಸ್ಥರಾದ ಬೆಲಗ್ಯರು, ಅಷ್ಬೇಲನ ವಂಶಸ್ಥರಾದ ಅಷ್ಬೇಲ್ಯರು, ಅಹೀರಾಮನ ವಂಶಸ್ಥರಾದ ಅಹೀರಾಮ್ಯರು, BSB BSB: These were the descendants of Benjamin by their clans: The Belaite clan from Bela, the Ashbelite clan from Ashbel, the Ahiramite clan from Ahiram,
39 ULB ಶೂಫಾಮನ ವಂಶಸ್ಥರಾದ ಶೂಫಾಮ್ಯರು, ಹೊಫಾಮನ ವಂಶಸ್ಥರಾದ ಹೊಫಾಮ್ಯರು ಇವರೇ. BSB BSB: the Shuphamite clan from Shupham, and the Huphamite clan from Hupham.
40 ULB ಬೆಲಗನಿಗೆ ಅರ್ದ್, ನಾಮಾನ್ ಎಂಬ ಇಬ್ಬರು ಮಕ್ಕಳಿದ್ದರು. ಅರ್ದನ ವಂಶದವರು ಅರ್ದ್ಯರು, ನಾಮಾನನ ವಂಶದವರು ನಾಮಾನ್ಯರು. BSB BSB: And the descendants of Bela from Ard and Naaman were the Ardite clan from Ard and the Naamite clan from Naaman.
41 ULB ಬೆನ್ಯಾಮೀನ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ- 45,600 ಮಂದಿ. BSB BSB: These were the clans of Benjamin, and their registration numbered 45,600.
42 ULB ದಾನ್ ಕುಲದ ಕುಟುಂಬಗಳು ಯಾವುವೆಂದರೆ: ಶೂಹಾಮನ ವಂಶಸ್ಥರಾದ ಶೂಹಾಮ್ಯರು. BSB BSB: These were the descendants of Dan by their clans: The Shuhamite clan from Shuham. These were the clans of Dan.
43 ULB ಶೂಹಾಮ್ಯರ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ- 64,400 ಮಂದಿ. BSB BSB: All of them were Shuhamite clans, and their registration numbered 64,400.
44 ULB ಆಶೇರ್ ಕುಲದ ಕುಟುಂಬಗಳು: ಇಮ್ನಾಹನ ವಂಶಸ್ಥರಾದ ಇಮ್ನಾಹ್ಯರು, ಇಷ್ವೀಯ ವಂಶಸ್ಥರಾದ ಇಷ್ವೀಯರು, ಬೆರೀಯನ ವಂಶಸ್ಥರಾದ ಬೆರೀಯರು. BSB BSB: These were the descendants of Asher by their clans: The Imnite clan from Imnah, the Ishvite clan from Ishvi, and the Beriite clan from Beriah.
45 ULB ಬೆರೀಯನ ಮಕ್ಕಳಿಂದುಂಟಾದ ಕುಟುಂಬಗಳು: ಹೇಬೆರನ ವಂಶಸ್ಥರಾದ ಹೇಬೆರ್ಯರು, ಮಲ್ಕೀಯೇಲನ ವಂಶಸ್ಥರಾದ ಮಲ್ಕೀಯೇಲ್ಯರು. BSB BSB: And these were the descendants of Beriah: the Heberite clan from Heber and the Malchielite clan from Malchiel.
46 ULB ಆಶೇರನಿಗೆ ಸೆರಹಳೆಂಬ ಮಗಳು ಸಹ ಇದ್ದಳು. BSB BSB: And the name of Asher’s daughter was Serah.
47 ULB ಆಶೇರ್ ಕುಲದವರಾದ ಇವರಲ್ಲಿ ಲೆಕ್ಕಿಸಲ್ಪಟ್ಟವರು 53,400 ಮಂದಿ. BSB BSB: These were the clans of Asher, and their registration numbered 53,400.
48 ULB ನಫ್ತಾಲಿ ಕುಲದ ಕುಟುಂಬಗಳು: ಯಹಚೇಲನ ವಂಶಸ್ಥರಾದ ಯಹಚೇಲ್ಯರು, ಗೂನೀಯ ವಂಶಸ್ಥರಾದ ಗೂನೀಯರು, BSB BSB: These were the descendants of Naphtali by their clans: The Jahzeelite clan from Jahzeel, the Gunite clan from Guni,
49 ULB ಯೇಚೆರನ ವಂಶಸ್ಥರಾದ ಯೇಚೆರ್ಯರು, ಶಿಲ್ಲೇಮನ ವಂಶಸ್ಥರಾದ ಶಿಲ್ಲೇಮ್ಯರು. BSB BSB: the Jezerite clan from Jezer, and the Shillemite clan from Shillem.
50 ULB ನಫ್ತಾಲಿ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ- 45,400 ಮಂದಿ. BSB BSB: These were the clans of Naphtali, and their registration numbered 45,400.
51 ULB ಇಸ್ರಾಯೇಲರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ- 601,730. BSB BSB: These men of Israel numbered 601,730 in all.
52 ULB ಯೆಹೋವನು ಮೋಶೆಗೆ ಆಜ್ಞಾಪಿಸಿದ್ದೇನೆಂದರೆ, BSB BSB: Then the LORD said to Moses,
53 ULB <<ನೀವು ಈ ಕುಲಗಳಿಗೆ ಅವರವರ ಸಂಖ್ಯೆಯ ಪ್ರಕಾರ ಆ ದೇಶವನ್ನು ಸ್ವದೇಶವಾಗುವಂತೆ ಹಂಚಿಕೊಡಬೇಕು. BSB BSB: “The land is to be divided among the tribes as an inheritance, according to the number of names.
54 ULB ಹೆಚ್ಚು ಮಂದಿಯುಳ್ಳ ಕುಲಕ್ಕೆ ಹೆಚ್ಚಾಗಿಯೂ, ಕಡಿಮೆ ಮಂದಿಯುಳ್ಳ ಕುಲಕ್ಕೆ ಕಡಿಮೆಯಾಗಿಯೂ ಕೊಡಬೇಕು. ಲೆಕ್ಕಿಸಿದ ಸಂಖ್ಯೆಯ ಪ್ರಕಾರವೇ ಪ್ರತಿಯೊಂದು ಕುಲಕ್ಕೆ ಭೂಮಿಯನ್ನು ಸ್ವತ್ತಾಗಿ ಕೊಡಬೇಕು. BSB BSB: Increase the inheritance for a large tribe and decrease it for a small one; each tribe is to receive its inheritance according to the number of those registered.
55 ULB ಪ್ರತಿಯೊಂದು ಕುಲದ ಪಿತೃವಿನ ಹೆಸರನ್ನು ಬರೆದು ಚೀಟುಹಾಕಿ ಆಯಾ ಕುಲಕ್ಕೆ ಸ್ವತ್ತನ್ನು ಗೊತ್ತು ಮಾಡಬೇಕು. BSB BSB: Indeed, the land must be divided by lot; they shall receive their inheritance according to the names of the tribes of their fathers.
56 ULB ಹೆಚ್ಚು ಮಂದಿಯುಳ್ಳ ಕುಲಕ್ಕಾಗಲಿ, ಕಡಿಮೆಯಾದ ಕುಲಕ್ಕಾಗಲಿ ಚೀಟು ಬಂದ ಪ್ರಕಾರವೇ ಸ್ವತ್ತನ್ನು ಗೊತ್ತುಮಾಡಬೇಕು.>> BSB BSB: Each inheritance is to be divided by lot among the larger and smaller tribes.”
57 ULB ಲೇವಿಯರೊಳಗೆ ಲೆಕ್ಕಿಸಲ್ಪಟ್ಟ ಕುಟುಂಬಗಳು: ಗೇರ್ಷೋನನ ವಂಶದವರಾದ ಗೇರ್ಷೋನ್ಯರು, ಕೆಹಾತನ ವಂಶದವರಾದ ಕೆಹಾತ್ಯರು, ಮೆರಾರೀಯ ವಂಶದವರಾದ ಮೆರಾರೀಯರು. BSB BSB: Now these were the Levites numbered by their clans: The Gershonite clan from Gershon, the Kohathite clan from Kohath, and the Merarite clan from Merari.
58 ULB ಲೇವಿ ಕುಲದವರ ಕುಟುಂಬಗಳು: ಲಿಬ್ನೀಯರ ಕುಟುಂಬ, ಹೆಬ್ರೋನ್ಯರ ಕುಟುಂಬ, ಮಹ್ಲೀಯರ ಕುಟುಂಬ, ಮೂಷೀಯರ ಕುಟುಂಬ, ಕೋರಹಿಯರ ಕುಟುಂಬ ಇವುಗಳೇ. ಕೆಹಾತನು ಅಮ್ರಾಮನನ್ನು ಪಡೆದನು. BSB BSB: These were the families of the Levites: The Libnite clan, the Hebronite clan, the Mahlite clan, the Mushite clan, and the Korahite clan. Now Kohath was the father of Amram,
59 ULB ಅಮ್ರಾಮನ ಹೆಂಡತಿ ಯಾರೆಂದರೆ: ಐಗುಪ್ತ ದೇಶದಲ್ಲಿ ಲೇವಿಯಿಂದ ಹುಟ್ಟಿದ ಯೋಕೆಬೆದಳು. ಈಕೆಯಲ್ಲಿ ಅಮ್ರಾಮನಿಂದ ಆರೋನನೂ, ಮೋಶೆಯೂ ಮತ್ತು ಇವರ ಅಕ್ಕ ಮಿರ್ಯಾಮಳೂ ಹುಟ್ಟಿದರು. BSB BSB: and Amram’s wife was named Jochebed. She was also a daughter of Levi, born to Levi in Egypt. To Amram she bore Aaron, Moses, and their sister Miriam.
60 ULB ಆರೋನನಿಂದ ನಾದಾಬ್, ಅಬೀಹೂ, ಎಲ್ಲಾಜಾರ್, ಈತಾಮಾರ್ ಎಂಬುವವರು ಹುಟ್ಟಿದರು. BSB BSB: Nadab, Abihu, Eleazar, and Ithamar were born to Aaron,
61 ULB ನಾದಾಬ್ ಮತ್ತು ಅಬೀಹೂ ಎಂಬಿಬ್ಬರು ಯೆಹೋವನ ಸನ್ನಿಧಿಯಲ್ಲಿ ಆತನು ಆಜ್ಞಾಪಿಸದೆ ಇದ್ದ ಬೇರೆ ಬೆಂಕಿಯಿಂದ ಧೂಪವನ್ನು ಸಮರ್ಪಿಸಿದ್ದರಿಂದ ಸತ್ತುಹೋದರು. BSB BSB: but Nadab and Abihu died when they offered unauthorized fire before the LORD.
62 ULB ಬೇರೆ ಇಸ್ರಾಯೇಲರಿಗೆ ಸ್ವತ್ತು ದೊರಕಿದಂತೆ ಲೇವಿಯರಿಗೆ ಸ್ವತ್ತು ದೊರೆಯದೆ ಹೋದುದರಿಂದ ಅವರು ಇಸ್ರಾಯೇಲರೊಡನೆ ಲೆಕ್ಕಿಸಲ್ಪಡಲಿಲ್ಲ ಲೇವಿಯರೊಳಗೆ ಒಂದು ತಿಂಗಳು ಮೊದಲುಗೊಂಡು ಹೆಚ್ಚು ವಯಸ್ಸುಳ್ಳ ಗಂಡಸರನ್ನು ಲೆಕ್ಕಿಸಲಾಗಿ ಅವರ ಸಂಖ್ಯೆ- 23,000 ಮಂದಿ. BSB BSB: The registration of the Levites totaled 23,000, every male a month old or more; they were not numbered among the other Israelites, because no inheritance was given to them among the Israelites.
63 ULB ಯೊರ್ದನ್ ನದಿಯ ತೀರದಲ್ಲಿ ಯೆರಿಕೋ ಪಟ್ಟಣದ ಹತ್ತಿರ ಮೋವಾಬ್ಯರ ಮೈದಾನದಲ್ಲಿ ಮೋಶೆಯೂ ಮತ್ತು ಯಾಜಕನಾದ ಎಲ್ಲಾಜಾರನೂ ಇಸ್ರಾಯೇಲರ ಜನಸಂಖ್ಯೆಯನ್ನು ಲೆಕ್ಕಿಸಿದರು. BSB BSB: These were the ones numbered by Moses and Eleazar the priest when they counted the Israelites on the plains of Moab by the Jordan, across from Jericho.
64 ULB ಮೋಶೆಯೂ ಮತ್ತು ಯಾಜಕನಾದ ಆರೋನನೂ ಸೀನಾಯಿ ಅರಣ್ಯದಲ್ಲಿ ಇಸ್ರಾಯೇಲರ ಸಂಖ್ಯೆಯಲ್ಲಿ ಲೆಕ್ಕಿಸಲ್ಪಟ್ಟವರೊಳಗೆ ಒಬ್ಬರಾದರೂ ಇವರಲ್ಲಿ ಇರಲಿಲ್ಲ. BSB BSB: Among all these, however, there was not one who had been numbered by Moses and Aaron the priest when they counted the Israelites in the Wilderness of Sinai.
65 ULB ಅವರೆಲ್ಲರೂ ಅರಣ್ಯದಲ್ಲಿಯೇ ಸಾಯುವರೆಂದು ಯೆಹೋವನು ಅವರ ವಿಷಯದಲ್ಲಿ ಹೇಳಿದ್ದನು. ಆದುದರಿಂದ ಯೆಫುನ್ನೆಯ ಮಗನಾದ ಕಾಲೇಬ್ ಮತ್ತು ನೂನನ ಮಗನಾದ ಯೆಹೋಶುವ ಇವರಿಬ್ಬರ ಹೊರತಾಗಿ ಅವರಲ್ಲಿ ಯಾರೂ ಉಳಿಯಲಿಲ್ಲ. BSB BSB: For the LORD had told them that they would surely die in the wilderness. Not one was left except Caleb son of Jephunneh and Joshua son of Nun.
Select verses for actions: Enter goes to them and Escape comes back.