1 ULB ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವುದು, ಬಿರುನುಡಿಯು ಸಿಟ್ಟನ್ನೇರಿಸುವುದು. BSB BSB: A gentle answer turns away wrath, but a harsh word stirs up anger.
2 ULB ಜ್ಞಾನಿಗಳ ನಾಲಿಗೆಯು ತಿಳಿವಳಿಕೆಯನ್ನು ಸಾರ್ಥಕ ಮಾಡುವುದು, ಜ್ಞಾನಹೀನರ ಬಾಯಿಯು ಮೂರ್ಖತನವನ್ನು ಕಾರುವುದು. BSB BSB: The tongue of the wise commends knowledge, but the mouth of the fool spouts folly.
3 ULB ಯೆಹೋವನ ದೃಷ್ಟಿಯು ಎಲ್ಲೆಲ್ಲಿಯೂ ಇರುವುದು, ಆತನು ಕೆಟ್ಟವರನ್ನು ಮತ್ತು ಒಳ್ಳೆಯವರನ್ನು ನೋಡುತ್ತಲೇ ಇರುವನು. BSB BSB: The eyes of the LORD are in every place, observing the evil and the good.
4 ULB ಸಂತೈಸುವ ನಾಲಿಗೆ ಜೀವವೃಕ್ಷವು, ಬಲತ್ಕರಿಸುವ ನಾಲಿಗೆ ಮನಮುರಿಯುವುದು. BSB BSB: A soothing tongue is a tree of life, but a perverse tongue crushes the spirit.
5 ULB ಮೂರ್ಖನು ತಂದೆಯ ಶಿಕ್ಷೆಯನ್ನು ತಿರಸ್ಕರಿಸುವನು, ಗದರಿಕೆಯನ್ನು ಗಮನಿಸುವವನು ಜಾಣನು. BSB BSB: A fool rejects his father’s discipline, but whoever heeds correction is prudent.
6 ULB ಶಿಷ್ಟನ ಮನೆಯಲ್ಲಿ ದೊಡ್ಡ ನಿಧಿ, ದುಷ್ಟನ ಆದಾಯವು ನಷ್ಟಕ್ಕೆ ದಾರಿ. BSB BSB: The house of the righteous has great treasure, but the income of the wicked is trouble.
7 ULB ಜ್ಞಾನಿಗಳ ತುಟಿಗಳು ತಿಳಿವಳಿಕೆಯನ್ನು ಬಿತ್ತುವವು. ಜ್ಞಾನಹೀನರ ಹೃದಯವು ಅದನ್ನು ಬಿತ್ತುವುದೇ ಇಲ್ಲ. BSB BSB: The lips of the wise spread knowledge, but not so the hearts of fools.
8 ULB ದುಷ್ಟರ ಯಜ್ಞ ಯೆಹೋವನಿಗೆ ಅಸಹ್ಯ, ಶಿಷ್ಟರ ಬಿನ್ನಹ ಆತನಿಗೆ ಇಷ್ಟ. BSB BSB: The sacrifice of the wicked is detestable to the LORD, but the prayer of the upright is His delight.
9 ULB ದುಷ್ಟನ ನಡತೆಯು ಯೆಹೋವನಿಗೆ ಅಸಹ್ಯ, ಧರ್ಮಾಸಕ್ತನು ಆತನಿಗೆ ಪ್ರಿಯ. BSB BSB: The LORD detests the way of the wicked, but He loves those who pursue righteousness.
10 ULB ಧರ್ಮಮಾರ್ಗವನ್ನು ಬಿಟ್ಟವನಿಗೆ ತೀಕ್ಷ್ಣ ಶಿಕ್ಷಣ, ಗದರಿಕೆಯನ್ನು ಕೇಳದವನಿಗೆ ಸಾವು. BSB BSB: Discipline is harsh for him who leaves the path; he who hates correction will die.
11 ULB ಪಾತಾಳವೂ, ನಾಶಲೋಕವೂ ಯೆಹೋವನಿಗೆ ಗೋಚರವಾಗಿರುವಲ್ಲಿ ನರವಂಶದವರ ಹೃದಯಗಳು ಆತನಿಗೆ ಮತ್ತೂ ಸ್ಪಷ್ಟ. BSB BSB: Sheol and Abaddon lie open before the LORD—how much more the hearts of men!
12 ULB ಧರ್ಮನಿಂದಕನು ಗದರಿಕೆಯನ್ನು ಕೇಳನು, ಜ್ಞಾನಿಗಳ ಸಂಗಡ ಸೇರನು. BSB BSB: A mocker does not love to be reproved, nor will he consult the wise.
13 ULB ಹರ್ಷ ಹೃದಯದಿಂದ ಹಸನ್ಮುಖ, ಮನೋವ್ಯಥೆಯಿಂದ ಆತ್ಮಭಂಗ. BSB BSB: A joyful heart makes a cheerful countenance, but sorrow of the heart crushes the spirit.
14 ULB ವಿವೇಕಿಯ ಹೃದಯ ತಿಳಿವಳಿಕೆಯನ್ನು ಹುಡುಕುವುದು, ಮೂಢರ ಬಾಯಿ ಮೂರ್ಖತನವನ್ನು ಮುಕ್ಕುವುದು. BSB BSB: A discerning heart seeks knowledge, but the mouth of a fool feeds on folly.
15 ULB ದೀನನ ದಿನಗಳೆಲ್ಲಾ ದುಃಖಭರಿತ, ಹರ್ಷಹೃದಯನಿಗೆ ನಿತ್ಯವೂ ಔತಣ. BSB BSB: All the days of the oppressed are bad, but a cheerful heart has a continual feast.
16 ULB ಕಳವಳದಿಂದ ಕೂಡಿದ ಬಹುಧನಕ್ಕಿಂತಲೂ ಯೆಹೋವನ ಭಯದಿಂದ ಕೂಡಿದ ಅಲ್ಪ ಧನವೇ ಲೇಸು. BSB BSB: Better a little with the fear of the LORD than great treasure with turmoil.
17 ULB ದ್ವೇಷವಿರುವಲ್ಲಿ ಮೃಷ್ಟಾನ್ನಕ್ಕಿಂತಲೂ, ಪ್ರೇಮವಿರುವಲ್ಲಿ ಸೊಪ್ಪಿನ ಊಟವೇ ಉತ್ತಮ. BSB BSB: Better a dish of vegetables where there is love than a fattened ox with hatred.
18 ULB ಕೋಪಿಷ್ಠನು ವ್ಯಾಜ್ಯವನ್ನೆಬ್ಬಿಸುವನು, ದೀರ್ಘಶಾಂತನು ಜಗಳವನ್ನು ಶಮನಪಡಿಸುವನು. BSB BSB: A hot-tempered man stirs up strife, but he who is slow to anger calms dispute.
19 ULB ಸೋಮಾರಿಯ ಮಾರ್ಗ ಮುಳ್ಳುಬೇಲಿ, ಯಥಾರ್ಥವಂತನ ಮಾರ್ಗ ರಾಜಮಾರ್ಗ. BSB BSB: The way of the slacker is like a hedge of thorns, but the path of the upright is a highway.
20 ULB ಜ್ಞಾನವಂತನಾದ ಮಗನು ತಂದೆಯನ್ನು ಉಲ್ಲಾಸಗೊಳಿಸುವನು, ಜ್ಞಾನಹೀನನು ತಾಯಿಯನ್ನು ತಿರಸ್ಕರಿಸುವನು. BSB BSB: A wise son brings joy to his father, but a foolish man despises his mother.
21 ULB ಬುದ್ಧಿಹೀನನು ಮೂರ್ಖತನದಲ್ಲಿ ಆನಂದಿಸುವನು, ಬುದ್ಧಿವಂತನು ತನ್ನ ಮಾರ್ಗವನ್ನು ಸರಳಮಾಡಿಕೊಳ್ಳುವನು. BSB BSB: Folly is joy to one who lacks judgment, but a man of understanding walks a straight path.
22 ULB ಆಲೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು, ಬಹು ಮಂದಿ ಆಲೋಚನಾಪರರು ಇರುವಲ್ಲಿ ಅವು ನೆರವೇರುವವು. BSB BSB: Plans fail for lack of counsel, but with many advisers they succeed.
23 ULB ತಕ್ಕ ಉತ್ತರಕೊಡುವವನಿಗೆ ಎಷ್ಟೋ ಸಂತೋಷ! ಸಮಯೋಚಿತವಾದ ನುಡಿಯಲ್ಲಿ ಎಷ್ಟೋ ಸ್ವಾರಸ್ಯ! BSB BSB: A man takes joy in a fitting reply—and how good is a timely word!
24 ULB ಜೀವದ ಮಾರ್ಗವು ವಿವೇಕಿಯನ್ನು ಮೇಲಕ್ಕೆತ್ತುವುದು; ಅದು ಅವನನ್ನು ಪಾತಾಳದಿಂದ ತಪ್ಪಿಸುವುದು. BSB BSB: The path of life leads upward for the wise, that he may avoid going down to Sheol.
25 ULB ಯೆಹೋವನು ಗರ್ವಿಷ್ಠನ ಮನೆಯನ್ನು ಕೆಡವಿಬಿಡುವನು; ವಿಧವೆಯ ಮೇರೆಯನ್ನು ನೆಲೆಗೊಳಿಸುವನು. BSB BSB: The LORD tears down the house of the proud, but He protects the boundaries of the widow.
26 ULB ಕುಯುಕ್ತಿಯು ಯೆಹೋವನಿಗೆ ಅಸಹ್ಯ, ನಯನುಡಿಯು ಆತನಿಗೆ ಪ್ರಿಯ. BSB BSB: The LORD detests the thoughts of the wicked, but the words of the pure are pleasant to Him.
27 ULB ಸೂರೆಮಾಡುವವನು ಸ್ವಂತ ಮನೆಯನ್ನು ಬಾಧಿಸುವನು. ಲಂಚವನ್ನೊಪ್ಪದವನು ಸುಖವಾಗಿ ಬಾಳುವನು. BSB BSB: He who is greedy for unjust gain brings trouble on his household, but he who hates bribes will live.
28 ULB ಶಿಷ್ಟನ ಹೃದಯ ವಿವೇಚಿಸಿ ಉತ್ತರಕೊಡುತ್ತದೆ, ದುಷ್ಟನ ಬಾಯಿ ಕೆಟ್ಟದ್ದನ್ನು ಕಾರುತ್ತದೆ. BSB BSB: The heart of the righteous ponders how to answer, but the mouth of the wicked blurts out evil.
29 ULB ಯೆಹೋವನು ದುಷ್ಟರಿಗೆ ದೂರ, ಶಿಷ್ಟರ ಬಿನ್ನಹಕ್ಕೆ ಹತ್ತಿರ. BSB BSB: The LORD is far from the wicked, but He hears the prayer of the righteous.
30 ULB ಹಸನ್ಮುಖ ಹೃದಯಕ್ಕೆ ಆನಂದ, ಶುಭಸಮಾಚಾರ ದೇಹಕ್ಕೆ ಆರೋಗ್ಯ. BSB BSB: The light of the eyes cheers the heart, and good news nourishes the bones.
31 ULB ಜೀವಪ್ರದವಾದ ಗದರಿಕೆಗೆ ಕಿವಿಗೊಡುವವನು, ಜ್ಞಾನಿಗಳ ನಡುವೆ ನೆಲೆಗೊಳ್ಳುವನು. BSB BSB: He who listens to life-giving reproof will dwell among the wise.
32 ULB ಶಿಕ್ಷೆಯನ್ನು ತಿರಸ್ಕರಿಸುವವನು ತನ್ನನ್ನೇ ನಿರಾಕರಿಸಿಕೊಳ್ಳುವನು, ಗದರಿಕೆಯನ್ನು ಕೇಳುವವನು ಬುದ್ಧಿಯನ್ನು ಪಡೆಯುವನು. BSB BSB: He who ignores discipline despises himself, but whoever heeds correction gains understanding.
33 ULB ಯೆಹೋವನ ಭಯವೇ ಜ್ಞಾನೋಪದೇಶ, ಗೌರವಕ್ಕೆ ಮೊದಲು ವಿನಯ. BSB BSB: The fear of the LORD is the instruction of wisdom, and humility comes before honor.
Select verses for actions: Enter goes to them and Escape comes back.