1 ULB ದೇವರೇ, ನೀನು ನಮ್ಮನ್ನು ಸಂಪೂರ್ಣವಾಗಿ ತಳ್ಳಿಬಿಟ್ಟಿದ್ದೇಕೆ? ನೀನು ಪಾಲಿಸುವ ಹಿಂಡಿನ ಮೇಲೆ ನಿನ್ನ ಕೋಪಾಗ್ನಿಯ ಹೊಗೆ ಏರುವುದೇಕೆ? BSB BSB: A Maskil of Asaph. Why have You rejected us forever, O God? Why does Your anger smolder against the sheep of Your pasture?
2 ULB ನೀನು ಹಿಂದಿನ ಕಾಲದಲ್ಲಿ ಸ್ವಕುಲವಾಗಿರಬೇಕೆಂದು ಬಿಡುಗಡೆ ಮಾಡಿ ಸಂಪಾದಿಸಿಕೊಂಡ ನಿನ್ನ ಸಭಾಮಂಡಲಿಯನ್ನು ಜ್ಞಾಪಿಸಿಕೋ; ನಿನ್ನ ವಾಸಸ್ಥಾನವಾಗಿದ್ದ ಚೀಯೋನ್ ಪರ್ವತವನ್ನು ಮರೆಯಬೇಡ. BSB BSB: Remember Your congregation, which You purchased long ago and redeemed as the tribe of Your inheritance—Mount Zion, where You dwell.
3 ULB ಬಹುಕಾಲದಿಂದ ಹಾಳುಬಿದ್ದಿರುವ ಈ ಸ್ಥಾನದ ಕಡೆಗೆ ನೀನು ಹೆಜ್ಜೆ ಹಾಕು. ನೋಡು, ವೈರಿಯು ಪವಿತ್ರಾಲಯದಲ್ಲಿ ಎಲ್ಲವನ್ನು ಕೆಡವಿಬಿಟ್ಟಿದ್ದಾನೆ. BSB BSB: Turn Your steps to the everlasting ruins, to everything in the sanctuary the enemy has destroyed.
4 ULB ನಿನ್ನ ದರ್ಶನಾಲಯದ ಮಧ್ಯದಲ್ಲಿ ನಿನ್ನ ವಿರೋಧಿಗಳು ಆರ್ಭಟಿಸುತ್ತಾರೆ; ನಮ್ಮ ಆರಾಧನಾ ಚಿಹ್ನೆಗಳನ್ನು ತೆಗೆದು ತಮ್ಮ ಚಿಹ್ನೆಗಳನ್ನು ಇಟ್ಟಿದ್ದಾರೆ. BSB BSB: Your foes have roared within Your meeting place; they have unfurled their banners as signs,
5 ULB ಮರಗಳ ಗುಂಪಿನಲ್ಲಿ ಕೊಡಲಿಗಳನ್ನು ಮೇಲೆತ್ತುವ ಜನರೋ ಎಂಬಂತಿದ್ದಾರೆ. BSB BSB: like men wielding axes in a thicket of trees
6 ULB ನೋಡು, ಅವರು ಈಗ ಕೈಕೊಡಲಿ ಮತ್ತು ಸುತ್ತಿಗೆಗಳಿಂದ, ದೇವಾಲಯದ ಕೆತ್ತನೆಯ ಕೆಲಸವನ್ನೆಲ್ಲಾ ಹೊಡೆದುಹಾಕುತ್ತಿದ್ದಾರೆ. BSB BSB: and smashing all the carvings with hatchets and picks.
7 ULB ಅವರು ನಿನ್ನ ಪವಿತ್ರಾಲಯಕ್ಕೆ ಬೆಂಕಿ ಹಚ್ಚಿ, ನಿನ್ನ ನಾಮಕ್ಕೆ ಪ್ರತಿಷ್ಠಿತವಾದ ಮಂದಿರವನ್ನು ಹೊಲೆಮಾಡಿ, ನೆಲಸಮಗೊಳಿಸಿದ್ದಾರೆ. BSB BSB: They have burned Your sanctuary to the ground; they have defiled the dwelling place of Your Name.
8 ULB <<ನಾವು ಈ ಜನವನ್ನೆಲ್ಲಾ ಸಂಹರಿಸಿಬಿಡೋಣ>> ಅಂದುಕೊಂಡಿದ್ದಾರೆ; ದೇಶದಲ್ಲಿರುವ ನಿನ್ನ ಎಲ್ಲಾ ಸಭಾಮಂದಿರಗಳನ್ನು ಸುಟ್ಟುಬಿಟ್ಟಿದ್ದಾರೆ. BSB BSB: They said in their hearts, “We will crush them completely.” They burned down every place where God met us in the land.
9 ULB ನಮ್ಮ ಆರಾಧನಾ ಚಿಹ್ನೆಗಳು ಈಗ ಕಾಣುವುದಿಲ್ಲ. ಮುಂಚೆ ಇದ್ದಂತೆ ನಮಗೆ ಪ್ರವಾದಿಗಳು ಯಾರೂ ಇಲ್ಲ; ಇದು ಎಷ್ಟರವರೆಗೆ ಇರುವುದೆಂದು ಬಲ್ಲವರು ನಮ್ಮಲ್ಲಿ ಯಾರೂ ಇಲ್ಲ. BSB BSB: There are no signs for us to see. There is no longer any prophet. And none of us knows how long this will last.
10 ULB ದೇವರೇ, ವಿರೋಧಿಗಳು ಇನ್ನೆಲ್ಲಿಯ ತನಕ ನಿಂದಿಸುತ್ತಿರಬೇಕು? ವೈರಿಗಳು ನಿನ್ನ ನಾಮವನ್ನು ಸದಾಕಾಲವೂ ತಿರಸ್ಕರಿಸಬಹುದೋ? BSB BSB: How long, O God, will the enemy taunt You? Will the foe revile Your name forever?
11 ULB ಚಾಚಿದ ಬಲಗೈಯನ್ನು ಏಕೆ ಹಿಂದೆಗೆದಿದ್ದೀ? ಅದನ್ನು ಎದೆಯ ಮೇಲಿನಿಂದ ತೆಗೆದು ಅವರನ್ನು ಸಂಹರಿಸಿಬಿಡು. BSB BSB: Why do You withdraw Your strong right hand? Stretch it out to destroy them!
12 ULB ದೇವರೇ, ನೀನು ಮೊದಲಿನಿಂದಲೂ ನನ್ನ ಅರಸನೂ, ಲೋಕಮಧ್ಯದಲ್ಲಿ ರಕ್ಷಣೆಗಳನ್ನು ನಡೆಸಿದಾತನೂ ಆಗಿದ್ದೀಯಲ್ಲವೇ? BSB BSB: Yet God is my King from ancient times, working salvation on the earth.
13 ULB ಸ್ವಶಕ್ತಿಯಿಂದ ಸಮುದ್ರವನ್ನು ಭೇದಿಸಿದವನು ನೀನು; ಜಲರಾಶಿಯ ಮೇಲೆ ತಿಮಿಂಗಿಲಗಳ ತಲೆಗಳನ್ನು ಜಜ್ಜಿಬಿಟ್ಟವನು ನೀನು. BSB BSB: You divided the sea by Your strength; You smashed the heads of the dragons of the sea;
14 ULB ಲಿವ್ಯಾತಾನನ ಶಿರಚ್ಛೇದನೆಮಾಡಿ, ಅಡವಿಯ ಮೃಗಸಮುದಾಯಕ್ಕೆ ಆಹಾರ ಕೊಟ್ಟವನು ನೀನು. BSB BSB: You crushed the heads of Leviathan; You fed him to the creatures of the desert.
15 ULB ಬುಗ್ಗೆಹಳ್ಳಗಳನ್ನು ಉಕ್ಕಿಸಿದವನು ನೀನು; ಮಹಾನದಿಗಳನ್ನು ಒಣಗಿಸಿಬಿಟ್ಟವನು ನೀನು. BSB BSB: You broke open the fountain and the flood; You dried up the ever-flowing rivers.
16 ULB ಹಗಲಿರುಳುಗಳನ್ನು ನೇಮಿಸಿದವನು ನೀನು; ಸೂರ್ಯ ಮತ್ತು ಜ್ಯೋತಿರ್ಮಂಡಲಗಳ ನಿರ್ಮಾಪಕನು ನೀನು. BSB BSB: The day is Yours, and also the night; You established the moon and the sun.
17 ULB ಭೂಮಿಯ ಎಲ್ಲಾ ಮೇರೆಗಳನ್ನು ಸ್ಥಾಪಿಸಿದವನು ನೀನು; ಬೇಸಿಗೆ ಮತ್ತು ಚಳಿಗಾಲಗಳನ್ನು ನೇಮಿಸಿದವನು ನೀನು. BSB BSB: You set all the boundaries of the earth; You made the summer and winter.
18 ULB ಯೆಹೋವನೇ, ವೈರಿಗಳು ನಿನ್ನನ್ನು ನಿಂದಿಸಿದ್ದನ್ನು, ದುರ್ಮತಿಗಳು ನಿನ್ನ ನಾಮವನ್ನು ತಿರಸ್ಕರಿಸಿದ್ದನ್ನು ಜ್ಞಾಪಿಸಿಕೋ. BSB BSB: Remember how the enemy has mocked You, O LORD, how a foolish people has spurned Your name.
19 ULB ನಿನ್ನ ಬೆಳವಕ್ಕಿಯ ಜೀವವನ್ನು ಕಾಡುಮೃಗಕ್ಕೆ ಕೊಡಬೇಡ; ನಿನ್ನ ದೀನಮಂಡಲಿಯನ್ನು ಸದಾ ಮರೆಯಬೇಡ. BSB BSB: Do not deliver the soul of Your dove to beasts; do not forget the lives of Your afflicted forever.
20 ULB ನಿನ್ನ ಒಡಂಬಡಿಕೆಯನ್ನು ಲಕ್ಷ್ಯಕ್ಕೆ ತಂದುಕೋ. ದೇಶದ ಅಂಧಕಾರ ಸ್ಥಾನಗಳಲ್ಲಿ ಬಲತ್ಕಾರವು ತುಂಬಿ ವಾಸಿಸುತ್ತದಲ್ಲಾ. BSB BSB: Consider Your covenant, for haunts of violence fill the dark places of the land.
21 ULB ಕುಗ್ಗಿದವರು ಆಶಾಭಂಗದಿಂದ ಹಿಂದಿರುಗದಿರಲಿ; ದುಃಖಿತರೂ, ಬಡವರೂ ನಿನ್ನ ನಾಮವನ್ನು ಕೀರ್ತಿಸಲಿ. BSB BSB: Do not let the oppressed retreat in shame; may the poor and needy praise Your name.
22 ULB ದೇವರೇ, ಎದ್ದು ನಿನ್ನ ನ್ಯಾಯವನ್ನು ನಡೆಸುವವನಾಗು; ದುರ್ಮತಿಯು ಯಾವಾಗಲೂ ನಿನ್ನನ್ನು ನಿಂದಿಸುತ್ತಿರುವುದನ್ನು ಜ್ಞಾಪಿಸಿಕೋ. BSB BSB: Rise up, O God; defend Your cause! Remember how the fool mocks You all day long.
23 ULB ಮೇಲಣ ಲೋಕವನ್ನು ಎಡೆಬಿಡದೆ ಮುಟ್ಟುತ್ತಿರುವ, ನಿನ್ನ ವೈರಿಗಳ ಗದ್ದಲವನ್ನೂ ನಿನ್ನ ವಿರೋಧಿಗಳ ದೊಂಬಿಯನ್ನೂ ಮರೆಯದಿರು. BSB BSB: Do not disregard the clamor of Your adversaries, the uproar of Your enemies that ascends continually.
Select verses for actions: Enter goes to them and Escape comes back.